• Home
  • »
  • News
  • »
  • trend
  • »
  • Donkey Ride: ಈ ಹಳ್ಳಿಯಲ್ಲಿ ಹೋಳಿ ಹಬ್ಬಕ್ಕೆ ಹೊಸ ಅಳಿಯನಿಗೆ ಕತ್ತೆ ಸವಾರಿ ತಪ್ಪಿದ್ದಲ್ಲ..!

Donkey Ride: ಈ ಹಳ್ಳಿಯಲ್ಲಿ ಹೋಳಿ ಹಬ್ಬಕ್ಕೆ ಹೊಸ ಅಳಿಯನಿಗೆ ಕತ್ತೆ ಸವಾರಿ ತಪ್ಪಿದ್ದಲ್ಲ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರದ ಹಳ್ಳಿವೊಂದರಲ್ಲಿ ಒಂದಲ್ಲ, ಎರಡಲ್ಲ ಸುಮಾರು 90 ವರ್ಷಗಳಿಂದ ಒಂದು ವಿಚಿತ್ರವಾದ ಪದ್ದತಿಯನ್ನು ನಡೆಸಿ ಕೊಂಡು ಬಂದಿದ್ದಾರೆ. ಹೊಸದಾಗಿ ಮನೆಗೆ ಬರುವ ಅಳಿಯನನ್ನು ಹೆಂಡತಿಯ ತವರು ಮನೆಯವರು ಕತ್ತೆಯ ಸವಾರಿ ಮಾಡಿಸಿದ ನಂತರವೇ ಮನೆಗೆ ಬರಮಾಡಿ ಕೊಳ್ಳುತ್ತಾರೆ.

  • Share this:

ಸಾಮಾನ್ಯವಾಗಿ ತಮ್ಮ ಮಗಳು ಮದುವೆಯಾಗಿ ಹೋಳಿ (Holi) ಹಬ್ಬಕ್ಕೆ ತನ್ನ ಗಂಡನ ಜೊತೆಗೆ ಮೊದಲ ಬಾರಿಗೆ ತನ್ನ ತವರು ಮನೆಗೆ (House) ಬರುತ್ತಿದ್ದರೆ, ಹೆಂಡತಿಯ ತವರು ಮನೆಯವರು ತಮ್ಮ ಮಗಳ ಗಂಡನಿಗಾಗಿ ಎಂದರೆ ಅಳಿಯನಿಗಾಗಿ ವಿಭಿನ್ನ ರೀತಿಯಲ್ಲಿ ಆದರದ ಸ್ವಾಗತ (Wel-come) ಕೋರಿ, ಒಳ್ಳೆ ಅಡುಗೆ ಮಾಡಿ ಅವರಿಗೆ ಹೊಟ್ಟೆ ತುಂಬಾ ಬಡಿಸಿ ನಂತರ ಅವರು ಹೊರಡುವಾಗ ಅವರಿಗೆ ಒಳ್ಳೆಯ ಬಟ್ಟೆ ನೀಡುವುದನ್ನು ನಾವು ನೋಡಿರುತ್ತೇವೆ. ಆದರೆ ಮಹಾರಾಷ್ಟ್ರದ ಹಳ್ಳಿವೊಂದರಲ್ಲಿ ಒಂದಲ್ಲ, ಎರಡಲ್ಲ ಸುಮಾರು 90 ವರ್ಷಗಳಿಂದ ಒಂದು ವಿಚಿತ್ರವಾದ ಪದ್ದತಿಯನ್ನು ನಡೆಸಿ ಕೊಂಡು ಬಂದಿದ್ದಾರೆ. ಹೊಸದಾಗಿ ಮನೆಗೆ ಬರುವ ಅಳಿಯನನ್ನು ಹೆಂಡತಿಯ ತವರು ಮನೆಯವರು ಕತ್ತೆಯ (Donkey) ಸವಾರಿ ಮಾಡಿಸಿದ ನಂತರವೇ ಮನೆಗೆ ಬರಮಾಡಿ ಕೊಳ್ಳುತ್ತಾರೆ.


ಅಳಿಯನಿಗೆ ಕತ್ತೆ ಸವಾರಿ:


ಏನಪ್ಪಾ ಇದು ಹೊಸ ಅಳಿಯನಿಗೆ ಕುದುರೆ ಸವಾರಿ ಮಾಡಿಸುವುದನ್ನು ನಾವು ಕೇಳಿದ್ದೇವೆ, ಆದರೆ ಕತ್ತೆ ಸವಾರಿ ಮಾಡಿಸಿದ್ದನ್ನು ನಾವು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇವೆ ಎಂದು ಆಶ್ಚರ್ಯಚಕಿತರಾಗಬಹುದು. ಆದರೆ ಇದು ನಿಜವಾದ ಸುದ್ದಿ, ಮಹಾರಾಷ್ಟ್ರದ ಬೀಡ್ ಹಳ್ಳಿಯಲ್ಲಿ ತುಂಬಾ ವರ್ಷಗಳಿಂದ ಈ ಪದ್ದತಿ ನಡೆದುಕೊಂಡು ಬಂದಿದೆಯಂತೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ ಈ ಕತ್ತೆ ಸವಾರಿ ಆದ ನಂತರ ಅಳಿಯನಿಗೆ ಅವನಿಗೆ ಇಷ್ಟವಿರುವ ಬಟ್ಟೆಯನ್ನು ಉಡುಗೊರೆಯಾಗಿ ನೀಡುತ್ತಾರಂತೆ. ಈ ಪದ್ದತಿ ಬೀಡ್ ನ ಹತ್ತಿರವಿರುವ ವಿಡಾ ಹಳ್ಳಿಯಲ್ಲಿ ಜಾರಿಯಲ್ಲಿದೆ.


ಇದಕ್ಕಾಗಿ ಹಳ್ಳಿಯವರು ಊರಿನಲ್ಲಿ ಯಾರು ಹೊಸದಾಗಿ ಮದುವೆಯಾಗಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಂಡು ಹೋಳಿ ಹಬ್ಬಕ್ಕೂ ನಾಲ್ಕೈದು ದಿನಗಳ ಮುಂಚಿತವಾಗಿಯೇ ಅಳಿಯನ ಮೇಲೆ ನಿಗಾ ಇಡುತ್ತಾರೆ. ಹೊಸ ಅಳಿಯನು ಹೋಳಿ ಹಬ್ಬದಂದು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುತ್ತಾರೆ. ಈ ವಿಚಿತ್ರ ಪದ್ದತಿಯು ಹಳ್ಳಿಯಲ್ಲಿ ಆನಂದ್ ರಾವ್ ದೇಶಮುಖ್ ಅವರ ಹೊಸದಾಗಿ ಬಂದ ಅಳಿಯನಿಗೆ ಮೊದಲು ಕತ್ತೆ ಸವಾರಿ ಮಾಡಿಸುವುದರ ಮೂಲಕ ಶುರು ಮಾಡಿದ್ದು, ಇನ್ನೂವರೆಗೂ ಈ ಪದ್ದತಿ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು


ಕತ್ತೆ ಸವಾರಿಯೂ ಒಂದು ಸಂಪ್ರದಾಯ:


ಈ ಕತ್ತೆ ಸವಾರಿ ಯಾವಾಗಲೂ ಹೋಳಿ ಹಬ್ಬದಂದು ಹಳ್ಳಿಯ ಮಧ್ಯಭಾಗದಿಂದ ಶುರುವಾಗಿ ಹನುಮಾನ ದೇವಸ್ಥಾನದ ಹತ್ತಿರ ಮುಂಜಾನೆ 11 ಗಂಟೆ ಅಷ್ಟೊತ್ತಿಗೆ ಕೊನೆಗೊಳ್ಳುತ್ತದೆ. ಈ ಸವಾರಿ ಆದ ನಂತರ ಅಳಿಯನು ಇಷ್ಟ ಪಡುವಂತಹ ಬಟ್ಟೆಗಳನ್ನು ಅವರಿಗೆ ನೀಡಿ ಮಾವನಾದವನು ಅಳಿಯನಿಗೆ ಒಂದು ಬಂಗಾರದ ಉಂಗುರವನ್ನು ಸಹ ನೀಡಬೇಕಾಗುತ್ತದೆ. ಈ ಹಳ್ಳಿಯಲ್ಲಿ ಹೊಸ ಅಳಿಯಂದಿರಿಗೆ ಕತ್ತೆ ಸವಾರಿ ಮಾಡಿಸುವುದು ಯಾವುದೇ ಮುಜುಗರದ ಅಥವಾ ಅವಮಾನ ಎಂದು ತಿಳಿದುಕೊಳ್ಳುವುದಿಲ್ಲ. ಬದಲಾಗಿ ಇದನ್ನು ಒಂದು ಸಂಪ್ರದಾಯದಂತೆ ನಡೆಸುತ್ತಾರೆ ಮತ್ತು ಇದನ್ನು ನೋಡಲು ಪ್ರತಿ ಹೋಳಿ ಹಬ್ಬಕ್ಕೆ ಅಕ್ಕ ಪಕ್ಕದ ಹಳ್ಳಿಯ ಜನರು ಸಹ ಬರುತ್ತಾರೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: ಪ್ರಪಂಚದ ವಿವಿಧ ದೇಶಗಳಲ್ಲಿ ಹೋಳಿ ಆಚರಣೆ


ಹೋಳಿ ಹಬ್ಬದ ಪ್ರಯುಕ್ತ ದಹನ ಕಾರ್ಯಕ್ರಮ:


ಇದಷ್ಟೇ ಅಲ್ಲದೆ ಹೋಳಿ ಹಬ್ಬದ ಪ್ರಯುಕ್ತ ದಹನ ಕಾರ್ಯಕ್ರಮವನ್ನು ಈ ವರ್ಷ ಮಾರ್ಚ್ 17 ರಂದು ನೆರವೇರಿಸಲಾಗುವುದು ಎಂದು ಹೇಳಲಾಗುತ್ತಿದೆ. ಹೋಳಿ ಹಬ್ಬವನ್ನು ಮಾರ್ಚ್ 18 ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಹೋಳಿ ಹಬ್ಬದ ದಿನದಂದು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವಿವಿಧ ರೀತಿಯ ಹೋಳಿ ಎಂದರೆ ಮಥುರಾದಲ್ಲಿ ಲಾತ್‌ಮಾರ್ ಹೋಳಿ, ವೃಂದಾವನದಲ್ಲಿ ಫುಲೋ ಕಿ ಹೋಳಿ, ಮಹಾರಾಷ್ಟ್ರದಲ್ಲಿ ರಂಗಪಂಚಮಿ, ಪಂಜಾಬ್ ನಲ್ಲಿ ಹೋಲಾ ಮಹೋಲ್ಲಾ, ಫಾಲ್ಗುಣ್ ಪೂರ್ಣಿಮಾವನ್ನು ಬಿಹಾರದಲ್ಲಿ ಆಚರಿಸಲಾಗುತ್ತದೆ. ಕಾಮನ್ ಪಂಡಿಗೈ ತಮಿಳುನಾಡಿನಲ್ಲಿ, ಮಂಜುಲ್ ಕುಲೀ ಕೇರಳದಲ್ಲಿ, ಶಿಗ್ಮೋ ಗೋವಾದಲ್ಲಿ ಮತ್ತು ಮಣಿಪುರದಲ್ಲಿ ಯೋಸಾಂಗ್ ಅನ್ನು ತುಂಬಾನೇ ಸಡಗರದಿಂದ ಆಚರಿಸುತ್ತಾರೆ.

Published by:shrikrishna bhat
First published: