• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಇಂಟರ್ವ್ಯೂವ್‌ ಪ್ಯಾನೆಲ್‌ನಲ್ಲಿ ಎಕ್ಸ್‌ಬಾಯ್‌ಫ್ರೆಂಡ್‌: US ಮಹಿಳೆಯ ಸ್ಟೋರಿ ಟಿಕ್‌ಟಾಕ್‌ನಲ್ಲಿ ವೈರಲ್

Viral News: ಇಂಟರ್ವ್ಯೂವ್‌ ಪ್ಯಾನೆಲ್‌ನಲ್ಲಿ ಎಕ್ಸ್‌ಬಾಯ್‌ಫ್ರೆಂಡ್‌: US ಮಹಿಳೆಯ ಸ್ಟೋರಿ ಟಿಕ್‌ಟಾಕ್‌ನಲ್ಲಿ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸುಮಾರು ಜನಕ್ಕೆ ಇದನ್ನು ಓದುತ್ತಿದ್ದಂತೆ ರೈಲಿ ಜೌಯೆಟ್ ಮಹಿಳೆಯ ನೇಮಕಾತಿ ಬಗ್ಗೆ ಸಂದೇಹ ಬಂದಿರುತ್ತದೆ. ಈ ಘಟನೆ ರೈಲಿಗೂ ಶಾಕಿಂಗ್‌ ಆಗಿತ್ತು ಮತ್ತು ಕೆಲಸ ಸಿಗುವುದರ ಬಗ್ಗೆಯೂ ಅನುಮಾನ ಹೆಚ್ಚಿತ್ತು. ಈ ಎಲ್ಲಾ ಘಟನೆಯನ್ನು ರೈಲಿ ಟಿಕ್‌ ಟಾಕ್‌ನಲ್ಲಿ ಹಂಚಿಕೊಂಡಿದ್ದಾಳೆ.

  • Share this:
  • published by :

ಭೂಮಿ (Earth) ದುಂಡಾಗಿದೆ, ಹೀಗೆ ಯಾರೇ ಎಲ್ಲೇ ಹೋದರೂ ಒಂದು ಸುತ್ತು ಅಲ್ಲಿಗೆ ಬಂದು ನಿಲ್ಲಬೇಕು. ಕೆಲವು ಸಂದರ್ಭದಲ್ಲಿ (Situation) ಇವರ ಮುಖನೇ ನೋಡಬಾರದು, ಇವರು ಕಾಣಿಸಿಕೊಳ್ಳೋದೇ ಬೇಡ ಅಂತಾ ಅಂದುಕೊಂಡಿರುತ್ತೇವೆ. ಆದರೆ ಏನು ಮಾಡೋದು ಒಮ್ಮೊಮ್ಮೆ ಅವರು ನಮ್ಮ ಎದುರಿಗೆ ಬಂದು ಬಿಡುತ್ತಾರೆ. ಹಲವು ಪ್ರಕರಣಗಳಲ್ಲಿ ಯಾವತ್ತೋ ಭೇಟಿಯಾದವರು ಎಷ್ಟೋ ವರ್ಷಗಳ (Year) ಬಳಿಕ ಮತ್ತೆ ಸಿಗೋದು, ಎಲ್ಲೋ ಸಿಕ್ಕವರು ಊಹೆಗೂ ನಿಲುಕದ ರೀತಿ ಇನ್ನೆಲ್ಲೋ ಸಿಗೋದು ಹೀಗೆಲ್ಲಾ ಆಗುತ್ತಿರುತ್ತದೆ.


ಇದನ್ನ ಕಾಕತಾಳೀಯ ಅಂತಾನೂ ಕರೆಯಲಾಗುತ್ತದೆ. ಅವರ ಜೊತೆಯ ಒಳ್ಳೆಯ ಒಡನಾಟ ಇದ್ದು ಹಲವು ವರ್ಷಗಳ ಬಳಿಕೆ ಸಿಕ್ಕರೆ ಖುಷಿಯಾಗುತ್ತದೆ. ಅದೇ ವೈಮನಸ್ಸಿದ್ದರೆ ಯಾಕಪ್ಪಾ ಇವರು ಸಿಕ್ಕರು ಅಂತಾ ಮನಸ್ಸಲ್ಲೇ ಬೈದುಕೊಳ್ಳುತ್ತೇವೆ.


ಸಂದರ್ಶನದಲ್ಲಿ ಸಿಕ್ಕ ಹಳೇ ಬಾಯ್‌ಫ್ರೆಂಡ್


ಇಲ್ಲೊಬ್ಬ ಮಹಿಳೆಯದ್ದೂ ಇದೇ ಕಥೆ. ಆರು ವರ್ಷಗಳ ಹಿಂದೆ ಡೇಟಿಂಗ್‌ ಮಾಡಿದ ಹುಡುಗ ಮತ್ತೆ ಆಕೆಯ ಕಣ್ಣ ಮುಂದೆ ಬಂದಿದ್ದಾನೆ. ಅದು ಎಲ್ಲಿ ಅಂತೀರಾ ಒಂದು ಕಂಪನಿಯ ಸಂದರ್ಶನದಲ್ಲಿ.


ಟೆಕ್ಸಾಸ್‌ನ ರೈಲಿ ಜೌಯೆಟ್ ಎಂಬ ಮಹಿಳೆ ಕೆಲಸಕ್ಕಾಗಿ ತುಂಬಾನೇ ಹುಡುಕಾಟ ನಡೆಸುತ್ತಿರುತ್ತಾರೆ. ಹಲವು ಕಡೆ ಸಂದರ್ಶನ‌ ಕೂಡ ನೀಡಿರುತ್ತಾರೆ. ರೈಲಿಗೆ ಕೆಲಸ ತುಂಬಾ ಅಗತ್ಯವಾಗಿರುತ್ತದೆ. ಹೀಗಾಗಿ ಹಲವು ಕಡೆ ಸಂದರ್ಶನ ನೀಡುತ್ತಿರುತ್ತಾರೆ.


ಹೀಗೆ ಸಂದರ್ಶನಕ್ಕೆ ಅಂತಾ ಒಂದು ಕಂಪನಿಗೆ ಹೋದರೆ ಎಲ್ಲಿ ಆಕೆಯ ಎಕ್ಸ್‌ ಬಾಯ್‌ಫ್ರೆಂಡ್‌ ಸಿಕ್ಕಿದ್ದಾನೆ. ನೀವೆಲ್ಲಾ ಆತನೂ ಸಹ ರೈಲಿ ಅಂತೇ ಸಂದರ್ಶನಕ್ಕೆ ಬಂದವನು ಎಂದು ಕೊಂಡಿರ್ತೀರಾ. ಇಲ್ಲೇ ನೋಡಿ ಟ್ವಿಸ್ಟ್‌ ಇರೋದು. ಆತ ಬಂದಿದ್ದು ಸಂದರ್ಶನಕ್ಕಲ್ಲ, ಬದಲಿಗೆ ಸಂದರ್ಶನ ನಡೆಸಲು.


ಇದನ್ನೂ ಓದಿ: Shocking News: ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ, ಇಲ್ಲಿ ಬಾಡಿಗೆಗೆ ಹೆಂಡ್ತಿ-ಗರ್ಲ್​ಫ್ರೆಂಡ್​​ ಕೂಡ ಸಿಗ್ತಾರೆ!


ಸಂದರ್ಶನದ ಪ್ಯಾನೆಲ್‌ನಲ್ಲಿ ಎಕ್ಸ್‌ಬಾಯ್‌ಫ್ರೆಂಡ್


ಸುಮಾರು ಜನಕ್ಕೆ ಇದನ್ನು ಓದುತ್ತಿದ್ದಂತೆ ರೈಲಿ ಜೌಯೆಟ್ ಮಹಿಳೆಯ ನೇಮಕಾತಿ ಬಗ್ಗೆ ಸಂದೇಹ ಬಂದಿರುತ್ತದೆ. ಈ ಘಟನೆ ರೈಲಿಗೂ ಶಾಕಿಂಗ್‌ ಆಗಿತ್ತು ಮತ್ತು ಕೆಲಸ ಸಿಗುವುದರ ಬಗ್ಗೆಯೂ ಅನುಮಾನ ಹೆಚ್ಚಿತ್ತು. ಈ ಎಲ್ಲಾ ಘಟನೆಯನ್ನು ರೈಲಿ ಟಿಕ್‌ ಟಾಕ್‌ನಲ್ಲಿ ಹಂಚಿಕೊಂಡಿದ್ದಾಳೆ. ಕರ್ಮ ಪುನಃ ತಮಗೆ ತಿರುಮಂತ್ರ ಆಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ಅಗತ್ಯವಾಗಿ ಬೇಕಿದ್ದ ಕೆಲಸದ ಸಂದರ್ಶನದಲ್ಲಿ ಆರು ವರ್ಷಗಳ ಹಿಂದೆ ಡೇಟಿಂಗ್‌ ನಡೆಸಿದವನೇ ತನ್ನ ಸಂದರ್ಶನದ ಪ್ಯಾನೆಲ್‌ನಲ್ಲಿ ಅಧಿಕಾರಿಯಾಗಿದ್ದನು ಎಂದು ಹೇಳಿಕೊಂಡಿದ್ದಾರೆ.


ರೈಲಿ, 19 ವರ್ಷದವನಾಗಿದ್ದಾಗ ಆತನ ಜೊತೆ ಡೇಟಿಂಗ್‌ ಮಾಡಿದ್ದಳು. ಆತನಿಗೆ ರೈಲಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು, ಆದರೆ ರೈಲಿಯೇ ಅದ್ಯಾಕೋ ಆತನ ಜೊತೆ ಸಂಬಂಧವನ್ನು ಮುರಿದುಕೊಂಡಿದ್ದಳು. ರೈಲಿಯ ಈ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ನೆಟ್ಟಿಗರು ಕರುಣೆ ತೋರಿದ್ದು, ಕೆಲಸ ಸಿಕ್ಕಿತಾ ಇಲ್ವಾ? ತಿಳಿಸಿ ಅಂತ ಕಾಮೆಂಟ್‌ ಮಾಡಿದ್ದಾರೆ. ಕೆಲಸಕ್ಕೆ ಹೋದ ಮತ್ತು ನಂತರ ನಡೆದ ಎಲ್ಲಾ ಘಟನೆಗಳನ್ನು ರೈಲಿ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ.
ರೈಲಿಗೆ ಕೆಲಸ ನೀಡಿದನಾ ಹಳೇ ಪ್ರೇಮಿ?


ರೈಲಿ ಜೌಯೆಟ್‌ ಸಂದರ್ಶನಕ್ಕೆ ಕೊಠಡಿ ಒಳಗೆ ಹೋದಾಗ ಆತನನ್ನು ನೋಡಿ ಆಶ್ಚರ್ಯ ಪಟ್ಟಳು ಮತ್ತು ಅದೇ ಕ್ಷಣದಲ್ಲಿ ಕೆಲಸದ ಮೇಲೆ ಆಸೆಯನ್ನೇ ಬಿಟ್ಟಳು. ಖಂಡಿತ ಈತ ನನಗೆ ಕೆಲಸ ನೀಡುವುದಿಲ್ಲ ಎಂದು ನಿರ್ಧರಿಸಿಕೊಳ್ಳುತ್ತಾಳೆ. ಆದರೆ ಪಾಪ ಆತ ಮನಸ್ಸಿನಲ್ಲಿ ಯಾವುದೇ ಕೋಪ ಇಟ್ಟುಕೊಳ್ಳೋದೆ ರೈಲಿಗೆ ಕೆಲಸ ನೀಡಿದ್ದಾನೆ. ಈ ಬಗ್ಗೆ ರೈಲಿ ಮತ್ತೊಂದು ಟಿಕ್‌ ಟಾಕ್‌ ವಿಡಿಯೋದಲ್ಲಿ ಹಂಚಿಕೊಂಡಿದ್ದಾಳೆ.


ರೈಲಿ ಜೌಯೆಟ್‌ ಸಂದರ್ಶನದ ಸ್ಟೋರಿ ಈಗ ವೈರಲ್‌ ಆಗಿದ್ದು, ಟಿಕ್‌ಟಾಕ್‌ನಲ್ಲಿ 9 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಎಕ್ಸ್‌ ಬಾಯ್‌ಫ್ರೆಂಡ್‌ ಕೆಲಸ ಏನೋ ಕೊಟ್ಟ ಆದರೆ ರೈಲಿ ಬೇಡಿಕೆ ಇಟ್ಟ ಸಂಬಳ ಮಾತ್ರ ಕೊಡದೇ ಕೇವಲ ಆಕೆ ಹೇಳಿದ ಅರ್ಧದಷ್ಟು ವೇತನ ನೀಡಿದ್ದಾನೆ. ಹೀಗಾಗಿ ರೈಲಿ ಆ ಕೆಲಸ ಒಪ್ಪಿಕೊಳ್ಳದೇ ಬೇರೆ ಉತ್ತಮ ವೇತನದ ಕೆಲಸಕ್ಕೆ ಹೋಗಿದ್ದಾಳೆ.

First published: