• Home
  • »
  • News
  • »
  • trend
  • »
  • Viral News: ಬಂಡಿಯಲ್ಲಿ ವೆಜ್ ಬಿರಿಯಾನಿ ಮಾರಾಟ ಮಾಡ್ತಿರುವ ಇಂಜಿನೀಯರ್ ಗಳು ಜೀವನದ ಬಗ್ಗೆ ಹೇಳಿದ್ದೇನು?

Viral News: ಬಂಡಿಯಲ್ಲಿ ವೆಜ್ ಬಿರಿಯಾನಿ ಮಾರಾಟ ಮಾಡ್ತಿರುವ ಇಂಜಿನೀಯರ್ ಗಳು ಜೀವನದ ಬಗ್ಗೆ ಹೇಳಿದ್ದೇನು?

ಬಿರಿಯಾನಿ ಬಂಡಿ

ಬಿರಿಯಾನಿ ಬಂಡಿ

ಇಂಜಿನಿಯರ್ ಗಳಾದ ರೋಹಿತ್ ಮತ್ತು ಸಚಿನ್ ಒಟ್ಟಿಗೆ ಓದಿದ್ದಾರೆ. ರೋಹಿತ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದರೆ, ಸಚಿನ್ ಬಿ-ಟೆಕ್ ಓದಿದ್ದಾರೆ. ಆಮೇಲೆ ಕೆಲಸವನ್ನೂ ಮಾಡಿದರೂ ಇಬ್ಬರಿಗೂ ತೃಪ್ತಿ ಸಿಗಲಿಲ್ಲ. ಅಂತಿಮವಾಗಿ ಇಬ್ಬರೂ ಒಟ್ಟಿಗೆ ವ್ಯಾಪಾರ ಮಾಡಲು ಯೋಚಿಸಿ ಸೋನೆಪತ್‌ ನಲ್ಲಿ ಬಿರಿಯಾನಿ ಮಾರಾಟ ಮಾಡಲು ಪ್ರಾರಂಭಿಸಿದರು.

ಮುಂದೆ ಓದಿ ...
  • Share this:

ಯಾವುದೇ ಕೆಲಸ (Work) ಚಿಕ್ಕದು, ದೊಡ್ಡದು ಅಂತ ಇರಲ್ಲ. ಕೆಲಸ ಮಾಡುವ ನಿಷ್ಠೆ ಮತ್ತು ಪ್ರಾಮಾಣಿಕತೆ ನಮ್ಮನ್ನು ಎತ್ತರಕ್ಕೆ ಕೊಂಡ್ಯೊಯುತ್ತದೆ ಎಂಬುವುದು ಯಶಸ್ಸು ಕಂಡ ಸಾಧಕರ ಮಾತು. ಕೊರೊನಾ (COVID Lockdown) ಬಳಿಕ ಎಷ್ಟೋ ಐಟಿ ಕಂಪನಿಗಳ ಉದ್ಯೋಗಿಗಳು (IT Company Employees) ಕೆಲಸ ಕಳೆದುಕೊಂಡ ಬಳಿಕ ಹಳ್ಳಿಗಳಲ್ಲಿ ಮಾದರಿ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ ಒಂದಿಷ್ಟು 9 ರಿಂದ  5 ಗಂಟೆ ಮಾಡುವ ಕೆಲಸಕ್ಕೆ  ಗುಡ್ ಬೈ ಹೇಳಿ ಉದ್ಯಮದತ್ತ ಮುಂದಾಗುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಇಂಜಿನೀಯರಿಂಗ್ ಪದವಿ ಪಡೆದ ಯುವಕರು (Engineering) ಉದ್ಯೋಗ (Job) ಸಿಗದೇ ಬಜ್ಜಿ ಬೋಂಡಾ ಅಂಗಡಿ ಇರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಇರೋ ಉದ್ಯೋಗ ತೊರೆದು ತಮ್ಮದೇ ಸ್ವಂತ ವ್ಯವಹಾರ ಆರಂಭಿಸಿದ್ದಾರೆ. ಒಳ್ಳೆಯ ಸಂಬಳ ಬರುತ್ತಿದ್ದ ಉದ್ಯೋಗ ತೊರೆದು ಇಬ್ರು ವೆಜ್ ಬಿರಿಯಾನಿ ಅಂಗಡಿ (Veg Biryani Shop) ನಡೆಸುತ್ತಿದ್ದಾರೆ.


ರೋಹಿತ್ ಮತ್ತು ಸಚಿನ್ ಇಬ್ಬರು ಇಂಜಿನಿಯರ್‌ ಗಳು. 9 ರಿಂದ  5 ಗಂಟೆಯ ಉದ್ಯೋಗ ತೊರೆದು ಬಿರಿಯಾನಿ ಅಂಗಡಿ ಹಾಕಿ ಹೆಚ್ಚು ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.


ರೋಹಿತ್ ಮತ್ತು ಸಚಿನ್ ಹರಿಯಾಣದ ಸೋನಿಪತ್‌ನಲ್ಲಿ ತಮ್ಮದೇ ಆದ ಬಿರಿಯಾನಿ  (Engineers Become Biryani Vendors) ಅಂಗಡಿಯನ್ನು ಆರಂಭಿಸಿದ್ದಾರೆ. ಮೊದಲಿನ ಜೀವನಕ್ಕಿಂತ ಸದ್ಯದ ಜೀವನ ಚೆನ್ನಾಗಿ ಮತ್ತು ನೆಮ್ಮದಿಯಾಗಿದೆ ಎಂದು ರೋಹಿತ್ ಮತ್ತು ಸಚಿನ್ ಹೇಳುತ್ತಾರೆ.


ಇದನ್ನೂ ಓದಿ:  Viral Video: ಈತನ ಪುಂಗಿ ನಾದಕ್ಕೆ ಹೊರ ಬಂದ ಹಾವು ಕಂಡು ನೆಟ್ಟಿಗರು ಶಾಕ್: ವಿಡಿಯೋ ನೋಡಿ


ಕೆಲಸ ಬಿಟ್ಟ ಬಳಿಕ ವೆಜ್ ಬಿರಿಯಾನಿ ಅಂಗಡಿ ಆರಂಭ


ಇಂಜಿನಿಯರ್ ಗಳಾದ ರೋಹಿತ್ ಮತ್ತು ಸಚಿನ್ ಒಟ್ಟಿಗೆ ಓದಿದ್ದಾರೆ. ರೋಹಿತ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದರೆ, ಸಚಿನ್ ಬಿ-ಟೆಕ್ ಓದಿದ್ದಾರೆ. ಆಮೇಲೆ ಕೆಲಸವನ್ನೂ ಮಾಡಿದರೂ ಇಬ್ಬರಿಗೂ ತೃಪ್ತಿ ಸಿಗಲಿಲ್ಲ. ಅಂತಿಮವಾಗಿ ಇಬ್ಬರೂ ಒಟ್ಟಿಗೆ ವ್ಯಾಪಾರ ಮಾಡಲು ಯೋಚಿಸಿ ಸೋನೆಪತ್‌ ನಲ್ಲಿ ಬಿರಿಯಾನಿ ಮಾರಾಟ ಮಾಡಲು ಪ್ರಾರಂಭಿಸಿದರು.


ಹಿಂದಿನ ಕೆಲಸಕ್ಕಿಂತ ಈ ವ್ಯವಹಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದ್ದೇವೆ  ಎಂದು ಇಬ್ಬರು ಹೇಳಿಕೊಳ್ಳುತ್ತಾರೆ. ಅವರು ತಮ್ಮ ಕಾರ್ಟ್ ಅನ್ನು ಸೋನಿಪತ್‌ನ ಐಷಾರಾಮಿ ಪ್ರದೇಶದಲ್ಲಿ ಸ್ಥಾಪಿಸಿರೋದರಿಂದ ಉತ್ತಮ ಹಣವನ್ನು ಗಳಿಸುತ್ತಾರೆ.


ಫಿಟ್‌ನೆಸ್ ಫ್ರೀಕ್‌  ಗಳಿಗೂ ಬಿರಿಯಾನಿ


ಇಂಜಿನಿಯರ್ಸ್ ಬಿರಿಯಾನಿ ಸಾಮಾನ್ಯವಲ್ಲ, ಇದು ಎಣ್ಣೆ ಮುಕ್ತ ಮತ್ತು ಉತ್ತಮ ಗುಣಮಟ್ಟದ ಅಕ್ಕಿಯನ್ನು ಸಹ ಬಳಸಲಾಗುತ್ತದೆ. ಬಿರಿಯಾನಿ ಹಾಫ್ ಪ್ಲೇಟ್ 50 ರೂ.ಗೆ ಹಾಗೂ ಫುಲ್ ಪ್ಲೇಟ್ 70 ರೂ.ಗೆ ಮಾರಾಟವಾಗುತ್ತಿದೆ.


ಡಯಟ್ ಮಾಡುವವರು ಮತ್ತು ಜಿಮ್‌ ಗೆ ಹೋಗುವವರು ಕೂಡ ಈ ಬಿರಿಯಾನಿ ತಿನ್ನಬಹುದು ಎಂದು ಸಚಿನ್ ಮತ್ತು ರೋಹಿತ್ ಹೇಳುತ್ತಾರೆ. ಇದರಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ. ಈಗ ತಮ್ಮ ವ್ಯಾಪಾರವನ್ನು ಪ್ರಮೋಟ್ ಮಾಡಿ ಮುಂದೆ ಕೊಂಡೊಯ್ಯಲು ಯೋಚಿಸುತ್ತಿದ್ದಾರೆ. ತಮ್ಮ ಹೊಸ ವ್ಯವಹಾರ ಮತ್ತು ಉದ್ಯೋಗದಿಂದ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.


ಟ್ರಕ್ ಚಾಲಕನ ವಿಡಿಯೋ ವೈರಲ್


ತಮಾಷೆಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Funny video) ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಲಾರಿ ಚಾಲಕನ ಮೇಲೆ ಆಕ್ರೋಶಗೊಂಡಿದ್ದಾರೆ. ಆದ್ರೆ ಕೆಲವೇ ಕ್ಷಣಗಳಲ್ಲಿ ನಗಲು ಆರಂಭಿಸಿದದ್ದಾರೆ. ಟ್ರಕ್ ಚಾಲಕನ ವಿಡಿಯೋ (Truck Driver Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ವಿಡಿಯೋದಲ್ಲಿ ಟ್ರಕ್ ಡ್ರೈವರ್ ಸ್ಟೀರಿಂಗ್ ಮೇಲೆ ಕುಳಿತು ಡ್ಯಾನ್ಸ್ ಮಾಡುತ್ತಿರೋದನ್ನು ನೋಡಬಹುದು. ಕೆಲವೊಮ್ಮೆ ಆತ ಸ್ಟೀರಿಂಗ್ ಬಿಟ್ಟು ಡ್ಯಾನ್ಸ್ ಮಾಡಿದ್ದಾನೆ. ಇದನ್ನು ನೋಡುತ್ತಿದ್ದಂತೆ ಟ್ರಕ್ ಅಪಘಾತಕ್ಕೆ ಒಳಗಾದ್ರೆ ಹೇಗೆ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಟ್ರಕ್ ಚಾಲಕನ ಡ್ಯಾನ್ಸ್ ನೋಡಿ ಇಂಟರ್ನೆಟ್‌ ನಲ್ಲಿ ಜನರು ಭಯಭೀತರಾಗಿದ್ದಾರೆ, ಆದರೆ ಟ್ರಕ್ ಚಾಲಕನಿಗೆ ಯಾವುದೇ ಭಯವಿರಲಿಲ್ಲ. ಈ ವಿಡಿಯೋ ಹಿಂದಿನ ಅಸಲಿ ಸತ್ಯ ಕೊನೆಗೆ ತಿಳಿದಿದೆ


ವಿಡಿಯೋದಲ್ಲಿ ಫನ್ನಿ ಟ್ವಿಸ್ಟ್


ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವ್ಯಕ್ತಿ ಟ್ರಕ್ ಓಡಿಸುತ್ತಿರುವುದನ್ನು ಕಾಣಬಹುದು. ಮರುಕ್ಷಣವೇ ಆತ ತಮಾಷೆಯಾಗಿ ಸ್ಟಿರಿಂಗ್ ಬಿಟ್ಟು ಬಾಗಿಲಿಗೆ ಜೋತು ಬೀಳುತ್ತಾನೆ. ಚಾಲಕನ ಸ್ಥಾನ ಬಿಟ್ಟು ಅತ್ತಿಂದ ಇತ್ತ ಜಿಗಿದು ಕುಣಿಯಲು ಆರಂಭಿಸುತ್ತಾನೆ.


ಟ್ರಕ್ ಇಷ್ಟು ವೇಗದಲ್ಲಿದ್ದರೂ, ಈ ಚಾಲಕ ಹುಚ್ಚನಂತೆ ವರ್ತಿಸುತ್ತಿರುವುದು ಹೇಗೆ ಎಂದು ನೀವು ಯೋಚಿಸುತ್ತಿರಬೇಕು. ಕೆಲವರಿಗೆ ಕೋಪವೂ ಬಂದಿತು. ಆದರೆ ಸತ್ಯ ಸ್ವಲ್ಪ ವಿಭಿನ್ನವಾಗಿದೆ.


ಇದನ್ನೂ ಓದಿ:  Viral Video: ಈ ಪೋರಿಯ ಧೈರ್ಯ ಕಂಡು ನೆಟ್ಟಿಗರು ಸುಸ್ತು: ದೈತ್ಯ ಹೆಬ್ಬಾವಿನ ಜೊತೆ ಬಾಲಕಿಯ ಆಟ


ವೀಡಿಯೊದ ಕೊನೆಯಲ್ಲಿ ಒಂದು ತಮಾಷೆಯ ಟ್ವಿಸ್ಟ್ ಇದೆ. ವಾಸ್ತವವಾಗಿ ಚಾಲಕ ಕುಳಿತಿರುವ ಟ್ರಕ್ ಮತ್ತೊಂದು ಟ್ರಕ್ ‌ನ ಟ್ರಾಲಿಯಲ್ಲಿದೆ ಮತ್ತು ಅವನು ಸ್ವತಃ ಟ್ರಕ್ ಅನ್ನು ಸಹ ಓಡಿಸುತ್ತಿಲ್ಲ.

Published by:Mahmadrafik K
First published: