• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಕೋವಿನ್‌ ಪೋರ್ಟಲ್‌ನಲ್ಲಿ ಕೋವಿಡ್-19 ಲಸಿಕೆ ಸ್ಲಾಟ್‌, ಒಟಿಪಿ ವಿಳಂಬ; ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ ಹಾವಳಿ..!

ಕೋವಿನ್‌ ಪೋರ್ಟಲ್‌ನಲ್ಲಿ ಕೋವಿಡ್-19 ಲಸಿಕೆ ಸ್ಲಾಟ್‌, ಒಟಿಪಿ ವಿಳಂಬ; ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ ಹಾವಳಿ..!

ಮೀಮ್ಸ್​

ಮೀಮ್ಸ್​

ಲಸಿಕೆ ಕೋಟಾವನ್ನು ಹೆಚ್ಚಿಸಬೇಕೆಂದು ಹಲವು ರಾಜ್ಯಗಳ ಬೇಡಿಕೆಗಳ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಗುರುವಾರ ಇಂತಹ ಬೇಡಿಕೆಗಳು "ಜನಸಾಮಾನ್ಯರಲ್ಲಿ ಸಂಕುಚಿತ ರಾಜಕೀಯ ಉತ್ಸಾಹವನ್ನು ಹುಟ್ಟುಹಾಕುತ್ತವೆ. ಇದು ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಇಡೀ ಸರ್ಕಾರದ ವಿಧಾನಕ್ಕೆ ಹಾನಿ ಮಾಡುತ್ತದೆ" ಎಂದು ಹೇಳಿದರು.

ಮುಂದೆ ಓದಿ ...
  • Share this:

18-44 ವರ್ಷ ವಯಸ್ಸಿನ ಜನರಿಗೆ ಭಾರತದಾದ್ಯಂತ ಈ ತಿಂಗಳ ಆರಂಭದಿಂದ ಕೋವಿಡ್ - 19 ಲಸಿಕೆ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ವ್ಯಾಕ್ಸಿನ್‌ ಪಡೆಯಲು ಸ್ಲಾಟ್ ಹುಡುಕಲು ಹೆಣಗಾಡುತ್ತಿದ್ದಾರೆ. ಜನರು ಅಧಿಕೃತ ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸುವುದರಿಂದ ಹಿಡಿದು ಅಪಾಯಿಟ್ಮೆಂಟ್‌ ಕಾಯ್ದಿರಿಸಲು ಪ್ರಯತ್ನಿಸುವಾಗ ಒಟಿಪಿಯಲ್ಲಿನ ವಿಳಂಬದವರೆಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೆಬ್‌ಸೈಟ್‌ನಲ್ಲಿ ಗಂಟೆಗಟ್ಟಲೆ ಕಳೆದ ನಂತರ ಮತ್ತು ಅಲರ್ಟ್‌ಗಳನ್ನು ಗಮನಿಸಿದ ನಂತರವೂ ಜನರು ಅಪಾಯಿಟ್ಮೆಂಟ್‌ ಅನ್ನು ನಿಗದಿಪಡಿಸಲು ಕಷ್ಟಪಟ್ಟು ಬೆನ್ನಟ್ಟುತ್ತಿದ್ದಾರೆ. ನೋಂದಾಯಿಸಲು ಪ್ರಯತ್ನಿಸುವಾಗ ಲಕ್ಷಾಂತರ ನಾಗರಿಕರು ಒಮದೇ ವೇಳೆ ವೆಬ್‌ಸೈಟ್‌ ಬಳಸಿದರೆ ಕ್ರ್ಯಾಶ್‌ ಆಗುವ ಕಾರಣ #crashed ಹಾಗೂ #CoWin Registration ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್‌ ಆಗಲು ಪ್ರಾರಂಭಿಸಿತು.


ಆದರೂ, ಲಸಿಕೆಯ ಡೋಸ್‌ ಪಡೆದುಕೊಳ್ಳಲು ದಿನನಿತ್ಯ ಪಡೆಯುತ್ತಿರುವ ಕಷ್ಟದ ಬಗ್ಗೆ ತಮ್ಮ ಕೋಪ ಹೊರಹಾಕಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ. ಇನ್ನು, ಹಲವರು ಪರಿಸ್ಥಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ಮಾಡಿಸಲು ಸೃಜನಶೀಲವಾಗಿ ಬಾಲಿವುಡ್‌ ಚಿತ್ರಗಳ ಡೈಲಾಗ್‌ ಹಾಗೂ ಇತರೆ ಸ್ಟಾರ್‌ಗಳ ಎಡಿಟೆಡ್‌ ಫೊಟೋ, GIFಗಳನ್ನು ಬಳಸಿಕೊಂಡು ಮೀಮ್ಸ್‌ ಅಪ್ಲೋಡ್‌ ಮಾಡುತ್ತಿದ್ದಾರೆ.


ಟ್ವಿಟ್ಟರ್‌ನಲ್ಲಿ ಹೆಚ್ಚು ವೈರಲ್‌ ಆದ ಹಾಗೂ ಕೆಲವು ಅದ್ಭುತ ಮೀಮ್ಸ್‌ಗಳು ಇಲ್ಲಿವೆ ನೋಡಿ..


ಬಾಲಿವುಡ್ ಚಲನಚಿತ್ರ ‘3 ಈಡಿಯಟ್ಸ್’ನಿಂದ ಸ್ಟಿಲ್ ಬಳಸಿ, ಒಬ್ಬ ಬಳಕೆದಾರರು ಸ್ಲಾಟ್ ಕಾಯ್ದಿರಿಸುವ ಅವಸ್ಥೆಯನ್ನು ಎತ್ತಿ ತೋರಿಸಿದರು.


ಇನ್ನೊಬ್ಬರು ಸರ್ಕಾರದ ಅಸಮರ್ಪಕ ಯೋಜನೆ ವಿರುದ್ಧ ಟೀಕೆ ಮಾಡಲು ಮಿಸ್ಟರ್ ಬೀನ್‌ನ ಮೀಮ್ಸ್‌ ಅನ್ನು ಬಳಸಿದರು.


Coronavirus India Updates: ದೇಶದಲ್ಲಿ ತುಸು ತಗ್ಗಿದ ಕೊರೋನಾ ಅಬ್ಬರ; ನಿನ್ನೆ 3,11,170 ಪ್ರಕರಣಗಳು ಪತ್ತೆ


ಮೂರನೆಯವರು ‘ಗ್ಯಾಂಗ್ಸ್ ಆಫ್ ವಾಸ್ಸೆಪುರ್’ ಚಿತ್ರದ ಸ್ಟಿಲ್ ಅನ್ನು ಬಳಸಿದ್ದಾರೆ. “ಯಶಸ್ವಿಯಾಗಿ ಸ್ಲಾಟ್ ಪಡೆದ ನಂತರ” ಜನರು ಇದನ್ನು ಪೋಸ್ಟ್ ಮಾಡುತ್ತಾರೆ ಎಂದು ಹೇಳಲಾಗಿದೆ.


ಕೋವಿನ್ ಅಪ್ಲಿಕೇಶನ್‌ನಲ್ಲಿ ಒಟಿಪಿ ಪಡೆಯಲು ಸಾಧ್ಯವಾಗದ ಕೆಲವು ಬಳಕೆದಾರರು ಇವುಗಳನ್ನು ಶೇರ್‌ ಮಾಡಿದ್ದಾರೆ.


ಸ್ಲಾಟ್ ಅನ್ನು ಬುಕ್ ಮಾಡಲು ಬೆನ್ನಟ್ಟಿದ ನಂತರ "ನಿರೀಕ್ಷಿಸಿದಂತೆ" ಎಂದು ಇನ್ನೊಬ್ಬರು ಮುನ್ನಾಭಾಯಿ ಚಿತ್ರದ ಮೀಮ್ಸ್ ಬರೆದಿದ್ದಾರೆ.


ಅಲ್ಲದೆ, ಒಬ್ಬರು ಸೃಜನಶೀಲ ವ್ಯಕ್ತಿ ಹಿಂದಿ ಬ್ಲಾಕ್‌ಬಸ್ಟರ್‌ ಚಿತ್ರ ‘ದಿಲ್ವಾಲೆ ದುಲ್ಹಾನಿಯಾ ಲೇ ಜಾಯೆಂಗೆ’ ಚಿತ್ರದ ಸ್ಟಿಲ್ ಅನ್ನು ಕೋವಿನ್ ವೆಬ್‌ಸೈಟ್ ಅನ್ನು ಹೋಲಿಸಲು ಪಾರಿವಾಳಗಳಿಗೆ ಆಹಾರವನ್ನು ಪುನಾರಂಭಿಸಿದರು.


‘ದೈನಂದಿನ ದಿನಚರಿಯನ್ನು’ ಹೈಲೈಟ್ ಮಾಡಲು ಇನ್ನೊಬ್ಬರು ‘ಸೇಕ್ರೆಡ್ ಗೇಮ್ಸ್’ನಿಂದ ನವಾಜುದ್ದೀನ್ ಸಿದ್ದಿಕಿ ಅವರ ಡೈಲಾಗ್‌ ಬಳಸಿದ್ದಾರೆ.


ದಿ ಜೋಕರ್, ಎಂಎಸ್ ಧೋನಿ, ಬರ್ನಿ ಸ್ಯಾಂಡರ್ಸ್ ಮತ್ತು ಕೀನು ರೀವ್ಸ್ ಅವರು ಜತೆಗಿರುವ ಮಾರ್ಫ್ಡ್‌ ಫೋಟೋದೊಂದಿಗೆ "ನಾನು ಮತ್ತು ನನ್ನ ಬಾಯ್ಸ್‌ ಒಟಿಪಿಗಾಗಿ ಕಾಯುತ್ತಿದ್ದೇವೆ" ಎಂದು ಬರೆದಿದ್ದಾರೆ.


ಲಸಿಕೆ ಕೋಟಾವನ್ನು ಹೆಚ್ಚಿಸಬೇಕೆಂದು ಹಲವು ರಾಜ್ಯಗಳ ಬೇಡಿಕೆಗಳ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಗುರುವಾರ ಇಂತಹ ಬೇಡಿಕೆಗಳು "ಜನಸಾಮಾನ್ಯರಲ್ಲಿ ಸಂಕುಚಿತ ರಾಜಕೀಯ ಉತ್ಸಾಹವನ್ನು ಹುಟ್ಟುಹಾಕುತ್ತವೆ. ಇದು ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಇಡೀ ಸರ್ಕಾರದ ವಿಧಾನಕ್ಕೆ ಹಾನಿ ಮಾಡುತ್ತದೆ" ಎಂದು ಹೇಳಿದರು.

top videos


    ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ರಾಜಸ್ಥಾನ ಮತ್ತು ದೆಹಲಿಯ ಆರೋಗ್ಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು ಅಥವಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಚಿವರು ನಡೆಸಿದ ಸಂವಾದದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.


    ತಮ್ಮ ರಾಜ್ಯಗಳಿಗೆ ಲಸಿಕೆಗಳ ಕೋಟಾವನ್ನು ಹೆಚ್ಚಿಸಲು ಹಲವಾರು ಆರೋಗ್ಯ ಮಂತ್ರಿಗಳ ಸಾಮಾನ್ಯ ಬೇಡಿಕೆಯ ಮೇರೆಗೆ, ವರ್ಧನ್ ವ್ಯಾಕ್ಸಿನೇಷನ್ ನೀತಿಯನ್ನು ರೂಪಿಸಿದ ಅಂಶಗಳನ್ನು ವಿವರಿಸಿದರು ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

    First published: