ಒಬ್ಬ ರೈತನ ಜಮೀನಿನಲ್ಲಿ 1800 ಜಿಂಕೆಗಳು; ಇದು ಹೇಗೆ ಸಾಧ್ಯ? ತಮಿಳುನಾಡಿನಲ್ಲಿದೆ ಈ ಅಚ್ಚರಿ

Tamil Nadu Farmer Guruswamy keeps his 50 Acre land for Deers- ಈ 50 ಎಕರೆ ಜಮೀನಿಗೆ 23 ವರ್ಷಗಳ ಹಿಂದೆ 3 ಜಿಂಕೆಗಳು ಆಕಸ್ಮಿಕವಾಗಿ ಬಂದಿದ್ದವು. ಇದೀಗ ಈ ಜಮೀನೇ ಅವುಗಳಿಗೆ ಮನೆಯಾಗಿ ಅವುಗಳ ಸಂತತಿ 1,800ಕ್ಕೆ ಏರಿದೆ. ಇದು ಹೇಗೆ ಸಾಧ್ಯವಾಯಿತು?

ತಮಿಳುನಾಡು ರೈತ ಗುರುಸ್ವಾಮಿ ಮತ್ತವರ ಜಮೀನಿನಲ್ಲಿರುವ ಜಿಂಕೆಗಳು

ತಮಿಳುನಾಡು ರೈತ ಗುರುಸ್ವಾಮಿ ಮತ್ತವರ ಜಮೀನಿನಲ್ಲಿರುವ ಜಿಂಕೆಗಳು

  • Share this:
ತಮಿಳುನಾಡಿನ ಪುದುಪಾಳ್ಯಂ ಗ್ರಾಮದಲ್ಲಿರುವ ಈ 50 ಎಕರೆ ಜಮೀನಿಗೆ ನೀವು ಭೇಟಿ ನೀಡಿದರೆ ಅಚ್ಚರಿಗಳು ನಿಮ್ಮನ್ನ ಎದುರುಗೊಳ್ಳಬಹುದು. ಸಾಮಾನ್ಯ ಆಡುಗಳು ಮತ್ತು ಹಸುಗಳ ಜೊತೆಗೆ ಜಿಂಕೆಗಳ ಹಿಂಡು ನಿಮ್ಮನ್ನು ಸ್ವಾಗತಿಸಬಹುದು. ಕಳೆದ 20 ವರ್ಷಗಳಿಂದ ಜಿಂಕೆಗಳು ಈ ಫಾರ್ಮ್ ಅನ್ನು ತಮ್ಮ ಮನೆಯಾಗಿ ಮಾಡಿಕೊಂಡಿವೆ ಮತ್ತು ಸಾಕು ಪ್ರಾಣಿಗಳೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿವೆ. ಇಲ್ಲಿ ನವಿಲುಗಳು ಬಿಟ್ಟರೆ ಹತ್ತಿರದಲ್ಲಿ ಬೇರೆ ಯಾವ ವನ್ಯಜೀವಿಯೂ ಸುಳಿವುದಿಲ್ಲ. ಅಥವಾ ಹತ್ತಿರದಲ್ಲಿ ಯಾವ ಅರಣ್ಯವೂ ಇಲ್ಲ. ಆದರೂ, ಜಿಂಕೆಗಳ ಸಹವಾಸ ಹೇಗಾಯ್ತು ಅಂತೀರಾ..?

ಸುರಕ್ಷಿತ ಆವಾಸಸ್ಥಾನ ರಚಿಸಲು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ತನ್ನ ಕೃಷಿ ಭೂಮಿ ಬಿಟ್ಟುಕೊಟ್ಟ ರೈತ ಆರ್. ಗುರುಸ್ವಾಮಿ ಅವರ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ಈ ಬಗ್ಗೆ ದಿ ಬೆಟರ್ ಇಂಡಿಯಾದೊಂದಿಗೆ ಮಾತನಾಡಿದ ಗುರುಸಾಮಿ, ಜಿಂಕೆಗಳೊಂದಿಗಿನ ತನ್ನ ಮೊದಲ ಮುಖಾಮುಖಿ ಮತ್ತು ಜನಸಂಖ್ಯೆಯನ್ನು ಕೇವಲ ಮೂರರಿಂದ ನೂರಕ್ಕೆ ಹೆಚ್ಚಿಸಲು ಹೇಗೆ ಸಹಾಯ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಸಹಾನುಭೂತಿಯಿಂದ ಮೊದಲುಗೊಂಡಿತು:

“1998ರಲ್ಲಿ ಒಂದು ದಿನ ನನ್ನ ಮೇಕೆಗಳ ಜೊತೆಯಲ್ಲಿ ಹೊಲದಲ್ಲಿ 3 ಮಚ್ಚೆಯುಳ್ಳ ಜಿಂಕೆಗಳು ಮೇಯುತ್ತಿರುವುದನ್ನು ನಾನು ನೋಡಿದೆ. ಜಿಂಕೆಗಳು ಹುಲ್ಲನ್ನು ತಿನ್ನಲು ದನಗಳನ್ನು ಹಿಂಬಾಲಿಸುತ್ತಿರುವುದನ್ನು ನೋಡಿ ನನಗೆ ಖುಷಿಯಾಯಿತು. ನನ್ನ ಆಶ್ಚರ್ಯಕ್ಕೆ, ಆ ಕಾಡುಪ್ರಾಣಿಗಳು ನನ್ನ ಜಮೀನಿಗೆ ಆಗಾಗ್ಗೆ ಬರುವುದನ್ನು ನಿಲ್ಲಿಸಲೇ ಇಲ್ಲ’ ಎಂದು ಅವರು ಹೇಳುತ್ತಾರೆ.

ನೀರು ಮತ್ತು ಆಹಾರಕ್ಕಾಗಿ ನೆರೆಯ ಪಶ್ಚಿಮ ಘಟ್ಟಗಳ ಮೇಟ್ಟುಪಾಳ್ಯಂ ಅರಣ್ಯದಿಂದ ಆ ಜಿಂಕೆಗಳು ನನ್ನ ಜಮೀನಿಗೆ ನುಗ್ಗಿದ್ದಿರಬಹುದು ಎಂದು ಗುರುಸ್ವಾಮಿ ನಂಬುತ್ತಾರೆ.

“ಈ ಪ್ರದೇಶವು ಕಳೆದ 25 ವರ್ಷಗಳಿಂದ ಬರ ಪರಿಸ್ಥಿತಿ ಮತ್ತು ಮಳೆಯ ಕೊರತೆ ಅನುಭವಿಸುತ್ತಿದೆ. ಕೌಷಿಕಾ ನದಿಯಲ್ಲಿ ವರ್ಷದ ಬಹುಪಾಲು ನೀರಿತ್ತು, ಆದರೆ ಈಗ ಬತ್ತಿ ಹೋಗುತ್ತಿದೆ. ನೀರಾವರಿಗಾಗಿ ನೀರನ್ನು ಅತಿಯಾಗಿ ಬಳಸಿಕೊಂಡಿದ್ದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ. ಇದರ ಪರಿಣಾಮವನ್ನ ಜಿಂಕೆಗಳೂ ಅನುಭವಿಸುತ್ತಿದ್ದಿರಬೇಕು” ಎಂದು ಅವರು ವಿವರಿಸುತ್ತಾರೆ.

ಪೂರ್ವಿಕರ 60 ಎಕರೆ ಜಮೀನು:

“ನನಗೆ ಪೂರ್ವಜರಿಂದ ಬಳುವಳಿಯಾಗಿ ಬಂದ 60 ಎಕರೆ ಜಮೀನಿದೆ. ಮತ್ತು ಆ ದಿನಗಳಲ್ಲಿ, 15 ಎಕರೆ ಭೂಮಿಯಲ್ಲಿ ಜೋಳ, ಹತ್ತಿ ಮತ್ತು ಋತುಮಾನದ ತರಕಾರಿಗಳನ್ನು ಬೆಳೆಯುವ ಸಾವಯವ ಕೃಷಿಯನ್ನು ಅಭ್ಯಾಸ ಮಾಡಿದೆ. ನನ್ನ 100 ಹಸುಗಳು ಮತ್ತು ಮೇಕೆಗಳಿಗೆ 45 ಎಕರೆ ಭೂಮಿಯನ್ನು ಸ್ಥಳೀಯ ಸಸ್ಯಗಳನ್ನು ಮೇಯಿಸಲು ಮತ್ತು ಬೆಳೆಯಲು ಅರ್ಪಿಸಿದೆ. ನಾನು ಜಾನುವಾರುಗಳ ಸಗಣಿಯಿಂದ ಸಾವಯವ ಗೊಬ್ಬರ ತಯಾರಿಸಲು ಬಳಸುತ್ತೇನೆ’’ ಎಂದೂ 70 ವರ್ಷ ವಯಸ್ಸಿನ ಗುರುಸ್ವಾಮಿ ಹೇಳುತ್ತಾರೆ.

ಇದನ್ನೂ ಓದಿ: Haunted House Testers: ನಿಮಿಷಕ್ಕೆ 700 ರೂ, ದಿನಕ್ಕೆ 17 ಸಾವಿರ ಸಂಬಳ.. ಆದ್ರೆ ಈ ಕೆಲಸ ಮಾಡಲು ಗುಂಡಿಗೆ ಬೇಕು ಕಂಡ್ರಿ!

ಹಸಿರಿನಿಂದ ಕೂಡಿದ ತೆರೆದ ಭೂಮಿ ಜಿಂಕೆಗಳಿಗೆ ಖಚಿತವಾದ ಆಹಾರದೊಂದಿಗೆ ಸುರಕ್ಷಿತ ಆವಾಸಸ್ಥಾನವಾಯಿತು ಎಂದು ರೈತ ನೆನಪಿಸಿಕೊಳ್ಳುತ್ತಾರೆ.

‘’ಜಿಂಕೆಗಳಿಗೆ ಈ ಸ್ಥಳ ವಾಸಸ್ಥಾನವಾಯಿತು. ನಾನು ಅಂತಿಮವಾಗಿ ನನ್ನ ಕೃಷಿ ಪ್ರದೇಶವನ್ನು 10 ಎಕರೆಗೆ ಸೀಮಿತಗೊಳಿಸಿದೆ ಮತ್ತು 50 ಎಕರೆಗಳನ್ನು ಸಂಪೂರ್ಣವಾಗಿ ಪ್ರಾಣಿಗಳಿಗೆ ಬಿಟ್ಟುಕೊಟ್ಟಿದ್ದೇನೆ.

ನಾಯಿಗಳಿಂದ ರಕ್ಷಣೆ:

“ಜಿಂಕೆಗಳ ಬಗ್ಗೆ ಸಹಾನುಭೂತಿ ಹೊಂದಿದ್ದ ನನಗೆ ಅವುಗಳಿಗೆ ಹಾನಿ ಮಾಡಲಾಗಲೀ ಅಥವಾ ಓಡಿಸಲಾಗಲಿ ಮನಸಾಗುತ್ತಿರಲಿಲ್ಲ. ನಾಯಿಗಳು ಜಿಂಕೆಗಳ ಮೇಲೆ ದಾಳಿ ಮಾಡುವ ಘಟನೆಗಳನ್ನ ನಾನು ನೋಡಿದ್ದೆ. ಈ ವನ್ಯಜೀವಿಗಳನ್ನು ರಕ್ಷಿಸಲು ನಿರ್ಧರಿಸಿದೆ. ನನ್ನ ಕೃಷಿ ಭೂಮಿಯಿಂದ ಜಿಂಕೆಗಳಿಗೆ ಆಸರೆ ಮತ್ತು ರಕ್ಷಣೆ ಹೊದಗಿಸಲು ಸಾಧ್ಯ ಎಂದು ನಾನು ಅರಿತುಕೊಂಡೆ” ಎಂದು ತಮಿಳುನಾಡಿನ ಈ 70 ವರ್ಷದ ರೈತ ವಿವರಿಸಿದ್ದಾರೆ.

“ಮೂರು ಜಿಂಕೆಗಳಲ್ಲಿ ಒಂದು ಗಂಡು, ಉಳಿದವು ಹೆಣ್ಣು. ಪ್ರಾಣಿಗಳು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸಿದಾಗ, ಇವುಗಳ ಮೇಲೆ ಯಾರಿಗೂ ಸಹಾನುಭೂತಿ ಬರಲಿಲ್ಲ. ಜಿಂಕೆಗಳ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಯಿತು. 2005ರವರೆಗೆ ಯಾರ ಗಮನವೂ ಈ ಜಿಂಕೆಗಳ ಮೇಲೆ ಹರಿಯಲಿಲ್ಲ. ಜಿಂಕೆಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅವುಗಳು ಮೇವು ಹುಡುಕಿಕೊಂಡು ಹತ್ತಿರದ ಬೇರೆಯವರ ಜಮೀನುಗಳಿಗೆ ನುಗ್ಗಲು ಪ್ರಾರಂಭಿಸಿದವು. ಬೇರೆ ರೈತರ ಬೆಳೆಗಳನ್ನು ತಿನ್ನತೊಡಗಿದವು. ಇದು ಇತರ ರೈತರ ಅಸಮಾಧಾನಕ್ಕೆ ಕಾರಣವಾಯಿತು.

ಮಾಧ್ಯಮಗಳಲ್ಲಿ ಪ್ರಚಾರ:

“ನಮ್ಮ ಗ್ರಾಮ ಮತ್ತು ನೆರೆಯ ಜಿಲ್ಲೆಗಳಲ್ಲಿ 2000ರ ದಶಕದ ಮಧ್ಯಭಾಗದಲ್ಲಿ ಮಳೆಯ ಅಭಾವ ಕಾಡಿತ್ತು. ಜಿಂಕೆಗಳು ಆಹಾರ ಮತ್ತು ನೀರು ಅರಸಿ ಇತರ ಜಮೀನುಗಳಿಗೆ ಕಾಲಿಟ್ಟವು. ಕೆಲವರು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ದೂರು ನೀಡಿದರು.

“ಶೀಘ್ರದಲ್ಲೇ, ಸ್ಥಳೀಯ ಮಾಧ್ಯಮಗಳ ಪತ್ರಕರ್ತರಿಗೆ ಈ ವಿಚಾರ ಗೊತ್ತಾಯಿತು. ಅವರು ಪ್ರದೇಶದಲ್ಲಿ ಹೆಚ್ಚುತ್ತಿರುವ ವನ್ಯಜೀವಿಗಳ ಬಗ್ಗೆ ಬರೆದರು. ಅದಾದ ಬಳಿಕ ನಗರವಾಸಿಗಳು ಜಿಂಕೆಗಳನ್ನು ನೋಡಲು ನಮ್ಮ ಸ್ಥಳಕ್ಕೆ ಬರತೊಡಗಿದರು” ಎಂದು ಗುರುಸ್ವಾಮಿ ಹೇಳುತ್ತಾರೆ.

ಇದನ್ನೂ ಓದಿ: Hampi : ನೀವು ಹಂಪಿಗೆ ಟ್ರಿಪ್ ಪ್ಲಾನ್ ಮಾಡಿದ್ರೆ, ಮಿಸ್ ಮಾಡ್ದೆ ಈ ಸ್ಥಳಗಳಿಗೆ ಹೋಗಲೇಬೇಕು

ಆದರೆ, ರೈತರು ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ದಕ್ಕೆ ಗುರುಸ್ವಾಮಿಗೆ ಬೇಸರ ಮೂಡಲಿಲ್ಲ. ರೈತರ ಸಮಸ್ಯೆ, ಅಂಜಿಕೆ ಏನು ಎಂಬುದು ಅವರ ಅರಿವಿನಲ್ಲಿ ಇರುತ್ತದೆ. "ರೈತರು ಈಗಾಗಲೇ ನೀರಿನ ಕೊರತೆ ಮತ್ತು ಬೆಳೆಗಳ ಉತ್ಪಾದನೆ ಕುಸಿತದಿಂದ ಸಂಕಷ್ಟದಲ್ಲಿರುತ್ತಾರೆ. ಅದರ ಜೊತೆಗೆ ಜಿಂಕೆಗಳಿಂದ ಆಗುತ್ತಿದ್ದ ಹಾನಿಯು ರೈತರ ಕಷ್ಟ ಹೆಚ್ಚಿಸಿತು. ಈ ಜಿಂಕೆಗಳನ್ನು ಓಡಿಸಲು ಕೆಲವರು ನಾಯಿಗಳನ್ನು ಸಾಕತೊಡಗಿದರು” ಎಂದು ಅವರು ಹೇಳುತ್ತಾರೆ.

“ಆದರೂ, ಜಿಂಕೆಗಳನ್ನು ಓಡಿಸುವಾಗ ಅವು ಬೆದರಿ ಅಡ್ಡಾದಿಡ್ಡಿಯಾಗಿ ಓಡುತ್ತಿದ್ದವು. ಪರಿಣಾಮವಾಗಿ ಕೆಲ ಜಿಂಕೆಗಳು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಜಿಂಕೆಗಳಿದ್ದರಿಂದ ಬೇಟೆಗಾರರ ಕಣ್ಣು ಬಿದ್ದಿತ್ತು. ಅವರು ಮಾಂಸ ಮತ್ತು ವ್ಯಾಪಾರಕ್ಕಾಗಿ ಬೇಟೆಯಾಡಲು ಪ್ರಾರಂಭಿಸಿದರು.

ಅಧಿಕಾರಿಗಳಿಗೆ ಸ್ಥಳೀಯರಿಂದ ದೂರು:

“ರೈತರ ಮನವೊಲಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಅವರೆಲ್ಲರೂ ನನ್ನ ವಿರುದ್ಧ ಹೋಗಿ ಕಲೆಕ್ಟರ್‌ಗೆ ದೂರು ನೀಡಿದರು. ನಾನು ಅರಿವು ಮೂಡಿಸಲು ಮತ್ತು ಇಂದಿನವರೆಗೆ ಪ್ರಾಣಿಗಳ ಬಗೆಗಿನ ಅವರ ಗ್ರಹಿಕೆಯನ್ನು ಬದಲಾಯಿಸಲು ಹೆಣಗಾಡುತ್ತಿದ್ದೇನೆ. ನನ್ನ ಉದ್ದೇಶಕ್ಕೆ ಸದಾ ಬೆಂಬಲ ನೀಡುತ್ತಿರುವವರು ನನ್ನ ಸ್ನೇಹಿತ ಸಿ. ಬಾಲಸುಂದರಂ ಮಾತ್ರ. ಅವರು ಹಲವಾರು ಎಕರೆಗಳಲ್ಲಿ ಹರಡಿರುವ ತನ್ನ ತೆಂಗಿನ ತೋಟಕ್ಕೆ ಜಿಂಕೆಗಳು ಹೋಗಿ ಬರಲು ಅವಕಾಶ ಮಾಡಿಕೊಟ್ಟರು” ಎಂದು ಗುರುಸ್ವಾಮಿ ಹೇಳುತ್ತಾರೆ.

2008 ಮತ್ತು 2010ರಲ್ಲಿ ಎರಡು ಬೇಟೆಗಾರರ ​​ತಂಡಗಳನ್ನು ಹಿಡಿಯಲು ಗುರುಸ್ವಾಮಿಗೆ ಸಹಾಯ ಮಾಡಿದವರು ಬಾಲಸುಂದ್ರಂ. ನಾವು ಸಮಸ್ಯೆಯನ್ನು ಅರಣ್ಯ ಇಲಾಖೆಗೆ ವರದಿ ಮಾಡಿದ್ದೇವೆ ಮತ್ತು ಅಧಿಕಾರಿಗಳಿಂದ ನಿರಂತರ ಬೆಂಬಲ ಪಡೆದಿದ್ದೇವೆ. ಅವರು ನಮಗೆ 24/7 ಸಹಾಯದ ಭರವಸೆ ನೀಡಿದ್ದಾರೆ. ಜಿಂಕೆಗಳು ಹೊರಗೆ ಹೋಗದಂತೆ ತಡೆಯಲು, ನಾನು ಜಮೀನಿನಲ್ಲಿ ಒಂದೆರಡು ಕೆರೆಗಳನ್ನು ನಿರ್ಮಿಸಿದೆ. ಬೇಸಿಗೆ ಕಾಲದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನೀರು ತುಂಬಿಸುತ್ತಾರೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Viral News: ಒಂದೆಡೆ ಸೇರಿದ ಮೂರು ನಾಗರಹಾವುಗಳು, ಇಲ್ಲಿದೆ ನೋಡಿ ಬಲು ಅಪರೂಪದ ದೃಶ್ಯ!

ಈ ಬಗ್ಗೆ ಮಾತನಾಡಿದ ತಿರುಪುರದ ರೇಂಜ್ ಫಾರೆಸ್ಟ್ ಆಫೀಸರ್ ಸೆಂಥಿಲ್ ಕುಮಾರ್, “ಕಳೆದ 2 ದಶಕಗಳಲ್ಲಿ ಜಿಂಕೆಗಳ ಸಂತತಿ ಅಪಾರವಾಗಿ ಹೆಚ್ಚಾಗಿದೆ. ಆಗಸ್ಟ್ 2021ರಲ್ಲಿ ನಡೆಸಿದ ಜನಗಣತಿಯ ಪ್ರಕಾರ, ಜಿಂಕೆ ಜನಸಂಖ್ಯೆಯು ಸುಮಾರು 1,800 ಆಗಿದೆ’’ ಎಂದು ಹೇಳಿದರು.

ಜಿಂಕೆಗಳನ್ನು ರಕ್ಷಿಸಲು ಮತ್ತು ಅವುಗಳ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಇಲಾಖೆಯು ಗುರುಸ್ವಾಮಿಗೆ ಸಹಾಯ ಮಾಡುತ್ತದೆ ಎಂದು ಸೆಂಥಿಲ್ ಹೇಳುತ್ತಾರೆ. ಜನಸಂಖ್ಯೆಗೆ ಬೆದರಿಕೆಯೊಡ್ಡುವ ಕಳ್ಳಬೇಟೆ ಮತ್ತು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿಗಳಿಂದ 24 ಗಂಟೆಯೂ ಗಸ್ತು ತಿರುಗುತ್ತಿದೆ" ಎಂದು ಅವರು ಹೇಳುತ್ತಾರೆ.

ಎನ್​ಜಿಒ, ಪರಿಸರವಾದಿಗಳಿಂದ ಸಹಾಯ:

ಕ್ರಮೇಣ, ಕೆಲವು ಎನ್‌ಜಿಒಗಳು ಮತ್ತು ಪರಿಸರವಾದಿಗಳು ಗುರುಸ್ವಾಮಿ ಮತ್ತು ಅವರ ಉದ್ದೇಶಕ್ಕೆ ಬೆಂಬಲ ತೋರಿಸಲು ಪ್ರಾರಂಭಿಸಿದರು.

“ನಾನು 2010ರಿಂದ ಗುರುಸ್ವಾಮಿ ಕೆಲಸವನ್ನು ಗಮನಿಸುತ್ತಿದ್ದೇನೆ. ಜಿಂಕೆಗಳ ಸಂತತಿ ರಕ್ಷಿಸುವ ಮತ್ತು ಹೆಚ್ಚಿಸುವ ಅವರ ಕಾರ್ಯ ಶ್ಲಾಘನೀಯ. ಆದರೂ, ಜಿಂಕೆಗಳು ಸಸ್ಯಾಹಾರಿ ಜಾತಿಯಾಗಿದ್ದು, ಸುತ್ತಮುತ್ತಲಿನ ಮೇಯಿಸುವ ಜನಸಂಖ್ಯೆಯ ಮೇಲೆ ನಿಗಾ ಇಡಲು ಯಾವುದೇ ಮಾಂಸಾಹಾರಿ ಪ್ರಾಣಿಗಳು ಇಲ್ಲ. ಬೇಟೆಯಾಡುವ ಪ್ರಾಣಿಗಳು ಇಲ್ಲದೇ ಇರುವುದರಿಂದ ಜಿಂಕೆಗಳ ಸಂಖ್ಯೆ ಸ್ಫೋಟಗೊಂಡಿದೆ. ಪ್ರತ್ಯೇಕ ಅರಣ್ಯ ಪರಿಸರ (Fragmented Forest Ecosystem) ವ್ಯವಸ್ಥೆಯು ವನ್ಯಜೀವಿಗಳ ಸಂಖ್ಯೆಯಲ್ಲಿ ಅಸಮತೋಲನಕ್ಕೆ ಹೇಗೆ ಕಾರಣ ಆಗಬಹುದು, ಆಹಾರ ಸರಪಳಿ ಹೇಗೆ ಮುರಿಯಬಹುದು ಎಂಬುದಕ್ಕೆ ಇದು ಒಳ್ಳೆಯ ನಿದರ್ಶನವಾಗಿದೆ ಎಂದು ಪರಿಸರವಾದಿ ಮತ್ತು ನೇಚರ್ ಸೊಸೈಟ್ ಆಫ್ ತಿರುಪ್ಪೂರ್ ಎಂಬ ಎನ್​ಜಿಒ ಸಂಸ್ಥೆಯ ಅಧ್ಯಕ್ಷ ಕೆ. ರವೀಂದ್ರನ್ ಹೇಳುತ್ತಾರೆ.

ಇದನ್ನೂ ಓದಿ: 5 Healthy Winter Fruits : ಚಳಿಗಾಲದಲ್ಲಿ ಮನೆಯಲ್ಲಿಯೇ ಆರೋಗ್ಯ ಕಾಪಾಡಿಕೊಳ್ಳಲು ಈ 5 ಹಣ್ಣು ತಿಂದ್ರೆ ಸಾಕಂತೆ

“ಒಂದು ದಶಕದ ಹಿಂದೆ ನನ್ನ ಮೊದಲ ಭೇಟಿಯ ಸಮಯದಲ್ಲಿ ನಾನು ಸುಮಾರು 110 ಜಿಂಕೆಗಳನ್ನು ನೋಡಿದೆ ಮತ್ತು ಇಂದು ಈ ಪ್ರದೇಶದಲ್ಲಿ ನೂರಾರು ಅಭಿವೃದ್ಧಿ ಹೊಂದುತ್ತಿದೆ. ವನ್ಯಜೀವಿಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಆಗಾಗ ಜಮೀನಿಗೆ ಭೇಟಿ ನೀಡುತ್ತಾರೆ’’ ಎಂದೂ ಹೇಳುತ್ತಾರೆ.

ಹೆಚ್ಚುತ್ತಿರುವ ಆತಂಕಗಳನ್ನು ಪರಿಗಣಿಸಿ, ಜಿಂಕೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಗುರುಸ್ವಾಮಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಗುರುಸ್ವಾಮಿಯವರ ಆಲೋಚನೆಗಳನ್ನು ಪ್ರತಿಧ್ವನಿಸುವ ರವೀಂದ್ರನ್, ಜಿಂಕೆಗಳ ಸ್ಥಳಾಂತರವು ಈ ಸಮಯದ ಅಗತ್ಯವಾಗಿದೆ. ಆದರೆ ತನ್ನದೇ ಆದ ಸವಾಲುಗಳನ್ನು ಹೊಂದಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Viral Story: ಒಂದಲ್ಲಾ, ಎರಡಲ್ಲಾ, ಏಕಕಾಲದಲ್ಲಿ 9 ಮಹಿಳೆಯರನ್ನು ವಿವಾಹವಾದ ವ್ಯಕ್ತಿ! ಹರಕೆ ಕಟ್ಟಿಕೊಂಡಿದ್ದನೋ ಹೇಗೆ?

“ಜಿಂಕೆ ಸೂಕ್ಷ್ಮ ಪ್ರಾಣಿ. ಅವಕ್ಕೆ ಸ್ವಲ್ಪ ಆಘಾತವಾದರೂ, ಅಥವಾ ಹೆಚ್ಚು ದೂರ ಬೆನ್ನಟ್ಟಿ ಹೋದರೂ ಸುಲಭವಾಗಿ ಆಯಾಸಗೊಂಡುಬಿಡುತ್ತವೆ. ಸಾವೂ ಸಂಭವಿಸಬಹುದು. ಕ್ರೂರಪ್ರಾಣಿಗಳನ್ನ ಪ್ರಜ್ಞೆತಪ್ಪಿಸಿ ಬೇರೆಡೆ ಸ್ಥಳಾಂತರ ಮಾಡುವಂತೆ ಜಿಂಕೆಗಳಿಗೆ ಮಾಡಲು ಆಗುವುದಿಲ್ಲ. ಅದಕ್ಕೆ ಸರಿಯಾದ ವಿಧಾನ ಯಾವುದು ಎಂದು ಕಂಡುಕೊಳ್ಳಬೇಕಿದೆ. ದೀರ್ಘಾವಧಿ ಯೋಜನೆ ಹಾಕಿಕೊಂಡು ನಿಧಾನವಾಗಿ ಜಿಂಕೆಗಳನ್ನ ಕಾಡು ಪ್ರದೇಶಕ್ಕೆ ಸ್ಥಳಾಂತರಿಸುವ ಕುರಿತು ಯೋಚಿಸುತ್ತಿದ್ದೇವೆ” ಎಂದು ರವೀಂದ್ರನ್ ಹೇಳುತ್ತಾರೆ.

ಇದೇ ವೇಳೆ, ಜಿಂಕೆಗಳ ರಕ್ಷಣೆ ಮುಂದುವರಿಸಲು ಗುರುಸ್ವಾಮಿ ಕಟಿಬದ್ಧರಾಗಿದ್ದಾರೆ. “ನನಗೆ ಯಾವುದೇ ನೆರವು ಬೇಡ. ಜಿಂಕೆಗಳ ಸುರಕ್ಷತೆಗಾಗಿ ರೈತರೊಂದಿಗೆ ಹೋರಾಡುತ್ತೇನೆ. ರೈತರ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ನೀರಾವರಿ ಪೈಪ್‌ಲೈನ್ ಮಂಜೂರು ಮಾಡಿದೆ. ನೀರಿನ ಪ್ರವೇಶವು ಜಿಂಕೆಗಳಿಗೆ ಅಪಾಯ ಹೆಚ್ಚಿಸಬಹುದು. ಆದ್ದರಿಂದ ಮಾನವರು ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಕಡಿಮೆ ಮಾಡಲು ತುರ್ತು ಪರಿಹಾರದ ಅಗತ್ಯವಿದೆ. ಕೆಲವು ತಜ್ಞರು ನಮಗೆ ಸಹಾಯ ಮಾಡಿದರೆ ಅದು ಪ್ರಶಂಸಿಸಲ್ಪಡುತ್ತದೆ” ಎಂದು ರೈತ ಗುರುಸ್ವಾಮಿ ಹೇಳುತ್ತಾರೆ.

ಮಾಹಿತಿ: ದಿ ಬೆಟರ್ ಇಂಡಿಯಾ

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: