Technology: ಮಾನವ ಮೆದುಳಿಗೂ ಬಂತು ನ್ಯೂರಾಲಿಂಕ್ ಚಿಪ್! ಎಲೋನ್ ಮಸ್ಕ್ ನೇತೃತ್ವದಲ್ಲಿ ನಡೀತಿದೆ ಹೊಸ ಪ್ರಯೋಗ!

ಈ ನ್ಯೂರಾಲಿಂಕ್ ಚಿಪ್ ಪ್ರಾಥಮಿಕ ಹಂತದಲ್ಲಿ ಪಾರ್ಶ್ವವಾಯುಪೀಡಿತರಾಗಿರುವ ವ್ಯಕ್ತಿಗಳು ಕಂಪ್ಯೂಟರ್ ಹಾಗೂ ಮೊಬೈಲ್ ಸಾಧನಗಳ ಮೂಲಕ ಸ್ವಾತಂತ್ರ್ಯವನ್ನು ಮರುಗಳಿಸುವ ತಂತ್ರಜ್ಞಾನ ಹೊಂದುವ ಗುರಿ ಇಟ್ಟುಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಂತ್ರಜ್ಞಾನವು (Technology) ಉನ್ನತೀಕರಣಗೊಳ್ಳುತ್ತಿರುವಂತೆಯೇ ಅಮೆಜಾನ್ ಅಲೆಕ್ಸಾ(Amazon Alexa) ಅಥವಾ ಸಿರಿಯಂಥ ತಂತ್ರಾಂಶಗಳ ಮೂಲಕ ನಮ್ಮ ಧ್ವನಿಯಿಂದಲೇ ಸ್ಮಾರ್ಟ್‌ ಫೋನ್‍ಗಳು, ಲ್ಯಾಪ್‍ಟಾಪ್‍ಗಳು ಹಾಗೂ ಸೂಕ್ಷ್ಮ ಸಾಧನಗಳನ್ನು(Sensitive Devices) ನಿರ್ವಹಿಸಬಹುದಾಗಿದೆ. ಆದರೆ, ಕೇವಲ ನಮ್ಮ ಆಲೋಚನೆಗಳಿಂದಲೇ ಮಿದುಳನ್ನು ಸಾಧನಗಳಿಗೆ ಸಂಪರ್ಕಿಸಿ ಅವುಗಳನ್ನು ನಿಯಂತ್ರಿಸುವಂತಾದರೆ ಏನಾಗಬಹುದು..? ಅಥವಾ ಏನನ್ನೂ ಹೇಳದೆ ಕೇವಲ ನಮ್ಮ ಯೋಚನೆಗಳಿಂದಲೇ ಮನುಷ್ಯರೊಂದಿಗೆ ಸಂವಾದಿಸಲು(Communicate) ಸಾಧ್ಯವಾದರೆ..? ಅದೂ ಕೂಡಾ ಈಗ ಸಾಧ್ಯವಿದೆ!!

ಮಿದುಳು-ಕಂಪ್ಯೂಟರ್
ಎಲೋನ್ ಮಸ್ಕ್ ನೇತೃತ್ವದ ನ್ಯೂರಾಲಿಂಕ್ ಚಿಪ್ ಸಾಧನಗಳೊಂದಿಗೆ ಭೌತಿಕವಾಗಿಯಾಗಲಿ ಅಥವಾ ಧ್ವನಿ ಮೂಲಕವಾಗಲಿ ಸಂವಾದ ನಡೆಸದೆ ಮಿದುಳನ್ನೇ ಸಾಧನಗಳಿಗೆ ಸಂಪರ್ಕಿಸುವುದನ್ನು ಸಾಧ್ಯವಾಗಿಸಲಿದೆ. ಇದು ಮೂಲಭೂತವಾಗಿ “ಮಿದುಳು-ಕಂಪ್ಯೂಟರ್ ಅಂತರ್ಮುಖ”ವಾಗಿದ್ದು, ಬಳಕೆದಾರರು ನಿಸ್ತಂತು ಸಾಧನ ಹಾಗೂ ಮಿದುಳಿನ ಮೂಲಕ ಕಳುಹಿಸಲು ಅಥವಾ ಪಡೆಯಲು ಅವಕಾಶ ನೀಡಲಿದೆ.

ಈ ನ್ಯೂರಾಲಿಂಕ್ ಚಿಪ್ ಪ್ರಾಥಮಿಕ ಹಂತದಲ್ಲಿ ಪಾರ್ಶ್ವವಾಯುಪೀಡಿತರಾಗಿರುವ ವ್ಯಕ್ತಿಗಳು ಕಂಪ್ಯೂಟರ್ ಹಾಗೂ ಮೊಬೈಲ್ ಸಾಧನಗಳ ಮೂಲಕ ಸ್ವಾತಂತ್ರ್ಯವನ್ನು ಮರುಗಳಿಸುವ ತಂತ್ರಜ್ಞಾನ ಹೊಂದುವ ಗುರಿ ಇಟ್ಟುಕೊಂಡಿದೆ. ಈ ತಂತ್ರಜ್ಞಾನವನ್ನು ಜನರು ಆದಷ್ಟೂ ಸುಲಭವಾಗಿ ಪಠ್ಯ ಅಥವಾ ಮಾತಿನ ಸಂಯೋಜನೆ, ಅಂತರ್ಜಾಲಗಳಲ್ಲಿ ತಮ್ಮ ಆಸಕ್ತಿಯ ವಿಷಯಗಳನ್ನು ಅನುಸರಿಸುವುದು ಅಥವಾ ತಮ್ಮ ಸೃಜನಶೀಲತೆಯನ್ನು ಭೌತಿಕ ಬಳಕೆಯಿಲ್ಲದೆ ಛಾಯಾಗ್ರಹಣ, ಚಿತ್ರಕಲೆ ಅಥವಾ ಬರೆಯುವ ತಂತ್ರಾಂಶವನ್ನು ಬಳಸಿಕೊಂಡು ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Elon Muskಗೆ ಕಾರು ಉದ್ಯಮ ಸ್ಥಾಪಿಸಲು ಆಹ್ವಾನ ಕೊಟ್ಟ ಭಾರತದ 4 ರಾಜ್ಯಗಳಿವು! ಕರ್ನಾಟಕ ಈ ಪಟ್ಟಿಯಲ್ಲಿದೆಯಾ?

ಈ ತಂತ್ರಜ್ಞಾನದ ಕಟ್ಟಕಡೆಯ ಗುರಿ ಆಲೋಚಿಸಿದ ಕೂಡಲೇ ಸಾಧನಗಳು ಕಾರ್ಯನಿರ್ವಹಿಸುವಂತೆ ಮಾಡುವುದು. ಹಾಗಾದರೆ, ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ:

ನ್ಯೂರಾಲಿಂಕ್ ಚಿಪ್
ಎಲೋನ್ ಮಸ್ಕ್ ನೇತೃತ್ವದಲ್ಲಿ ಆವಿಷ್ಕರಿಸಲಾಗಿರುವ ನ್ಯೂರಾಲಿಂಕ್ ಚಿಪ್‌ನ ಕೊಂಡಿಯು ಮಿದುಳಿನಲ್ಲಿರುವ ಸಾವಿರಾರು ನರಕೋಶಗಳಿಗೆ ಸಂಪರ್ಕಗೊಳ್ಳುತ್ತದೆ. ಈ ಸಂಪರ್ಕವು ನರಕೋಶಗಳು ವಾಸ್ತವ ಸಮಯದಲ್ಲಿ ನಡೆಸುವ ಚಟುವಟಿಕೆಗಳನ್ನು ದಾಖಲಿಸಿಕೊಂಡು ಆ ಮಾಹಿತಿಯನ್ನು ಕೊಂಡಿಗೆ ರವಾನಿಸುತ್ತದೆ.

ಒಂದು ವೇಳೆ ಬಳಕೆದಾರನು ತನ್ನ ಕೈ ಹಾಗೂ ಬೆರಳುಗಳನ್ನು ಚಲಿಸಲು ಆಲೋಚಿಸುತ್ತಿದ್ದರೆ, ಈ ಕೊಂಡಿಯು ಆ ಮಾಹಿತಿಯನ್ನು ಅನುವಾದಿಸಿ, ಬ್ಲೂಟೂತ್ ಮೂಲಕ ಬಳಕೆದಾರರ ಸಾಧನಕ್ಕೆ ರವಾನಿಸುತ್ತದೆ. ಇದರರ್ಥ ಬಳಕೆದಾರರು ನ್ಯೂರಾಲಿಂಕ್ ಚಿಪ್ ಅನ್ನು ಬ್ಲೂಟೂತ್ ಸಾಧನಗಳಿಗೆ ಅಳವಡಿಸಿರಬೇಕಾಗುತ್ತದೆ ಹಾಗೂ ಅವು ಚಾರ್ಜಿಂಗ್ ಆಗಲು ಅವಕಾಶ ನೀಡಿರಬೇಕಾಗುತ್ತದೆ.

ಹೊಸ ಬಗೆಯ ಮಿದುಳು ಅಂತರ್ಮುಖವನ್ನು ನಿರ್ಮಿಸಿಕೊಳ್ಳಲು ಈ ಕೊಂಡಿ ಮೊದಲ ಹೆಜ್ಜೆಯಾಗಿದೆ. ಈ ಕೊಂಡಿಯು ಮಿದುಳಿನ ಪ್ರದೇಶ ಹಾಗೂ ಹೊಸ ಬಗೆಯ ನರಸಂಬಂಧಿ ಮಾಹಿತಿಗಳಿಗೆ ಪ್ರವೇಶ ಪಡೆದು, ಮಿದುಳಿನೊಂದಿಗೆ ಸಂಪರ್ಕ ಹೊಂದಿರುವ ವಾಹಿನಿಗಳನ್ನು ಹಿಗ್ಗಿಸಲು ಮುಂದಾಗುತ್ತದೆ. ಈ ತಂತ್ರಜ್ಞಾನದ ನೆರವಿನಿಂದ ವಿಸ್ತಾರವಾದ ನರಸಂಬಂಧಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಸಂವೇದನೆ ಹಾಗೂ ಯಾಂತ್ರಿಕ ಕಾರ್ಯಾಚರಣೆಗಳನ್ನು ಮರುಸ್ಥಾಪಿಸಬಹುದಾಗಿದೆ.

ರೊಬೊಟ್‍ಗಳ ವಿನ್ಯಾಸ
ಎಲೋನ್ ಮಸ್ಕ್ ನೇತೃತ್ವದಲ್ಲಿ ಆವಿಷ್ಕರಿಸಲಾಗಿರುವ ನ್ಯೂರಾಲಿಂಕ್ ಚಿಪ್‍ಗಳ ವೈದ್ಯಕೀಯ ಪರೀಕ್ಷೆಗಳು ಇನ್ನೂ ಆರಂಭಗೊಂಡಿಲ್ಲ. ಆದರೆ, ಶೀಘ್ರದಲ್ಲಿಯೇ ನ್ಯೂರಾಲಿಂಕ್ ಚಿಪ್ ಅನ್ನು ಮನುಷ್ಯರ ಮಿದುಳಿನಲ್ಲಿ ಅಳವಡಿಸುವ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ. ಈ ಕುರಿತು ವಿವರಿಸಿರುವ ನ್ಯೂರಾಲಿಂಕ್ ಅಂತರ್ಜಾಲ ತಾಣವು, ಈ ಅಳವಡಿಕೆಯ ವಿಧಾನದಲ್ಲಿ ನ್ಯೂರೋಸರ್ಜಿಕಲ್ ರೊಬೊಟ್‍ಗಳನ್ನು ವಿನ್ಯಾಸ ಮಾಡಲಾಗಿದೆ.

ಅವು ಬುರುಡೆಯಲ್ಲಿ 23 ಮಿಲಿಮೀಟರ್‌ನಷ್ಟು ಅತಿ ಸಣ್ಣ ರಂಧ್ರ ಕೊರೆದು ದಾರಗಳನ್ನು ಮಿದುಳಿಗೆ ತೂರಿಸುತ್ತವೆ. ರೊಬೊಟಿಕ್ ಸರ್ಜಿಕಲ್ ಉಪಕರಣಗಳಲ್ಲಿ ಸುಧಾರಣೆಯಾಗಿರುವುದರಿಂದ ಮನುಷ್ಯನಿಗೆ ಸಾಮಾನ್ಯ ಅರವಳಿಕೆ ನೀಡುವ ಬದಲು ಪ್ರಜ್ಞಾಸ್ಥಿತಿಯಲ್ಲಿರಿಸುವ ಅರವಳಿಕೆ ನೀಡುವ ಮೂಲಕವೇ ಈ ಚಿಪ್ ಅನ್ನು ಅಳವಡಿಸಬಹುದಾಗಿದೆ.

ಇದನ್ನೂ ಓದಿ: ಟ್ವಿಟರ್ ನಿಮ್ಮನ್ನೂ Fired ಮಾಡಬಹುದು ಹುಷಾರು ಎಂದ ಟೆಸ್ಲಾ CEO Elon Musk..! ಯಾಕೆ ಗೊತ್ತೇ?

ತಜ್ಞರು ಕಳವಳ
ಆದರೆ, ಈ ತಂತ್ರಜ್ಞಾನದ ಕುರಿತು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. “ಈ ತಂತ್ರಜ್ಞಾನದ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಸಾರ್ವತ್ರಿಕ ಚರ್ಚೆಗಳು ನಡೆದಂತೆ ನನಗೆ ಅನ್ನಿಸುತ್ತಿಲ್ಲ” ಎಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ವೈದ್ಯಕೀಯ ಇತಿಹಾಸ ಮತ್ತು ಜೈವಿಕನೈತಿಕತೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕರೋಲಾ ಕ್ರೀಟ್‍ಮೇರ್ ಅಭಿಪ್ರಾಯ ಪಟ್ಟಿದ್ದಾರೆ.

“ಈ ಹೊಂದಾಣಿಕೆಯಿಲ್ಲದ ವಿವಾಹವು ಕಂಪನಿಯೊಂದರ ಲಾಭಕ್ಕಾಗಿ ನಡೆಯುತ್ತಿದೆ. ಈ ವೈದ್ಯಕೀಯ ಅಡ್ಡಿಗಳು ಜನರಿಗೆ ನೆರವು ನೀಡುವ ಹೆಸರಿನಲ್ಲಿ ನಡೆಯುತ್ತಿವೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Published by:vanithasanjevani vanithasanjevani
First published: