Gold Ferrari: ಚಿನ್ನದ ಫೆರಾರಿ ಕಾರ್ ಕೊಂಡ ಭಾರತೀಯ: ದುಡ್ಡು ಹೇಗೆ ಖರ್ಚು ಮಾಡಬಾರದು ಎನ್ನುವುದಕ್ಕೆ ಉದಾಹರಣೆ ಎಂದ ಆನಂದ್ ಮಹಿಂದ್ರಾ

Viral Video: 'ನನಗೆ ಗೊತ್ತಿಲ್ಲ! ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಏಕೆ ವೈರಲ್ ಆಗುತ್ತಿದೆ ? ಬಹುಶಃ ಒಂದು ವೇಳೆ ನೀವು ಶ್ರೀಮಂತರಾಗಿದ್ದರೆ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡಬಾರದು ಎನ್ನುವುದನ್ನು ತಿಳಿಸಲು ಇರಬೇಕು' ಎಂದು ಬರೆದಿದ್ದಾರೆ.

ಬಂಗಾರದ ಫೆರಾರಿ ಕಾರ್

ಬಂಗಾರದ ಫೆರಾರಿ ಕಾರ್

  • Share this:

Viral Post: ಉದ್ಯಮಿ ಆನಂದ್ ಮಹೀಂದ್ರಾ ಅವರು ಪ್ರಸ್ತುತ ಘಟನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ವ್ಯಕ್ತಪಡಿಸುತ್ತಾರೆ. ಈಗ, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರು ಭಾರತೀಯ-ಅಮೆರಿಕನ್ ವ್ಯಕ್ತಿಯೊಬ್ಬರ ಒಡೆತನದ ಕಾರ್​​​ ಕುರಿತು ಮಾತನಾಡಿದ್ದಾರೆ. ಇಷ್ಟಕ್ಕೂ ಈ ಕಾರ್​​ ಅಂತಿಂಥದ್ದಲ್ಲ! ಎಲ್ಲರ ಹುಬ್ಬೇರಿಸುತ್ತಿರುವ ಸ್ವರ್ಣದಿಂದ ಆವೃತ್ತವಾದ ವಿಶಿಷ್ಟ ಕಾರ್ ಆಗಿದೆ. ವ್ಯಕ್ತಿಯೊಬ್ಬ ಚಿನ್ನದ ಕಾರಿನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಆಗಾಗ ಇಂತಹ ಅಪರೂಪದ ವಿಡಿಯೋಗಳನ್ನು ತಮ್ಮ ಮೈಕ್ರೋ ಬ್ಲಾಗಿಂಗ್​​ ಸೈಟ್​​ನಲ್ಲಿ ಅಭಿಮಾನಿಗಳೊಟ್ಟಿಗೆ ಹಂಚಿಕೊಳ್ಳುವುದು ಸಾಮಾನ್ಯ. ಈ ಬಾರಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಸದ್ಯ ಈ ವಿಡಿಯೋ ವೈರಲ್​ ಆಗಿದೆ.


ವಿಡಿಯೋದಲ್ಲಿ ಭಾರತೀಯ-ಅಮೇರಿಕನ್ ವ್ಯಕ್ತಿಯೊಬ್ಬ ತನ್ನ ಶುದ್ಧ ಚಿನ್ನದ ಫೆರಾರಿಯನ್ನು ಪ್ರದರ್ಶಿಸುತ್ತಿರುವ ದೃಶ್ಯವಿದೆ. ಈ ವ್ಯಕ್ತಿ ಅಪ್ಪಟ ಚಿನ್ನದ ಕಾರಿನಲ್ಲಿ ಪ್ರಯಾಣಿಸುತ್ತಾ ಖುಷಿ ಅನುಭವಿಸುತ್ತಿರುವುದನ್ನು ಕಾಣಬಹುದಾಗಿದೆ. ಕಾರಿನ ಡೋರ್ ತೆಗೆದು ಒಳಗೆ ಕೂರುವುದು ಪ್ರಯಾಣಿಸುವುದು. ಜೊತೆಗೆ ಕಾರಿನ ಟಾಪ್ ಡೋರ್ ತೆರೆದುಕೊಳ್ಳುವುದು ನೋಡುಗರನ್ನು ಆಕರ್ಷಿಸುತ್ತಿದೆ. ಅಲ್ಲದೇ ಚಿನ್ನದ ಕಾರಿನ ಬಗ್ಗೆ ಜನರು ಬೆರಗಾಗಿ ನೋಡುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ: Nandi Hills: ನಂದಿ ಬೆಟ್ಟಕ್ಕೆ ಹೋಗ್ಬೇಕು ಅಂದ್ರೆ ಮೊದ್ಲು ಪಾರ್ಕಿಂಗ್ ಸ್ಥಳ ಬುಕ್ ಮಾಡಿ, ಇಲ್ಲದಿದ್ರೆ ನೋ ಎಂಟ್ರಿ

ಸದ್ಯ ಈ ವೀಡಿಯೊವನ್ನು ಶೇರ್ ಮಾಡಿರುವ ಆನಂದ್ ಮಹೀಂದ್ರಾ ಅವರು ಅದಕ್ಕೆ ಶೀರ್ಷಿಕೆಯೊಂದನ್ನು ನೀಡಿದ್ದಾರೆ. 'ನನಗೆ ಗೊತ್ತಿಲ್ಲ! ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಏಕೆ ವೈರಲ್ ಆಗುತ್ತಿದೆ ? ಬಹುಶಃ ಒಂದು ವೇಳೆ ನೀವು ಶ್ರೀಮಂತರಾಗಿದ್ದರೆ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡಬಾರದು ಎನ್ನುವುದನ್ನು ತಿಳಿಸಲು ಇರಬೇಕು' ಎಂದು ಬರೆದಿದ್ದಾರೆ.


ಈ 54 ಸೆಕೆಂಡ್ಸ್​ಗಳ ವೀಡಿಯೊ 207 ಸಾವಿರ ವೀಕ್ಷಣೆ ಗಳಿಸಿದೆ ಮತ್ತು 7,529 ಮೆಚ್ಚುಗೆಯನ್ನು ಪಡೆದಿದೆ. ಒಬ್ಬ ಬಳಕೆದಾರರು ಈ ಟ್ವೀಟ್ ಪ್ರತಿಕ್ರಿಯೆ ನೀಡುತ್ತಾ 'ಹ್ಹಹ್ಹಹ್ಹಾ... ಅದು ನಿಜವೇ! ಆದರೆ ಈ ರೀತಿ ಮಾಡುವುದರಿಂದ ಅವರಿಗೆ ಸಿಗುವ ಲಾಭವೇನು ಎನ್ನುವುದು ಗೊತ್ತಿಲ್ಲ' ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರ 'ಇಂತಹ ದುಬಾರಿ ಕಾರಿಗೆ ಈ ರೀತಿಯ ಭಯಂಕರ ಬಣ್ಣದ ಲೇಪನ ಹಚ್ಚಿರುವುದು ಇಷ್ಟವಾಗಲಿಲ್ಲ ಎಂದಿದ್ದಾರೆ. ಅವರ ಆರ್ಥಿಕ ಸ್ಥಿತಿಯ ವಿಷಯಕ್ಕಿಂತಲೂ ನನಗೆ ಅವರು ಈ ಬಣ್ಣ ಆಯ್ಕೆ ಮಾಡಿರುವ ನಿರ್ಧಾರವೇ ಕುತೂಹಲ ಕೆರಳಿಸುತ್ತಿದೆ' ಎಂದಿದ್ದಾರೆ. 'ಹಳದಿ ಬಣ್ಣದ ಹಿಂದಿನ ಕೆಂಪು ವರ್ಣ ಮರೆಯಾಗಿರುವುದು ನಿಜಕ್ಕೂ ನನಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ' ಎಂದಿದ್ದಾರೆ.


'ನೀವೇಕೆ ಹೊಂಬಣ್ಣದ ವಿವಿಧ ರೀತಿಯ ಬೊಲೆರೋಗಳನ್ನು ಮಹೀಂದ್ರ ಸೊನೆರೋ ಎನ್ನಬಾರದು' ಎಂದಿದ್ದಾರೆ ಮತ್ತೊಬ್ಬ ಬಳಕೆದಾರರು. 'ಎಷ್ಟೇ ದುಬಾರಿ ಕಾರಿರಲಿ ನಮ್ಮ ಭಾರತದಲ್ಲಿ ಅದು ಸ್ವಲ್ಪ ತರಚಿಕೊಂಡರು ಆಚೆ ತೆಗೆಯಲು ಯೋಚನೆ ಮಾಡುತ್ತೇವೆ. ಇನ್ನೂ ಈ ಚಿನ್ನದ ಕಾರನ್ನು ಹೇಗೆ ನಿಭಾಯಿಸುವರು?' ಎಂದು ಮಗದೊಬ್ಬರು ಕಮೆಂಟ್ ಹಾಕಿದ್ದಾರೆ. ಅಲ್ಲದೇ 'ಇಂತಹ ದುಬಾರಿ ಚಿನ್ನದ ಕಾರುಗಳನ್ನು ಕಾಯುವುದು ಹೇಗೆ? ಎನ್ನುವುದು ದೊಡ್ಡ ಸಮಸ್ಯೆಯಲ್ಲವೇ' ಎಂದು ವಿಡಿಯೋ ಕಂಡವರು ಉದ್ಘರಿಸುತ್ತಿದ್ದಾರೆ. ಚಿನ್ನವೆಂದರೆ ಅದು ನಮ್ಮ ಪ್ರತಿಷ್ಠೆಯ ಸಂಕೇತ ಆದ್ದರಿಂದ ಚಿನ್ನದ ಕಾರಿನಲ್ಲಿ ಅಂತಹ ವಿಶೇಷವೇನಿಲ್ಲವೆಂದು ಕೆಲವರು ತೇಲಿಸಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: