HOME » NEWS » Trend » EPF WITHDRAWAL RULES HERE IS HOW TO BUY YOUR DREAM HOME WITH THE HELP OF PF PROVIDENT FUND STG SCT

EPF Withdrawal Rules: ಪಿಎಫ್ ಸಹಾಯದಿಂದ ನಿಮ್ಮ ಕನಸಿನ ಮನೆಯನ್ನು ಖರೀದಿಸುವುದು ಹೇಗೆ? ಇಲ್ಲಿದೆ ಮಾಹಿತಿ

EPF Withdrawal Rules: ಆಸ್ತಿ ಖರೀದಿಗೆ ಪಿಎಫ್ ವಾಪಸಾತಿ ನಿಯಮಗಳ ಪ್ರಕಾರ, ಮನೆ ಖರೀದಿಸಲು ಅಥವಾ ಸೈಟ್‌ ಹಾಗೂ ಜಮೀನಿನಲ್ಲಿ ಮನೆ ನಿರ್ಮಾಣಕ್ಕಾಗಿ ಪಿಎಫ್‌ನಿಂದ 90 ಪ್ರತಿಶತದಷ್ಟು ಹಣವನ್ನು ಹಿಂಪಡೆಯಬಹುದು.

news18-kannada
Updated:April 30, 2021, 12:47 PM IST
EPF Withdrawal Rules: ಪಿಎಫ್ ಸಹಾಯದಿಂದ ನಿಮ್ಮ ಕನಸಿನ ಮನೆಯನ್ನು ಖರೀದಿಸುವುದು ಹೇಗೆ? ಇಲ್ಲಿದೆ ಮಾಹಿತಿ
EPF
  • Share this:
ಮನೆ ಕಟ್ಟಿ ನೋಡು... ಮದುವೆ ಮಾಡಿ ನೋಡು ಅನ್ನೋ ಮಾತಿದೆ. ಅಮೃತಧಾರೆ ಚಿತ್ರದಲ್ಲಿ ಈ ಬಗ್ಗೆ ಒಂದು ಹಾಡೇ ಇದೆ. ಅದೇ ರೀತಿ, ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಮನೆ ಕಟ್ಟಲು ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲ್ಯಾಟ್‌ ಆದರೂ ಖರೀದಿಸಲು ಆಸೆ ಇರುತ್ತದೆ. ಒಬ್ಬರ ಸ್ವಂತ ಮನೆಯಲ್ಲಿ ವಾಸಿಸುವುದು ಸಂಪೂರ್ಣವಾಗಿ ವಿಭಿನ್ನ ಭಾವನೆ. ಜನರು ವಸತಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮತ್ತು ಒಬ್ಬರ ಸ್ವಂತ ಮನೆಯಲ್ಲಿ ನೆನಪುಗಳನ್ನು ಕಾಣುವ ಕನಸು ಕಾಣುತ್ತಾರೆ. ಶೇ. 70ರಷ್ಟು ಭಾರತೀಯರು ದೇಶದ ದುಡಿಯುವ ಜನಸಂಖ್ಯೆಗೆ ಕೊಡುಗೆ ನೀಡುತ್ತಾರೆ ಎಂಬ ಅಂಶವನ್ನು ಗಮನಿಸಿ, ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಸಾರ್ವಜನಿಕರಿಗೆ ಆಸ್ತಿಯನ್ನು ಖರೀದಿಸಲು ಸುಲಭವಾಗುತ್ತದೆ. ಅಂತಹ ಅನೇಕ ಕ್ರಮಗಳಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪರಿಚಯಿಸಿದ ಭವಿಷ್ಯನಿಧಿ (ಪಿಎಫ್) ಯೋಜನೆಯೂ ಒಂದು.

ಪಿಎಫ್ ಬಾಕಿ ವೇತನವನ್ನು ಜನರು ಆಸ್ತಿ ಖರೀದಿಸಲು ಬಳಸಬಹುದು. ಆಸ್ತಿ ಖರೀದಿಗೆ ಪಿಎಫ್ ವಾಪಸಾತಿ ನಿಯಮಗಳ ಪ್ರಕಾರ, ಮನೆ ಖರೀದಿಸಲು ಅಥವಾ ಸೈಟ್‌ ಹಾಗೂ ಜಮೀನಿನಲ್ಲಿ ಮನೆ ನಿರ್ಮಾಣಕ್ಕಾಗಿ ಪಿಎಫ್‌ನಿಂದ 90 ಪ್ರತಿಶತದಷ್ಟು ಹಣವನ್ನು ಹಿಂಪಡೆಯಬಹುದು.

ಮನೆ ಖರೀದಿಸಲು ಅಥವಾ ಭೂಮಿಯಲ್ಲಿ ಮನೆ ನಿರ್ಮಾಣಕ್ಕಾಗಿ ಪಿಎಫ್ ಬಳಸಲು ನಿಯಮಗಳು ಮತ್ತು ಷರತ್ತುಗಳು ಹೀಗಿವೆ..

ಮನೆ ನಿರ್ಮಾಣಕ್ಕಾಗಿ ಪಿಎಫ್ ಹಿಂತೆಗೆದುಕೊಳ್ಳಲು, ಆ ಸೈಟ್‌ ಅಥವಾ ಜಮೀನು ಪಿಎಫ್ ಖಾತೆದಾರ ಅಥವಾ ಅವನ ಹೆಂಡತಿ ಅಥವಾ ಇಬ್ಬರ ಒಡೆತನದಲ್ಲಿರಬೇಕು. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರಿಗೂ ಪಿಎಫ್ ವಾಪಸಾತಿ ಸೌಲಭ್ಯ ಲಭ್ಯವಿದೆ. ಆದ್ದರಿಂದ, ಎಲ್ಲಾ ಪಿಎಫ್ ಮತ್ತು ಇಪಿಎಫ್ ಖಾತೆದಾರರು ಆಸ್ತಿ ಖರೀದಿಗೆ ಭವಿಷ್ಯ ನಿಧಿ ಹಣಕಾಸು ಪಡೆಯಲು ಅರ್ಹರಾಗಿದ್ದಾರೆ.

ಸೈಟ್‌ ಖರೀದಿಗೆ ಅಥವಾ ಮನೆ ನಿರ್ಮಾಣಕ್ಕಾಗಿ ಅಥವಾ ಮನೆ ಖರೀದಿಗೆ ಪಿಎಫ್ ಮೊತ್ತವನ್ನು ಹಿಂಪಡೆಯಲು ಬಯಸುವ ವ್ಯಕ್ತಿ, ಕನಿಷ್ಠ ಐದು ವರ್ಷಗಳವರೆಗೆ ತನ್ನ ಪಿಎಫ್ ಖಾತೆಯಲ್ಲಿ ಕೊಡುಗೆ ನೀಡಿರಬೇಕು.

ಅರ್ಹವಾದ ಹಿಂಪಡೆಯುವಿಕೆಯ ಮೊತ್ತವು ನೀವು ಯಾವ ಉದ್ದೇಶಕ್ಕಾಗಿ ಹಣವನ್ನು ಹಿಂಪಡೆಯುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸೈಟ್‌ ಖರೀದಿಸಲು, ಪಿಎಫ್ ಹಿಂಪಡೆಯುವಿಕೆಯು ನೌಕರನ 24 ತಿಂಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆ (ಡಿಎ) ಆಗಿರಬೇಕು ಅಥವಾ ಸೈಟ್‌ನ ನಿಜವಾದ ಬೆಲೆ, ಯಾವುದು ಕಡಿಮೆ ಇದ್ದರೂ ಒಬ್ಬರ ಪಿಎಫ್ ಬ್ಯಾಲೆನ್ಸ್‌ನಿಂದ ಪಿಎಫ್ ವಾಪಸಾತಿ ಮೊತ್ತವಾಗಿ ಅನುಮತಿಸಲಾಗುವುದು.
ಮನೆಯ ನಿರ್ಮಾಣದ ಖರೀದಿಗೆ, ಪಿಎಫ್ ಅಥವಾ ಇಪಿಎಫ್ ಖಾತೆದಾರರೊಬ್ಬರ 36 ತಿಂಗಳ ಮೂಲ ವೇತನ ಮತ್ತು ಡಿಎ ಅಥವಾ ಭೂಮಿಯ ನಿಜವಾದ ಬೆಲೆ ಅಥವಾ ನಿರ್ಮಾಣಕ್ಕೆ ಬೇಕಾದ ಮೊತ್ತ, ಯಾವುದು ಕಡಿಮೆಯೋ ಅದನ್ನು ಹಿಂಪಡೆಯಬಹುದು. ಯಾವುದೇ ಸಂದರ್ಭದಲ್ಲಿ, ಪಿಎಫ್ ಹಿಂತೆಗೆದುಕೊಳ್ಳುವ ಮಿತಿಯು ಪಿಎಫ್ / ಇಪಿಎಫ್ ಬಾಕಿ ಶೇ. 90ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮ, ಷರತ್ತನ್ನು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ವಿಧಿಸಿದೆ.
Published by: Sushma Chakre
First published: April 30, 2021, 12:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories