• Home
  • »
  • News
  • »
  • trend
  • »
  • Viral Video: ಬೆಳೆ ರಕ್ಷಣೆಗೆ ಹಕ್ಕಿಗಳನ್ನು ಬೆದರಿಸಲು ರೈತನ ಸೂಪರ್ ಐಡಿಯಾ- ನೆಟ್ಟಿಗರ ಗಮನ ಸೆಳೆದ ವೈರಲ್ ವಿಡಿಯೋ

Viral Video: ಬೆಳೆ ರಕ್ಷಣೆಗೆ ಹಕ್ಕಿಗಳನ್ನು ಬೆದರಿಸಲು ರೈತನ ಸೂಪರ್ ಐಡಿಯಾ- ನೆಟ್ಟಿಗರ ಗಮನ ಸೆಳೆದ ವೈರಲ್ ವಿಡಿಯೋ

ರೈತ ಮಾಡಿರುವ ಐಡಿಯಾ

ರೈತ ಮಾಡಿರುವ ಐಡಿಯಾ

Viral News: ಈ ಗುಮ್ಮನ ಕಥೆ ಕಾಂಬೋಡಿಯಾದಲ್ಲೂ ಇದೆ. ಅಲ್ಲಿ ವೈರಸ್ ಅನ್ನು ತಡೆಗಟ್ಟಲು ರೈತರು ವಯಸ್ಸಾದ 'ಟಿಂಗ್ ಮಾಂಗ್' ಗುಮ್ಮಗಳನ್ನು ನಿರ್ಮಿಸಿದ್ದಾರೆ. ಬಣ್ಣ ಬಣ್ಣದ ಟೀಶರ್ಟ್​ ಧರಿಸಿದ ಗುಮ್ಮ ತಲೆಗೆ ಪ್ಲಾಸ್ಟಿಕ್ ಪಾಟ್ ಹೊದ್ದು ಕಾಂಬೋಡಿಯಾದ ಹಳ್ಳಿಯ ಮನೆಯ ಮುಂದೆ ನಿಂತಿದೆ.

  • Share this:

ಸಾಮಾನ್ಯವಾಗಿ ಹೊಲ, ಗದ್ದೆಗಳಲ್ಲಿ ತಮ್ಮ ಬೆಳೆಗಳನ್ನು(Crops) ರಕ್ಷಿಸಿಕೊಳ್ಳಲು ರೈತರು(Farmer) ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಾರೆ. ಅದರಲ್ಲಿ ಬೆರ್ಚಪ್ಪಗಳು ಎಲ್ಲರಿಗೂ ತಿಳಿದಿರುವಂತಹದ್ದೇ. ಇನ್ನೂ ಕೆಲವರು ರಾತ್ರಿಯ ಹೊತ್ತು ತಮಟೆ ಹೊಡೆಯುವುದು, ಬೆಂಕಿ ಹಿಡಿದು ಕಾಯುವುದು ಸಾಮಾನ್ಯವಾದ ದೃಶ್ಯ.ಇಷ್ಟೆಲ್ಲಾ ಶ್ರಮವಹಿಸಿದರೂ ಕೆಲವೊಮ್ಮೆ ಪಕ್ಷಿಗಳು, ಪ್ರಾಣಿಗಳು ಅದರಲ್ಲೂ ಆನೆ ದಾಳಿಯಿಂದ ಬೆಳೆಯ ಹಾನಿಯುಂಟಾಗುವುದನ್ನು ನಾವು ಗಮನಿಸಿರುತ್ತೇವೆ. ಈ ಹಿನ್ನೆಲೆಯಲ್ಲಿ ರೈತನೊಬ್ಬ ಹೊಸ ಜುಗಾಡ್​ ಐಡಿಯಾ ಮಾಡಿ ತನ್ನ ಬೆಳೆಗಳನ್ನು ಮಾತ್ರ ರಕ್ಷಿಸಿಕೊಂಡಿಲ್ಲ. ಬದಲಿಗೆ ನೆಟ್ಟಿಗರಿಂದ ಪ್ರಶಂಸೆಯ ಮಳೆಯನ್ನೇ ಗಿಟ್ಟಿಸಿಕೊಂಡಿದ್ದಾನೆ.


ಇನ್ನೂ ಈ ರೈತ ಪ್ರತಿನಿತ್ಯ ಬಳಸುವ ಸಾಮಗ್ರಿಗಳನ್ನು ಸೇರಿಸಿ ಸಾಧನವೊಂದನ್ನು ಸಿದ್ಧಪಡಿಸಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಮೋಟಾರ್​ ಫ್ಯಾನ್​​ಗೆ ಕಬ್ಬಿಣದ ಸರಪಳಿಯನ್ನು ಜೋಡಿಸಲಾಗಿದೆ. ಮೋಟಾರ್ ಸಹಾಯದಿಂದ ಕಬ್ಬಿಣದ ಚೈನ್ ಚಲಿಸುತ್ತದೆ. ಇದು ಖಾಲಿ ಡಬ್ಬದ ಮೇಲೆ ಬಿದ್ದು ಜೋರಾಗಿ ಶಬ್ಧ ಮಾಡುತ್ತದೆ. ಯಾವಾಗ ಈ ರೀತಿಯಾದಂತಹ ಜೋರು ಕರ್ಕಶ ಶಬ್ಧವಾಗುತ್ತದೋ ಪ್ರಾಣಿ, ಪಕ್ಷಿಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

View this post on Instagram


A post shared by JUGAAD (@jugaadu_life_hacks)

ಬದುಕಿನ ಅನಿವಾರ್ಯತೆಗಳು ನಮ್ಮೊಳಗಿನ ವಿಜ್ಞಾನಿಯನ್ನು ಹೊರ ತರುತ್ತದೆ ಎನ್ನುವುದನ್ನು ರೈತ ಸಾಬೀತು ಮಾಡಿದ್ದಾನೆ. ಸದ್ಯ ಇನ್​ಸ್ಟಾಗ್ರಾಂನ 'ಜುಗಾಡ್ ಲೈಫ್ ಹ್ಯಾಕ್ಸ್' ಎನ್ನುವ ಪೇಜ್​​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇನ್ನೂ ಇದೇ ಸಂದರ್ಭದಲ್ಲಿ ಭಯಂಕರವಾದ ಸ್ಕೇರಿ ಕ್ರೋ ಹೆಸರಿನ ವಿಡಿಯೋ ಕೂಡ ಉಲ್ಲೇಖವಾಗಿದೆ. ಗುರುತು ಸಿಗದ ಜಾಗದಲ್ಲಿ ಕೆಂಪು ಸ್ಕಾರ್ಫ್ ಮತ್ತು ಗ್ಲೌಸ್ , ಹಸಿರು ಸ್ವೆಟರ್ ಜೊತೆಗೆ ನೀಲಿ ಸ್ಕರ್ಟ್ ತೊಟ್ಟ ಭಯಂಕರ ಮುಖದ ಬೊಂಬೆಯೊಂದು ಕಾಣುತ್ತಿದೆ. ಇದು ಸಾಮಾನ್ಯವಾಗಿ ನಿಂತಂತೆ ಕಾಣುವುದಿಲ್ಲ, ಅತ್ತ - ಇತ್ತ ತೂಗಾಡುವಂತೆ ಕಾಣುತ್ತದೆ.


ಇದನ್ನೂ ಓದಿ: ಅಕಾಲಿಕ ಮರಣ ಹೊಂದಿದವರು ಭೂತ-ಪ್ರೇತಗಳಾಗುತ್ತಾರಾ? ಸಾವಿನ ಬಳಿಕವೂ ಜೀವನ ಇದೆಯಾ? ಉತ್ತರ ಇಲ್ಲಿದೆ


ಇದನ್ನು ನೋಡಿ ಪಕ್ಷಿಗಳು ಹೆದರುತ್ತಿವೆ. ಅಲ್ಲದೇ ಸಾಮಾನ್ಯ ಮನುಷ್ಯರು ರಾತ್ರಿಯ ಹೊತ್ತು ಇದನ್ನು ನೋಡಿದರೇ ಬೆಚ್ಚಿ ಬೀಳುವುದು ಗ್ಯಾರಂಟಿ.


ಈ ಗುಮ್ಮನ ಕಥೆ ಕಾಂಬೋಡಿಯಾದಲ್ಲೂ ಇದೆ. ಅಲ್ಲಿ ವೈರಸ್ ಅನ್ನು ತಡೆಗಟ್ಟಲು ರೈತರು ವಯಸ್ಸಾದ 'ಟಿಂಗ್ ಮಾಂಗ್' ಗುಮ್ಮಗಳನ್ನು ನಿರ್ಮಿಸಿದ್ದಾರೆ. ಬಣ್ಣ ಬಣ್ಣದ ಟೀಶರ್ಟ್​ ಧರಿಸಿದ ಗುಮ್ಮ ತಲೆಗೆ ಪ್ಲಾಸ್ಟಿಕ್ ಪಾಟ್ ಹೊದ್ದು ಕಾಂಬೋಡಿಯಾದ ಹಳ್ಳಿಯ ಮನೆಯ ಮುಂದೆ ನಿಂತಿದೆ. ಖಮೇರ್‌ನಲ್ಲಿ ಟಿಂಗ್ ಮಾಂಗ್ ಎಂದು ಕರೆಯಲ್ಪಡುವ ಕಲ್ಪನಾತ್ಮಕವಾಗಿ ರೈತರು ನಿರ್ಮಿಸಿರುವ ಗುಮ್ಮಗಳು ಡೆಂಗ್ಯೂ ಜ್ವರ ಅಥವಾ ನೀರಿನಿಂದ ಹರಡುವ ಅತಿಸಾರದಂತಹ ಸಾಂಕ್ರಾಮಿಕ ರೋಗಗಳಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ.


ಇದನ್ನೂ ಓದಿ: 1 ರೂ. ಕುಲ್ಫಿ ಐಸ್‌ಕ್ರೀಮ್ ವ್ಯಾಪಾರವನ್ನು 6 ಕೋಟಿ ವ್ಯವಹಾರವನ್ನಾಗಿ ಮಾರ್ಪಡಿಸಿದ ಬಿಸ್‌ನೆಸ್ ಯಶೋಗಾಥೆ


ರೈತನ ಬವಣೆ ಒಂದೆರಡಲ್ಲ. ಒಂದೆಡೆ ಕಾಯಿ, ಹೂ, ಎಲೆ, ಬೆಳೆಗಳನ್ನು ಕ್ರಿಮಿ ಕೀಟಗಳಿಂದ ರಕ್ಷಣೆ ಮಾಡಿಕೊಳ್ಳುವ ಒತ್ತಡ. ಇನ್ನೊಂದೆಡೆ ಪ್ರಾಣಿ, ಪಕ್ಷಿಗಳಿಂದ ಉಂಟಾಗುವ ಕಿರಿಕಿರಿಯಿಂದ ಬೆಳೆ ನಷ್ಟ. ಮತ್ತೊಂದೆಡೆ ಇಷ್ಟೆಲ್ಲಾ ಕಷ್ಟಪಟ್ಟು ಬೆಳೆ ಬೆಳೆದ ರೈತನ ಬೆಳೆಗೆ ಕೊರೊನಾದಂತಹ ಸಮಸ್ಯೆ, ಸರಿಯಾದ ಲಾಭದ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಬಾಧಿಸುತ್ತಿವೆ. ಆದರೆ ಅದೇನೇ ಇರಲಿ ಎಂಥದ್ದೇ ಕಷ್ಟ ಬಂದರೂ ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಶಕ್ತಿ ಮಣ್ಣಿನ ಮಗನಲ್ಲಿ ಸದಾ ಜಾಗೃತವಾಗಿರುತ್ತದೆ. ಇವುಗಳೇ ಮುಂದಿನ ಪೀಳಿಗೆಯನ್ನು ಮುನ್ನಡೆಸುತ್ತದೆ.

First published: