• Home
  • »
  • News
  • »
  • trend
  • »
  • Viral Video: 12ನೇ ಫ್ಲೋರ್​ನಲ್ಲಿ ನೇತಾಡುತ್ತಾ ವ್ಯಾಯಾಮ, ವಿಡಿಯೋ ನೋಡಿ ಬೆಚ್ಚಿಬಿದ್ರು ನೆಟ್ಟಿಗರು

Viral Video: 12ನೇ ಫ್ಲೋರ್​ನಲ್ಲಿ ನೇತಾಡುತ್ತಾ ವ್ಯಾಯಾಮ, ವಿಡಿಯೋ ನೋಡಿ ಬೆಚ್ಚಿಬಿದ್ರು ನೆಟ್ಟಿಗರು

ವೈರಲ್ ವಿಡಿಯೊ

ವೈರಲ್ ವಿಡಿಯೊ

ಇದೇನು ಡ್ರಾಮಾನಾ ? ಎಡಿಟೆಡ್ ವಿಡಿಯೋನಾ ಎಂದು ಕಣ್ಕಣ್ಣು ಬಿಟ್ಟು ವಿಡಿಯೋ ನೋಡುತ್ತಿದ್ದಾರೆ ನೆಟ್ಟಿಗರು. ಬಹಳಷ್ಟು ಜನರು ಈ ವಿಡಿಯೋ ನೋಡಿ ಬೆಚ್ಚಿ ಬಿದ್ದಿದ್ದಾರೆ.

  • Share this:

ಹೇಗೇಗೋ ವ್ಯಾಯಾಮ ಮಾಡುವವರಿದ್ದಾರೆ. ಕೆಲವರು ವರ್ಕೌಟ್​ಗೆಂದು ಸಮಯ ಮೀಸಲಿಟ್ಟರೆ ಇನ್ನು ಕೆಲವರು ಸಮಯ ಸಿಕ್ಕಾಗೆಲ್ಲ ವರ್ಕೌಟ್ (Workout) ಮಾಡುತ್ತಾರೆ. ಒಟ್ಟಾರೆ ಉದ್ದೇಶ ಫಿಟ್ ಆಗಿರೋದು ಅಷ್ಟೆ. ಆದರೆ ಇಲ್ಲೊಬ್ಬ ವ್ಯಕ್ತಿಯ ವ್ಯಾಯಾಮದ ವಿಡಿಯೋ ವೈರಲ್ (Viral Video) ಆಗಿದ್ದು ದೃಶ್ಯ ನೋಡಿದ ನೆಟ್ಟಿಗರ ಎದೆ ಝಲ್ಲೆಂದಿದೆ. ಇದು ಅಂತಿಂಥಾ ವಿಡಿಯೋ ಅಲ್ಲ, ಅಥವಾ ಅಂತಿಂಥಾ ಫಿಟ್ನೆಸ್ ವರ್ಕೌಟ್ ಅಲ್ಲ. ಜೀವದ ಹಂಗು ತೊರೆದು ವ್ಯಾಯಾಮ ಮಾಡುವವನಾಗಿದ್ದರೆ ಈತನ ಫಿಟ್ನೆಸ್ ಗೋಲ್ (Fitness Goal) ಹೇಗಿರಬಹುದು ? ನೀವೇ ಯೋಚಿಸಿ. ಇದೇನು ಡ್ರಾಮಾನಾ ? ಎಡಿಟೆಡ್ ವಿಡಿಯೋನಾ ಎಂದು ಕಣ್ಕಣ್ಣು ಬಿಟ್ಟು ವಿಡಿಯೋ ನೋಡುತ್ತಿದ್ದಾರೆ ನೆಟ್ಟಿಗರು. ಬಹಳಷ್ಟು ಜನರು ಈ ವಿಡಿಯೋ ನೋಡಿ ಬೆಚ್ಚಿ ಬಿದ್ದಿದ್ದಾರೆ. ಯಾರಾದ್ರೂ ಹೀಗೆಲ್ಲ ಹುಚ್ಚಾಟ ಮಾಡ್ತಾರಾ ಎಂದು ಗೊಣಗಿಕೊಂಡಿದ್ದಾರೆ.


ತಾಯಿಯೊಬ್ಬಳು ತನ್ನ ಮಗನನ್ನು ಫರಿದಾಬಾದ್ ಕಟ್ಟಡದ ಬಾಲ್ಕನಿಯಲ್ಲಿ ಸೀರೆಯಲ್ಲಿ (Saree) ಇಳಿಸಿದ ವೀಡಿಯೊ ಇಂಟರ್ನೆಟ್​ನಲ್ಲಿ ವೈರಲ್ ಆದ ಬೆನ್ನಲ್ಲೇ ಇದೇ ರೀತಿಯ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಸಾಮ್ಯತೆ ಇರುವ ಘಟನೆಯ ಅಂತಹದ್ದೇ ಘಟನೆ ಆಘಾತಕಾರಿ ದೃಶ್ಯ ವಿಡಿಯೀ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಅಗುತ್ತಿದೆ.


12ನೇ ಮಹಡಿಯಲ್ಲಿ ನೇಲಿಕೊಂಡು ಜಾಲಿ ವ್ಯಾಯಾಮ


ವಿಡಿಯೋದಲ್ಲಿ ವ್ಯಕ್ತಿಯೊಬ್ಬ 12ನೇ ಮಹಡಿಯ ಬಾಲ್ಕನಿಯಲ್ಲಿ ನೇಲಿಕೊಂಡು ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಅಮರ್ ಉಜಾಲಾ ಪ್ರಕಾರ, ಈ ಘಟನೆಯು ಗ್ರೇಟರ್ ಫರಿದಾಬಾದ್‌ನ ಸೆಕ್ಟರ್-82, ಗ್ರಾಂಡ್ಯೂರಾ ಸೊಸೈಟಿಯ ಇ-ಬ್ಲಾಕ್‌ನಲ್ಲಿ ಸಂಭವಿಸಿದೆ.


ಇದನ್ನೂ ಓದಿ: Viral Video: ಪಂದ್ಯದ ವೇಳೆ ಯುವತಿಯ ಮಾದಕ ಮೈಮಾಟ ನೋಡಿ ಮೈಮರೆತ ಕಮೆಂಟೇಟರ್..!


ಅಪಾಯಕಾರಿ ಸಾಹಸ ವಿಡಿಯೋದಲ್ಲಿ ಸೆರೆ


ವ್ಯಕ್ತಿಯು ಕಟ್ಟಡದ12ನೇ ಮಹಡಿಯ ಬಾಲ್ಕನಿಯ ರೇಲಿಂಗ್ ಹಿಡಿದುಕೊಂಡು ವ್ಯಾಯಾಮ ಮಾಡುತ್ತಿರುವುದನ್ನು ವೀಡಿಯೊದಲ್ಲಿ (Video) ಸ್ಪಷ್ಟವಾಗಿ ಕಾಣಬಹುದು. ಎದುರಿನ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಈ ಅಪಾಯಕಾರಿ ಸಾಹಸವನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.


ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿ


ಸೊಸೈಟಿಯ ಅಧ್ಯಕ್ಷ ದೀಪಕ್ ಮಲಿಕ್ ಮಾತನಾಡಿ, 56 ವರ್ಷದ ವ್ಯಕ್ತಿ ಮಾನಸಿಕವಾಗಿ ನೊಂದಿದ್ದಾನೆ (Mentally Disturbed). ಅವರಿಗೆ 28 ​​ವರ್ಷದ ಮಗನೂ ಇದ್ದಾನೆ. ಘಟನೆಯ ನಂತರ, ಆರ್‌ಡಬ್ಲ್ಯೂಎ ಅಧಿಕಾರಿಗಳು ಆತನನ್ನು ಪರಿಶೀಲಿಸುವಂತೆ ಅವರ ಕುಟುಂಬ ಸದಸ್ಯರಿಗೆ ಸೂಚಿಸಿದ್ದಾರೆ.



ಮಾನಸಿಕ ಅಸ್ವಸ್ಥರು, ಬುದ್ಧಿ ಮಾಂದ್ಯರೂ ಮನೆಯಲ್ಲಿದ್ದಾಗ ಹೆಚ್ಚಿನ ಕಾಳಹಿ ವಹಿಸಬೇಕಾದ ಅಗತ್ಯವಿರುತ್ತದೆ. ವ್ಯಕ್ತಿ 12ನೇ ಮಹಡಿಯಲ್ಲಿ ವ್ಯಾಯಾಮ ಮಾಡುವಾಗ ಕೊಂಚ ಕೈ ಜಾರಿದ್ದರೂ ಆತನನ್ನು ಉಳಿಸಲು ಸಾಧ್ಯವಾಗುತ್ತಿರಲಿಲ್ಲ. ಅಪಾಯಕಾರಿ ಅಂಚಿನಲ್ಲಿ ನಿಂತು ನೇತಾಡಿದ್ದು ಇದರ ಬಗ್ಗೆ ಮನೆಯವರಿಗೂ ಗಮನ ಬಂದಿಲ್ಲ. ವಿಡಿಯೋ ಎಲ್ಲೆಡೆ ವೈರಲ್ ಆದಾಗಲೇ ಎಲ್ಲರಿಗೂ ತಿಳಿದುಬಂದಿದೆ. ವಿಶೇಷವಾಗಿ ಆತ ಅಸ್ವಸ್ಥನಾಗಿರುವುದರಿಂದ ಆತನ ಕುರಿತು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿ ಅವರ ಕುಟುಂಬಕ್ಕೆ ಸೂಚಿಸಲಾಗಿದ್ದು ಸದ್ಯ ಈ ಬಾರಿ ವ್ಯಕ್ತಿ ಅದೃಷ್ಟವಶಾತ್ ಪಾರಾಗಿದ್ದಾರೆ.


ಫರಿದಾಬಾದ್ ಘಟನೆ


ಫರಿದಾಬಾದ್ ಎತ್ತರದ ಒಂಬತ್ತನೇ ಮಹಡಿಯಲ್ಲಿ ಬೀಗ ಹಾಕಿದ ಮನೆಯ ಬಾಲ್ಕನಿಯಲ್ಲಿ ಬಿದ್ದಿದ್ದ ಸೀರೆಯನ್ನು ತರಲು ಮಹಿಳೆಯೊಬ್ಬಳು ತನ್ನ ಮಗನನ್ನು ಸೀರೆಯಲ್ಲಿ ನೇಲಿಸಿದ್ದ ವಿಡಿಯೋ ವೈರಲ್ ಆಗಿತ್ತು. ಕಳೆದ ವಾರ ಫರಿದಾಬಾದ್‌ನ ಸೆಕ್ಟರ್ 82ರ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Viral Video: ತನ್ನ ಗಂಡನ 'ಗೆಳತಿ' ಎಂದು ಶಂಕಿಸಿ ಆಕೆಯನ್ನು ಹೇಗೆ ಥಳಿಸಿದ್ದಾಳೆ ನೋಡಿ ಈ ಮಹಿಳೆ..!


ಮಗು ಬೆಡ್‌ಶೀಟ್ ಮೇಲೆ ಹತ್ತುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಆತನ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಆತನನ್ನು ಮೇಲಕ್ಕೆ ಎಳೆದಿದ್ದಾರೆ. ಈ ವೀಡಿಯೊ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯಿತು. ತಮ್ಮ ಮಗನ ಪ್ರಾಣಕ್ಕೆ ಗಂಭೀರ ಅಪಾಯವನ್ನುಂಟುಮಾಡಿದ್ದಕ್ಕಾಗಿ ನೆಟ್ಟಿಗರು ಮಹಿಳೆಯನ್ನು ದೂಷಿಸಿದರು. ವಿಡಿಯೋವನ್ನು ಶೇರ್ ಮಾಡಿದ ಅಧಿಕಾರಿಯೂ ಮಹಿಳೆಯ ಬೇಜವಾಬ್ದಾರಿಯನ್ನು ಟೀಕಿಸಿದ್ದಾರೆ. ಬಾಲಕ ಸದ್ಯ ಸೇಫಾಗಿ ಮೇಲೆ ತಲುಪಿದ್ದಾನೆ.

Published by:Divya D
First published: