• Home
  • »
  • News
  • »
  • trend
  • »
  • Nigeria: ಅವಳಿ ಮಕ್ಕಳ ಜನನಕ್ಕೆ ಪ್ರಸಿದ್ಧಿ ಪಡೆದ ನೈಜೀರಿಯಾ, ಇಲ್ಲಿ ನಡೆಯುತ್ತೆ ವಾರ್ಷಿಕ ಹಬ್ಬ

Nigeria: ಅವಳಿ ಮಕ್ಕಳ ಜನನಕ್ಕೆ ಪ್ರಸಿದ್ಧಿ ಪಡೆದ ನೈಜೀರಿಯಾ, ಇಲ್ಲಿ ನಡೆಯುತ್ತೆ ವಾರ್ಷಿಕ ಹಬ್ಬ

ಅವಳಿ ಮಕ್ಕಳ ವಾರ್ಷಿಕ ಹಬ್ಬ

ಅವಳಿ ಮಕ್ಕಳ ವಾರ್ಷಿಕ ಹಬ್ಬ

ನೈಜೀರಿಯಾದ ಈ ಸ್ಥಳ ಮಾತ್ರ ಸ್ವಲ್ಪ ವಿಭಿನ್ನ ಹಾಗೂ ವಿಜ್ಞಾನ ಲೋಕಕ್ಕೆ ಸವಾಲಾಗಿ ನಿಂತಿದೆ. ಹೌದು ಈ ನಗರದಲ್ಲಿ ಹುಟ್ಟುವ ಮಕ್ಕಳಲ್ಲಿ ಬಹುಪಾಲು ಕೇವಲ ಅವಳಿ ಜವಳಿ ಮಕ್ಕಳು. ಹೀಗಾಗಿ ಈ ಅವಳಿ ಮಕ್ಕಳನ್ನು ಸಂಭ್ರಮಿಸಲು ವರ್ಷದಲ್ಲಿ ಒಂದು ಭಾರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. 

  • Share this:

ಜಗತ್ತಿನಲ್ಲಿ ವಿಜ್ಞಾನಕ್ಕೂ ನಿಲುಕುದ ಅನೇಕ ವಿಚಿತ್ರ ಸ್ಥಳಗಳಿವೆ. ಆದರೆ ನೈಜೀರಿಯಾದ (Nigeria) ಈ ಸ್ಥಳ ಮಾತ್ರ ಸ್ವಲ್ಪ ವಿಭಿನ್ನ ಹಾಗೂ ವಿಜ್ಞಾನ ಲೋಕಕ್ಕೆ ಸವಾಲಾಗಿ ನಿಂತಿದೆ. ಹೌದು ಈ ನಗರದಲ್ಲಿ ಹುಟ್ಟುವ ಮಕ್ಕಳಲ್ಲಿ (Children) ಬಹುಪಾಲು ಕೇವಲ ಅವಳಿ ಜವಳಿ ಮಕ್ಕಳು. ಹೀಗಾಗಿ ಈ ಅವಳಿ ಮಕ್ಕಳನ್ನು (Children) ಸಂಭ್ರಮಿಸಲು ವರ್ಷದಲ್ಲಿ ಒಂದು ಭಾರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ನೈಜೀರಿಯಾದ ನೈಋತ್ಯ ನಗರವಾದ ಇಗ್ಬೊ-ಓರಾದಲ್ಲಿ (IGBO-ORA) ಜನಿಸಿದ ಮಕ್ಕಳಲ್ಲಿ ಹೆಚ್ಚಿನವರು ಅವಳಿ ಮಕ್ಕಳು. ಕಳೆದ 12 ವರ್ಷಗಳಿಂದ, ಸಮುದಾಯವು ಅವಳಿ ಮಕ್ಕಳನ್ನು ಸಂಭ್ರಮಿಸಲು ವಾರ್ಷಿಕ ಹಬ್ಬವನ್ನು (Annual Festival) ಆಯೋಜಿಸುತ್ತದೆ. 


ಅವಳಿ ಮಕ್ಕಳನ್ನು ಸಂಭ್ರಮಿಸಲು ಕಾರ್ಯಕ್ರಮ
ಈ ತಿಂಗಳ ಆರಂಭದಲ್ಲಿ ನಡೆದ ಈ ವರ್ಷದ ಕಾರ್ಯಕ್ರಮದಲ್ಲಿ ಬರೋಬ್ಬರಿ 1,000 ಜೋಡಿ ಅವಳಿ ಮಕ್ಕಳು ಭಾಗವಹಿಸಿದ್ದರು. ಮತ್ತು ದೂರದ ಫ್ರಾನ್ಸ್‌ನಿಂದ ಕೂಡ ಹಲವು ಅವಳಿ ಮಕ್ಕಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ನೈಜೀರಿಯಾದ ವಿದ್ಯಾರ್ಥಿ ತೈವೊ ಒಜೆನಿಯಿ ಅವರು ತಮ್ಮ ಅವಳಿ ಸಹೋದರನೊಂದಿಗೆ ತನ್ನ ಅವಳಿ ಜನ್ಮವನ್ನು ಆಚರಿಸಲು ಕಾರ್ಯಕ್ರಮಕ್ಕೆ ಬಂದಿರುವುದಾಗಿ ತಿಳಿಸಿದರು.


"ಇದು ದೇವರ ಡಬಲ್ ಆಶೀರ್ವಾದ‌ ಇದ್ದಂತೆ"
"ನಾವು ನಮ್ಮ ಅವಳಿ ಸಹೋದರ, ಸಹೋದರಿಯನ್ನು ತುಂಬಾ ಪ್ರೀತಿಸುತ್ತೇವೆ. ಆದರೆ ಪ್ರಪಂಚದ ಕೆಲವು ಭಾಗಗಳಲ್ಲಿ ಅವಳಿ ಮಕ್ಕಳನ್ನು ದ್ವೇಷಿಸುತ್ತಾರೆ. ಇದು ದೇವರ ಡಬಲ್ ಆಶೀರ್ವಾದ‌ ಇದ್ದಂತೆ, ಅದನ್ನು ಜನ ಸ್ವೀಕರಿಸಬೇಕು. ಹೀಗಾಗಿ ಈ ಆಚರಣೆಯನ್ನು ನಾವು ಇಷ್ಟಪಡುವುದಾಗಿ" ಕಾರ್ಯಕ್ರಮಕ್ಕೆ ಬಂದ ಅವಳಿ ಮಕ್ಕಳು ಹೇಳಿದರು.


ಅವಳಿ ಮಕ್ಕಳ ಜನನಕ್ಕೆ ಪ್ರಸಿದ್ಧಿ ಪಡೆದ ಇಗ್ಬೊ-ಓರಾ
ನೈಜೀರಿಯಾದ ಇಗ್ಬೊ-ಓರಾ ಅವಳಿ ಮಕ್ಕಳ ಜನನದಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನೈಜೀರಿಯಾದ ಅತಿದೊಡ್ಡ ನಗರವಾದ ಲಾಗೋಸ್‌ನಿಂದ ದಕ್ಷಿಣಕ್ಕೆ 135 ಕಿಲೋಮೀಟರ್ ಇರುವ ಈ ಇಗ್ಬೊ-ಓರಾದಲ್ಲಿ ಕನಿಷ್ಠ 200,000 ಜನರಿದ್ದು, ಇಲ್ಲಿ ಹುಟ್ಟುವ ಮಕ್ಕಳು ಹೆಚ್ಚಿನವು ಅವಳಿಗಳು.


ಇದನ್ನೂ ಓದಿ:Love Story: 10 ವರ್ಷಗಳ ಬಳಿಕ ಮತ್ತೆ ಒಂದಾದ ಜೋಡಿ! ಇವರ ಲವ್‌ ಸ್ಟೋರಿ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ!  


ಮಹಿಳೆಯರ ಆಹಾರವೇ ಕಾರಣ ಎನ್ನುತ್ತವೆ ಸಂಶೋಧನೆ
ಈ ವಿಜ್ಞಾನ ವೈಚಿತ್ರಕ್ಕೆ ಇನ್ನೂ ಸಾಬೀತಾದ ವೈಜ್ಞಾನಿಕ ಕಾರಣಗಳು ತಿಳಿದು ಬಂದಿಲ್ಲವಾದರೂ, ಆದರೆ ಇಗ್ಬೊ-ಓರಾದಲ್ಲಿ ಅನೇಕರು ಇದನ್ನು ಮಹಿಳೆಯರ ಆಹಾರಕ್ರಮದಲ್ಲಿ ಕಂಡುಹಿಡಿಯಬಹುದು ಎಂದು ನಂಬಿದ್ದಾರೆ. ಜನನಗಳು ಆನುವಂಶಿಕತೆಯ ಕಾರಣದಿಂದಾಗಿರಬಹುದು ಎಂಬ ಊಹಾಪೋಹಗಳಿದ್ದರೂ, ಬಹು ಜನನಗಳು ಪ್ರದೇಶದ ಮಹಿಳೆಯರ ಆಹಾರ ಪದ್ಧತಿಗೆ ಸಂಬಂಧಿಸಿರಬಹುದು ಎಂದು ಸಂಶೋಧನೆ ಸೂಚಿಸಿದೆ.


ಯೊರುಬಾದ ಆಹಾರದಲ್ಲಿ ಮರಗೆಣಸು ಸಾಕಷ್ಟು ಜನಪ್ರಿಯವಾಗಿದ್ದು, ಇದನ್ನು ಅಮಲಾ, ಗಾರಿ, ಫುಫು, ಇತ್ಯಾದಿ ಹಲವು ರೂಪಗಳಲ್ಲಿ ಸೇವಿಸುತ್ತಾರೆ. ಈ ಆಹಾರ ಅವಳಿ ಮಕ್ಕಳ ಉತ್ಪತ್ತಿಗೆ ಕಾರಣವಾಗಿದೆ ಎನ್ನಲಾಗಿದೆ. 2001 ರ ಬಿಬಿಸಿ ಸಂದರ್ಶನದ ಪ್ರಕಾರ ಸ್ತ್ರೀರೋಗತಜ್ಞೆಯೊಬ್ಬರು "ಈ ಪದಾರ್ಥಗಳು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಮೊಟ್ಟೆಗಳ ಬಿಡುಗಡೆಗೆ ಸಂಬಂಧಿಸಿವೆ. ಇದು ಅವಳಿ ಜನನಕ್ಕೆ ಕಾರಣವಾಗಬಹುದು ಎಂದಿದ್ದಾರೆ.


ಇದನ್ನೂ ಓದಿ:  Ummul Kher: 8 ಶಸ್ತ್ರಚಿಕಿತ್ಸೆಯ ನಂತರ ಸಹ IAS ಪಾಸ್​ ಮಾಡಿದ ಉಮ್ಮುಲ್ ಖೇರ್, ಇವರ ಕಥೆ ನಿಜಕ್ಕೂ ಸ್ಫೂರ್ತಿ


ಜಾನ್ ಒಫೆಮ್, ರಾಜಧಾನಿ ಅಬುಜಾ ಮೂಲದ ಸ್ತ್ರೀರೋಗತಜ್ಞ, ಹೇಳುವ ಪ್ರಕಾರ "ಅವರು ತಿನ್ನುವ ಪದಾರ್ಥಗಳು ಹೆಚ್ಚಿನ ಮಟ್ಟದ ಕೆಲವು ಹಾರ್ಮೋನುಗಳನ್ನು ಹೊಂದಿರುತ್ತವೆ, ಅದನ್ನು ನಾವು ಬಹು ಅಂಡೋತ್ಪತ್ತಿ ಎಂದು ಕರೆಯುತ್ತೇವೆ" ಎಂದು ಹೇಳುತ್ತಾರೆ. ಇದು ಇಗ್ಬೊ-ಓರಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಸೋದರಸಂಬಂಧಿ ಅವಳಿಗಳನ್ನು ವಿವರಿಸಬಹುದಾದರೂ, ನಗರವು ಗಮನಾರ್ಹ ಸಂಖ್ಯೆಯ ಒಂದೇ ರೀತಿಯ ಅವಳಿಗಳನ್ನು ಹೊಂದಿದೆ. ಅವು ಒಂದೇ ಫಲವತ್ತಾದ ಮೊಟ್ಟೆಯಿಂದ ಎರಡಾಗಿ ವಿಭಜಿಸುವುದರಿಂದ ಉಂಟಾಗುತ್ತವೆ ಎನ್ನುತ್ತದೆ ವೈದ್ಯ ಲೋಕ.


ಭಾರತದಲ್ಲೂ ಇದೆ ಇಂತದ್ದೇ ಸ್ಥಳ
ಭಾರತದಲ್ಲೂ ಇದೇ ರೀತಿಯ ಸ್ಥಳವೊಂದಿದೆ. ಹೌದು, ಕೇರಳದ ಮಲಪ್ಪುರಂ ಜಿಲ್ಲೆಯ ಕೊಡಿನ್ಹಿ ಗ್ರಾಮದಲ್ಲಿ ಜನಿಸಿದ ಮಕ್ಕಳಲ್ಲಿ ಹೆಚ್ಚಿನವರು ಅವಳಿ ಮಕ್ಕಳು. ಪ್ರಪಂಚದಾದ್ಯಂತ 1000 ಮಕ್ಕಳಲ್ಲಿ ಕೇವಲ 4 ಮಾತ್ರ ಅವಳಿ ಅಲ್ಲದ ಮಕ್ಕಳು ಜನಿಸುತ್ತವೆ. ನೈಜೀರಿಯಾದ ಇಗ್ಬೊ-ಓರಾ ವಿಶ್ವದ ಪ್ರಥಮ ಸ್ಥಾನದಲ್ಲಿದ್ದರೆ, ಈ ಗ್ರಾಮ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಬ್ರೆಸಿಲ್‌ನ ಕ್ಯಾಂಡಿಡೋ ಗೊಡೊಯ್‌ ಸಹ ಅವಳಿ ಜನನಕ್ಕೆ ಖ್ಯಾತಿ ಪಡೆದಿದೆ.

Published by:Ashwini Prabhu
First published: