Leave Letter: ಈ ಪತ್ರ ನೋಡಿದ್ರೆ ಗೊತ್ತಾಗುತ್ತೆ ಈ ಉದ್ಯೋಗಿ ಎಷ್ಟು ಪ್ರಾಮಾಣಿಕ ಅಂತ, ನೀವೂ ಒಮ್ಮೆ ನೋಡಿ

ಎಷ್ಟೋ ಜನ ಉದ್ಯೋಗಿಗಳು ಬೇರೆ ಕೆಲಸದ ಸಂದರ್ಶನಕ್ಕಾಗಿ ತಾವು ಕೆಲಸ ಮಾಡುತ್ತಿರುವ ಕಂಪನಿಯವರಿಗೆ ಗೊತ್ತಾಗದಂತೆ ಯಾವುದೋ ಒಂದು ನೆಪ ಹೇಳಿ ಆ ದಿನ ರಜೆ ತಗೊಂಡು, ಯಾರಿಗೂ ಗೊತ್ತಾಗದಂತೆ ಹೋಗಿ ಆ ಸಂದರ್ಶನವನ್ನು ನೀಡಿ ಬರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಉದ್ಯೋಗಿ ಈ ವಿಷಯದಲ್ಲಿ ತುಂಬಾನೇ ಪ್ರಮಾಣಿಕನಾಗಿದ್ದಾನೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಎಷ್ಟೋ ಜನ ಉದ್ಯೋಗಿಗಳು (Employee) ಬೇರೆ ಕೆಲಸದ ಸಂದರ್ಶನಕ್ಕಾಗಿ ತಾವು ಕೆಲಸ (Work) ಮಾಡುತ್ತಿರುವ ಕಂಪನಿಯವರಿಗೆ ಗೊತ್ತಾಗದಂತೆ ಯಾವುದೋ ಒಂದು ನೆಪ ಹೇಳಿ ಆ ದಿನ ರಜೆ ತಗೊಂಡು, ಯಾರಿಗೂ ಗೊತ್ತಾಗದಂತೆ ಹೋಗಿ ಆ ಸಂದರ್ಶನವನ್ನು ನೀಡಿ ಬರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಉದ್ಯೋಗಿ ಈ ವಿಷಯದಲ್ಲಿ ತುಂಬಾನೇ ಪ್ರಮಾಣಿಕನಾಗಿದ್ದಾನೆ ನೋಡಿ. ಈ ಉದ್ಯೋಗಿಯ ಪ್ರಮಾಣಿಕವಾದ ರಜೆಯ ಅರ್ಜಿಯನ್ನು (Leave Note) ನೀವು ನೋಡಿದರೆ ನಿಜಕ್ಕೂ ಶಾಕ್ ಆಗ್ತೀರಾ. ಈ ರಜೆಯನ್ನು ಕೋರಿ ಬರೆದಂತಹ ಅರ್ಜಿಯು ಈಗ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡುತ್ತಿದೆ. ಇಷ್ಟೇ ಅಲ್ಲದೆ ಈ ಅರ್ಜಿ ವೈರಲ್ (Viral) ಸಹ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಷ್ಟಕ್ಕೂ ರಜಾರ್ಜಿಯಲ್ಲಿ ಬರೆದಿರುವುದೇನು?
ಸಾಹಿಲ್ ಎಂಬ ಟ್ವಿಟ್ಟರ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ವೈರಲ್ ಮಾಡಿದ್ದಾರೆ ನೋಡಿ. "ನನ್ನ ಜೂನಿಯರ್ ಒಬ್ಬರು ತುಂಬಾನೆ ಒಳ್ಳೆಯ ಮನುಷ್ಯ ನೋಡಿ, ಬೇರೆ ಕೆಲಸದ ಸಂದರ್ಶನಕ್ಕೆ ಹಾಜರಾಗಲು ರಜೆ ಕೇಳುತ್ತಿದ್ದಾರೆ" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅರ್ಜಿಯಲ್ಲಿ, ಉದ್ಯೋಗಿಯು "ಪ್ರೀತಿಯ ಸರ್, ನಾನು ಮತ್ತೊಂದು ಕಂಪನಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ಹೋಗುತ್ತಿದ್ದೇನೆ, ಹಾಗಾಗಿ ನನಗೆ ಇಂದು ರಜೆಯ ಅಗತ್ಯವಿದೆ ಎಂದು ತಿಳಿಸಲು ನಾನು ನಿಮಗೆ ಈ ಇ-ಮೇಲ್ ಅನ್ನು ಕಳುಹಿಸುತ್ತಿದ್ದೇನೆ. ನೀವು ದಯವಿಟ್ಟು ನನ್ನ ಈ ರಜೆಯನ್ನು ಅನುಮೋದಿಸಿ ಎಂದು ನಾನು ವಿನಂತಿಸಲು ಬಯಸುತ್ತೇನೆ" ಎಂದು ಬರೆದಿದ್ದನು.

ಸರಳವಾದ ಮತ್ತು ಚಿಕ್ಕದಾದ ರಜೆಯನ್ನು ಕೋರಿ ಬರೆದ ಅರ್ಜಿ
ತುಂಬಾನೇ ಸರಳವಾಗಿ ಮತ್ತು ಚಿಕ್ಕದಾಗಿ ಇತ್ತು ಈ ರಜೆಯನ್ನು ಕೋರಿ ಬರೆದಿರುವ ಅರ್ಜಿ ಎಂದು ಹೇಳಬಹುದು. ಈ ಅಪ್ಲಿಕೇಶನ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರನ್ನು ತುಂಬಾನೇ ಮೆಚ್ಚಿಸಿದೆ. ಒಬ್ಬ ವ್ಯಕ್ತಿಯು ಇದಕ್ಕೆ "ನಿಮ್ಮ ಕೈಕೆಳಗಿನವರಲ್ಲಿ ಆ ಮಟ್ಟದ ವಿಶ್ವಾಸವನ್ನು ಒದಗಿಸುವುದು ಕಷ್ಟ. ಅಭಿನಂದನೆಗಳು ಸಹೋದರ. ನೀವು ಉದ್ಯೋಗಿ ಸ್ನೇಹಿಯಾಗಿರಬೇಕು ಮತ್ತು ಪ್ರೀತಿಯ ಮೇಲಾಧಿಕಾರಿಯಾಗಿರಬೇಕು" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Van life: ವ್ಯಾನ್ ಅನ್ನು ಮನೆಯನ್ನಾಗಿಸಿ ಜೀವನ ಸಾಗಿಸುತ್ತಿದ್ದಾಳೆ 35 ವರ್ಷದ ಈ ಮಹಿಳೆ!

ಹೀಗೆ ಅಪ್ಲಿಕೇಶನ್ ಬರೆಯುವ ಮೂಲಕ, ವ್ಯಕ್ತಿಯು ‘ನಾನು ಈ ಕಂಪನಿ ಬಿಟ್ಟು ಹೋಗುತ್ತಿದ್ದೇನೆ, ನನ್ನನ್ನು ಇಲ್ಲೇ ಇರಿಸಿಕೊಳ್ಳಲು ನೀವು ಬಯಸಿದರೆ ನನ್ನ ಸಂಬಳವನ್ನು ಜಾಸ್ತಿ ಮಾಡಿ’ ಎನ್ನುವ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ನಂಬುವ ಜನರು ಇದ್ದಾರೆ.

ವೈರಲ್ ಪೋಸ್ಟ್ ಗೆ ಕಾಮೆಂಟ್ ಗಳು ಹೀಗಿವೆ
ಈ ಪೋಸ್ಟ್ ನೋಡಿ ಇನ್ನೊಬ್ಬ ವ್ಯಕ್ತಿ "ಪ್ರಾಯಶಃ ಅವನ ಉದ್ದೇಶ ಅವನಿಗೆ ನೀವು ಈ ಕಂಪನಿಯನ್ನು ಏಕೆ ಬಿಟ್ಟು ಹೋಗುತ್ತಿರುವಿರಿ ಎಂದು ಅವರನ್ನು ಕೇಳಲಿ ಮತ್ತು ಅವರನ್ನು ಆ ಸಂದರ್ಶನಕ್ಕೆ ಹಾಜರಾಗುವುದನ್ನು ನಿಲ್ಲಿಸುವಂತೆ ಮಾಡಲಿ ಎಂಬುದಾಗಿರಬಹುದು. ಸಂದರ್ಶನದ ಫಲಿತಾಂಶ ಅಂತೂ ತಿಳಿದಿಲ್ಲ, ಆದರೆ ಪತ್ರವು ಅವನ ಕುಂದು ಕೊರತೆಗಳನ್ನು ಕೇಳುವಂತೆ ನಿಮ್ಮನ್ನು ಪ್ರೇರೇಪಿಸಿದರೆ, ಅವನ ಉದ್ದೇಶವು ಈಡೇರುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Veena-Vani Twins: ಅಪರೂಪದ ಸಾಧನೆ ಮಾಡಿದ ಹೈದ್ರಾಬಾದ್​​ನ ಸಯಾಮಿ ಅವಳಿ ಸೋದರಿಯರು

ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಶಾಲೆ ದಿನಗಳಲ್ಲಿ ಇದ್ದ ಒಬ್ಬ ಸ್ನೇಹಿತನ ಬಗ್ಗೆ ನೆನಪಿಸಿತು ಎಂದು ಹೇಳಿ ಅವನ ಕಥೆಯನ್ನು ಕಾಮೆಂಟ್ ಮಾಡಿದ್ದಾರೆ ನೋಡಿ. ಆ ಘಟನೆಯನ್ನು ಇಲ್ಲಿ ಹೀಗೆ ಹೇಳಿ ಕೊಂಡಿದ್ದಾರೆ ನೋಡಿ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನನ್ನ ಗೆಳೆಯ ಮತ್ತು ಅವನ ವಯಸ್ಸಾದ ಮನೆಯ ಮಾಲೀಕರು ಒಂದು ದಿನ ಉಪಾಹಾರಕ್ಕಾಗಿ ಅವನನ್ನು ಆಹ್ವಾನಿಸಿದರು. ಉಪಾಹಾರದ ನಂತರ, ಅವರು ಪತ್ರಿಕೆ ಜಾಹೀರಾತು ಬುಕಿಂಗ್ ಸ್ಥಳಕ್ಕೆ ಹೋಗಬಹುದೇ ಒಂದು ಜಾಹೀರಾತು ಕೊಡಬೇಕಿತ್ತು ಅಂತ ಅವನಿಗೆ ಕೇಳಿದರು. ಆಗ ನನ್ನ ಗೆಳೆಯ ಗೌರವಪೂರ್ವಕವಾಗಿ ಒಪ್ಪಿಕೊಂಡನು. ಆ ಜಾಹೀರಾತಿನಲ್ಲಿ ಅವರ ಮನೆಯನ್ನು ಹೊಸಬರಿಗೆ ಬಾಡಿಗೆಗೆ ನೀಡುವುದು ಆಗಿತ್ತು.

ಸಾಹಿಲ್ ಅವರು ಒಂದು ವಿಚಿತ್ರವಾದ ರಾಜೀನಾಮೆ ಪತ್ರದ ವೈರಲ್ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಈ ರಜೆಯ ಅರ್ಜಿಯ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದು ಈಗ ವೈರಲ್ ಆಗುತ್ತಿದೆ. ಚಿಕ್ಕದಾಗಿ ಮತ್ತು ಚೊಕ್ಕದಾಗಿ ಬರೆದ ರಾಜೀನಾಮೆ ಪತ್ರದ ಫೋಟೋವನ್ನು ಬಳಕೆದಾರರೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಸರಳವಾಗಿ "ಬೈ ಬೈ ಸರ್" ಎಂದು ಬರೆದಿದೆ.
Published by:Ashwini Prabhu
First published: