'ಆತನನ್ನ ಕಳೆದುಕೊಂಡಿದ್ದಕ್ಕೆ ವಿಷಾದಿಸುತ್ತೇನೆ' ಒಲಿಂಪಿಕ್ ಪದಕ ವಿಜೇತನಿಗೆ ಹಳೇ ಹುಡುಗಿಯ ಸಂದೇಶ

ನಾನು ಮತ್ತು ಅವನು ಇಬ್ಬರು ಒಟ್ಟಿಗೆ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೇವು. ಅವನು ತುಂಬಾ ಎತ್ತರಕ್ಕೆ ತಲುಪಿದ್ದಾನೆ. ನನಗೆ ಅವನ ಬಗ್ಗೆ ನಿಜವಾಗಿಯೂ ಹೆಮ್ಮೆ ಇದೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಟೋಕಿಯೋ ಒಲಂಪಿಕ್, ದುಃಖ-ಸಂತೋಷ, ಸೋಲು-ಗೆಲುವು, ನಿರಾಸೆ-ಭರವಸೆಗಳ ಸಂಗಮ. ಇದರಲ್ಲಿ ಗೆದ್ದು ಬೀಗಿದವರು ಕೆಲವರು, ಸೋತು ಆತ್ಮವಿಶ್ವಾಸ ಹೆಚ್ಚಿಸಿಕೊಂಡವರು ಹಲವರು, ಕಳೆದುಕೊಂಡದ್ದನ್ನು ಮತ್ತೆ ಅದೇ ವೇದಿಕೆಯಲ್ಲೇ ಪಡೆದವರು ಬೆರಳೆಣಿಕೆ ಮಂದಿ. ಛಲದಲ್ಲೇ ಮುನ್ನುಗ್ಗುತ್ತಿರುವವರು ಇನ್ನು ಕೆಲವರು. ಈ ಎಲ್ಲಾ ಭಾವನೆಗಳು ಒಂದಕ್ಕಿಂತ ಒಂದು ಭಿನ್ನವಾದರೂ ಕೊನೆಯಲ್ಲಿ ಏನು ಪಡೆದೆವು ಎಂಬುದು ಮಾತ್ರ ನಿರ್ಣಾಯಕ.


  ಇಷ್ಟೊಂದು ಭಾವನೆಗಳ ಸಾಗರದಲ್ಲಿ ನಡೆಯುತ್ತಿರುವ ಟೋಕಿಯೋ ಒಲಂಪಿಕ್ ಇನ್ನು ಕೆಲವು ಸುಮದರ ಕ್ಷಣಗಳಿಗೂ ಸಾಕ್ಷಿಯಾಗಿತ್ತು. ಅಂದರೆ ಕೆಲವರು ಪ್ರೇಮ ನಿವೇದನೆ ಮಾಡಿಕೊಂಡರು, ಇನ್ನು ಕೆಲವರ ಬದುಕಲ್ಲಿ ದೂರ ಇದ್ದವರು ಹತ್ತಿರವಾದರು.


  ಈಗ ಮತ್ತೊಂದು ಘಟನೆ ಸಂಭವಿಸಿದ್ದು, ಒಬ್ಬ ವ್ಯಕ್ತಿಗೆ ಕಳೆದುಕೊಂಡ ವ್ಯಕ್ತಿಯನ್ನು ಪುನಃ ಆತನನ್ನು ಸೇರುವಂತೆ ಮಾಡಿತು. ಹೌದು ಬಿಟ್ಟುಹೋಗಿದ್ದ ಪ್ರೇಯಸಿ ಮತ್ತೊಮ್ಮೆ ಟೋಕಿಯೋ ಒಲಂಪಿಕ್‍ನಿಂದ ಮತ್ತೆ ಆತನನ್ನು ಸೇರಿದ್ದಾಳೆ.


  ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ದೊಡ್ಡ ವಿಷಯ, ಆದರೆ ನಿಮ್ಮ ಮಾಜಿ ಆಟಗಾರನನ್ನು ಗೆಲ್ಲುವುದು ಮತ್ತೊಂದು ಜಯ. ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ನಡೆದ ಪುರುಷರ ವೈಯಕ್ತಿಕ ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನ್ಯೂಜಿಲೆಂಡ್ ಕ್ರೀಡಾಪಟು ಹೇಡನ್ ವೈಲ್ಡ್ ಅವರು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೌದು ಹೇಡನ್ ವೈಲ್ಡ್ ಅವರನ್ನು ದೂರ ಮಾಡಿಕೊಂಡಿದ್ದ ಆತನ ಬಾಲ್ಯದ ಗೆಳತಿ ಈಗ ಪಶ್ಚಾತ್ತಾಪ ಪಡುತ್ತಿದ್ದಾಳೆ.


  ಹೇಡನ್ ವೈಲ್ಡ್ ಟೋಕಿಯೋ 2020 ಒಲಿಂಪಿಕ್ಸ್‍ನಲ್ಲಿ ಜಯಗಳಿಸಿದ ನಂತರ ಕೆಲವು ಅಭಿಮಾನಿಗಳನ್ನು ಸಂದರ್ಶಿಸಲು ಕಿವಿ ಬ್ರಾಡ್‍ಕಾಸ್ಟರ್ 1 ನ್ಯೂಸ್ ನ್ಯೂಜಿಲೆಂಡ್‍ನ ಬೇ ಆಫ್ ಪ್ಲೆಂಟಿ ಪ್ರದೇಶದ ಹೇಡನ್ ಅವರ ತವರೂರು ವಾಕಾಟೀನ್ ಸುತ್ತಲಿನ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಆ ಸಮಯದಲ್ಲಿ ಅವರು ತಮ್ಮ ಮಾಜಿ ಗೆಳತಿಯಿಂದ ಸಂದೇಶವನ್ನು ಪಡೆದರು.


  ಒಮ್ಮೆ ಹೇಡನ್ ಜೊತೆ ಡೇಟಿಂಗ್ ಮಾಡಿದ್ದ ಈ ಮಹಿಳೆ ತಾವು ದೂರವಾಗಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಲು ಹಿಂಜರಿಯಲಿಲ್ಲ.


  ನಾನು ಮತ್ತು ಅವನು ಇಬ್ಬರು ಒಟ್ಟಿಗೆ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೇವು. ಅವನು ತುಂಬಾ ಎತ್ತರಕ್ಕೆ ತಲುಪಿದ್ದಾನೆ. ನನಗೆ ಅವನ ಬಗ್ಗೆ ನಿಜವಾಗಿಯೂ ಹೆಮ್ಮೆ ಇದೆ ಎಂದು ಹೇಳಿದರು. ಆಗ ನೀವು ನೇರವಾಗಿ ವಿಜೇತ ಹೇಡನ್ ಗೆ ಈ ಸಂದರ್ಭದಲ್ಲಿ ಏನು ಹೇಳಲು ಇಷ್ಟಪಡುತ್ತೀರಾ ಎಂದು ಕೇಳಿದರು. ಆಗ ಆಕೆ, ನನ್ನ ನಿನ್ನ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದಳು. ಅಲ್ಲೇ ಸುತ್ತಲಿದ್ದ ಸ್ನೇಹಿತರು ಆಕೆಯನ್ನು ಛೇಡಿಸಲು ಶುರು ಮಾಡಿದಾಗ, ಇಲ್ಲ ನಾನು ಆತನ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಮಾತು ಬದಲಾಯಿಸಿದಳು.


  ಇದನ್ನೂ ಓದಿ: ಏಳು ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಅಪರಾಧ ಪ್ರಕರಣಗಳೆಷ್ಟು?ಪೊಲೀಸರು ಭೇದಿಸಿದೆಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ?

  ಹೇಡನ್ ಪ್ರಸ್ತುತ ಸ್ಪೇನ್‍ನ ಮತ್ತೊಬ್ಬ ಯುವತಿಯನ್ನು ಪ್ರೇಮಿಸುತ್ತಿರುವ ಕಾರಣ ತನ್ನ ಶಾಲಾ ಅವಧಿಯ ಪ್ರಿಯತಮೆಯೊಂದಿಗೆ ಮತ್ತೆ ಒಂದಾಗುವ ಸಾಧ್ಯತೆಗಳು ತುಂಬಾ ಕಡಿಮೆಯಾಗಿದೆ ಎಂದು ಸಹ ಹೇಳಿದ್ದಾಳೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: