Bentley Car: ಲಂಡನ್‌ನಲ್ಲಿ ಕಳವಾದ ದುಬಾರಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ! ವಿಷಯ ಗೊತ್ತಾಗಿದ್ದೇ ಸಖತ್ ಸ್ಟೋರಿ

 ಐಷಾರಾಮಿ ವಾಹನಗಳು ಪ್ರಪಂಚದಾದ್ಯಂತದ ಕಾರು ಕಳ್ಳರ ಟಾರ್ಗೆಟ್‌ ಆಗಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಇಂತಹ ಕಾರು ಕಳ್ಳತನದ ಘಟನೆಯಲ್ಲಿ ಈ ಘಟನೆ ತುಂಬಾ ಆಶ್ಚರ್ಯಪಡುವ ಆಗಿದೆ. ಏಕೆಂದರೆ, ಈ ಆಘಾತಕಾರಿ ಘಟನೆಯಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ನಲ್ಲಿ ಕಳ್ಳತನವಾದ ಬೆಂಟ್ಲಿ ಮುಲ್ಸನ್ನೆ ಸಲೂನ್ ಕಾರು ಪಾಕಿಸ್ತಾನದ ಕರಾಚಿಯಲ್ಲಿರುವ ಐಷಾರಾಮಿ ಬಂಗಲೆಯೊಂದರಲ್ಲಿ ಪತ್ತೆಯಾಗಿದೆ.

ಕಳವಾದ ದುಬಾರಿ  ಬೆಂಟ್ಲಿ ಕಾರು

ಕಳವಾದ ದುಬಾರಿ ಬೆಂಟ್ಲಿ ಕಾರು

  • Share this:

ಐಷಾರಾಮಿ ವಾಹನಗಳು (luxury vehicle) ಪ್ರಪಂಚದಾದ್ಯಂತದ ಕಳ್ಳರ ಟಾರ್ಗೆಟ್ ಆಗಿರುತ್ತದೆ. ಅದೇ ರೀತಿ ಕೆಲವು ವಾರಗಳ ಹಿಂದೆ ಲಂಡನ್‌ನಿಂದ (London) 3,00,000 ಡಾಲರ್‌ ಅಂದರೆ ಸುಮಾರು 2.39 ಕೋಟಿ ಬೆಲೆಯ ಬೆಂಟ್ಲಿ ಕಾರ್ ಕಳುವಾಗಿತ್ತು. ಆ ಬೆಂಟ್ಲಿ ಕಾರು ಈಗ ಪಾಕಿಸ್ತಾನದ (Pakistan) ಕರಾಚಿಯ ಬಂಗಲೆಯೊಂದರಲ್ಲಿ ಪತ್ತೆಯಾಗಿದೆ. ಐಷಾರಾಮಿ ವಾಹನಗಳು ಪ್ರಪಂಚದಾದ್ಯಂತದ ಕಾರು (Car) ಕಳ್ಳರ ಟಾರ್ಗೆಟ್‌ ಆಗಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಇಂತಹ ಕಾರು ಕಳ್ಳತನದ ಘಟನೆಯಲ್ಲಿ ಈ ಘಟನೆ ತುಂಬಾ ಆಶ್ಚರ್ಯಪಡುವ ಆಗಿದೆ. ಏಕೆಂದರೆ, ಈ ಆಘಾತಕಾರಿ ಘಟನೆಯಲ್ಲಿ ಯುನೈಟೆಡ್ ಕಿಂಗ್‌ಡಮ್‌ನ (United Kingdom) ಲಂಡನ್‌ನಲ್ಲಿ ಕಳ್ಳತನವಾದ ಬೆಂಟ್ಲಿ ಮುಲ್ಸನ್ನೆ ಸಲೂನ್ ಕಾರು ಪಾಕಿಸ್ತಾನದ ಕರಾಚಿಯಲ್ಲಿರುವ ಐಷಾರಾಮಿ ಬಂಗಲೆಯೊಂದರಲ್ಲಿ ಪತ್ತೆಯಾಗಿದೆ.


ಈ ಕಾರನ್ನು ಕಸ್ಟಮ್ಸ್ ಅಧಿಕಾರಿಗಳು ಪಾಕಿಸ್ತಾನದಲ್ಲಿ ವಶಪಡಿಸಿಕೊಂಡರು. ಆದರೆ ಈಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಈ ಕಾರು ಹೇಗೆ ಬಂದೀತು? ಎಂಬೆಲ್ಲ ವಿವರಗಳು ಇಲ್ಲಿವೆ.


ಕರಾಚಿಯಲ್ಲಿ ಪತ್ತೆಯಾಯ್ತು ಲಂಡನ್‌ನಲ್ಲಿ ಕಳವಾದ ಕಾರು 
ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್‌ಗೆ ಲಂಡನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆಯಾದ ಯುಕೆ ನ್ಯಾಷನಲ್ ಕ್ರೈಮ್ ಏಜೆನ್ಸಿಯು ಲಂಡನ್‌ನಿಂದ ಕದ್ದ ಬೆಂಟ್ಲಿ ಕಾರು ಕರಾಚಿ ನಗರದ ಐಷಾರಾಮಿ ವಸತಿ ಪ್ರದೇಶವಾದ ಡಿಎಚ್‌ಎ ಪ್ರದೇಶದ ಮನೆಯೊಂದರ ಮುಂದಿದೆ ಎಂದು ಮಾಹಿತಿಯನ್ನು ನೀಡುತ್ತಾರೆ.


ಇದನ್ನೂ ಓದಿ:  Money Transfer: ಆನ್‌ಲೈನ್‌ನಲ್ಲಿ ಹಣ ವರ್ಗಾಹಿಸುವವರೇ ಎಚ್ಚರ!

ಈ ಮಾಹಿತಿಯ ಆಧಾರದ ಮೇಲೆ ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್‌ ದಾಳಿ ನಡೆಸಿತು. ಈ ವೇಳೆ ದುಬಾರಿ ಬೆಲೆಯ ಕದ್ದ ಬೆಂಟ್ಲಿ ಕಾರು ಪತ್ತೆಯಾಗಿದೆ. ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೆಂಟ್ಲಿಯಂತಹ ಐಷಾರಾಮಿ ಕಾರನ್ನು ಕದ್ದ ಖದೀಮರು ಅದರಲ್ಲಿರುವ ಟ್ರ್ಯಾಕರ್ ಸಿಸ್ಟಂ ಅನ್ನು ಆಫ್ ಮಾಡಿರಲಿಲ್ಲ. ಪರಿಣಾಮ ಈ ಐಷಾರಾಮಿ ಕಾರನ್ನು ಲಂಡನ್‌ ತನಿಖಾಧಿಕಾರಿಗಳಿಗೆ ಪತ್ತೆ ಮಾಡಲು ಸುಲಭವಾಯಿತು.


ಕಾರು ಕರಾಚಿಯಲ್ಲಿರುವ ವಿಷಯ ಗೊತ್ತಾಗಿದ್ದು ಹೇಗೆ? 
ಈ ಐಷಾರಾಮಿ ಬೆಂಟ್ಲಿ ಕಾರಿನಲ್ಲಿದ್ದ ಅತ್ಯಾಧುನಿಕ ಟ್ರ್ಯಾಕಿಂಗ್‌ ತಂತ್ರಜ್ಞಾನದಿಂದ ಲಂಡನ್‌ ತನಿಖಾಧಿಕಾರಿಗಳು ನಿಖರವಾದ ಸ್ಥಳವನ್ನು ಪರಿಶೀಲಿಸಿದರು. ನಂತರ ಲಂಡನ್‌ ಅಧಿಕಾರಿಗಳು ವಾಹನದ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ವಿವರಗಳನ್ನು ನೀಡಿದರು.


ಕರಾಚಿಯ ಕಸ್ಟಮ್ಸ್ ಎನ್ಫೋರ್ಸ್‌ಮೆಂಟ್‌ ಕಲೆಕ್ಟರೇಟ್ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ಕಾರು ಪಾಕಿಸ್ತಾನದ ರಿಜಿಸ್ಟ್ರೇಷನ್ ಮತ್ತು ನಂಬರ್ ಪ್ಲೇಟ್ ಹೊಂದಿರುವ ಬೆಂಟ್ಲಿಯನ್ನು ಪತ್ತೆ ಮಾಡಿದರು. ಹೆಚ್ಚಿನ ತಪಾಸಣೆಯ ನಂತರ, ಬೆಂಟ್ಲಿಯ ಚಾಸಿಸ್ ಸಂಖ್ಯೆಯು ಯುಕೆಯಿಂದ ಕದ್ದ ಬೆಂಟ್ಲಿಯ ಸಂಖ್ಯೆಗೆ ಹೊಂದಿಕೆಯಾಗುತ್ತಿದೆ ಎಂದು ಅವರು ಪತ್ತೆ ಮಾಡಿದರು.


ಇದನ್ನೂ ಓದಿ:  Dog Bite Video: ಲಿಫ್ಟ್​ನಲ್ಲಿದ್ದ ಬಾಲಕನ ಮೇಲೆರಗಿದ ನಾಯಿ, ಮಾನವೀಯತೆ ಮರೆತ ಮಾಲೀಕ ಪರಾರಿ!

ನಂತರ ಈ ಕಾರಿನ ಬಗ್ಗೆ ದಾಖಲೆಗಳನ್ನು ಕೇಳಿದಾಗ ನಿವಾಸದ ಮಾಲೀಕರು ಸಮರ್ಪಕ ದಾಖಲೆಗಳನ್ನು ನೀಡಲಿಲ್ಲ. ಹೀಗಾಗಿ ಪಾಕಿಸ್ತಾನಿ ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡರು. ಆತನನ್ನು ಮತ್ತು ಆತನಿಗೆ ಅತ್ಯಾಧುನಿಕ ಕಾರನ್ನು ಮಾರಾಟ ಮಾಡಿದ ದಲ್ಲಾಳಿಯನ್ನೂ ಕೂಡ ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಈ ವಾಹನದ ನೋಂದಣಿ ನಕಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿದ್ದು ಹೀಗೆ 
ಈ ವಾಹನಗಳ ಅಕ್ರಮ ಕಳ್ಳಸಾಗಣೆ ಮಾಫಿಯಾದಲ್ಲಿ ಭಾಗಿಯಾದವರು ಪೂರ್ವ ಯುರೋಪಿಯನ್ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ದಾಖಲೆಗಳನ್ನು ಬಳಸಿ ಈ ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕದ್ದ ವಾಹನದ ಕಳ್ಳಸಾಗಣೆಯಿಂದಾಗಿ 300 ಮಿಲಿಯನ್‌ಗೂ ಹೆಚ್ಚು ಪಾಕಿಸ್ತಾನಿ ರೂಪಾಯಿ ತೆರಿಗೆ ವಂಚಿಸಲಾಗಿದೆ.


ಅಂತರಾಷ್ಟ್ರೀಯ ಗಡಿಗಳಲ್ಲಿ ಇಂತಹ ಅನೇಕ ರ್‍ಯಾಕೆಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕದ್ದ ಕಾರುಗಳನ್ನು ತುಂಡುಗಳಾಗಿ ಕತ್ತರಿಸಿ ಬಿಡಿಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಕದ್ದ ಅನೇಕ ಕಾರುಗಳು ನೇಪಾಳ ಮತ್ತು ಬಾಂಗ್ಲಾದೇಶದಂತಹ ನೆರೆಯ ದೇಶಗಳಲ್ಲಿ ಸಿಕ್ಕ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ.


ಈ ಪ್ರಕರಣದಲ್ಲಿ ದೂರದ ಲಂಡನ್ ನಲ್ಲಿ ಕದ್ದಿದ್ದ ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಕಳ್ಳರು ಯಶಸ್ವಿಯಾಗಿದ್ದರು. ಆದರೆ, ಕದ್ದ ಕಳ್ಳರಿಗೆ ಕಾರಿನಲ್ಲಿ ಟ್ರ್ಯಾಕರ್ ಇದೆ ಎಂದು ಗೊತ್ತಿರಲಿಲ್ಲ. ಕೊನೆಗೆ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಕಳ್ಳರು ಜೈಲು ಪಾಲಾಗಿದ್ದಾರೆ. ಇನ್ನು ಐಷಾರಾಮಿ ಬೆಂಟ್ಲಿ ಕಾರು ಮತ್ತೆ ಲಂಡನ್ ಮಾಲೀಕನನ್ನು ಸೇರಿದೆ.


ಈ ಕಾರಿನ ಕಳ್ಳತನದಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಪಿಎಸ್‌ ಟ್ರ್ಯಾಕರ್‌ ಬಗ್ಗೆ ಒಂದಿಷ್ಟು ಮಾಹಿತಿ:
ಇನ್ನು ಅನೇಕ ಆಧುನಿಕ-ದಿನದ ಕಾರುಗಳು ಫ್ಯಾಕ್ಟರಿ-ಅಳವಡಿಕೆಯ ಟ್ರ್ಯಾಕಿಂಗ್ ಸಾಧನಗಳನ್ನು ನೀಡುತ್ತವೆಯಾದರೂ, ಡ್ಯಾಶ್‌ಬೋರ್ಡ್ ಅಡಿಯಲ್ಲಿ ಮರೆಮಾಡಲಾಗಿರುವ ಹಾರ್ಡ್‌ವೈರ್ಡ್ ಟ್ರ್ಯಾಕರ್ ಅನ್ನು ಸ್ಥಾಪಿಸುವುದು ಯಾವಾಗಲೂ ಒಳ್ಳೆಯದು. ಕಾರಿನ ಇಸಿಯುಗೆ ವೈರ್ ಮಾಡಬಹುದಾದ ಇಂತಹ ಹಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.


ಅಂತಹ ಸಾಧನಗಳು ಎಂಜಿನ್ ಸ್ಟಾರ್ಟ್ ಆಗುವುದು, ಕಾರಿನ ವೇಗ ಮತ್ತು ಕಾರು ನಿರ್ದಿಷ್ಟ ಪ್ರದೇಶವನ್ನು ಮೀರಿ ಹೋದರೆ ಬಳಕೆದಾರರಿಗೆ ತಿಳಿಸುತ್ತದೆ. ಈ ಸಾಧನಗಳು ವಾಹನದ ಇಗ್ನಿಷನ್ ಅನ್ನು ದೂರದಿಂದಲೇ ಸ್ವಿಚ್ ಆಫ್ ಮಾಡಬಹುದು. ಈ ಕೆಲವು ಸಾಧನಗಳು ಎಂಜಿನ್ ಅನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಬಹುದು. ಮಾಲೀಕರು ಜಿಪಿಎಸ್ ಅನ್ನು ಸಹ ಹೊಂದಿಸಬಹುದು.


ಇದನ್ನೂ ಓದಿ:  Girl Funeral: ಅಂತ್ಯಸಂಸ್ಕಾರದ ವೇಳೆ ಜೀವಂತವಾದ 3 ವರ್ಷದ ಕಂದಮ್ಮ! ಬಳಿಕ ಆಗಿದ್ದೇನು ನೋಡಿ

ವಾಹನವು ನಿರ್ದಿಷ್ಟ ಪ್ರದೇಶವನ್ನು ದಾಟಿದರೆ ಎಂಜಿನ್ ಅನ್ನು ಆಟೋಮ್ಯಾಟಿಕ್ ಆಗಿ ಆಫ್ ಮಾಡುತ್ತದೆ. ಈ ಸಾಧನಗಳು ಎಲ್ಲಾ ರೀತಿಯ ವಾಹನಗಳಿಗೆ ಲಭ್ಯವಿರುತ್ತವೆ ಮತ್ತು ಜಿಪಿಎಸ್ ಸಿಸ್ಟಂ ಮತ್ತು ಇಂಟರ್ನೆಟ್ ಚಟುವಟಿಕೆಯನ್ನು ಇರಿಸಿಕೊಳ್ಳಲು ಚಂದಾದಾರಿಕೆ ಶುಲ್ಕವನ್ನು ನೀಡಬೇಕು. ಇಂತಹ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಕಾರು ಕಳ್ಳತನವಾದ ಸಂದರ್ಭದಲ್ಲಿ ಸುಲಭವಾಗಿ ಪತ್ತೆ ಮಾಡಬಹುದು.

Published by:Ashwini Prabhu
First published: