ಕೊಹ್ಲಿ ಮೇಣದ ಪ್ರತಿಮೆ ಹಾನಿ


Updated:June 10, 2018, 4:25 PM IST
ಕೊಹ್ಲಿ ಮೇಣದ ಪ್ರತಿಮೆ ಹಾನಿ

Updated: June 10, 2018, 4:25 PM IST
ನವದೆಹಲಿ: ಪ್ರಸಿದ್ಧ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಸೇರ್ಪಡೆಯಾಗಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಮೇಣದ ಹೊಸ ಪ್ರತಿಮೆ ಕೆಲವೇ ದಿನಗಳಲ್ಲಿ ಹಾನಿಗೊಳಗಾಗಿದ್ದು ಈ ಚಿತ್ರ ವೈರಲ್​ ಆಗಿದೆ.

ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತು ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ ಪ್ರತಿಮೆಗಳು ಸೇರಿದಂತೆ ಹಲವಾರು ಫೇಮಸ್​ ಸೆಲೆಬ್ರೆಟಿಗಳ ಸಂಗ್ರಹವಿರುವ ಈ ಮ್ಯೂಸಿಯಂಗೆ ಕೋಹ್ಲಿ ಪ್ರತಿಮೆ ಸೇರ್ಪಡೆಯಾದ ಎರಡೇ ದಿನಕ್ಕೆ ಅವರ ಅಭಿಮಾನಿಗಳಿಂದಲೇ ಹಾನಿಗೊಳಗಾಗಿದೆ. ಈ ಚಿತ್ರವನ್ನು ಕೆಲವರು ಟ್ವೀಟ್​ ಮಾಡಿದ್ದು ಭಾರೀ ವೈರಲ್​ ಆಗಿದೆ.ಕೋಹ್ಲಿ ಕಿವಿಯ ಭಾಗ ಹಾನಿಗೊಳಪ್ಟಟ್ಟಿದ್ದು ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಅದನ್ನು ಸರಿಪಡಿಸಲು ಮುಂದಾಗಿದ್ದಾರೆ ಎಂದು ಎನ್​ಡಿಟಿವಿಗೆ ಅಲ್ಲಿನ ಮೇಲ್ವಿಚಾರಕರು ತಿಳಿಸಿರುವುದು ವರದಿಯಾಗಿದೆ.
Loading...

 
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ