ಮಳೆಯ ಜತೆ ಜಿಲೇಬಿ ಸವಿಯುತ್ತಿರುವ ರಸ್ಕಿನ್ ಬಾಂಡ್; ವೈರಲ್ ಆಗುತ್ತಿರುವ ಫೋಟೋಗಳಿಗೆ ಅಪಾರ ಮೆಚ್ಚುಗೆ

ಇವುಗಳ ಪೈಕಿ ಒಂದು ಚಿತ್ರದಲ್ಲಿ, ಬಾಂಡ್ ಸಿಹಿ ಖಾದ್ಯವನ್ನು ನೋಡಿ ಸಂತೋಷಪಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ, ಬಾಂಡ್ ಜಿಲೇಬಿ ತುಂಡನ್ನು ಬಾಯಿಗೆ ಹಾಕಿಕೊಳ್ಳುವುದನ್ನು ಕಾಣಬಹುದು. ಮೂರನೆಯ ಚಿತ್ರದಲ್ಲಿ, ಬಾಂಡ್ ಜೊತೆಗೆ ಒಬ್ಬಳು ಹುಡುಗಿಯೂ ನಿಂತಿರುವುದು ಕಾಣಿಸುತ್ತಿದೆ.

Image credits: Ruskin Bond/Facebook.

Image credits: Ruskin Bond/Facebook.

  • Share this:
ಎಲ್ಲರ ಪಾಲಿನ ಅಚ್ಚು ಮೆಚ್ಚಿನ ಲೇಖಕ, ಒಂದು ತಲೆಮಾರಿನ ಜನರಿಗೆ ಓದುವ ಹುಚ್ಚು ಹತ್ತಿಸಿದ ರಸ್ಕಿನ್ ಬಾಂಡ್ ಅವರು ಜಿಲೇಬಿ ತಿನ್ನುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದು, ಅದೀಗ ಸಾಕಷ್ಟು ವೈರಲ್ ಆಗಿದೆ. ವೈರಲ್ ಆಗಿರುವ ಚಿತ್ರದಲ್ಲಿ ರಸ್ಕಿನ್ ಬಾಂಡ್ ಅವರು ಜಿಲೇಬಿಯನ್ನು ಸವಿಯುತ್ತಿದ್ದಾರೆ. ಅಲ್ಲದೆ ಅವರು ಚಾಕಲೇಟ್ ಬಣ್ಣದ ಪುಲ್‌ಓವರ್ ಧರಿಸಿ ಬಹಳ ಖುಷಿಯಾಗಿರುವುದು ಕಂಡುಬರುತ್ತಿದೆ. ಅಲ್ಲದೆ ಅದರ ಮೇಲೆ ಅವರು ಕಂದು ಬಣ್ಣದ ನಿಲುವಂಗಿಯನ್ನು ಧರಿಸಿರುವುದೂ ಕಂಡುಬಂದಿದೆ. ರಸ್ಕಿನ್ ಬಾಂಡ್ ಅವರು ಜಿಲೇಬಿಯನ್ನು ತಿನ್ನುತ್ತಿರುವ ಮೂರು ಫೋಟೋಗಳು ವೈರಲ್ ಆಗಿದೆ.

ಇವುಗಳ ಪೈಕಿ ಒಂದು ಚಿತ್ರದಲ್ಲಿ, ಬಾಂಡ್ ಸಿಹಿ ಖಾದ್ಯವನ್ನು ನೋಡಿ ಸಂತೋಷಪಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ, ಬಾಂಡ್ ಜಿಲೇಬಿ ತುಂಡನ್ನು ಬಾಯಿಗೆ ಹಾಕಿಕೊಳ್ಳುವುದನ್ನು ಕಾಣಬಹುದು. ಮೂರನೆಯ ಚಿತ್ರದಲ್ಲಿ, ಬಾಂಡ್ ಜೊತೆಗೆ ಒಬ್ಬಳು ಹುಡುಗಿಯೂ ನಿಂತಿರುವುದು ಕಾಣಿಸುತ್ತಿದೆ. ಆ ಹುಡುಗಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಜಿಲೇಬಿಯನ್ನು ಬಾಯಿಗೆ ಇಡಲು ಬಾಯಿ ತೆರೆಯುವುದನ್ನು ಕಾಣಬಹುದು. ಬಾಂಡ್ ಒಂದು ತಟ್ಟೆಯಲ್ಲಿ ಇರಿಸಲಾಗಿರುವ ಸಿಹಿ ಖಾದ್ಯದ ಕ್ಲೋಸ್-ಅಪ್ ಶಾಟ್ ಅನ್ನು ಸಹ ಅಪ್‌ಲೋಡ್ ಮಾಡಿದ್ದಾರೆ.

ಈ ಜಿಲೇಬಿಯನ್ನು ರಸ್ಕಿನ್ ಬಾಂಡ್ ಅವರ ಮೊಮ್ಮಗಳು ಬೀನಾ ಅವರು ತಯಾರಿಸಿದ್ದಾರೆ. ಅಲ್ಲದೆ ಈ ಫೋಟೋದ ಜೊತೆಗೆ ರಸ್ಕಿನ್ ಬಾಂಡ್ ಮಸ್ಸೂರಿಯಲ್ಲಿ ಮಳೆಯಾಗುತ್ತಿದೆ. ಈ ಮಳೆಯ ನಡುವೆ ಪ್ರೀತಿ ಪಾತ್ರರ ಜೊತೆಗೆ ತಾಜಾ ಜಿಲೇಬಿಯನ್ನು ತಿನ್ನುವುದೆಂದರೆ ಅದೊಂದು ಅದ್ಭುತ ಎಂದು ಬರೆದುಕೊಂಡಿದ್ದಾರೆ.

ರಸ್ಕಿನ್ ಬಾಂಡ್ ಅವರ ಅಭಿಮಾನಿಗಳು ಈ ಪೋಸ್ಟ್ ಅನ್ನು ನೋಡಿ ಸಂತೋಷಪಟ್ಟರು ಮತ್ತು ಅವರಿಗೆ ದೀರ್ಘ ಆಯುಷ್ಯ ಸಿಗಲಿ ಎಂದು ಹಾರೈಸಿದರು. ಈ ಫೋಟೋಕ್ಕೆ ಅಸಂಖ್ಯಾತ ಕಾಮೆಂಟ್ ಬಂದಿದ್ದು ಹಲವಾರು ರುಚಿಕರ ಜಿಲೇಬಿಗೆ ಆಸೆಪಟ್ಟಿದ್ದಾರೆ. ಇನ್ನೂ ಕೆಲವರು ಬಾಂಡ್ ಅವರ ಕಥೆಗಳನ್ನು ಬಾಲ್ಯದಲ್ಲಿ ಓದಿದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಖ್ಯಾತ ಇಂಗ್ಲೀಷ್ ಬರಹಗಾರ ರಸ್ಕಿನ್ ಬಾಂಡ್ ತನ್ನ ದತ್ತು ಕುಟುಂಬದೊಂದಿಗೆ ಮಸ್ಸೂರಿಯ ಲ್ಯಾಂಡೂರ್ ಪಟ್ಟಣದಲ್ಲಿ ವಾಸಿಸುತ್ತಾನೆ. ಅವರು ಈ ಮೇ ನಲ್ಲಿ 87 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಇದೇ ಮೇ 19 ರಂದು ರಸ್ಕಿನ್ ಬಾಂಡ್ ಅವರ ಜನ್ಮದಿನ ಇದ್ದು ಆ ವೇಳೆಗೆ ಮಕ್ಕಳಿಗಾಗಿ ಪುಸ್ತಕವನ್ನು ತರುತ್ತಿದ್ದಾರೆ. ಈ ಪುಸ್ತಕವು ಐಕಾನಿಕ್ ರಸ್ಟಿ, ಅಂಕಲ್ ಕೆನ್, ದಿ ಗ್ರ್ಯಾಂಡ್‌ಮದರ್‌ ಸೇರಿದಂತೆ ಅವರ ಅತ್ಯಂತ ಪ್ರಸಿದ್ಧ ಸಣ್ಣ ಕಥೆಗಳ ಸಂಗ್ರಹವಾಗಿದೆ. ಇವು ಮತ್ತೊಮ್ಮೆ ಮಕ್ಕಳ ಮನವನ್ನು ಗೆಲ್ಲುವುದು ನಿಶ್ಚಿತ ಎನ್ನಲಾಗುತ್ತಿದೆ. ಮಕ್ಕಳಿಗೆ ಇಷ್ಟವಾಗುವ ಎಲ್ಲ ಕಾಲದ ಕಥೆಗಳು ಎನ್ನುವ ಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕವನ್ನು ಪೆಂಗ್ವಿನ್ ರ‍್ಯಾಂಡಮ್ ಹೌಸ್‌ನ ಮಕ್ಕಳ ವಿಭಾಗವಾದ ಪಫಿನ್ ಪ್ರಕಟಿಸಲಿದೆ. ಈ ಪುಸ್ತಕದಲ್ಲಿ ಹಲವು ಹೊಸ ಕಥೆಗಳು ಹಾಗೂ ಹಲವು ಹೊಸ, ವಿಶೇಷ ಪಾತ್ರಗಳು ಇರಲಿವೆ ಎನ್ನುವುದು ವಿಶೇಷ.
First published: