ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಿನ ರೈತರು ಗೋವುಗಳನ್ನು ಸಾಕಿಕೊಂಡಿರುತ್ತಾರೆ. ಹಸುವಿನಿಂದ ಹಲವು ಪ್ರಯೋಜನಗಳಿದ್ದು ಹಾಲು, ಮೊಸರು, ತುಪ್ಪ, ಬೆಣ್ಣೆ ಹೀಗೆ ಪೌಷ್ಠಿಕ ಆಹಾರ ದೊರೆತರೆ, ಇತ್ತ ಹಸುವಿನ ಸಗಣಿಯನ್ನು ಕೃಷಿಗಳಿಗೆ ಗೊಬ್ಬರವಾಗಿ ಬಳಸಲಾಗುತ್ತದೆ. ಹೀಗೆ ಹತ್ತಾರು ಪ್ರಯೋಜನಗಳನ್ನು ನೀಡುವ ಹಸುವನ್ನು ಅಷ್ಟೇ ಪ್ರೀತಿಯಿಂದ ಸಾಕುತ್ತಾನೆ ರೈತ. ಅದಕ್ಕೆ ಏನೇ ಕಷ್ಟಬಂದರು ಆತನೂ ಬೆಸರಗೊಳ್ಳುತ್ತಾನೆ. ಔಷಧಿ ಚಿಕಿತ್ಸೆ ನೀಡಿ ಅದರ ಜೀವ ಕಾಪಾಡುತ್ತಾನೆ. ಅದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಹಸುವಿಗೆ ಚಿಕಿತ್ಸೆ ಕೊಡಲು ರೈತನೊಬ್ಬ ಹೆಲಿಕಾಪ್ಟರ್ನಲ್ಲಿ ಕರೆದುಕೊಂಡು ಹೋಗ ಘಟನೆ ನಡೆದಿದೆ.
ಸ್ವಿಜರ್ಲೆಂಡ್ನಲ್ಲಿ ರೈತನೊಬ್ಬ ಗಾಯಾಳು ಹಸುವಿನ ಚಿಕಿತ್ಸೆ ನೀಡಲು ಹೆಲಿಕಾಪ್ಟರ್ ಕರೆಸಿ ಅದರ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಹಸುವಿನ ಮೇಲೆ ಆತನಿಗಿರುವ ಕಾಳಜಿ ನೋಡಿ ಅಲ್ಲಿನ ಜನರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹಸುವು ಗಾಯದಿಂದ ನರಳುತ್ತಿತ್ತು. ಅದಕ್ಕೆ ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್ ಕರೆಸಿದ್ದಾನೆ. ಆಲ್ಪ್ಸ್ ಪರ್ವತ ಪ್ರದೇಶದಲ್ಲಿದ್ದ ಹಸುವನ್ನು ಏರ್ಲಿಫ್ಟ್ ಮಾಡಿ ಸುರಕ್ಷಿತ ಪ್ರದೇಶಕ್ಕೆ ಇಳಿಸಿ ನಂತರ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಿದ್ದಾನೆ.
ಇನ್ನು ಹಸುವನ್ನು ಹೆಲಿಕಾಪ್ಟರ್ ಮೂಲಕ ಕೊಂಡೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ರೈತನ ಕಾಳಜಿಗೆ ಪ್ರಶಂಸೆಯ ಕಾಮೆಂಟ್ ಬರೆದಿದ್ದಾರೆ. ಗಾಯದ ಹಸುವಿನ ಜೀವವನ್ನು ರಕ್ಷಿಸಲು ರೈತನ ತೋರಿರುವ ಕಾಳಜಿಗೆ ಮೆಚ್ಚುಗೆ ಹರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ