ಪ್ರಯಾಣವೆಂಬುದು (Travel) ಪ್ರತಿಯೊಬ್ಬರಿಗೂ ಮುದ ನೀಡುವ ವಿಷಯವಾಗಿದೆ. ಹೊಸ ಊರುಗಳ (Places) ಸುತ್ತಾಟ ಅಲ್ಲಿನ ಆಹಾರ (Food), ಜನಜೀವನ ಹೀಗೆ ಪ್ರವಾಸವೆಂಬುದು ಜ್ಞಾನವನ್ನು ಹೆಚ್ಚಿಸುವ ವಿಷಯವಾಗಿದೆ. ಎಷ್ಟೋ ಜನರು ತಮ್ಮ ತಮ್ಮ ಉದ್ಯೋಗ ತೊರೆದು ಪ್ರಪಂಚ (World) ಪರ್ಯಟನೆಗೆ ಮುಂದಾಗುತ್ತಾರೆ. ಪ್ರವಾಸ ಮಾಡುವುದರಲ್ಲಿ ಇರುವ ಖುಷಿ ಅದು ನೀಡುವ ನೆಮ್ಮದಿ ಬೇರೆಲ್ಲೂ ಇರುವುದಿಲ್ಲ ಎಂಬುದು ಪ್ರವಾಸಿಗರ ಮಾತಾಗಿದೆ.
ಯುಎಸ್‌ನಿಂದ ಜಲಂಧರ್‌ಗೆ ಪ್ರವಾಸ ನಡೆಸಿದ ಲಖ್‌ವಿಂದರ್
ಇನ್ನು ಕೆಲವರು ಪ್ರವಾಸ ನಡೆಸುವುದಕ್ಕಾಗಿಯೇ ಹಣ ಸೇವಿಂಗ್ ಮಾಡುತ್ತಾರೆ, ಅಂತೆಯೇ ವರ್ಷಕ್ಕೊಂದು ಸ್ಥಳ ಎಂಬಂತೆ ಆರಿಸಿಕೊಂಡು ಪ್ರವಾಸ ನಡೆಸುತ್ತಿರುತ್ತಾರೆ.
ಆದರೆ ಯುಎಸ್‌ನಿಂದ ಜಲಂಧರ್‌ಗೆ ರಸ್ತೆ ಪ್ರಯಾಣ ಮಾಡುವುದು ಎಂದರೆ ಅದು ಮೋಜಿನೊಂದಿಗೆ ಸವಾಲಿನ ವಿಷಯವೂ ಆಗಿರುತ್ತದೆ. 53 ರ ಹರೆಯದ ಲಖ್‌ವಿಂದರ್ ಸಿಂಗ್ ಈ ಅತಿದೀರ್ಘ ಪ್ರಯಾಣವನ್ನು ಒಂದು ಸಾಹಸದಂತೆ ಕಂಡಿದ್ದು ಮೋಜಿನೊಂದಿಗೆ ಕೂಡಿದ ಸಾಹಸ ಪ್ರಯಾಣವಾಗಿದೆ ಎಂದು ಬಣ್ಣಿಸಿದ್ದಾರೆ.
ಲಖ್‌ವಿಂದರ್ ಪ್ರವಾಸ ಹೇಗಿತ್ತು?
ಜಲಂಧರ್ ತಮ್ಮ ಟೊಯೊಟಾ ಟಕೋಮಾ ಪಿಕಪ್ ಟ್ರಕ್‌ನಲ್ಲಿ ಸ್ಟೇಟ್ಸ್‌ನಿಂದ ಭಾರತಕ್ಕೆ ಮರೆಯಲಾಗದ ಪ್ರಯಾಣವನ್ನು ಆರಂಭಿಸಿದ್ದಾರೆ. ಸಾಹಸಮಯ ಪ್ರಯಾಣದಲ್ಲಿ ಸಿಂಗ್ 22,000 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದಾರೆ ಹಾಗೂ 53 ದಿನಗಳಲ್ಲಿ 23 ದೇಶಗಳ ಸುತ್ತಾಟ ನಡೆಸಿದ್ದಾರೆ.
ಜಲಂಧರ್ ಪ್ರಯಾಣ ಅತ್ಯಂತ ಸರಳವಾದದ್ದಾಗಿರಲಿಲ್ಲ ಹಲವಾರು ಸವಾಲುಗಳನ್ನು ಸಂಕಷ್ಟಗಳನ್ನು ಲಖ್‌ವಿಂದರ್ ಎದುರಿಸಿದ್ದಾರೆ. ಪ್ರಯಾಣಕ್ಕಾಗಿ ಅಗತ್ಯವಿರುವ ಧನ ಸಹಾಯಕ್ಕಾಗಿ ಯಾವುದೇ ಧನಸಹಾಯವನ್ನು ಸ್ವೀಕರಿಸಲಿಲ್ಲ ಬದಲಿಗೆ ತಾವು ಕೂಡಿಟ್ಟ ಹಣವನ್ನು ವಿನಿಯೋಗಿಸಿ ಪ್ರವಾಸ ನಡೆಸಿದ್ದಾರೆ.
ಲಖ್‌ವಿಂದರ್ ರಸ್ತೆ ಪ್ರಯಾಣ ಹೇಗಿತ್ತು?
ಸಿಂಗ್ ಅವರು ತಮ್ಮ ಸ್ವಂತ ಹಣದಲ್ಲಿ 1 ಕೋಟಿಗೂ ಹೆಚ್ಚು ಹಣವನ್ನು ರಸ್ತೆ ಪ್ರವಾಸಕ್ಕೆ ಖರ್ಚು ಮಾಡಿದ್ದಾರೆ.
ಸಿಂಗ್ ಮೊದಲಿಗೆ ತಮ್ಮ ಕಾರನ್ನು ಯುಕೆಗೆ ರವಾನಿಸಿದರು ಅಲ್ಲಿಂದ ರಸ್ತೆಯಲ್ಲಿ ಪ್ರಯಾಣ ಆರಂಭಿಸಿದರು; ಲಂಡನ್‌ನಿಂದ ಪ್ಯಾರೀಸ್‌ಗೆ ಕಾರು ಪ್ರವಾಸ ನಡೆಸಿದರು. ತಮ್ಮ ಪ್ರಯಾಣದಲ್ಲಿ ಯುರೋಪಿಯನ್ ದೇಶಗಳಲ್ಲಿ ತಮ್ಮ ಜೀವನದ ಕೆಲವು ಅದ್ಭುತ ದೃಶ್ಯಾವಳಿಗಳನ್ನು ಸಿಂಗ್ ಆಸ್ವಾದಿಸಿದರು.
ಸಿಂಗ್ ಅವರು ಜರ್ಮನಿ, ಸರ್ಬಿಯಾ, ಟರ್ಕಿ ಮತ್ತು ಇನ್ನೂ ಅನೇಕ ದೇಶಗಳ ಮೂಲಕ ಪ್ರಯಾಣ ನಡೆಸಿದರು
ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಚಾಲಕರಿಗೆ ಚಲಾವಣೆಗೆ ಸ್ವಾತಂತ್ರ್ಯ ಹೊಂದಿರುವ ಪ್ರಯಾಣಕ್ಕೆ ಅನುಕೂಲಕರವಾಗಿರುವ ಜರ್ಮನಿಯ ಆಟೋಬಾನ್‌ನಲ್ಲಿ ಸಿಂಗ್ ಕಾರು ಓಡಿಸಿ ಪ್ರಯಾಣದ ಅದ್ಭುತ ಆನಂದವನ್ನು ಸವಿದರು.
ತನ್ನ ಪ್ರವಾಸದಲ್ಲಿ, ಸಿಂಗ್ ವಿವಿಧ ದೇಶಗಳಲ್ಲಿ ವಾಹನ ಚಲಾಯಿಸುವಾಗ ಬೇರೆ ಬೇರೆ ಶುಲ್ಕಗಳನ್ನು ಪಾವತಿಸಿದ್ದಾರೆ. ಅತಿವೇಗದ ಚಾಲನೆಗಾಗಿ ನಾಲ್ಕು ಬಾರಿ ದಂಡ ಪಾವತಿಸಿದ್ದಾರೆ. ಸರ್ಬಿಯಾದಲ್ಲಿ ಒಂದು ದಂಡ ಪಾವತಿಸಿದರೆ ಟರ್ಕಿಯಲ್ಲಿ ಎರಡು ಅಂತೆಯೇ ಪಾಕ್‌ನಲ್ಲಿ ಒಂದು ದಂಡವನ್ನು ಪಾವತಿಸಿದ್ದಾರೆ.
ಸಿಂಗ್ ಬಿಚ್ಚಿಟ್ಟ ಪ್ರವಾಸ ಅನುಭವ ಹೇಗಿತ್ತು?
ಯುಟ್ಯೂಬ್ ಚಾನೆಲ್ ರೈಡ್ & ಡ್ರೈವ್‌ನೊಂದಿಗಿನ ತಮ್ಮ ಅನುಭವ ಬಿಚ್ಚಿಟ್ಟ ಸಿಂಗ್, ಇಂತಹ ಅದ್ಭುತ ಪ್ರವಾಸ ಸಾಧನೆಗಳನ್ನು ಪೂರ್ಣಗೊಳಿಸಲು ತಮಗೆ ಯಾವುದು ಪ್ರೇರಣೆ ನೀಡಿದೆ ಎಂಬ ಅಂಶವನ್ನು ತಿಳಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಸುಮಾರು 2 ತಿಂಗಳಿಗಿಂತ ಹೆಚ್ಚುಕಾಲ ಮನೆಯಲ್ಲೇ ಕಾಲಹರಣ ಮಾಡುತ್ತಿದ್ದಾಗ ರೋಡ್ ಟ್ರಿಪ್ ಕೈಗೊಳ್ಳುವ ಆಲೋಚನೆ ಬಂದಿತು ಎಂಬುದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಈ ಪ್ರಾಣಿಗಳಿಗೆ ನಿದ್ರೆಯೇ ಬರಲ್ವಂತೆ! ಆದ್ರೂ ಆಕ್ಟಿವ್ ಆಗಿರುತ್ತೆ
ಸಂಪೂರ್ಣ ಪ್ರವಾಸ ಯೋಜಿಸಲು ಹಾಗೂ ಪ್ರಯಾಣ ಆರಂಭಿಸಲು ಸರಿಸುಮಾರು ಮೂರು ವರ್ಷಗಳನ್ನು ಸಿಂಗ್ ತೆಗೆದುಕೊಂಡರು ಎಂದು ತಿಳಿಸಿದ್ದಾರೆ. ಸಿಂಗ್ ತಮ್ಮ ಪ್ರಯಾಣದಲ್ಲಿ ಒಬ್ಬಂಟಿಯಾಗಿರಲಿಲ್ಲ ತಮ್ಮ ಮಗ ಕೂಡ ಪ್ರಯಾಣದಲ್ಲಿ ಜೊತೆಗಿದ್ದ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ