Viral News: 14 ದಿನಗಳವರೆಗೆ ಒಳ ಉಡುಪು ಬದಲಿಸದೇ ವಿದೇಶ ಪ್ರವಾಸ ಮಾಡಿದ ಕುಟುಂಬ, ಕಾರಣ?

ನಿಮಗೆ ಆಶ್ಚರ್ಯವಾಗುವಂತೆ ಒಂದು ಕುಟುಂಬ (Family) ವಿದೇಶ ಪ್ರವಾಸಕ್ಕೆ ಹೋಗಿತ್ತು. ಆದರೆ ಅವರು ಧರಿಸಿದ ಬಟ್ಟೆಯ ಮೇಲೆ ಇಡೀ ವಿದೇಶಿ ಪ್ರವಾಸ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುತ್ತಾಡಲು ಎಲ್ಲಿಗೆ ಹೋಗಬೇಕು ಎಂದಾಗ ಮೊದಲು ನೆನಪಾಗುವುದು ಬಟ್ಟೆ (Clothes) ಪ್ಯಾಕ್ ಮಾಡುವುದು. ನಾವು ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಲು ಬಯಸಿದ್ದರೂ, ನಾವು ಸಾಕಷ್ಟು ಬಟ್ಟೆಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಿಮಗೆ ಆಶ್ಚರ್ಯವಾಗುವಂತೆ ಒಂದು ಕುಟುಂಬ (Family) ವಿದೇಶ ಪ್ರವಾಸಕ್ಕೆ ಹೋಗಿತ್ತು. ಆದರೆ ಅವರು ಧರಿಸಿದ ಬಟ್ಟೆಯ ಮೇಲೆ ಇಡೀ ವಿದೇಶಿ ಪ್ರವಾಸ ಮಾಡಿದ್ದಾರೆ. 14 ದಿನ ಒಂದೇ ಬಟ್ಟೆಗಳೊಂದಿಗೆ ವಿದೇಶದಲ್ಲಿ ತಿರುಗಿದ್ದಾರೆ. ಅವರು ತಮ್ಮ ಒಳ ಉಡುಪುಗಳನ್ನು ಸಹ ಬದಲಾಯಿಸಲಿಲ್ಲವಂತೆ. ಆದರೆ ಇದಕ್ಕೆಲ್ಲದಕ್ಕೂ ಒಂದು ಕಾರಣ ಇದೆಯಂತೆ. ಈ ಕುಟುಂಬ ಏಕೆ ಹೀಗೆ ಒಂದೇ ಬಟ್ಟೆಯಲ್ಲಿ ಅದೂ ಒಳ ಉಡುಪುಗಳನ್ನು ಸಹ ಬದಲಾಯಿಸದೇ ವಿದೇಶ ಪ್ರವಾಸ (Foreign Trip) ಮಾಡಿದೆ ಎಂಬುದನ್ನು ನೊಡೋಣ ಬನ್ನಿ.

11 ಮಂದಿ 14 ದಿನ ಬಟ್ಟೆಯೇ ಬದಲಾಯಿಸಲಿಲ್ಲ:

ಯುಕೆಯ ನಾಟಿಂಗ್‌ಹ್ಯಾಮ್‌ ಶೈರ್ಸ್‌ನಿಂದ ನಿಕೋಲಾ ಕಾಕ್ ಎಂಬ ಕುಟುಂಬ ಮತ್ತು ಸ್ನೇಹಿತರೊಂದಿಗೆ ಟರ್ಕಿಗೆ ಪ್ರಯಾಣ ಬೆಳೆಸಿದರು. 14 ದಿನಗಳ ವಿದೇಶಿ ಪ್ರವಾಸಕ್ಕೆ ಹೋದವರು ಒಟ್ಟು 11 ಮಂದಿ. 14 ದಿನಗಳಿಗೆ ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿದ್ದಾರೆ. ಬ್ಯಾಗ್ ನಲ್ಲಿ ಬಟ್ಟೆಯನ್ನೂ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವರು ಟರ್ಕಿಯನ್ನು ತಲುಪಿದಾಗ, ಅವರು ಯುಕೆ ತೊರೆದ ಅದೇ ಬಟ್ಟೆಯಲ್ಲಿ 14 ದಿನಗಳ ಕಾಲ ಇದ್ದರಂತೆ.

ವಿದೇಶಿ ಪ್ರವಾಸ ಮಾಡಿರುವ ಕುಟುಂಬ


ಆದರೆ ಈ ಕುಟುಂಬವು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಿಲ್ಲ. ಅವರು ತಮ್ಮ 14 ದಿನಗಳ ರಜೆಯನ್ನು ಅದೇ ಬಟ್ಟೆಯಲ್ಲಿ ಕಳೆಯಲು ಕಾರಣ ವಿಮಾನಯಾನ ಸಂಸ್ಥೆಗಳು. ಕುಟುಂಬವು ಯುಕೆಯಿಂದ ಹಾರಿದ ವಿಮಾನಯಾನ ಕಂಪನಿಯಿಂದ ಕುಟುಂಬದ ಲಗೇಜ್ ಕಳುಹಿಸಲಾಗಿಲ್ಲ. ಈ ಜನರು ಟರ್ಕಿಯ ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್‌ಗಾಗಿ ಕಾಯುತ್ತಿರುವಾಗ, ತಮ್ಮ ಲಗೇಜ್‌ಗಳನ್ನು ಯುಕೆಯಲ್ಲಿಯೇ ಉಳಿದುಬಿಟ್ಟಿದೇ ಎಂದು ಅವರಿಗೆ ತಿಳಿದಿದೆ.

ಇದನ್ನೂ ಓದಿ: Jungli Mushroom: ಶ್ರಾವಣದಲ್ಲಿ ನಾನ್​​ವೆಜ್​​ಗಿಂತ ರುಚಿಕರ ಎನಿಸುವ ಕಾಡು ಅಣಬೆಗಳ ಲೋಕಲ್ ಮಾರ್ಕೆಟ್ ಇದು

ಇದು ನಮ್ಮ ಜೀವನದ ಒಂದು ಕೆಟ್ಟ ಪ್ರವಾಸ:

ನಾಟಿಂಗ್ಹ್ಯಾಮ್ಶೈರ್ ಪೋಸ್ಟ್ ನ ವರದಿಯ ಪ್ರಕಾರ, ನಿಕೋಲಾ ಅವರ ಹೇಳಿಕೆಯಂತೆ, "ನಮ್ಮ ಲಗೇಜ್ ಬಂದಿಲ್ಲ ಎಂದು ತಿಳಿದಾಗ ನಾವು ತುಂಬಾ ಅಸಮಾಧಾನಗೊಂಡಿದ್ದೇವೆ. ನಮ್ಮ ಲಗೇಜ್ ಅನ್ನು ಎರಡು ದಿನಗಳಲ್ಲಿ ಕಳುಹಿಸಲಾಗುವುದು ಎಂದು ನಮಗೆ ಭರವಸೆ ನೀಡಲಾಯಿತು, ಆದರೆ ಅದು ಸಂಭವಿಸಲಿಲ್ಲ. ಹೀಗಾಗಿ ನಾವು ಎಲ್ಲರೂ 14 ದಿನಗಳ ಕಾಲ ಒಂದೇ ಬಟ್ಟೆಯಲ್ಲಿ ಕಳೆಯಬೇಕಾಯಿತು. ಲಗೇಜ್ ಇಲ್ಲದೆ, ನಾವು ಒಂದೇ ಒಂದು ಜೊತೆ ಬಟ್ಟೆಯನ್ನು ಧರಿಸಿದ್ದೇವೆ, ಒಳಉಡುಪು ಕೂಡ ಮೊದಲ ದಿನ ಧರಿಸಿದ್ದರಲ್ಲಿಯೇ ಇದ್ದೇವು. ರಾತ್ರಿಯಲ್ಲಿ ನಾವು ಒಗೆಯುತ್ತಿದ್ದ ಒಂದೇ ಒಂದು ಬಟ್ಟೆ ಇತ್ತು. ವಿಮಾನಯಾನ ಸಂಸ್ಥೆಗಳ ಈ ಬೇಜವಾಬ್ದಾರಿಯಿಂದಾಗಿ, ಎಲ್ಲರೂ ಸಮಸ್ಯೆಗಳನ್ನು ಎದುರಿಸಬೇಕಾಯಿತು‘ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Aati Celebration: ಆಟಿಯ ಕೆಸರಡೊಂಜಿ ದಿನ: ಮನರಂಜನೆ ಮಾತ್ರವಲ್ಲ, ಆರೋಗ್ಯಕ್ಕೂ ಬೆಸ್ಟ್​ ಈ ಆಚರಣೆ!

ಆದರೆ ನಂತರ ಅವರ ಟ್ರಾವೆಲ್ ಏಜೆಂಟ್ ಪ್ರವಾಸಕ್ಕೆ ವಿಮೆ ಮಾಡಿದ್ದರು. ಹಾಗಾಗಿ ಪರಿಹಾರವಾಗಿ 14,400 ರೂ. ಅವರಿಗೆ ದೊರಕಿದೆ. ಆದರೆ ಈ ಪ್ರವಾಸವು ಅವರ ಕೆಟ್ಟ ಪ್ರವಾಸವಾಗಿತ್ತು. ಅವರು ಪ್ರವಾಸಕ್ಕಾಗಿ ಎರಡು ವರ್ಷಗಳ ಕಾಲ ಉಳಿಸಿದ್ದರು. ಆದರೆ ಈ ರೀತಿ ಆದ್ದರಿಂದ ಅವರ ಈ ಕನಸಿನ ಪ್ರವಾಸ ಒಂದು ಕೆಟ್ಟ ಪ್ರವಾಸವಾಗಿ ನೆನಪಿನಲ್ಲಿ ಉಳಿಯುವಂತೆ ಆಯಿತು.
Published by:shrikrishna bhat
First published: