ಹುಟ್ಟುಹಬ್ಬವು (Birthday) ಪ್ರತಿಯೊಬ್ಬರ ಜೀವನದಲ್ಲಿ ಒಂದು ವಿಶೇಷ ಸಂದರ್ಭವಾಗಿದೆ. ಈ ಸಂತೋಷದ ಈವೆಂಟ್ (Event) ಅನ್ನು ಹೆಚ್ಚು ಆಡಂಬರ ಮತ್ತು ಉತ್ಸಾಹದಿಂದ ಆಚರಿಸಿಕೊಳ್ಳಲ್ಲು ಎಲ್ಲಾರಿಗೂ ಇಷ್ಟವಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಚರಿಸಿಕೊಳ್ಳುವುದು ಇನ್ನೂ ಹೆಚ್ಚು ಖುಷಿ ನೀಡುತ್ತದೆ. ಆದರೆ, ವಿದ್ಯಾಭ್ಯಾಸ (Education), ಕೆಲಸ ಅಥವಾ ವ್ಯಾಪಾರದ ಕಾರಣದಿಂದ ನಾವು ನಮ್ಮ ವಾಸ್ತವ್ಯದ ಸ್ಥಳದಿಂದ ದೂರ ಹೋಗಿ ಜೀವನ ಸಾಗಿಸಬೇಕಾಗುತ್ತದೆ. ಜವಾಬ್ದಾರಿಯ ಹೊರೆಯಿಂದಾಗಿ, ನಾವು ವಿಶೇಷ ಸಂದರ್ಭಗಳಲ್ಲಿ ಮತ್ತು ಹಬ್ಬಗಳಲ್ಲಿ ಮನೆಗೆ ಮರಳಲು ಸಾಕಷ್ಟು ಕಷ್ಟವಾಗುತ್ತದೆ.
ಕೆಲಸ ಹಾಗೂ ವಿದ್ಯಾಭ್ಯಾಸದ ಕಾರಣದಿಂದ ನೀವು ಮನೆಯಿಂದ ದೂರವಿದ್ದಾಗ, ನಿಮ್ಮ ಜನ್ಮದಿನವನ್ನು ಯಾರಾದರೂ ಅಂದರೆ ನಿಮ್ಮ ಹತ್ತಿರದ ನೆರೆಹೊರೆಯವರು ಅಥವಾ ನಿಮ್ಮ ಕಚೇರಿ ಸಹೋದ್ಯೋಗಳು ಅಥವಾ ಯಾರಾದರೂ ಆಗಿರಬಹುದು ನೆನಪಿಸಿಕೊಂಡು ಆಚರಿಸಿದರೆ ಅದು ಹೆಚ್ಚು ಖುಷಿ ಅನ್ನು ನೀಡುತ್ತದೆ ಹಾಗೂ ಅಚ್ಚರಿಯನ್ನು ಮುಡಿಸುತ್ತದೆ.
ಇದೇ ಖುಷಿ, ಸಂಭ್ರಮ ಕಂಪನಿಯಲ್ಲಿ ಕೆಲಸ ಮಾಡುವ ಸೆಕ್ಯುರಿಟಿ ಗಾರ್ಡ್‌ಗೆ ಸಿಕ್ಕಿದೆ. ಹೇಗೆ? ಏನು, ಎತ್ತ ಅಂತಾ ತಳಿಯಲು ಮುಂದೆ ಓದಿ
ಸೆಕ್ಯುರಿಟಿ ಗಾರ್ಡ್‌ನ ಜನ್ಮದಿನ ಆಚರಿಸಿದ ಕಂಪನಿಯ ಉದ್ಯೋಗಿಗಳು
ವರ್ಲ್ಡ್ ಆಫ್ ಬಝ್‌ನ ವರದಿಯ ಪ್ರಕಾರ, ಈಗ ವೈರಲ್ ಕ್ಲಿಪ್ ಅನ್ನು ಟಿಕ್ ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಎಂಟು ವರ್ಷಗಳ ಕಾಲ ಮಲೇಷ್ಯಾದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ಗೆ ಮನೆಗೆ ಮರಳಲು ಅವಕಾಶ ಸಿಕ್ಕಿರಲ್ಲಿಲ್ಲ. ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಒಬ್ಬರೇ ಆಚರಿಕೊಳ್ಳುತ್ತಿದ್ದು. ದುಡಿದ ಹಣದಲ್ಲಿ ಒಂದು ಭಾಗವನ್ನು ಕುಟುಂಬಕ್ಕೆ, ಅವರ ಜೀವನೋಪಾಯಕ್ಕೆ ಕಳುಹಿಸುವುದು ಅವರ ಏಕೈಕ ಜವಾಬ್ದಾರಿಯಾಗಿತ್ತು ಎಂದು ಟಿಕ್ ಟಾಕ್ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿದೆ ಏಷ್ಯಾದ ಅತಿ ದೊಡ್ಡ ಪಬ್, ವೀಕೆಂಡ್ ಪಾರ್ಟೀ ಮಾಡೋರಿಗೆ ಸ್ವರ್ಗ!
ನೌಕರರು ಕಚೇರಿ ಆವರಣದೊಳಗೆ ಭದ್ರತಾ ಸಿಬ್ಬಂದಿಗೆ ಕರೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅವರು ಪ್ರವೇಶಿಸಿದ ತಕ್ಷಣ, ಎಲ್ಲರೂ ಅವರನ್ನು ಸುತ್ತುವರೆದಿಕೊಂಡು ಕೋರಸ್ನಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಹಾಡಲು ಪ್ರಾರಂಭಿಸಿದರು.
ಉದ್ಯೋಗಿಗಳ ಪ್ರೀತಿಗೆ ಕಣ್ಣೀರಿಟ್ಟ ಭದ್ರತಾ ಸಿಬ್ಬಂದಿ
ಅಚ್ಚರಿಗೊಂಡ ಸೆಕ್ಯುರಿಟಿ ಗಾರ್ಡ್ ಖುಷಿಯಿಂದ ಕಣ್ಣೀರನ್ನು ಸುರಿಸುತ್ತಿರುವುದನ್ನು ಹಾಗೂ ಕಣ್ಣೀರಿನ ಜೊತೆಗೆ ನಗುತ್ತ ಎಲ್ಲಾ ಉದ್ಯೋಗಿಗಳಿಗೆ ಕೃತಜ್ಞತೆಯ ಸಂಕೇತವಾಗಿ ನಮಸ್ಕರಿಸುತ್ತಿರುವುದನ್ನು ಹಾಗೂ ಕಚೇರಿಯ ನೌಕರರು ಸೆಕ್ಯೂರಿಟಿ ಗಾರ್ಡ್‌ಗೆ ಹುಟ್ಟುಹಬ್ಬದ ಕೇಕ್ ಕಟ್ ಮಾಡಿಸುತ್ತಿರುವುದನ್ನು ನೀವು ವೀಡಿಯೊದಲ್ಲಿ ಗಮನಿಸಬಹುದು.
ಕೇಕ್ ಕತ್ತರಿಸುವ ಸಮಾರಂಭದ ನಂತರ, ಸಿಬ್ಬಂದಿಗೆ ವ್ಯಕ್ತಿ ಒಬ್ಬರು ಕಣ್ಣೀರನ್ನು ಒರೆಸಿಸಿಕೊಳ್ಳಲು ಟಿಶ್ಯೂ ನೀಡಿದರು. ಎಂಟು ವರ್ಷಗಳ ನಂತರ ಇದು ತನ್ನ ಮೊದಲ ಹುಟ್ಟುಹಬ್ಬವಾಗಿದ್ದು, ಸ್ವಲ್ಪ ಹಣ ಸಂಪಾದಿಸಲು ಮನೆಯಿಂದ ಬಂದಿದ್ದೇನೆ ಎಂದು ಭದ್ರತಾ ಸಿಬ್ಬಂದಿ ಭಾವನಾತ್ಮಕವಾಗಿ ಹೇಳಿದರು. ಪ್ರತಿ ವರ್ಷ ತನ್ನ ಹುಟ್ಟುಹಬ್ಬದಂದು ತನ್ನ ಕುಟುಂಬವನ್ನು ನೆನೆದು ಅವರಿಗಾಗಿ ಕಣ್ಣೀರು ಹಾಕುತ್ತಿದ್ದೆ ಎಂದು ಭದ್ರತಾ ಸಿಬ್ಬಂದಿ ಹೇಳಿಕೊಂಡಿದರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಇದೀಗ ಇಂಟರ್‌ನೆಟ್‌ನಲ್ಲಿ ವಿಡಿಯೋ ವೈರಲ್ ಆಗಿದ್ದು ಎಲ್ಲಾರ ಮನವನ್ನು ಸೆಳೆಯುತ್ತಿದೆ. ಈ ವೀಡಿಯೋಗೆ ಹಲವು ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಬಂದಿದ್ದು. ಕಾಮೆಂಟ್ ವಿಭಾಗದಲ್ಲಿ ಭದ್ರತಾ ಸಿಬ್ಬಂದಿಯನ್ನು ಅಚ್ಚರಿಗೊಳಿಸುವ ಕಂಪನಿಯ ಚಿಂತನಶೀಲ ಕಲ್ಪನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹೊಗಳಿದ್ದಾರೆ.
ಹೆಚ್ಚಿನ ಕೆಲಸದ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಪರಿಗಣಿಸುವುದಿಲ್ಲ, ಈ ನಿರ್ದಿಷ್ಟ ಕಂಪನಿಯ ಗೆಸ್ಚರ್ ನಿಜಕ್ಕೂ ಶ್ಲಾಘನೀಯ ಎಂದು ಅವರು ಇಂಟರ್‌ನೆಟ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳು ಸ್ಥಳವನ್ನು ಸುರಕ್ಷಿತವಾಗಿರಿಸುವಲ್ಲಿ ಅವರ ಕೆಲಸಕ್ಕಾಗಿ ಗೌರವ ಮತ್ತು ಕೃತಜ್ಞತೆಗೆ ಅರ್ಹರಾಗಿದ್ದಾರೆ ಮತ್ತು ಈ ವ್ಯಕ್ತಿಗೆ ಅವರು ಅರ್ಹವಾದ ಪ್ರೀತಿಯನ್ನು ಪಡೆಯುವುದನ್ನು ನೋಡಿ ನಾವು ನಿಜವಾಗಿಯೂ ಸಂತೋಷಪಡುತ್ತೇವೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ