ಪದವಿ ಪಡೆದ ರೈತನ ಮಗ ಹೆತ್ತವರಿಗೆ ನೀಡಿದ ಗೌರವ ನೋಡಿದರೆ, ನೀವೂ ಹೇಳ್ತೀರಾ ಭೇಷ್

zahir | news18
Updated:October 22, 2018, 7:48 PM IST
ಪದವಿ ಪಡೆದ ರೈತನ ಮಗ ಹೆತ್ತವರಿಗೆ ನೀಡಿದ ಗೌರವ ನೋಡಿದರೆ, ನೀವೂ ಹೇಳ್ತೀರಾ ಭೇಷ್
  • Advertorial
  • Last Updated: October 22, 2018, 7:48 PM IST
  • Share this:
-ನ್ಯೂಸ್ 18 ಕನ್ನಡ

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಿಗಳು ಹಲವು ರೀತಿಯ ತ್ಯಾಗಗಳನ್ನು ಮಾಡಿರುತ್ತಾರೆ. ಆದರೆ ಮಗ ಒಂದು ಎತ್ತರಕ್ಕೆ ಬೆಳೆಯುತ್ತಿದ್ದಂತೆ ಎಲ್ಲವನ್ನು ಮರೆಯುವ ಅನೇಕ ಘಟನೆಗಳು ಸಮಾಜದಲ್ಲಿ ಕಾಣ ಸಿಗುತ್ತದೆ. ಇವೆಲ್ಲದರ ನಡುವೆ ಢಾಕಾ ವಿದ್ಯಾರ್ಥಿ ವಲಿಉಲ್ಲಾ ತನ್ನ ಪೋಷಕರೊಂದಿಗೆ ನಡೆದುಕೊಂಡ ರೀತಿಯಿಂದ ಜಾಲತಾಣಿಗರ ಗಮನವನ್ನು ಸೆಳೆದು ಸುದ್ದಿಯಾಗಿದ್ದಾನೆ.

ಢಾಕಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ವಲಿಉಲ್ಲಾ ಪದವಿ ಮುಗಿಸಿದ್ದರು. ಅಕೌಂಟೆನ್ಸಿ & ಇನ್​ಫಾರ್ಮೆಶನ್ ಸಿಸ್ಟಮ್ಸ್​ನಲ್ಲಿ ಎಂಬಿಎ ಮಾಡಿದ ಇವರ  ಘಟಿಕೋತ್ಸವ ಸಮಾರಂಭಕ್ಕೆ ತಂದೆ ತಾಯಿಗಳು ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಪದವಿ ಸರ್ಟಿಫಿಕೇಟ್ ಸ್ವೀಕರಿಸಿದ ವಲಿಉಲ್ಲಾ ತನ್ನ ಗೌರವದ ಸಂಕೇತವಾದ ಗೌನ್ ಮತ್ತು ಕ್ಯಾಪ್​ನ್ನು ಪೋಷಕರಿಗೆ ಅರ್ಪಿಸಿದ್ದಾರೆ.

ಅಷ್ಟೇ ಅಲ್ಲದೆ, ರೈತರಾಗಿರುವ ತಮ್ಮ ತಂದೆಗೆ ಗೌನ್ ಮತ್ತು ತಾಯಿಗೆ ಪದವಿ ಕಿರೀಟ(ಕ್ಯಾಪ್)ನ್ನು ತೊಡಿಸಿ ಸೈಕಲ್ ರಿಕ್ಷಾದಲ್ಲಿ ಕುಳ್ಳಿರಿಸಿದ್ದಾರೆ. ಬಳಿಕ ತನ್ನ ವಿದ್ಯಾಭ್ಯಾಸಕ್ಕಾಗಿ ಸರ್ವ ತ್ಯಾಗವನ್ನು ಮಾಡಿದ ತಂದೆ-ತಾಯಿಯನ್ನ ನಗರದ ಮುಖ್ಯ ರಸ್ತೆಯಲ್ಲಿ ಸ್ವತಃ ಸೈಕಲ್ ತುಳಿದು ಸುತ್ತಾಡಿಸಿದ್ದಾರೆ. ಮಗನಿಗೆ ಪದವಿ ಲಭಿಸಿದ ಖುಷಿ ಒಂದೆಡೆಯಾದರೆ, ಎಲ್ಲರ ಮುಂದೆ ತಾನು ರೈತನೊಬ್ಬನ ಮಗನೆಂದು ಅಭಿಮಾನದಿಂದ ಸೈಕಲ್ ತುಳಿದು ಗರ್ವದಿಂದ ಮುನ್ನಡೆದ ಮಗನ ಪ್ರೀತಿ ಮತ್ತೊಂದೆಡೆ.


ಇಂತಹ ಅಪೂರ್ವ ಘಳಿಗೆಯ ಫೋಟೋವೊಂದನ್ನು ವಲಿಉಲ್ಲಾ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು. 'ನನ್ನ ಅಮ್ಮ ನನ್ನ ಜೀವನದ ಕಿರೀಟ, ಹಾಗಾಗಿ ಕ್ಯಾಪ್​ನ್ನು ಅವರಿಗೆ ತೊಡಿಸಿದೆ. ಜೀವನದುದ್ದಕ್ಕೂ ಎಲ್ಲ ಹಾನಿಗಳಿಂದಲೂ ಅಪ್ಪ ನನ್ನನ್ನು ರಕ್ಷಿಸಿದ್ದಾರೆ. ಅದಕ್ಕಾಗಿ ಬೆವರಿನಿಂದ ತೋಯ್ದಿರುವ ಅವರ ದೇಹಕ್ಕೆ ಗೌನ್ ತೊಡಿಸಿರುವೆ' ಎಂಬ ಅಡಿಬರಹದೊಂದಿಗೆ ವಲಿಉಲ್ಲಾ ಪೋಸ್ಟ್​ ಮಾಡಿದ್ದರು. ಈ ಪೋಸ್ಟ್​ನ್ನು ವಿಶ್ವದಾದ್ಯಂತ ವೈರಲ್ ಆಗಿದ್ದು, ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಹಂಚಿಕೊಂಡಿದ್ದರು. ಅಲ್ಲದೆ ವಲಿಉಲ್ಲಾನ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: ಬೆಳ್ಳಗಿರುವುದೆಲ್ಲಾ ಹಾಲಲ್ಲ: ನೀವು ಕುಡಿಯುತ್ತಿರುವುದು ರಾಸಾಯನಿಕ ವಿಷ..!
First published:October 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ