England woman burnt wedding dress: ಮದುವೆ (Marriage) ದಿನ ಧರಿಸಿದ ಬಟ್ಟೆಗಳಿಗೆ (Dress) ವಿಶೇಷ ಮಹತ್ವ ಇರುತ್ತದೆ, ಮದುವೆ ನಿಶ್ಚಯವಾಗುತ್ತಿದ್ದಂತೆ ಯಾವ ಬಟ್ಟೆ ಧರಿಸಬೇಕು ಎಂದು ಎಲ್ಲರೂ ಯೋಚನೆ ಮಾಡ್ತಾರೆ. ಇನ್ನು ವಿಶೇಷವಾಗಿ ಮಹಿಳೆಯರು (Woman) ಬ್ರೈಡಲ್ ಡ್ರೆಸ್ (Bridal Dress) ಬಗ್ಗೆ ಸಂಶೋಧನೆಯೇ ಮಾಡುತ್ತಾರೆ. ಬಟ್ಟೆ ಯಾವ ರೀತಿ ಇರಬೇಕು? ಅದಕ್ಕೆ ಹೊಂದಣಿಕೆ ಆಗುವ ಇತರೆ ವಸ್ತುಗಳ ಕಲೆಕ್ಷನ್ (Collection) ಬಗ್ಗೆ ಹಲವು ಅಂಗಡಿಗಳಿಗೆ (Shopping) ಭೇಟಿ ನೀಡುತ್ತಾರೆ. ಇಷ್ಟೆಲ್ಲ ಮಾಡೋದು ಕೇವಲ ಒಂದು ದಿನಕ್ಕಾಗಿ ಅನ್ನೋದು ಸತ್ಯ. ಇನ್ನು ಮದುವೆ ಬಳಿಕ ಮಹಿಳೆಯರು ವಧುವಿನ ಡ್ರೆಸ್ ನ್ನು ಅತ್ಯಂತ ಜೋಪಾನದಿಂದ ಕಾಪಾಡಿಕೊಳ್ಳುತ್ತಾರೆ. ಒಂದಿಷ್ಟು ಜನ ತಮ್ಮ ಮದುವೆ ಧಿರಿಸು ಮಕ್ಕಳಿಗಾಗಿ (Children) ತೆಗೆದಿರಿಸ್ತಾರೆ. ಆದರೆ ಇಲ್ಲೋರ್ವ ಮಹಿಳೆ ತನ್ನ ಮದುವೆಯ ಧಿರಿಸಿಗೆ ಬೆಂಕಿ ಹಚ್ಚಿದ್ದಾಳೆ.
ಹುಡುಗಿಯರು ಮದುವೆಗೆ ತುಂಬಾ ತಯಾರಿ ಮಾಡುತ್ತಾರೆ. ಮೇಕಪ್ ನಿಂದ ಮದುವೆಯ ಡ್ರೆಸ್ ನವರೆಗೆ ವಧು ಹೆಚ್ಚು ಕಾಳಜಿ ವಹಿಸುತ್ತಾರೆ. ಮದುವೆಯ ನಂತರವೂ ಮಹಿಳೆ ಮದುವೆಯ ಉಡುಪನ್ನು ಇಡುತ್ತಾಳೆ ಏಕೆಂದರೆ ಅದು ಅವರಿಗೆ ವಿಶೇಷವಾಗಿರುತ್ತದೆ. ಆದರೆ ಇಂಗ್ಲೆಂಡಿನ ಮಹಿಳೆಯೊಬ್ಬರು ಮದುವೆಯಾಗಿ ಹಲವು ವರ್ಷಗಳ ನಂತರ ಮದುವೆಯ ಉಡುಗೆಗೆ ಬೆಂಕಿ ಹಚ್ಚಿದ್ದಾರೆ.
ಬೆಂಕಿ ಹಚ್ಚಿದ್ದು ಕಂಡು ನೆಟ್ಟಿಗರು ಶಾಕ್
ಮಿರರ್ ವೆಬ್‌ಸೈಟ್ ನ ಪ್ರಕಾರ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ (Manchester, England) ನಿವಾಸಿ 38 ವರ್ಷದ ನಿಕೋಲಾ ವೈಟ್ (Nicola White) ತಮ್ಮ ಮದುವೆಯ ಗೌನ್‌ಗೆ ಬೆಂಕಿ ಹಚ್ಚಿರೋದನ್ನು ಕಂಡು ಬಹುತೇಕ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದ್ರೆ ಯಾಕೆ ನಿಕೋಲಾ ತಮ್ಮ ಗೌನ್ ಗೆ ಬೆಂಕಿ ಹೆಚ್ಚಿದ್ದು ಎಂಬ ಕಾರಣ ಕೇಳಿದ್ರೆ ನೀವು ಸರಿ ಅಂತ ಹೇಳಬಹುದು.
ಇದನ್ನೂ ಓದಿ: Viral Video: ಮೀನು ನೋಡಿದರೆ ವಾಂತಿ ಮಾಡಿಕೊಳ್ಳುತ್ತೆ ಈ ಬೆಕ್ಕು
2005 ರಲ್ಲಿ ನಿಕೋಲಾ ಮದುವೆ
ಖಾಸಗಿ ಕಂಪನಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ನಿಕೋಲಾ 2005 ರಲ್ಲಿ ವಿವಾಹವಾದರು. ಆದರೆ ಅವರ ದಾಂಪತ್ಯ ಸಂತೋಷಕ್ಕಿಂತ ಹೆಚ್ಚು ಸಮಸ್ಯೆಗಳಿಂದಲೇ ತುಂಬಿತ್ತು. ನಿಕೋಲಾ ತಮ್ಮ ಸಂಸಾರವನ್ನು ಉಳಿಸಿಕೊಳ್ಳಲು ತುಂಬಾನೇ ಪ್ರಯತ್ನಿಸಿದ್ದರು. ಆದ್ರೆ ಇದು ನಿಕೋಲಾ ಪತಿಗೆ ಮಾತ್ರ ಅರ್ಥವಾಗಿರಲಿಲ್ಲ.
ಪತಿಯ ನಡೆ ಮತ್ತು ಸಂಸಾರದಲ್ಲಿ ಸಾಮರಸ್ಯ ಮೂಡದ ಕಾರಣ ನಿಕೋಲಾ 2021ರಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ನೋಡಿದ್ದ ನಿಕೋಲಾ
ಈ ಹಿಂದೆ ನೆಟ್ಟಿಗರೊಬ್ಬರು ಮದುವೆ ಗೌನ್ ಸುಟ್ಟು ಫೋಟೋಶೂಟ್ ಮಾಡಿಸಿರೋದು ನಿಕೋಲಾ ಅವರಿಗೆ ನೆನಪು ಬಂದಿದೆ. ಅದೇ ರೀತಿ ನಿಕೋಲಾ ಸಹ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮದುವೆ ಗೌನ್ ಗೆ ಬೆಂಕಿ ಹಚ್ಚುವಾಗ ಫೋಟೋಶೂಟ್
ಈ ರೀತಿ ಪೋಟೋಶೂಟ್ ಮಾಡಿಸುವ ನಿಕೋಲಾ ನಿರ್ಧಾರವನ್ನು ಅವರ ಸ್ನೇಹಿತರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಎಲ್ಲರ ಬೆಂಬಲದೊಂದಿಗೆ ನಿಕೋಲಾ ಗ್ರಾಮೀಣ ಪ್ರದೇಶಕ್ಕೆ ತೆರಳಿ, ಗೌನ್ ಧರಿಸಿದ್ದಾರೆ. ನಂತರ ಫೋಟೋಗ್ರಾಫರ್ ಹೇಳಿದಂತೆ ಪೋಸ್ ನೀಡಿದ್ದಾರೆ. ನಂತರ ಅಲ್ಲಿಯೇ ಗೌನ್ ಕಳಚಿ ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: Wedding Viral: ಊಟದಲ್ಲಿ ಲಡ್ಡು ಬಡಿಸಲಿಲ್ಲ, ಈ ಮದುವೇನೇ ಬೇಡ ಎಂದ ಲಡ್ಡುಪ್ರಿಯ ವರನ ಕುಟುಂಬ
ಗೌನ್ ಗೆ ಬೆಂಕಿ ಹಚ್ಚಿದ್ದರಿಂದ ಸಮಾಧಾನ ಆಯ್ತು ಎಂದು ನಿಕೋಲಾ ಹೇಳಿಕೊಂಡಿದ್ದಾರೆ. ಇದರಿಂದ ನನಗೆ ಧೈರ್ಯ ಮತ್ತು ವಿಶ್ವಾಸ ಹೆಚ್ಚಾಯ್ತು. ಗೌನ್ ಬೆಂಕಿ ಹಚ್ಚಿದ್ದರಿಂದ ಭಾರವನ್ನೆಲ್ಲ ಕಳೆದುಕೊಂಡ ಅನುಭವ ಆಗಿದೆ ಎಂದು ಹೇಳುತ್ತಾರೆ ನಿಕೋಲಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ