ಪಕ್ಕದಮನೆಯಲ್ಲಿ ಡೆಡ್ ಬಾಡಿ ಇದೆ ಎಂದವರ ಮಾತು ನಂಬಿ ಬಂದ ಪೊಲೀಸರಿಗೆ ಶಾಕ್!; ಅಷ್ಟಕ್ಕೂ ಅಲ್ಲಿ ಇದ್ದಿದ್ದೇನು?

ಪೊಲೀಸರು ಮನೆಯನ್ನು ಶೋಧಿಸುತ್ತಿರುವುದನ್ನು ಗಮನಿಸಿ ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ. ಆನಂತರ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಶವದ ಮಾದರಿಯ ಆಕೃತಿ

ಶವದ ಮಾದರಿಯ ಆಕೃತಿ

  • Share this:
ತಮ್ಮ ಪಕ್ಕದ ಮನೆಯಲ್ಲಿ ಡೆಡ್ ಬಾಡಿ ಇದೆ ಎಂದು ನೆರೆಯವರು ಪೊಲೀಸರಿಗೆ ಫೋನ್ ಮಾಡಿದ್ದರು. ಇದನ್ನು ಕೇಳಿದ ಪೊಲೀಸರು ಮನೆಯನ್ನು ಶೋಧಿಸುತ್ತಿರುವುದನ್ನು ಗಮನಿಸಿ ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ. ಆನಂತರ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೆಡ್ ಫೋರ್ಡ್ ಶೈರ್ನಲ್ಲಿ ಕಾರಾ ಲೂಯಿಸ್ ಎನ್ನುವ 28 ವರ್ಷದ ಇಬ್ಬರು ಮಕ್ಕಳ ತಾಯಿಯೊಬ್ಬರು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ವರ್ಷ ತಮ್ಮ ಮಕ್ಕಳ ಹ್ಯಾಲೋವೀನ್ ಪಾರ್ಟಿಗಾಗಿ ನಕಲಿ ಡೆಡ್‌ಬಾಡಿ ಮಾದರಿಯ ಪ್ರಾಪರ್ಟಿಯನ್ನು ಬಳಸಿ ಮನೆಯ ಗಾರ್ಡನಿಂಗ್ ಸಮಯದಲ್ಲಿ ಮನೆಯ ಹೊರಗಿಟ್ಟಿದ್ದರು.

ಆದರೆ ಅದನ್ನು ಒಳಗಡೆ ಇಡುವುದಕ್ಕೆ ಮರೆತುಬಿಟ್ಟಿದ್ದರು. ಇಲ್ಲೇ ಆಗಿದ್ದು ಎಡವಟ್ಟು! ಈ ಬಗ್ಗೆ ಅರಿವಿರದ ನೆರೆಹೊರೆಯವರು, ಕಾರಾ ಅವರ ಮನೆಯಲ್ಲಿ ನಿಜವಾಗಿಯೂ ಕೊಲೆ ನಡೆದಿದ್ದು, ಮೃತದೇಹವನ್ನು ಹೊರಗಡೆ ಇಡಲಾಗಿದೆ ಎಂದು ಭಾವಿಸಿ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ.

ಕಾರಾ ಅವರು ತಮ್ಮ ಮಗನನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದರು. ಈ ಸಮಯದಲ್ಲಿ ನಕಲಿ ಪ್ರಾಪರ್ಟಿಯನ್ನು ಒಳಗಿಡುವುದನ್ನು ಮರೆತಿದ್ದರು ಈ ಸಂದರ್ಭದಲ್ಲಿ ಮನೆಗೆ ಪೊಲೀಸ್ ಬಂದಿರುವ ಘಟನೆ ನಡೆದಿದೆ.

ಲಾಡ್ ಬೈಬಲ್ ವೆಬ್‌ಸೈಟ್‌ ಜೊತೆಗೆ ಕಾರಾ ಈ ಬಗ್ಗೆ ಹಂಚಿಕೊಂಡಿದ್ದಾರೆ. 'ಎರಡು ಪೊಲೀಸ್ ಕಾರ್‌ಗಳು ನಮ್ಮ ಮನೆಯ ಹೊರಗಿನಿಂದ ಬರುವುದನ್ನು ಗಮನಿಸುವುದನ್ನು ಕಂಡು ನಾನು ಮನೆಗೆ ಓಡಿ ಬಂದೆ. ನಾನು ಕಾರಿನಿಂದ ಇಳಿದು ಬಂದು ನಮ್ಮ ಪಕ್ಕದ ಮನೆಯವರನ್ನು ಕೇಳಿದೆ. ನೀನೇನು ಮಾಡಿದೆ? ಎಂದೆ. ಇಷ್ಟರಲ್ಲಿ ಮೂವರು ಕರೆ ಮಾಡಿ ನಮ್ಮ ಮನೆಯಲ್ಲಿ ಮೃತದೇಹವಿದೆ ಎಂದು ತಿಳಿಸಿದ್ದಕ್ಕೆ ಅಧಿಕಾರಿಗಳನ್ನು ನಮ್ಮ ಮನೆ ಮುಂದೆ ಬಂದಿದ್ದರು' ಎಂದು ನನಗೆ ತಿಳಿಯಿತು.

ಇದಾದ ಬಳಿಕ ಕಾರಾ ಮತ್ತು ಪೊಲೀಸ್ ನಡುವಿನ ಸಂಭಾಷಣೆಯೇ ಸಾಕಷ್ಟು ಮಜವಾಗಿದೆ.

28 ವರ್ಷಗಳ ತಾಯಿಯ ಮಗ ಅಧಿಕಾರಿಗಳಲ್ಲಿ ಮನವಿ ಮಾಡಿದ್ದು, 'ನಕಲಿ ಮೃತದೇಹದ ಬ್ಯಾಗನ್ನು ತೆಗೆಯುವುದು ನನಗಿಷ್ಟವಿಲ್ಲ. ನಾನು ಅದನ್ನು ಬಹಳ ಇಷ್ಟಪಡುತ್ತೇನೆ ಎಂದಿದ್ದಾನೆ' ಈ ಮಾತನ್ನು ಕೇಳಿದ ಪೊಲೀಸರು ಈ ಘಟನೆಯನ್ನು ತಮಾಷೆಯಾಗಿ ಕಂಡಿದ್ದಾರೆ.

'ಈ ನಕಲಿ ಮೃತದೇಹದ ಕಾಲುಗಳು ಇಷ್ಟು ಸಣ್ಣದಾಗಿದೆ. ಆದರೂ ನೀವು ಹೇಗೆ ಅದನ್ನು ಮೃತದೇಹವೆಂದು ನಿರ್ಧರಿಸಿದಿರಿ ಎಂದು ಕಾರಾ ಅಧಿಕಾರಿಗಳನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಪೊಲೀಸರು ನೀವು ಅದನ್ನು ಕತ್ತರಿಸಿರಬಹುದು ಎಂದು ಭಾವಿಸಿದ್ದೆವು' ಎಂದು ವ್ಯಂಗ್ಯವಾಗಿ ಹೇಳಿದರು. 'ಹೋ, ಹಾಗಾದರೆ ನೀವು ನಮ್ಮ ಡಸ್ಟ್‌ಬಿನ್ ಕೂಡ ಗಮನಿಸಿದ್ದೀರಾ' ಎಂದು ಕಾರಾ ಹೇಳಿದಾಗ 'ಪೊಲೀಸರು ಹಾಗಾದರೆ ನಾವು ಈಗ ನೋಡಬಹುದೇ?' ಎಂದು ಕೇಳಿದ್ದಾರೆ.

ಈ ವಿಡಿಯೋ ಬಗ್ಗೆ ನೆಟ್ಟಿಗರು ಸಾಕಷ್ಟು ಕುತೂಹಲ ತೋರಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಬ್ಬ ಬಳಕೆದಾರರು 'ಪೊಲೀಸರು ಇದು ದೇಹವಲ್ಲ ಎಂದು ಖಚಿತಪಡಿಸಿದ್ದಾರೆಯೇ ಅಥವಾ ಇದು ಪರಿಪೂರ್ಣ ಅಪರಾಧವೇ?' ಎಂದು ಕೇಳಿದ್ದಾರೆ.
Published by:Sushma Chakre
First published: