Anand Mahindra: PUC ಪ್ರಮಾಣಪತ್ರ ತೋರಿಸದ್ದಕ್ಕೆ ಮಾಲೀಕನಿಗೆ ದಂಡ! ಆನಂದ್ ಮಹಿಂದ್ರಾ ಹೇಳಿದ್ದೇನು?

ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ದಂಡ ವಿಧಿಸಿದ ಚಲನ್ ನಲ್ಲಿ ‘ಪಾಲ್ಯುಷನ್ ಅಂಡರ್ ಕಂಟ್ರೋಲ್ (PUC) ಪ್ರಮಾಣಪತ್ರ ತೋರಸಿಲ್ಲ’ ಅಂತ ದಂಡ ಹಾಕಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ. ಆಗ ಕೇರಳ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗಳನ್ನು ಎದುರಿಸಿದ್ದರು. ಆ ಘಟನೆಗೆ ಮಹೀಂದ್ರಾ ಕಂಪನಿಯ ಸಿಇಒ ಆದ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದಾರೆ ನೋಡಿ.

ಆನಂದ್ ಮಹಿಂದ್ರಾ

ಆನಂದ್ ಮಹಿಂದ್ರಾ

  • Share this:
ಮೊನ್ನೆ ಸಾಮಾಜಿಕ ಮಾಧ್ಯಮದಲ್ಲಿ ಕೇರಳ ಪೊಲೀಸ್ (Kerala Police) ತಂಡವೊಂದು ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾಲೀಕನಿಗೆ ದಂಡ ವಿಧಿಸಿದ ಚಲನ್ ನಲ್ಲಿ ‘ಪಾಲ್ಯುಷನ್ ಅಂಡರ್ ಕಂಟ್ರೋಲ್ (PUC) ಪ್ರಮಾಣಪತ್ರ ತೋರಿಸಿಲ್ಲ’ ಅಂತ ದಂಡ ಹಾಕಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ. ಆಗ ಕೇರಳ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗಳನ್ನು (Troll) ಎದುರಿಸಿದ್ದರು. ಆನಂತರ ಅಲ್ಲಿನ ಪೊಲೀಸ್ ಅಧಿಕಾರಿಗಳು ಚಲನ್ (Challan) ನೀಡುವಾಗ, ಸ್ಥಳದಲ್ಲಿದ್ದ ಅಧಿಕಾರಿ ಅವರ ಬಳಿ ಇದ್ದಂತಹ ಯಂತ್ರದಲ್ಲಿ ತಪ್ಪು ಅಪರಾಧ ಸಂಖ್ಯೆಯನ್ನು ಟೈಪ್ ಮಾಡಿದ್ದಾರೆ ಮತ್ತು ‘ಪಿಯುಸಿ ಅಪರಾಧ ಚಲನ್’ ಹೊರಬಂದಿದೆ" ಎಂದು ಅವರು ಸಮಜಾಯಿಷಿ ನೀಡಿದ್ದರು.

ವೈರಲ್ ಪೋಸ್ಟ್ ಗೆ ಆನಂದ್ ಮಹೀಂದ್ರಾ ಕಾಮೆಂಟ್ 
ಈಗ ಆ ಘಟನೆಗೆ ಮಹೀಂದ್ರಾ ಕಂಪನಿಯ ಸಿಇಒ ಆದ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದಾರೆ ನೋಡಿ. ಮಹೀಂದ್ರಾ ಅವರು ಒಬ್ಬ ಉತ್ಸಾಹಿ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದು, ತಮ್ಮ ಆಲೋಚನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ. ಮಹೀಂದ್ರಾ ಅವರು ಎಂದಿನಂತೆ ತುಂಬಾನೇ ಜಾಣ್ಮೆಯಿಂದ ಈ ವೈರಲ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ವಾಹನ ಬಿಡುಗಡೆ 
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಎದುರಿಸುವ ಸವಾಲುಗಳನ್ನು ವ್ಯಕ್ತಪಡಿಸಲು ಉದ್ಯಮಿ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡರು. ಮಹೀಂದ್ರಾ ಕಂಪನಿಯ ಎರಡು ಹೊಸ ಬ್ರ್ಯಾಂಡ್ ಗಳು ಮತ್ತು ಹಲವಾರು ಹೊಸ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ವಾಹನ ಉದ್ಯಮವನ್ನು ಪ್ರವೇಶಿಸುತ್ತಿದೆ, ಅವುಗಳಲ್ಲಿ ಮೊದಲನೆಯದು ಮಹೀಂದ್ರಾ ಎಕ್ಸ್‌ಯುವಿ 400 ಆಗಿದೆ. ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಇತ್ತೀಚೆಗೆ ಸೆಪ್ಟೆಂಬರ್ 8 ರಂದು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ ಮತ್ತು ಜನವರಿಯಲ್ಲಿ ಇದು ಬಿಡುಗಡೆಯಾಗಲಿದೆ.

ಆನಂದ್ ಮಹಿಂದ್ರಾ ಅವರ ಪ್ರತಿಕ್ರಿಯೆ ಹೀಗಿತ್ತು 
ಇತ್ತೀಚೆಗೆ, ಪಿಯುಸಿ ಪ್ರಮಾಣಪತ್ರವನ್ನು ಹೊಂದಿರದಿದ್ದಕ್ಕಾಗಿ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಿಗೆ ದಂಡ ವಿಧಿಸಿದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಆನಂದ್ ಮಹೀಂದ್ರಾ ತಮ್ಮ ಟ್ವೀಟ್ ನಲ್ಲಿ ಈ ಫೋಟೋವನ್ನು ಉಲ್ಲೇಖಿಸಿ, ಅವುಗಳನ್ನು ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ "ದೊಡ್ಡ ಸವಾಲು" ಎಂದು ಕರೆದಿದ್ದಾರೆ. ಅವರು ವ್ಯಂಗ್ಯವಾಗಿ ಹೇಳುತ್ತಾ “ಎಲೆಕ್ಟ್ರಿಕ್ ವಾಹನದ ದೊಡ್ಡ ಸವಾಲು ಎಂದರೆ ಅದನ್ನು ಚಾರ್ಜ್ ಮಾಡುವುದು ಎಂದು ನೀವು ಭಾವಿಸಿದ್ದೀರಾ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:  Kerala: ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ದಂಡ! ಕಾರಣ ಕೇಳಿದ್ರೆ ನಗೋದು ಪಕ್ಕಾ

And you thought the biggest challenge to going electric was charging infrastructure? 🙄https://t.co/o6992kvXck

ವರದಿಗಳ ಆಧಾರದ ಮೇಲೆ, ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರವಿಲ್ಲದೆ ಚಾಲನೆ ಮಾಡಿದ್ದಕ್ಕಾಗಿ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನಿಗೆ ಸಂಚಾರ ಪೊಲೀಸರಿಂದ ದಂಡ ವಿಧಿಸಲಾಗಿದೆ. ಈ ಘಟನೆ ಪ್ರಸ್ತುತ ಆನ್ಲೈನ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಆರಂಭದಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ ನ ಫೋಟೋ ಮತ್ತು ಅಧಿಕಾರಿಗಳ ಚಲನ್ ರಸೀದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗಿತ್ತು. ಚಲನ್ ನ ಫೋಟೋಗಳು ಅಂದಿನಿಂದ ಆನ್ಲೈನ್ ನಲ್ಲಿ ಹರಿದಾಡುತ್ತಿವೆ.

ಪೋಸ್ಟ್ ನೋಡಿ ಈಥರ್ ಸಿಇಒ ತರುಣ್ ಮೆಹ್ತಾ ಏನ್ ಹೇಳಿದ್ರು
ಅಥರ್ ಎಲೆಕ್ಟ್ರಿಕ್ ಸ್ಕೂಟರ್ ನ ಚಲನ್ ರಸೀದಿಯ ಫೋಟೋದ ಪ್ರಕಾರ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಬೇಡಿಕೆಯ ಮೇರೆಗೆ ಹಾಜರುಪಡಿಸಲಾಗಿಲ್ಲ. ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 213 (5) (ಇ) ಅನ್ನು ಸಹ ಇಲ್ಲಿ ತಿಳಿಸಲಾಗಿದೆ, ಇದರಡಿ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕನ ಮೇಲೆ 250 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಅಥರ್ ಸಿಇಒ ತರುಣ್ ಮೆಹ್ತಾ ಅವರು ಪೋಸ್ಟ್ ಒಂದರಲ್ಲಿ "ನಿಟ್ಟುಸಿರು ಬಿಡಿ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Viral Video: ಅಬ್ಬಾ, ಜಸ್ಟ್​ ಮಿಸ್​! ಈ ವಿಡಿಯೋ ನೋಡೋಕೂ ಡಬಲ್​ ಗುಂಡಿಗೆ ಬೇಕು ರೀ

ಈ ಘಟನೆಯು ಅದರ ವಿಲಕ್ಷಣ ಸ್ವಭಾವದಿಂದಾಗಿ ಅಂತರ್ಜಾಲದಲ್ಲಿ ವೈರಲ್ ಆಯಿತು. ಎಲೆಕ್ಟ್ರಿಕ್ ವಾಹನಗಳಿಗೆ ಮಾಲಿನ್ಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೊಗೆಯನ್ನು ಹೊರಸೂಸುವ ವಾಹನಗಳಿಗೆ ಮಾತ್ರ ಪಿಯುಸಿ ಪ್ರಮಾಣಪತ್ರದ ಅಗತ್ಯವಿದೆ. ಎಂಜಿನ್ ಗಳನ್ನು ಹೊಂದಿರುವ ಕಾರುಗಳಿಗೆ, ಈ ಪ್ರಮಾಣಪತ್ರಗಳು ತುಂಬಾನೇ ನಿರ್ಣಾಯಕವಾಗಿವೆ.
Published by:Ashwini Prabhu
First published: