• Home
  • »
  • News
  • »
  • trend
  • »
  • Viral Video: ಜಾಕೆಟ್‌ ಬಿಡಿ, ಮೈತುಂಬಾ ಬಟ್ಟೆನೂ ಹಾಕಿಲ್ಲ,19 ಡಿಗ್ರಿ ತಾಪಮಾನದಲ್ಲಿ ಹಿಮಾಲಯದಲ್ಲಿ ಹುಡುಗರ ಟ್ರಕ್ಕಿಂಗ್!

Viral Video: ಜಾಕೆಟ್‌ ಬಿಡಿ, ಮೈತುಂಬಾ ಬಟ್ಟೆನೂ ಹಾಕಿಲ್ಲ,19 ಡಿಗ್ರಿ ತಾಪಮಾನದಲ್ಲಿ ಹಿಮಾಲಯದಲ್ಲಿ ಹುಡುಗರ ಟ್ರಕ್ಕಿಂಗ್!

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಈ ಚಳಿಗಾಲದಲ್ಲಿ ಹಿಮಾಲಯ ಪ್ರದೇಶಕ್ಕೆ ಟ್ರಿಪ್​ಹೋಗೋದು ಅಂದ್ರೆ ಏನು ತಮಾಷೆನಾ? ನೋ ವೇ ಚಾನ್ಸೇ ಇಲ್ಲ.

  • Share this:

ಚಳಿಗಾಲ (Winter Season) ಬಂತೆಂದರೆ ಸಾಕು ಮನೆಯಿಂದ ಹೊರಗೆ ಹೋಗುವುದಕ್ಕೇ ಅಸಾಧ್ಯವಾಗುತ್ತದೆ. ಬೆಚ್ಚಗೆ ಬಜ್ಜಿ ಬೋಂಡ ಮಾಡಿಕೊಂಡು ಕಾಫಿ, ಚಹಾವನ್ನು ಕುಡಿಯುತ್ತಾ ಮನೆಯ ಒಳಗೆ ಬೆಚ್ಚಗೆ ಕುಡಿಯುವುದೇ ಆಹಾ! ಖುಷಿ ಅಲ್ವಾ? ಇನ್ನೂ ಕೆಲವೊಬ್ಬರಿಗೆ ಮನೆಯೊಳಗೆ ಕೂತು ಕೂತು ಜಡ ಬಂದಿರುತ್ತದೆ. ಇದೇ ಕಾರಣಕ್ಕಾಗಿ ಎಲ್ಲಾದರು ಟ್ರಿಪ್​ (Trip) ಹೋಗೋ  ಪ್ಲ್ಯಾನ್​  ಮಾಡುತ್ತಾರೆ. ಆದ್ರೆ ಇಲ್ಲೊಂದು ತಂಡ ಯಾವ ರೀತಿಯಾಗಿ ಟ್ರಿಪ್​ ಹೋಗಿದ್ದಾರೆ ಎಂದು ನೋಡಿ. ಸಖತ್​ ವೈರಲ್ (Viral)​ ಆಗಿದೆ. ಈ ಚಳಿಗಾಲದಲ್ಲಿ ಹಿಮಾಲಯ ಪ್ರದೇಶಕ್ಕೆ ಟ್ರಿಪ್​ಹೋಗೋದು ಅಂದ್ರೆ ಏನು ತಮಾಷೆನಾ? ನೋ ವೇ ಚಾನ್ಸೇ ಇಲ್ಲ. ಆದ್ರೆ ಈ ಹುಡುಗರನ್ನು ಮೆಚ್ಚಲೇಬೇಕು.  ಸೋಶಿಯಲ್​ ಮೀಡಿಯಾದಲ್ಲಿ (Social Media) ಈ ವಿಡಿಯೋನೇ ಗ್ರಾಸವಾಗ್ತಾ ಇದೆ. 


ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಜರ್ಮನಿಯ 32 ವರ್ಷದ ಖ್ಯಾತ ಫುಟ್ಬಾಲ್ ಆಟಗಾರ ಆಂಡ್ರೆ ಸ್ಕರ್ಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವಿಡಿಯೋದಲ್ಲಿ, ಐದು ಜನರು ಹಿಮದಿಂದ ಆವೃತವಾದ ಪರ್ವತವನ್ನು ಏರುತ್ತಿದ್ದಾರೆ. ಇಂತಹ ಚಳಿ ಹಾಗೂ ಹಿಮಭರಿತ ಪ್ರದೇಶದಲ್ಲಿ ಅಂಗಿ ಹಾಕದೆ ಓಡಾಡುತ್ತಿರುವುದು ವಿಶೇಷ. ಅವರು ಹಂಚಿಕೊಂಡ ವಿಡಿಯೋದಲ್ಲಿ, ಒಟ್ಟು ಐದು ಜನರು ಕಾಣಿಸಿಕೊಂಡಿದ್ದಾರೆ ಮತ್ತು ಐವರಲ್ಲಿ ಒಬ್ಬರು ಮಾತ್ರ ಅವರ ದೇಹವನ್ನು ಮುಚ್ಚಿದ್ದಾರೆ. ಇನ್ನುಳಿದ ನಾಲ್ವರೂ ಅಂಗಿಯಿಲ್ಲದೆ ಪರ್ವತವನ್ನು ತಲುಪಿದ್ದಾನೆ.


ನೀವು ಟ್ರಕ್ಕಿಂಗ್​ಗೆ ಹೋದಾಗ ಯಾವ ರೀತಿಯಾದ ಬಟ್ಟೆಗಳನ್ನು ಹಾಕುತ್ತೀರ.  ಆರಾಮದಾಯಕವಾಗಿ ಟ್ರಕ್ಕಿಂಗ್​ ಹೋಗುವ ಬಟ್ಟೆಗಳನ್ನು ಹಾಕುತ್ತೀರ ಅಲ್ವಾ? ಆದ್ರೆ, ನಿಜಕ್ಕೂ ಇಲ್ಲಿ ಟ್ರಕ್ಕಿಂಗ್​ಗೆ ಹೋದ ಹುಡುಗರನ್ನು ಹೊಗಳಲೇಬೇಕು ಕಣ್ರೀ.


ಆ ಚುಮು ಚುಮು ಚಳಿಯಲ್ಲಿ ಸಖತ್​ ಎನರ್ಜಿಟಿಕ್​ ಆಗಿ ಪರ್ವತವನ್ನು  ಏರುತ್ತಿದ್ದಾರೆ ಅಂತ. ಆದರೆ ಅವರೇನೋ ಭಂಡ ಧೈರ್ಯ ಮಾಡಿಕೊಂಡು ಹತ್ತಿಕೊಂಡು ಹೋಗುತ್ತಾ ಇದ್ದಾರೆ, ಆದ್ರೆ ನೀವು ಯಾವುದೇ ಕಾರಣಕ್ಕು ಈ ಸಾಹಸವನ್ನು ಮಾಡಲು ಹೋಗಬೇಡಿ.


ಇದನ್ನೂ ಓದಿ: ಈ 5 ಸ್ಥಳಗಳಲ್ಲಿ ವಿಮಾನಗಳು ಹಾರುವುದಿಲ್ಲ, ಯಾಕೆ ಗೊತ್ತಾ?


ಆಂಡ್ರೆ ಸ್ಕ್ರಲ್ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ರೆ ಭಾರೀ ಹಿಮಪಾತದೊಂದಿಗೆ 19 ಡಿಗ್ರಿ ತಾಪಮಾನದಲ್ಲಿ ಏರಿಕೆಯಾಗಿದೆ. ಈ ಚಾರಣವು ಪ್ರೇರಕ ಮತ್ತು ಅಥ್ಲೀಟ್ ವಿಮ್ ಹಾಫ್ ಪ್ರಾರಂಭಿಸಿದ ಸವಾಲಿಗೆ ಸಂಬಂಧಿಸಿದೆ. ಅಂದ್ರೆ ಈ ಚಾರಣ ತಾನು ಕೈಗೊಂಡ ಅತ್ಯಂತ ಕಠಿಣ ಚಾರಣ ಎಂದು ಹೇಳಿದ್ದಾರೆ.  ನನ್ನ ಸುಂದರ ಸಿಬ್ಬಂದಿಯೊಂದಿಗೆ ಐಸ್‌ಮ್ಯಾನ್ ಹಾಫ್ ದಿನ 3ಗಳ ಅನುಭ ಹೊಂದಿದ್ದಾರೆ . ಇದು ನಾನು ಮಾಡಿದ ಕಠಿಣ ಕೆಲಸ.  ಅಂದ್ರೆ ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಇಲಿಯಿಂದ ಬೇಸತ್ತ ಯುವಕ, ಈತನಿಗೆ ಸಹಾಯ ಮಾಡಲು ಕೊನೆಗೆ ಹಾವೇ ಬರಬೇಕಾಯ್ತು!
ಅಂದ್ರೆ ಈ ವಿಡಿಯೋ ನೋಡ್ತಾ ಇದ್ರೆ , ನಿಮಗೂ ಚಳಿ ಆಗಬಹುದೇನೋ ಬಹುಶಃ. ಆದರೆ ಕೇವಲ ಒಂದು ಬಟ್ಟೆ ಮತ್ತು ಒಂದು ಬ್ಯಾಗ್​ ಹಾಕಿಕೊಂಡು ಎಷ್ಟು ಉತ್ಸಾಹದಿಂದ ಟ್ರಕ್ಕಿಂಗ್​ ಮಾಡ್ತಾ ಇದ್ದಾರೆ ಎಂದು ನೋಡಿ. ಈ ವಿಡಿಯೋ ಸಖತ್​ ವೈರಲ್ ಆಗ್ತಾ ಇದೆ. ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ ಈ ವಿಡಿಯೋ.

First published: