• Home
 • »
 • News
 • »
 • trend
 • »
 • Umbrella: ಈ ಛತ್ರಿಗೆ ಒಂದು ಲಕ್ಷ ರೂಪಾಯಿ, ಆದ್ರೆ ಮಳೆ ಬಂದ್ರೆ ಬಳಸೋ ಧೈರ್ಯ ಮಾತ್ರ ಯಾರಿಗೂ ಇಲ್ವಂತೆ!

Umbrella: ಈ ಛತ್ರಿಗೆ ಒಂದು ಲಕ್ಷ ರೂಪಾಯಿ, ಆದ್ರೆ ಮಳೆ ಬಂದ್ರೆ ಬಳಸೋ ಧೈರ್ಯ ಮಾತ್ರ ಯಾರಿಗೂ ಇಲ್ವಂತೆ!

ಗುಸ್ಸಿ ಅಡಿಡಾಸ್ ಕೊಲಾಬೊರೇಷನ್ ಅಂಬ್ರೆಲಾ

ಗುಸ್ಸಿ ಅಡಿಡಾಸ್ ಕೊಲಾಬೊರೇಷನ್ ಅಂಬ್ರೆಲಾ

Umbrella: ಛತ್ರಿ ಇದ್ದರೆ ಮಳೆಯಿಂದ ಒದ್ದೆಯಾಗುವುದನ್ನು ರಕ್ಷಿಸಬಹುದಾಗಿದೆ. ಅಷ್ಟು ಮಾತ್ರವಲ್ಲ, ಬಿಸಿಲಿನ ಬೇಗೆಯನ್ನು ತಪ್ಪಿಸಲು  ಸಾಧ್ಯವಾಗುತ್ತದೆ. ಆದರೆ ಈ ದುಬಾರಿ ಕೊಡೆಯನ್ನು ಎಲ್ಲಾ ಕಾಲದಲ್ಲೂ ಬಳಸಲು ಸಾಧ್ಯವಾಗುದಿಲ್ಲ. ಅಂದಹಾಗೆಯೇ ಈ ದುಬಾರಿ ಛತ್ರಿಯನ್ನು ನಿರ್ಮಿಸಿದ ಕಂಪನಿ ಯಾವುದು ಗೊತ್ತಾ?

ಮುಂದೆ ಓದಿ ...
 • Share this:

  ಬೇಸಿಗೆ(Summer) ಕಾಲ ಕೊನೆಗೊಳ್ಳುವುದಕ್ಕೂ ಮೊದಲೇ ಮಳೆ ಹನಿ (Rain Drop) ಬೀಳಲಾರಂಭಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ಮಳೆಯ ಆರ್ಭಟಕ್ಕೆ ರಸ್ತೆಗಳೆಲ್ಲಾ ನೀರಿಗೆ ಆವೃತವಾಗಿ, ಸ್ವಿಮ್ಮಿಂಗ್​ ಪೂಲ್​ನಂತಾಗಿರುವ (Swimming fool) ದೃಶ್ಯಗಳನ್ನು ನೋಡಿರಬಹುದು. ಹಾಗಾಗಿ ಈ ಮಳೆಯ ಯಾವಾಗ ಜೋರಾಗಿ ಬರುತ್ತೆ? ಯಾವಾಗ ಬರದೇ ಇರುತ್ತೆ ಎಂಬುದು ಗೊತ್ತಾಗುವುದಿಲ್ಲ. ಹೀಗಿರುವಾಗ ಬಹುತೇಕರು ಮಳೆಯನ್ನು ನಂಬಂದೆ ರೈನ್​ ಕೋಟ್ (Rain Coat) ಧರಿಸಲು​, ಛತ್ರಿಯನ್ನು (Umbrella) ಹಿಡಿಯಲು ಪ್ರಾರಂಭಿಸಿದ್ದಾರೆ. ಛತ್ರಿ ಅಂದಹಾಗೆಯೇ, ಇಲ್ಲೊಂದು ವಿಶೇಷ ಛತ್ರಿ ಇದೆ. ಇದರ ಬೆಲೆ 1 ಲಕ್ಷ ರೂಪಾಯಿ. ಇಷ್ಟೊಂದು ಬೆಲೆಯ ಈ ದುಬಾರಿ ಛತ್ರಿಯ ವಿಶೇಷ ತಿಳಿದರೆ ನಗೋಕೆ ಬರದೇ ಇರದು.


  ಛತ್ರಿ ಇದ್ದರೆ ಮಳೆಯಿಂದ ಒದ್ದೆಯಾಗುವುದನ್ನು ರಕ್ಷಿಸಬಹುದಾಗಿದೆ. ಅಷ್ಟು ಮಾತ್ರವಲ್ಲ, ಬಿಸಿಲಿನ ಬೇಗೆಯನ್ನು ತಪ್ಪಿಸಲು  ಸಾಧ್ಯವಾಗುತ್ತದೆ. ಆದರೆ ಈ ದುಬಾರಿ ಕೊಡೆಯನ್ನು ಎಲ್ಲಾ ಕಾಲದಲ್ಲೂ ಬಳಸಲು ಸಾಧ್ಯವಾಗುದಿಲ್ಲ. ಅಂದಹಾಗೆಯೇ ಈ ದುಬಾರಿ ಛತ್ರಿಯನ್ನು ನಿರ್ಮಿಸಿದ ಕಂಪನಿ ಯಾವುದು ಗೊತ್ತಾ?


  ಎರಡು ಫೇಮಸ್ ಫ್ಯಾಶನ್ ಬ್ರ್ಯಾಂಡ್ ಗಳು ಸೇರಿ ಒಂದೇ ತರಹದ ಕೊಡೆಯನ್ನು ಗುಸ್ಸಿ ಅಡಿಡಾಸ್ ಕೊಲಾಬೊರೇಷನ್ ಅಂಬ್ರೆಲಾ ತಯಾರಿಸಿದ್ದಾರೆ. ಇದನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿವೆ. ಆದರೆ ಈ ದುಬಾರಿ ಛತ್ರಿ ಮಳೆಗಾಲದಲ್ಲಿ ಉಪಯೋಗಕ್ಕೆ ಬರೋದಿಲ್ಲ.


  ಈ ಫ್ಯಾಷನ್ ಬ್ರ್ಯಾಂಡ್‌ಗಳು ಸ್ಥಳೀಯವಲ್ಲ, ಜಾಗತಿಕ ಮಟ್ಟದ ಫ್ಯಾಷ್ಯನ್​ ಬ್ರಾಂಡ್​ ಆದ ಮತ್ತು ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿರುವ ಗುಸ್ಸಿ ಮತ್ತು ಪ್ರಮುಖ ಕ್ರೀಡಾ ಬ್ರಾಂಡ್ ಆದ ಅಡಿಡಾಸ್ ಈ ಕೊಡೆಯನ್ನು ಸಿದ್ಧಪಡಿಸಿದೆ. ಇವು ಜಗತ್ತಿನಲ್ಲಿ ಅಗ್ಗದ ವಸ್ತುಗಳನ್ನು ಮಾರಾಟ ಮಾಡುತ್ತಾ ಬಂದಿದೆ. ಸದ್ಯಕ್ಕೆ ಚೀನಾದ ಸಾಮಾಜಿಕ ಜಾಲತಾಣ ವೈಬೋದಲ್ಲಿ ಈ ಛತ್ರಿ ಬಗ್ಗೆ ಚರ್ಚೆಯಾಗುತ್ತಿದ್ದು, ಲಕ್ಷಗಟ್ಟಲೆ ಖರ್ಚು ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಬಹುತೇಕರು ಅಭಿಪ್ರಾಯ ತಿಳಿಸುತ್ತಿದ್ದಾರೆ.


  ಇದನ್ನೂ ಓದಿ: Hero Splendor+ XTEC: ಬ್ಲೂಟೂತ್​, ಚಾರ್ಜರ್ ಮತ್ತು ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಬಂದಿದೆ ಹೊಸ ಸ್ಪ್ಲೆಂಡರ್ ಬೈಕ್​!


  ಗುಸ್ಸಿ ಮತ್ತು ಅಡಿಡಾಸ್‌ನ ಸಹಯೋಗದಲ್ಲಿ ತಯಾರಿಸಲಾದ ಛತ್ರಿಯು ಚೀನಾದಲ್ಲಿ ಬಾರಿ ಜನಪ್ರಿಯತೆ ಪಡೆಯುತ್ತಿದೆ. ಈ ಛತ್ರಿ 11,100 ಯುವಾನ್‌ಗೆ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 1 ಲಕ್ಷದ 27 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಈ ಹ್ಯಾಶ್ ಟ್ಯಾಗ್ ಬಂದ ತಕ್ಷಣ 140 ಮಿಲಿಯನ್ ಜನ ನೋಡಿದ್ದಾರೆ.


  ಗುಸ್ಸಿ ಅಡಿಡಾಸ್ ಕೊಲಾಬೊರೇಷನ್ ಅಂಬ್ರೆಲಾ


  ಈ ಛತ್ರಿ ಮಳೆಗಾಲದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಬಿಸಿಲಿನಲ್ಲಿ ಶೇಡ್, ಫ್ಯಾಶನ್ ಶೋ ಮಾಡಬಹುದು ಎಂದು ಪೋಸ್ಟ್ ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಈ ಉತ್ಪನ್ನವನ್ನು ಛತ್ರಿ ಎಂದು ವರ್ಗೀಕರಿಸಲಾಗಿದೆ, ಆದರೆ ಇದು ಛತ್ರಿಯಂತೆ ಒಂದೇ ರೀತಿಯ ಗುಣಗಳನ್ನು ಹೊಂದಿಲ್ಲ.


  ಇದನ್ನೂ ಓದಿ: Train: ರೈಲಿನಲ್ಲಿ 9 ರೀತಿಯ ಹಾರ್ನ್​ಗಳಿವೆ! ಎಲ್ಲವೂ ಒಂದೊಂದು ಅರ್ಥವನ್ನು ಹೊಂದಿವೆ


  ಅಚ್ಚರಿಯ ಸಂಗತಿ ಎಂದರೆ ಈ ಛತ್ರಿಯನ್ನು ಇಟಲಿಯಲ್ಲಿ ತಯಾರಿಸಲಾಗುತ್ತದೆ. ಇದು 8 ರಿಬ್ಸ್​ ಹೊಂದಿದೆ, ಇದನ್ನು ಮರದ ಹಿಡಿಕೆಯ ಮೇಲೆ ತಯಾರಿಸಲಾಗುತ್ತದೆ. ಹಸಿರು ಮತ್ತು ಕೆಂಪು ಬಣ್ಣದ ವೆಬ್‌ಗಳನ್ನು ಧರಿಸಿ ಛತ್ರಿಯ ನೋಟವನ್ನು ಪೂರ್ಣಗೊಳಿಸಲಾಗಿದೆ.


  ಛತ್ರಿಯ ಮೇಲ್ಭಾಗದಲ್ಲಿ ಅಡಿಡಾಸ್ ಲೋಗೋವನ್ನು ಹೊಂದಿದ್ದು, ಕೆಳಗಿನ ಹ್ಯಾಂಡಲ್‌ನಲ್ಲಿ ಗುಸ್ಸಿ ಇದೆ. ಗುಸ್ಸಿಯ ವೆಬ್‌ಸೈಟ್ ಪ್ರಕಾರ - ಛತ್ರಿ ಜಲನಿರೋಧಕವಲ್ಲ, ಇದನ್ನು ಸೂರ್ಯನ ರಕ್ಷಣೆ ಅಥವಾ ಅಲಂಕಾರಕ್ಕಾಗಿ ಬಳಸಬಹುದು. ಚೀನಾದಲ್ಲಿ ಎರಡೂ ಬ್ರಾಂಡ್‌ಗಳ ಅದ್ಭುತ ಟ್ರೋಲಿಂಗ್ ನಡೆಯುತ್ತಿದೆ. ಪ್ರಾಯೋಗಿಕವಾಗಿ ಯೋಚಿಸಲು ಸಾಧ್ಯವಾಗದ ಅಂತಹ ಬ್ರಾಂಡ್‌ಗೆ ಏಕೆ ಹಣವನ್ನು ಪಾವತಿಸಬೇಕು ಎಂದು ಜನರು ಹೇಳುತ್ತಾರೆ. ಇದಕ್ಕಿಂತ ನಾವು ಸ್ಥಳೀಯ ವಸ್ತುಗಳನ್ನು ಬಳಸುವುದು ಉತ್ತಮ ಎಂದು ಕಾಮೆಂಟ್​​ ಬರೆಯುತ್ತಿದ್ದಾರೆ.

  Published by:Harshith AS
  First published: