Good News: ಕೈದಿಗಳಿಗಾಗಿ ಜೈಲು ಒಲಿಂಪಿಕ್ಸ್​​ ಆಯೋಜಿಸಿದ ಪಂಜಾಬ್‌ ಕೇಂದ್ರ ಕಾರಾಗೃಹ

ಇಂತಹ ಕ್ರೀಡಾಕೂಟಗಳು ಪ್ರತಿ ಜೈಲಿನಲ್ಲೂ ನಡೆಯಬೇಕು.ಇದು ನಮ್ಮಮನಸ್ಸನ್ನು ಆರಾಮಾಗಿರುತ್ತದೆ. ಡ್ರಗ್ಸ್ ವ್ಯಸನದಿಂದ ದೂರವಿರಲೂ ಸಹಾಯವಿರಿಸುತ್ತೆ ಎಂದಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೈದಿಗಳ ಮನಸ್ಸಿನಲ್ಲಿ ಕ್ರೀಡಾ ಮನೋಭಾವವನ್ನು( Sports Spirit) ಮೂಡಿಸುವ ಮೂಲಕ ಕೈದಿಗಳ ನಡವಳಿಕೆಯನ್ನು ಸುಧಾರಿಸಲು ಪಂಜಾಬ್ ಸರ್ಕಾರ ಪ್ರಾರಂಭಿಸಿರುವ 'ಪಂಜಾಬ್ ಜೈಲು ಒಲಿಂಪಿಕ್ಸ್-2021' ಕ್ರೀಡಾಕೂಟವನ್ನು ( Punjab Prison Olympics )ನವೆಂಬರ್‌ 15ರಂದು ಪಂಜಾಬ್ ಎಡಿಜಿಪಿ(Punjab ADGP) (ಜೈಲುಗಳು) ಪ್ರವೀಣ್ ಕುಮಾರ್ ಸಿನ್ಹಾ(Praveen Kumar Sinha) ಅವರು ಪಟಿಯಾಲದ ಕೇಂದ್ರ ಕಾರಾಗೃಹದಲ್ಲಿ ಚಾಲನೆ ನೀಡುವ ಮೂಲಕ ಹೊಸ ಕ್ರಾಂತಿ (Revolution) ಹುಟ್ಟು ಹಾಕಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟ
ಕೈದಿಗಳಿಗೆ ಕ್ರೀಡಾ ಮನೋಭಾವದ ಮೂಲಕ ಉತ್ತಮ ನಾಗರಿಕರಾಗುವ ಅವಕಾಶ ನೀಡುವ ಸಲುವಾಗಿ ಪಂಜಾಬ್ ಜೈಲು ಒಲಿಂಪಿಕ್ ಕ್ರೀಡಾಕೂಟವನ್ನು ಆ ರಾಜ್ಯದ ವಿವಿಧ ಜೈಲುಗಳಲ್ಲಿ ವಿವಿಧ ವಲಯಗಳಾಗಿ ವಿಂಗಡಿಸಿ ನಡೆಸಲಾಗುತ್ತಿದೆ ಎಂದು ಪಿ.ಕೆ ಸಿನ್ಹಾ ಹೇಳಿದರು. ಫರೀದ್‌ಕೋಟ್‌,ಅಮೃತಸರ ಕಾರಾಗೃಹದಲ್ಲೂ ಈ ಜೈಲು ಒಲಿಂಪಿಕ್ಸ್ ನಡೆದಿದ್ದು,ಇತ್ತೀಚೆಗೆ ಮುಕ್ತಾಯಗೊಂಡಿದೆ.

ಪಂಜಾಬ್‌ನ ಇತರ ಜೈಲುಗಳಲ್ಲಿರುವ ಕೈದಿಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಕಬಡ್ಡಿ ಫೈನಲ್ಸ್‌ ಪಂದ್ಯಗಳಮೂಲಕ ಈ ಜೈಲ್‌ ಒಲಿಂಪಿಕ್ಸ್ - 2021 ಮುಕ್ತಾಯಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲ, ಈ ಕ್ರೀಡಾಕೂಟದ ವಿಜೇತರು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: SBI Fraud: ಬ್ಯಾಂಕಿಗೇ 4.03 ಕೋಟಿ ಮೋಸ- ಎಸ್‌ಬಿಐ ಮಾಜಿ ಮ್ಯಾನೇಜರ್‌ಗೆ 7 ವರ್ಷ ಜೈಲು ಶಿಕ್ಷೆ

ಡ್ರಗ್ಸ್ ವ್ಯಸನ ತಪ್ಪಿಸಲು ಸಹಕಾರಿ
ಈ ಕ್ರೀಡಾಕೂಟದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕೈದಿಯೊಬ್ಬರು, ಇಂತಹ ಕ್ರೀಡಾಕೂಟಗಳು ಪ್ರತಿ ಜೈಲಿನಲ್ಲೂ ನಡೆಯಬೇಕು.ಇದು ನಮ್ಮಮನಸ್ಸನ್ನು ಆರಾಮಾಗಿರುತ್ತದೆ. ಡ್ರಗ್ಸ್ ವ್ಯಸನದಿಂದ ದೂರವಿರಲೂ ಸಹಾಯವಿರಿಸುತ್ತೆ ಎಂದಿದ್ದಾರೆ. ಅಲ್ಲದೆ, ಪಂಜಾಬ್‌ ಸರ್ಕಾರದ ಈ ಕ್ರಮ ತುಂಬಾ ಒಳ್ಳೆಯದು. ಇದಕ್ಕೆ ನಾವು ಧನ್ಯವಾದ ಹೇಳಬೇಕು ಎಂದೂ ಅವರು ಹೇಳಿದ್ದಾರೆ.

ವಿಡಿಯೋ ನೋಡಿ:

ಇನ್ನು, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪಂಜಾಬ್‌ ಪೊಲೀಸ್‌ ಡಿಐಜಿ, ತೇಜಿಂದರ್‌ ಸಿಂಗ್‌, ಜೈಲಿನಲ್ಲಿರುವ ಕೈದಿಗಳ ನೈತಿಕತೆಯನ್ನು ಹೆಚ್ಚಿಸಲು ನಾವು ಕ್ರೀಡಾಕೂಟ ಹಮ್ಮಿಕೊಂಡಿದ್ದೇವೆ.ಇದಕ್ಕೆ ಜೈಲು ಒಲಿಂಪಿಕ್ಸ್ ಎಂದೇ ಹೆಸರಿಟ್ಟಿದ್ದೇವೆ. ಈ ಹಿಂದೆಯೂ ಈ ಕ್ರೀಡಾಕೂಟ ನಡೆದಿತ್ತು.ಈಗ ಮತ್ತೆ ಪುನಾರಂಭಿಸಲಾಗಿದೆ.ಅಮೃತಸರ, ಫರೀದ್‌ಕೋಟ್‌ ಹಾಗೂ ಪಟಿಯಾಲ ಸೇರಿ ಮೂರು ಸ್ಥಳಗಳಲ್ಲಿ ಈ ಕ್ರೀಡಾಕೂಟ ನಡೆದಿದೆ ಎಂದು ಹೇಳಿದರು.

ಕೈದಿಗಳ ಸುಧಾರಣೆ
ಈ ಮಧ್ಯೆ, ಜೈಲು ಸುಧಾರಣೆಯತ್ತ ಮತ್ತೊಂದು ಹೆಜ್ಜೆ ಇಟ್ಟಿರುವ ಪಂಜಾಬ್ ಎಡಿಜಿಪಿ (ಜೈಲುಗಳು) ಪ್ರವೀಣ್ ಕುಮಾರ್ ಸಿನ್ಹಾ, ಪಂಜಾಬ್‌ನ ಜೈಲುಗಳಲ್ಲಿ ಶೀಘ್ರದಲ್ಲೇ ಜೈಲ್ ರೇಡಿಯೋ ಪ್ರಾರಂಭಿಸಲಾಗುವುದು ಎಂದು ನವೆಂಬರ್‌ನಲ್ಲಿ ಹೇಳಿದ್ದರು. ಭದ್ರತೆ, ಬಂಧನ ಮತ್ತು ಸುಧಾರಣೆ ಗಮನದಲ್ಲಿಟ್ಟುಕೊಂಡು ಪಂಜಾಬ್‌ನ ಜೈಲುಗಳಲ್ಲಿ ಉತ್ತಮ ವಾತಾವರಣ ಸೃಷ್ಟಿಸಲಾಗಿದೆ. ಒಲಿಂಪಿಕ್ ಕ್ರೀಡಾಕೂಟದ ಮೂಲಕ ಕೈದಿಗಳ ಸುಧಾರಣೆಯಲ್ಲಿ ಜೈಲುಗಳು ಪ್ರಮುಖ ಪಾತ್ರವಹಿಸುತ್ತವೆ’’ ಎಂದೂ ಸಿನ್ಹಾ ಹೇಳಿದ್ದರು. 2016ರ ನಂತರ ಈ ಆಟಗಳನ್ನು ಪುನಾರಂಭಿಸಲಾಗಿದೆ ಎಂದು ಪಟಿಯಾಲ ಕೇಂದ್ರ ಕಾರಾಗೃಹದ ಅಧೀಕ್ಷಕ ಶಿವರಾಜ್ ಸಿಂಗ್ ನಂದಗಢ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್​ ಆಗ್ತಿತ್ತೋ..!

ಪಂಜಾಬ್ ಜೈಲುಗಳನ್ನು 4 ವಲಯಗಳಾಗಿ ವಿಂಗಡಿಸಲಾಗಿದೆ ಎಂದು ಪಂಜಾಬ್ ಜೈಲು ಅಧಿಕಾರಿಗಳು ಸೇರಿಸಿದ್ದಾರೆ; ಪಟಿಯಾಲ, ಅಮೃತಸರ, ಕಪುರ್ತಲ ಮತ್ತು ಫರೀದ್‌ಕೋಟ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಪುರುಷ ಕೈದಿಗಳ ಹಗ್ಗಜಗ್ಗಾಟ, ವಾಲಿಬಾಲ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, 100 ಮೀಟರ್ ಮತ್ತು 400 ಮೀಟರ್, ಉದ್ದ ಜಿಗಿತ ಮತ್ತು ಕಬಡ್ಡಿ ಸ್ಪರ್ಧೆಗಳು ಸೇರಿದಂತೆ ಮಹಿಳೆಯರ ಚೆಸ್, ಬ್ಯಾಡ್ಮಿಂಟನ್, 60 ಮೀಟರ್ ಓಟ ಮತ್ತು ಶಾಟ್‌ಪುಟ್ ಸೇರಿವೆ.
Published by:vanithasanjevani vanithasanjevani
First published: