• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಅರ್ಧ ಕಿ.ಮೀ. ಉದ್ದದ ಟೇಬಲ್‌ನಲ್ಲಿ 'ವಿಶ್ವದ ಅತಿ ಉದ್ದದ ಊಟ' ಸವಿದ 1,600 ಕ್ಕೂ ಹೆಚ್ಚು ಆಹಾರ ಪ್ರಿಯರು

ಅರ್ಧ ಕಿ.ಮೀ. ಉದ್ದದ ಟೇಬಲ್‌ನಲ್ಲಿ 'ವಿಶ್ವದ ಅತಿ ಉದ್ದದ ಊಟ' ಸವಿದ 1,600 ಕ್ಕೂ ಹೆಚ್ಚು ಆಹಾರ ಪ್ರಿಯರು

ವಿಶ್ವದ ಅತಿ ಉದ್ದದ ಊಟ

ವಿಶ್ವದ ಅತಿ ಉದ್ದದ ಊಟ

ಮೂರು ಉನ್ನತ ಬಾಣಸಿಗರು ತಯಾರಿಸಿದ ಈ ಎಕ್ಸೋಟಿಕ್‌ ಊಟದ ಜತೆಗೆ ವೈನ್‌, ಬಿಯರ್‌ ಮತ್ತು ಕಾಫಿಯನ್ನು ಸರ್ವ್ ಮಾಡಲಾಯ್ತು. ನೋವೆಲ್ ಕೊರೊನಾ ವೈರಸ್‌ ವಿರುದ್ಧ ಇಡೀ ಜಗತ್ತು ಕಳೆದ ಒಂದು ಭಯಾನಕ ವರ್ಷದಿಂದ ಹೋರಾಡುತ್ತಲೇ ಇದೆ. ಈ ವರ್ಷದ ನಂತರ 1,600 ಕ್ಕೂ ಹೆಚ್ಚು ಜನರಿಗೆ ಚಾಟ್ ಮಾಡಲು ಮತ್ತು ಕೆಲವು ಸಂಗೀತವನ್ನು ಕೇಳಲು ಇದು ಒಂದು ಸಂದರ್ಭವಾಗಿತ್ತು.

ಮುಂದೆ ಓದಿ ...
  • Share this:

ಆಸ್ಟ್ರೇಲಿಯದ ಮೆಲ್ಬೋರ್ನ್‌ ನಗರ ವಿಶ್ವದೆಲ್ಲೆಡೆ ಪ್ರವಾಸಿಗರನ್ನು ಗಮನ ಸೆಳೆಯುತ್ತದೆ. ಈ ಮೆಲ್ಬೋರ್ನ್ ಜನತೆ ಆಹಾರ ಮತ್ತು ವೈನ್‌ ಬಗ್ಗೆ ಸಿಕ್ಕಾಪಟ್ಟೆ ಗೀಳನ್ನು ಹೊಂದಿದ್ದಾರೆ. ಇದಕ್ಕೆ ಪುರಾವೆ ಇತ್ತೀಚೆಗೆ ನಡೆದ ಈ ವಾರ್ಷಿಕ ಕಾರ್ನೀವಲ್‌. ಮೆಲ್ಬೋರ್ನ್‌ನ ಖಜಾನೆ ಉದ್ಯಾನವನದಲ್ಲಿ ನಡೆದ ಕಾರ್ನಿವಲ್‌ನಲ್ಲಿ ಟೇಬಲ್‌ಗಳು ಅಥವಾ ಕುರ್ಚಿಗಳ ಸಂಖ್ಯೆಯನ್ನು ಲೆಕ್ಕಿಸಲಿಲ್ಲ. ಕೇವಲ ಒಂದು ದೊಡ್ಡ ಟೇಬಲ್‌ ಅನ್ನು ಹಾಕಲಾಗಿತ್ತು. ಅದು ಅರ್ಧ ಕಿಲೋಮೀಟರ್ ಉದ್ದದ ಕಮ್ಯೂನಲ್‌ ಟೇಬಲ್‌ ಎಂದು ಹಾಕಲಾಗಿತ್ತು. ಈ ಸಂದರ್ಭವೂ ಸಹ ಆ ರೀತಿಯದ್ದನ್ನು ಕೋರಿತು. ಮೆಲ್ಬೋರ್ನ್‌ನಲ್ಲಿ ನಡೆದ ವಿಶ್ವದ ಅತಿ ಉದ್ದದ ಊಟಕ್ಕೆ 1,600 ಕ್ಕೂ ಹೆಚ್ಚು ಜನರು ಸೇರಿದ್ದರು.


ಮಾರ್ಚ್‌ ಮಧ್ಯದಲ್ಲಿ ನಡೆದ ಈ ಕಾರ್ನಿವಲ್‌ನಲ್ಲಿ ಈ 1,600 ಕ್ಕೂ ಹೆಚ್ಚು ಜನರು ಮೂರು ಕೋರ್ಸ್‌ಗಳ ಊಟವನ್ನು ಸವಿದರು. ನಾವು ಮೊದಲೇ ಹೇಳಿದಂತೆ, ಆಹಾರ ಕಾರ್ನಿವಲ್‌ ಅನ್ನು ಅಲ್ಲಿನ ಜನತೆ ಎಷ್ಟು ಇಷ್ಟಪಡುತ್ತಾರೆಂದರೆ ಪ್ರತಿಯೊಬ್ಬರೂ ಪ್ರತಿ ವರ್ಷವೂ ಇದಕ್ಕೆ ಕುತೂಹಲದಿಂದ ಕಾಯುತ್ತಾರೆ. 1993 ರಿಂದ ನಡೆಯುತ್ತಿರುವ ಮೆಲ್ಬೋರ್ನ್ ಫುಡ್ & ವೈನ್ ಫೆಸ್ಟಿವಲ್ (MFWF)ನ ಭಾಗವಾಗಿದ್ದಾರೆ.


ಈ ವರ್ಷ ಈ ಆಹಾರ ಕಾರ್ನಿವಲ್‌ಗೆ ಸ್ಟೆಫನಿ ಅಲೆಕ್ಸಾಂಡರ್ (ಬಾಣಸಿಗ, ಲೇಖಕ ಮತ್ತು ಸ್ಟೆಫನಿ ಅಲೆಕ್ಸಾಂಡರ್ ಕಿಚನ್ ಗಾರ್ಡನ್ ಫೌಂಡೇಶನ್‌ನ ಸ್ಥಾಪಕ), ಜಾಕ್ವೆಸ್ ರೇಮಂಡ್ (ಬಾಣಸಿಗ-ರೆಸ್ಟೋರೆಟರ್), ಮತ್ತು ಫಿಲಿಪ್ ಮೌಚೆಲ್ (ಬಾಣಸಿಗ-ರೆಸ್ಟೋರೆಟರ್, ಫಿಲಿಪ್) ಅವರು ಈ ಊಟದ ಆಕಾರ ಮತ್ತು ರುಚಿಯನ್ನು ಹೆಚ್ಚಿಸುವ ಕೆಲಸ ವಹಿಸಿಕೊಂಡಿದ್ದರು.


Akshi Movie: ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಚಿತ್ರ ರಿಲೀಸ್‍ಗೆ ರೆಡಿ; ’ಅಕ್ಷಿ’ಗೆ ಅಣ್ಣಾವ್ರೇ ಕಾರಣ ಎಂದ ಚಿತ್ರತಂಡ


ಮೂರು ಉನ್ನತ ಬಾಣಸಿಗರು ತಯಾರಿಸಿದ ಈ ಎಕ್ಸೋಟಿಕ್‌ ಊಟದ ಜತೆಗೆ ವೈನ್‌, ಬಿಯರ್‌ ಮತ್ತು ಕಾಫಿಯನ್ನು ಸರ್ವ್ ಮಾಡಲಾಯ್ತು. ನೋವೆಲ್ ಕೊರೊನಾ ವೈರಸ್‌ ವಿರುದ್ಧ ಇಡೀ ಜಗತ್ತು ಕಳೆದ ಒಂದು ಭಯಾನಕ ವರ್ಷದಿಂದ ಹೋರಾಡುತ್ತಲೇ ಇದೆ. ಈ ವರ್ಷದ ನಂತರ 1,600 ಕ್ಕೂ ಹೆಚ್ಚು ಜನರಿಗೆ ಚಾಟ್ ಮಾಡಲು ಮತ್ತು ಕೆಲವು ಸಂಗೀತವನ್ನು ಕೇಳಲು ಇದು ಒಂದು ಸಂದರ್ಭವಾಗಿತ್ತು. ಅಲ್ಲದೆ, ಈ ವೇಳೆಯೂ ಕೋವಿಡ್ - 19 ಸುರಕ್ಷತಾ ಮಾನದಂಡಗಳು ಜಾರಿಯಲ್ಲಿವೆ ಎಂಬುದನ್ನು ಸಂಘಟಕರು ಖಚಿತಪಡಿಸಿದರು ಮತ್ತು ಅನುಸರಿಸಿದರು.


ಇನ್ನು, ವಿಶ್ವದ ಅತಿ ಉದ್ದದ ಊಟ ಸವಿದ ಮರುದಿನ ಮೆಲ್ಬೋರ್ನ್‌ನಲ್ಲಿ ವಿಶ್ವದ ಅತಿ ಉದ್ದದ ಬ್ರಂಚ್ (WLB) ನಡೆಯಿತು.  ಅದನ್ನು ಉದ್ಘಾಟಿಸಿದವರು ಕೆಫೆ ಪ್ರವರ್ತಕ ನಾಥನ್ ಟೊಲೆಮನ್ ಮತ್ತು ಲೂನ್ ಕ್ರೊಯಿಸಾಂಟೆರಿಯ ಪೇಸ್ಟ್ರಿ ರಾಣಿ ಕೇಟ್ ರೀಡ್.


ಈ ಊಟದ ಬೆಲೆ ಎಷ್ಟು ಗೊತ್ತಾ..?


ಈ ವಿಶ್ವದ ಅತಿ ಉದ್ದದ ಊಟಕ್ಕೆ 185 ಆಸ್ಟ್ರೇಲಿಯ ಡಾಲರ್‌ ಬೆಲೆ ಅಂದರೆ ಸುಮಾರು 10,220 ರೂ. ಇದರಲ್ಲಿ ಒಂದು ಗ್ಲಾಸ್‌ ವೈನ್‌, ಮೂರು ಕೋರ್ಸ್‌ಗಳು, ಕಾಫಿ ಮತ್ತು 75 ಗ್ರಾಂ ಟ್ಯೂಬ್ ಮೆಕ್ಕಾ ಸೂಪರ್‌ಸ್ಕ್ರೀನ್ ಸೇರಿತ್ತು ಎಂದು Moneycontrol.com ವರದಿ ಮಾಡಿದೆ.


ಮೆಲ್ಬೋರ್ನ್‌ನಲ್ಲಿ ಇತರ ಆಕರ್ಷಣೆಗಳೂ ಇವೆ:


ವಾಸ್ತವವಾಗಿ, ಆಹಾರ ಪ್ರಿಯರಿಗೆ ನಗರವು ಸ್ವರ್ಗಕ್ಕಿಂತ ಕಡಿಮೆಯಿಲ್ಲ. 1920 ರ ಸಮಯದ ಡ್ರಿಂಕ್ಸ್ ಅನ್ನು ಮಾತ್ರ ನೀಡುವ ಸ್ಥಳಕ್ಕೆ ನೀವು ಹೋಗಬಹುದು. ಇದರಲ್ಲಿನೆಗ್ರೋನಿಸ್, ಅಮೆರಿಕಾನೋಸ್, ಬ್ರೂಕ್ಲಿನ್ಸ್ ಮತ್ತು ಅಮರೊ ಅಮೇರಿಕಾನೋಸ್ ಅನ್ನು ನೀಡಲಾಗುತ್ತದೆ. ಬಾರ್ ಅಮೆರಿಕಾನೊದಲ್ಲಿ ಇವುಗಳು ದೊರೆಯುತ್ತದೆ. ಆದರೆ, ಅದು ಸ್ಟ್ಯಾಂಡಿಂಗ್‌ ಬಾರ್‌ ಆಗಿದ್ದು, ಅಲ್ಲಿ ನೀವು ಕುಳಿತುಕೊಳ್ಳಲು ಬರುವುದಿಲ್ಲ.


ಇನ್ನು, ಉಪಾಹಾರಕ್ಕಾಗಿ ಗ್ರ್ಯಾಂಡ್ ಹ್ಯಾಟ್‌ನ ಕಾಲಿನ್ಸ್ ಕಿಚನ್ ಉತ್ತಮ ಆಯ್ಕೆಯಾಗಿದೆ. ಗೌರ್ಮೆಟ್ ಟ್ರಾವೆಲರ್ ಇದನ್ನು ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ಬ್ರೇಕ್‌ಫಾಸ್ಟ್‌ ಹೋಟೆಲ್‌ ಎಂದು ರೇಟಿಂಗ್ ನೀಡಿದ್ದಾರೆ. ಇದರ ಜತೆಗೆ ಇನ್ನೂ ಹಲವು ಸಹ ಆಸ್ಟ್ರೇಲಿಯದ ಪ್ರಮುಖ ನಗರಗಳಲ್ಲೊಂದಾದ ಮೆಲ್ಬೋರ್ನ್‌ನಲ್ಲಿದೆ.

Published by:Latha CG
First published: