ಆಪರೇಷನ್​ಗೆ ಮುನ್ನ ಬಿರಿಯಾನಿ ತರಿಸಿ ಕೊಡಿ ಎಂದು ವೈದ್ಯರನ್ನು ದಂಗಾಗಿಸಿದ ರೋಗಿ

news18
Updated:September 26, 2018, 6:16 PM IST
ಆಪರೇಷನ್​ಗೆ ಮುನ್ನ ಬಿರಿಯಾನಿ ತರಿಸಿ ಕೊಡಿ ಎಂದು ವೈದ್ಯರನ್ನು ದಂಗಾಗಿಸಿದ ರೋಗಿ
  • Advertorial
  • Last Updated: September 26, 2018, 6:16 PM IST
  • Share this:
-ನ್ಯೂಸ್ 18 ಕನ್ನಡ

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮುಂಚಿತವಾಗಿ ರೋಗಿಗಳಿಗೆ ವೈದ್ಯರು ದೈರ್ಯ ತುಂಬುವ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಭೂಪ ಆಪರೇಷನ್​ಗೆ ಮುನ್ನ ಧೈರ್ಯ ತುಂಬಲು ಬಂದ ವೈದ್ಯರಿಗೆ ಬಿರಿಯಾನಿ ಬೇಕೆಂದು ಕೇಳಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

ವೃತ್ತಿಯಲ್ಲಿ‌ ಎಂಜಿನಿಯರ್ ಆಗಿರುವ ದುಬೈನ ಗುಲಾಂ ಅಬ್ಬಾಸ್ ಅವರಿಗೆ ಕೆಲ ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯ ಲ್ಲಿ ಮೂರು ಗಡ್ಡೆಗಳಿರುವುದು ಪತ್ತೆಯಾಗಿತ್ತು. ಇದು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಗಡ್ಡೆಗಳಾಗಿರುವುದರಿಂದ ವೈದ್ಯರು ಆಪರೇಷನ್ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.ಇದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗುಲಾಂ ಅಬ್ಬಾಸ್ ಮುಂದಿನ ದಿನಗಳಲ್ಲಿ ಖಾರದ ಖಾದ್ಯಗಳನ್ನು ಸೇವಿಸುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಮುನ್ನ ತನ್ನ ನೆಚ್ಚಿನ ಚಿಕನ್ ಬಿರಿಯಾನಿಯ ರುಚಿಯನ್ನು ಸವಿಯಬೇಕೆಂದು ಗುಲಾಂ ಬಯಸಿದ್ದಾರೆ. ಇನ್ನೇನು ಆಪರೇಷನ್ ಪ್ರಾರಂಭವಾಗಲಿದೆ ಎನ್ನುವಷ್ಟರಲ್ಲಿ ವೈದ್ಯರಿಗೆ ರೋಗಿ ಚಿಕನ್ ಬಿರಿಯಾನಿಗೆ ಬೇಡಿಕೆ ಇಟ್ಟಿದ್ದಾರೆ.

ರೋಗಿಯ ಈ ಕೋರಿಕೆಯಿಂದ ಆಶ್ಚರ್ಯ ಚಕಿತರಾದ ವೈದ್ಯಕೀಯ ಸಿಬ್ಬಂದಿಗಳು ಕೊನೆಗೂ ಗುಲಾಂಗೆ ಬಿರಿಯಾನಿ ಕೊಡಲು ಸಮ್ಮತಿಸಿದ್ದಾರೆ. ಪತ್ನಿ ತಯಾರಿಸುವ ತನ್ನ ನೆಚ್ಚಿನ ಚಿಕನ್ ಬಿರಿಯಾನಿಯನ್ನು ಸಹೋದರನ ಮೂಲಕ ಆಸ್ಪತ್ರೆಗೆ ತರಿಸಿ ಹೊಟ್ಟೆ ತುಂಬ ಉಂಡಿದ್ದಾರೆ.ಇದೇ ಖುಷಿಯೊಂದಿಗೆ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ ಗುಲಾಂ ಸದ್ಯ ಆರೋಗ್ಯವಾಗಿದ್ದಾರೆಂದು ಡಾ. ಅಲಿ ಖಮ್ಮಸ್ ತಿಳಿಸಿದ್ದಾರೆ. ನಾನು ನನ್ನ ಹೊಟ್ಟೆಯ ಶಸ್ತ್ರ ಚಿಕಿತ್ಸೆಯ ಮೂಲಕ ಜೀವನವನ್ನು ಮರಳಿ ಪಡೆಯಲು ಬಯಸಿದ್ದೆ. ಹೀಗಾಗಿ ತನ್ನ ನೆಚ್ಚಿನ ಆಹಾರದೊಂದಿಗೆ ಆತ್ಮ ವಿಶ್ವಾಸ ಹೆಚ್ಚಿಸಲು ತೀರ್ಮಾನಿಸಿ ಬದುಕುವ ಛಲ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ ಎಂದು ಈ ಅಪರೂಪದ ಘಟನೆಯ ಬಗ್ಗೆ ಗುಲಾಂ ಅಬ್ಬಾಸ್ ತಿಳಿಸಿದರು.
First published:September 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ