• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • ಪಂದ್ಯದಲ್ಲಿ ಸೋತರೂ ಹೀರೋ ಆದ ಧೋನಿ, ಬ್ಯಾಟ್ಸ್​ಮನ್​ನ್ನು ಚಾಲಾಕಿತನದಿಂದ ಔಟ್​ ಮಾಡಿದ ಮಹಿ!

ಪಂದ್ಯದಲ್ಲಿ ಸೋತರೂ ಹೀರೋ ಆದ ಧೋನಿ, ಬ್ಯಾಟ್ಸ್​ಮನ್​ನ್ನು ಚಾಲಾಕಿತನದಿಂದ ಔಟ್​ ಮಾಡಿದ ಮಹಿ!

 • Share this:

  ನ್ಯೂಸ್​ 18 ಕನ್ನಡ

  ಲಂಡನ್(ಜು.19): ಟೀಂ ಇಂಡಿಯಾ ಟಿ 20 ಸೀರೀಸ್​ ಗೆದ್ದ ಬಳಿಕ, ಇಂಗ್ಲೆಂಡ್​ ಎದುರು ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸೋಲನುಭವಿಸಿದೆ. ಮೊದಲ ಏಕದಿನ ಗೆದ್ದ ಬಳಿಕ ಇಂಗ್ಲೆಂಡ್​ ಟೀಂ ಇಂಡಿಯಾಗೆ ಯಾವುದೇ ಅವಕಾಶ ನೀಡಿಲ್ಲ. ಹಾಗೂ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದು, ಸೀರೀಸ್​ ತನ್ನ ಹೆಸರಿಗೆ ಮಾಡಿಕೊಂಡಿದೆ. ಹೀಗಿದ್ದರೂ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಈ ಪಂದ್ಯದಲ್ಲೂ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅತ್ಯಂತ ಕಠಿಣ ಸಂದರ್ಭದಲ್ಲಿ ರನ್​ ಔಟ್​ ಮಾಡಿದ್ದಾರೆ. ಮಹಿಯ ಮಿಡಾಸ್​ ಟಚ್​ ಸ್ಟೇಡಿಯಂನಲ್ಲಿದ್ದ ಪ್ರತಿಯೊಬ್ಬ ಪ್ರೇಕ್ಷಕನನ್ನೂ ಅಚ್ಚರಿಗೀಡು ಮಾಡಿತ್ತು. ಅವರ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ವೈರಲ್​ ಆಗಿದೆ.  ಅದೇನಿದ್ದರೂ ಬರೋಬ್ಬರಿ ಒಂಬತ್ತು ಸೀರೀಸ್​ಗಳನ್ನು ಗೆದ್ದು ಬೀಗುತ್ತಿದ್ದ ಟೀಂ ಇಂಡಿಯಾಗೆ 10 ಸೀರೀಸ್​ ಭಾರೀ ನಿರಾಸೆಯುಂಟು ಮಾಡಿದೆ. ಜಯದ ನಾಗಾಲೋಟದಲ್ಲಿದ್ದ ಭಾರತಕ್ಕೆ ಇಂಗ್ಲೆಂಡ್​ ಕಡಿವಾಣ ಹಾಕಿದೆ, ಈ ಮೂಲಕ ಟಿ 20ಯಲ್ಲಿ ತಾವು ಅನುಭವಿಸಿದ ಸೋಲಿಗೆ ಇಂಗ್ಲೆಂಡ್​ ಸೇಡು ತೀರಿಸಿದೆ.

  First published: