Tree House: ಮುಂಬೈನಲ್ಲಿ ಶೀಘ್ರ ತಲೆ ಎತ್ತಲಿದೆ 'ಟ್ರೀ ಹೌಸ್'..! ಏನಿದರ ವಿಶೇಷ..

ಈ ಕುರಿತು ಕಲ್ಪನೆ ಮಾಡಿ ಕಾರ್ಯಗತ ಮಾಡುವ ಉದ್ದೇಶ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಅವರದ್ದಾಗಿದೆ ಎನ್ನಲಾಗಿದೆ.

ಈ ಕುರಿತು ಕಲ್ಪನೆ ಮಾಡಿ ಕಾರ್ಯಗತ ಮಾಡುವ ಉದ್ದೇಶ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಅವರದ್ದಾಗಿದೆ ಎನ್ನಲಾಗಿದೆ.

ಈ ಕುರಿತು ಕಲ್ಪನೆ ಮಾಡಿ ಕಾರ್ಯಗತ ಮಾಡುವ ಉದ್ದೇಶ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಅವರದ್ದಾಗಿದೆ ಎನ್ನಲಾಗಿದೆ.

  • Share this:
ಇಂದು ಮಹಾನಗರಗಳಲ್ಲಿ (Metropolis) ಎಲ್ಲಿ ನೋಡಿದರೂ ಬರೀ "ಕಾಂಕ್ರೀಟ್ ಜಂಗಲ್" (Concrete jungles) ಗಳೇ ಕಾಣುತ್ತವೆ. ಕಣ್ಣು ಚಾಚಿದಷ್ಟೂ ಇಕ್ಕಟ್ಟಾದ ರಸ್ತೆಗಳು, ಕಡ್ಡಿಪೆಟ್ಟಿಗೆಗಳಂತೆ ಒಂದರ ಬದಿ ಇನ್ನೊಂದು ಅಂಟಿಕೊಂಡಿರುವ ಕಟ್ಟಡಗಳು, (Buildings) ಮನೆಗಳು ನಿರ್ಮಾಣವಾಗಿದ್ದು ಪ್ರಕೃತಿಯಿಂದ ದೂರವಾಗಿದ್ದೇವೆಯಾ ಎಂಬ ಭಾವನೆ ಒಮ್ಮೊಮ್ಮೆ ಮೂಡುತ್ತಿರುತ್ತದೆ. ಸಾಕಷ್ಟು ಜನರಿಗೆ ಈಗಲೂ ಪ್ರಕೃತಿಯ ಮಧ್ಯೆ ವಾಸಿಸಬೇಕೆಂಬ ಆಸೆ. ಸಮುದ್ರದ ಪಾಕ್ಷಿಕ ನೋಟ ಹಾಗೂ ಗಿಡ/ಮರಗಳ ಮೇಲೆ ಇರುವ 'ಟ್ರೀ ಹೌಸ್' ಗಳಲ್ಲಿ (Tree houses) ಸಮಯ ಕಳೆಯಬೇಕೆಂಬ ಕನಸು ಹಲವರದ್ದಾಗಿದೆ.

ಟೆಂಡರ್ ಆಹ್ವಾನ
ಈಗ ಈ ಕನಸು ಮುಂಬೈ ಮಹಾನಗರದಲ್ಲಿ ಶೀಘ್ರವೇ ನನಸಾಗುವಂತಹ ಸುದ್ದಿಯೊಂದು ಬಂದಿದೆ. ಹೌದು, ಮುಂಬೈ ಮಹಾನಗರ ಪಾಲಿಕೆಯು ತನ್ನ ಸರಹದ್ದಿನಲ್ಲಿ ಬರುವ ಮಲಬಾರ್ ಹಿಲ್ ಪ್ರದೇಶದ ಕಮಲಾ ನೆಹರೂ ಉದ್ಯಾನ ಪ್ರದೇಶದಲ್ಲಿ ಒಂದು ಕೋಟಿ ರೂ. ಬಂಡವಾಳದಲ್ಲಿ ನಿರ್ಮಿಸಬಹುದಾದ 'ಟ್ರೀ ಹೌಸ್' ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Health Tips: ಸರ್ವರೋಗಕ್ಕೂ ಮದ್ದು ದೇವವೃಕ್ಷ ಅರಳಿಮರ; ಇದರ ಪ್ರಯೋಜನಗಳು ಇಲ್ಲಿವೆ ನೋಡಿ

ವರದಿಯ ಪ್ರಕಾರ, ಈ ಕುರಿತು ಕಲ್ಪನೆ ಮಾಡಿ ಕಾರ್ಯಗತ ಮಾಡುವ ಉದ್ದೇಶ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಅವರದ್ದಾಗಿದೆ ಎನ್ನಲಾಗಿದೆ. ಈಗ ನಗರ ಪ್ಲ್ಯಾನಿಂಗ್ ಸಮಿತಿಗೆ ಇದರ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಬಿಎಂಸಿ ಕಾರ್ಯಗತ
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪ್ಲ್ಯಾನಿಂಗ್ ವಿಭಾಗದ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರಾದ ಕಿರಣ್ ದಿಘಾವ್ಕರ್ "ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಯೋಜನಾ ಆಯೋಗವು ಹಣ ಹೂಡಲಿದ್ದು ಮುಂಬೈ ಮಹಾನಗರ ಪಾಲಿಕೆಯು ಕೇವಲ ಅದನ್ನು ಕಾರ್ಯಗತಗೊಳಿಸಲಿದೆ" ಎಂದು ಹೇಳುತ್ತಾರೆ.
ಈಗಾಗಲೇ, ಶಾಸಕರಾದ ಆದಿತ್ಯ ಠಾಕ್ರೆ ಅವರ ವರ್ಲಿ ಪ್ರದೇಶದ ಅಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಉದ್ಯಾನಗಳಲ್ಲೂ ನಿರ್ಮಾಣ ಚಿಂತನೆ
ಕಮಲಾ ನೆಹರೂ ಉದ್ಯಾನವು ಕಡಲ ಮಂಡಳಿಯ ಸರಹದ್ದಿನಲ್ಲಿ ಬರಲಿದ್ದು ಈ ಕುರಿತು ಆಕ್ಷೇಪಣೆಯಿರದ ಪ್ರಮಾಣಪತ್ರವನ್ನು ಪಡೆದು ಕಾಮಗಾರಿಯನ್ನು ಆರಂಭಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ. ಇನ್ನು, ಮುಂಬೈ ಸುಬರ್ಬ್ ಕಲೆಕ್ಟರ್ ಆಗಿರುವ ನಿಧಿ ಚೌಧರಿ ಅವರು, "ಮುಂಬೈ ನಗರದ ಸೌಂದರ್ಯ ವೃದ್ಧಿಸಲು ಹಾಗೂ ಜನರ ಜೀವನಶೈಲಿಯ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಮುಂಬೈ ಮಹಾನಗರ ಪಾಲಿಕೆಯು ಹಲವು ವಿನೂತನ ಯೋಜನೆಗಳನ್ನು ರೂಪಿಸುತ್ತಿದ್ದು ಅದರಲ್ಲಿ ಟ್ರೀ ಹೌಸ್ ನಿರ್ಮಾಣ ಸಹ ಒಂದಾಗಿದೆ.

ಈಗಾಗಲೇ ಡಿಪಿಡಿಸಿಯು ಹಣ ಬಿಡುಗಡೆಗೆ ಅನುಮೋದನೆ ನೀಡಿದ್ದು ಪಾಲಿಕೆಯು ಇದನ್ನು ಕಾರ್ಯಗತಗೊಳಿಸಲಿದೆ. ಮುಂದೆ ಇದೇ ರೀತಿ ಇತರೆ ಉದ್ಯಾನಗಳಲ್ಲೂ ನಿರ್ಮಾಣ ಮಾಡುವ ಬಗ್ಗೆ ಚಿಂತೆನೆಯಿದೆ" ಎಂದು ಹೇಳಿದ್ದಾರೆ.

ಸೊಂಕು ಹೆಚ್ಚಳ
ಈಗಾಗಲೇ ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ಏರುತ್ತಿದ್ದು ಮಹಾನಗರ ಪಾಲಿಕೆಯು ನಿರಂತರವಾಗಿ ದುಡಿಯುತ್ತಿದೆ. ಸದ್ಯಕ್ಕೆ ಲಾಕ್ ಡೌನ್ ರೀತಿಯ ಯಾವುದೇ ನಿರ್ಬಂಧಗಳನ್ನು ಹೇರುತ್ತಿಲ್ಲವಾದರೂ ಒಂದೊಮ್ಮೆ ನಗರದ ಆಸ್ಪತ್ರೆಗಳಲ್ಲಿ 20,000 ದಾಖಲಾತಿಗಳಾಗಲು ಪ್ರಾರಂಭಿಸಿದರೆ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Bonsai: ಬೋನ್ಸಾಯ್ ಗಿಡ ಬೆಳೆಸಿ ವರ್ಷಕ್ಕೆ 50 ಲಕ್ಷ ರೂ ಆದಾಯ ಗಳಿಸ್ತಿದ್ದಾರೆ, ನೀವೂ ಮಾಡ್ಬಹುದು ನೋಡಿ

ಈ ಮಧ್ಯೆ ಮಹಾರಾಷ್ಟ್ರದ ಗೃಹ ಸಚಿವರಾಗಿರುವ ರಾಜೇಶ್ ಟೋಪೆ, ಸದ್ಯಕ್ಕೆ ಲಾಕ್ ಡೌನ್ ಮಾಡುವ ಯೋಚನೆ ಸರ್ಕಾರಕ್ಕಿಲ್ಲ. ಆದರೂ ಸೋಂಕು ನಿಯಂತ್ರಣಕ್ಕಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೂ, ಸದ್ಯಕ್ಕಿರುವ ಹತ್ತು ದಿನಗಳ ಕ್ವಾರಂಟೈನ್ ಅವಧಿಯನ್ನು ಏಳು ದಿನಗಳಿಗೆ ಇಳಿಸುವುದಾಗಿ ಹೇಳಿದರು.
Published by:vanithasanjevani vanithasanjevani
First published: