ನ್ಯೂಜಿಲ್ಯಾಂಡ್: ಭಾರತದಲ್ಲಿ ಹಸುವಿಗೆ (Cow) ಎಲ್ಲಿಲ್ಲದ ಮಹತ್ವ ಇದೆ. ಹಿಂದೂ ಧರ್ಮದಲ್ಲಂತೂ (Hindu Religion) ಹಸುವನ್ನು ಕಾಮಧೇನು (Kamadhenu), ಗೋಮಾತೆ (Gomate) ಅಂತೆಲ್ಲ ಕರೆದು ಗೌರವಿಸುತ್ತಾರೆ, ಪೂಜಿಸುತ್ತಾರೆ. ಹಸುವಿನ ಸಗಣಿ (Cow Dung), ಮೂತ್ರಗಳೆಲ್ಲ (Cow Urine) ಅಮೂಲ್ಯ ಎಂದು ಪರಿಗಣಿಸಲಾಗಿದೆ. ಆದರೆ ಈ ದೇಶದಲ್ಲಿ ಹಸುವಿನ ಸೆಗಣಿಗೆ ಟ್ಯಾಕ್ಸ್ (Tax) ಹಾಕುತ್ತಿದ್ದಾರಂತೆ! ಹಸುವಿನ ಸೆಗಣಿಯಷ್ಟೇ ಅಲ್ಲ, ಹಸು ಹೂಸು (fart) ಬಿಟ್ಟರೆ ಅಥವಾ ಜೋರಾಗಿ ತೇಗಿದರೆ ಅದನ್ನು ಸಾಕುತ್ತಿರುವರ ರೈತರು ಅಲ್ಲಿನ ಸರ್ಕಾರಕ್ಕೆ ಹೆಚ್ಚುವರಿ ತೆರಿಗೆ ಕೊಡಬೇಕಂತೆ! ಅಂದಹಾಗೆ ಈ ವಿಚಿತ್ರ ಕಾನೂನು ಜಾರಿಯಾಗಿರುವುದು ನ್ಯೂಜಿಲ್ಯಾಂಡ್ (New Zealand) ದೇಶದಲ್ಲಿ. ಪರಿಸರ ಸಂರಕ್ಷಣೆ (protect the environment) ಹಾಗೂ ಹಸಿರುಮನೆ ಪರಿಣಾಮವನ್ನು (greenhouse effect) ತಡೆಯಲು ಯೋಜನೆ ರೂಪಿಸುತ್ತಿರುವ ಅಲ್ಲಿನ ಸರ್ಕಾರ ಈ ವಿಚಿತ್ರ ಕಾನೂನು ಜಾರಿಗೆ ತರಲು ಮುಂದಾಗಿದೆ. ಇನ್ನು ಈ ಕಾನೂನಿಗೆ ಅಲ್ಲಿನ ರೈತರು (farmers) ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ರೈತರ ಮೇಲೆ ವಿಚಿತ್ರ ತೆರಿಗೆ
ನ್ಯೂಜಿಲೆಂಡ್ ಸರ್ಕಾರವು ಪರಿಸರ ಸಂರಕ್ಷಣೆ ಮತ್ತು ಹಸಿರುಮನೆ ಪರಿಣಾಮ ತಡೆಯಲು ಹೊಸ ತೆರಿಗೆ ಜಾರಿಗೆ ತರಲು ಸಿದ್ಧತೆ ನಡೆದಿದೆ. ಕೃಷಿ ತ್ಯಾಜ್ಯಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆ. ಪ್ರಧಾನಿ ಜಸಿಂಡಾ ಅರ್ಡೆರ್ನ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಪ್ರಸ್ತಾಪವು ನ್ಯೂಜಿಲೆಂಡ್ನ ರೈತರನ್ನು ವಿಶ್ವದ ಅತ್ಯುತ್ತಮರು ಮಾತ್ರವಲ್ಲದೆ ಜಗತ್ತಿನ ಉತ್ತಮ ರೈತರು ಎಂದು ತೋರಿಸುತ್ತದೆ ಅಂತ ಹೇಳಿದ್ದಾರೆ. ಈ ತೆರಿಗೆಯು 2025 ರ ವೇಳೆಗೆ ಜಾರಿಗೆ ಬರಲಿದೆ, ಆದರೆ ಇದು ಈಗಾಗಲೇ ವಿರೋಧ ಹಾಗೂ ಟೀಕೆಗಳನ್ನು ಎದುರಿಸುತ್ತಿದೆ.
ಹಸುವಿನ ಸಗಣಿ, ಹೂಸು, ತೇಗಿನ ಮೇಲೆ ಟ್ಯಾಕ್ಸ್!
ನ್ಯೂಜಿಲೆಂಡ್ ಸರ್ಕಾರವು ಕೃಷಿಯಲ್ಲಿ ಬಳಸಲಾಗುವ ಹಸು, ಎತ್ತು ಮತ್ತಿರರ ಪ್ರಾಣಿಗಳ ಮೇಲೆ ನಿಗಾ ಇರಿಸಿದೆ. ಈ ಪ್ರಾಣಿಗಳ ಸಗಣಿ, ಮೂತ್ರ, ತೇಗು ಹಾಗೂ ಹೂಸಿಗೂ ಟ್ಯಾಕ್ಸ್ ವಿಧಿಸಲು ನಿರ್ಧರಿಸಲಾಗಿದೆ. ತೇಗು, ಹೂಸು ಮತ್ತು ಮಲ, ಮೂತ್ರ ವಿಸರ್ಜನೆಯಿಂದ ತಯಾರಿಸುವ ಹಸಿರುಮನೆ ಅನಿಲಗಳ ಮೇಲೆ ತೆರಿಗೆ ವಿಧಿಸಲು ಸಚಿವ ಸಂಪುಟ ಪ್ರಸ್ತಾಪಿಸಿದೆ.
2050ರ ವೇಳೆಗೆ ಇಂಗಾಲ ತಟಸ್ಥ ರಾಷ್ಟ್ರ ನಿರ್ಮಾಣ
ಇದಲ್ಲದೆ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು 2050 ರ ವೇಳೆಗೆ ರಾಷ್ಟ್ರವನ್ನು ಇಂಗಾಲವನ್ನು ತಟಸ್ಥಗೊಳಿಸಲು ಸರ್ಕಾರವು ಆಶಿಸುತ್ತಿದೆ. ಈ ಯೋಜನೆಯ ಭಾಗವು 2030 ರ ವೇಳೆಗೆ 10 ಪ್ರತಿಶತದಷ್ಟು ಮತ್ತು 2050 ರ ವೇಳೆಗೆ 47 ಪ್ರತಿಶತದಷ್ಟು ಕೃಷಿ ಪ್ರಾಣಿಗಳಿಂದ ಮೀಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಬದ್ಧತೆಯನ್ನು ಒಳಗೊಂಡಿದೆ ಎಂದು ನ್ಯೂಜಿಲ್ಯಾಂಡ್ ಸರ್ಕಾರದ ವಕ್ತಾರರು ಹೇಳಿದ್ದಾರೆ.
“ನ್ಯೂಜಿಲ್ಯಾಂಡ್ ರೈತರು ಮಾದರಿಯಾಗುತ್ತಾರೆ”
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ ಅರ್ಡೆರ್ನ್, ನ್ಯೂಜಿಲೆಂಡ್ನ ರೈತರು ಕೃಷಿ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ವಿಶ್ವದಲ್ಲೇ ಮೊದಲಿಗರಾಗಿದ್ದಾರೆ, ಸ್ಪರ್ಧಾತ್ಮಕ ಪ್ರಯೋಜನಕ್ಕಾಗಿ ನಮ್ಮ ಅತಿದೊಡ್ಡ ರಫ್ತು ಮಾರುಕಟ್ಟೆಯನ್ನು ತಮ್ಮ ಆಹಾರದ ಮೂಲವನ್ನು ಹೆಚ್ಚು ವಿವೇಚಿಸುವ ಪ್ರಪಂಚವನ್ನು ನಾವೇ ಸೃಷ್ಟಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Whisky Suntory: ಒಂದು ಬಾಟಲಿ ವಿಸ್ಕಿ ಬೆಲೆ 6.5 ಕೋಟಿ ರೂಪಾಯಿ! ಕುಡಿದರೆ ಸ್ವರ್ಗಕ್ಕೆ ಮೂರೇ ಗೇಣಂತೆ!
ಪ್ರಸ್ತಾಪಿತ ಕಾನೂನಿಗೆ ಭಾರೀ ವಿರೋಧ
ಇನ್ನು ಪ್ರಸ್ತಾಪಿತ ಕಾನೂನಿಗೆ ರೈತರು ಹಾಗೂ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದು ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಅಂತ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ನ್ಯೂಜಿಲೆಂಡ್ 10 ಮಿಲಿಯನ್ ಗೋಮಾಂಸ ಮತ್ತು ಡೈರಿ ಜಾನುವಾರುಗಳು ಮತ್ತು 26 ಮಿಲಿಯನ್ ಕುರಿಗಳಿಗೆ ನೆಲೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ