ಚಿಲಿ: ಯಾವುದೇ ಕಂಪನಿ (Company) ಇರಲಿ, ಅಲ್ಲಿನ ನೌಕರರಿಗೆ (Employee) ಸಂಬಳ (Salary) ನಿಮ್ಮ ಖಾತೆಗೆ (Account) ಬಂದಿದೆ ಎಂಬ ಸಂದೇಶ (Message) ಬಂದ ಕೂಡಲೇ ಸ್ವರ್ಗಕ್ಕೆ (Heaven) ಮೂರೇ ಗೇಣು ಎನ್ನುವಂತಾಗುತ್ತದೆ. ಅಂಥದ್ರಲ್ಲಿ ಈತನಿಗೆ ಒಂದು ಬಾರಿಯಲ್ಲ, ಎರಡು ಬಾರಿಯೂ ಅಲ್ಲ, ಬರೋಬ್ಬರಿ 286 ಬಾರಿ ಸ್ಯಾಲರಿ ಕ್ರೆಡಿಟೆಡ್ (Salary Credited) ಅಂತ ಮೆಸೇಜ್ ಬಂದಿದ್ಯಂತೆ. ಬ್ಯಾಂಕ್ಗೆ (Bank) ಹೋಗಿ ನೋಡಿದಾಗ ಬರೋಬ್ಬರಿ 1.46 ಕೋಟಿ ರೂಪಾಯಿ ಈತನ ಸ್ಯಾಲರಿ ಅಕೌಂಟ್ಗೆ (Salary Account) ಬಂದಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ? ಒಂದೇ ತಿಂಗಳಿಗೆ 286 ಬಾರಿ ಸಂಬಳ ಪಡೆದ ಆ ಅದೃಷ್ಟವಂತ ಯಾರು? ಮುಂದೆ ಆತ ಮಾಡಿದ್ದೇನು? ಕಂಪನಿಯ ಈ ಮಹಾ ಪ್ರಮಾದಕ್ಕೆ ಕಾರಣ ಏನು? ಈ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ…
43 ಸಾವಿರದ ಬದಲು ಖಾತೆಗೆ ಬಂತು 1.46 ಕೋಟಿ ರೂಪಾಯಿ!
ಹೌದು, ಇಂಥದ್ದೊಂದು ಘಟನೆ ನಡೆದಿದ್ದು ಚಿಲಿ ದೇಶದಲ್ಲಿ. ಅಲ್ಲಿನ ಖಾಸಗಿ ಕಂಪನಿಯಲ್ಲಿ ನೌಕರನೊಬ್ಬ ಕೆಲಸ ಮಾಡುತ್ತಿದ್ದ. ಆತನಿಗೆ ಮಾಸಿಕ 43 ಸಾವಿರದಷ್ಟು ಸ್ಯಾಲರಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಆತನ ಸ್ಯಾಲರಿ ಅಕೌಂಟ್ಗೆ 43 ಸಾವಿರ ರೂಪಾಯಿ ಬದಲು ಬರೋಬ್ಬರಿ 1.46 ಕೋಟಿ ರೂಪಾಯಿ ಬಂದಿದೆ.
ಒಂದೇ ತಿಂಗಳು 286 ಬಾರಿ ಸಂಬಳ ಹಾಕಿದ ಕಂಪನಿ
ಕೋಲ್ಡ್ ಕಟ್ಗಳ ಅತಿದೊಡ್ಡ ಉತ್ಪಾದಕರಲ್ಲಿ ಒಬ್ಬರಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್) ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ಈ ರೀತಿ ಬಂಪರ್ ಸ್ಯಾಲರಿ ಬಂದಿದೆ. ಆತ ತನ್ನ ಮಾಮೂಲಿ ಸಂಬಳ 500,000 ಪೆಸೊಗಳ ಅಂದರೆ ಭಾರತೀಯ ಲೆಕ್ಕದಲ್ಲಿ 43,000 ರೂಪಾಯಿ ಪಡೆಯಬೇಕಿತ್ತು. ಆದರೆ ಕಂಪನಿ ಆಕಸ್ಮಿಕವಾಗಿ ಆತನಿಗೆ ಸಂಬಳದ 286 ಪಟ್ಟು ಹೆಚ್ಚಿಗೆ ಅಂದರೆ 165,398,851 ಚಿಲಿಯ ಪೆಸೊಗಳನ್ನು ಅಂದರೆ ಭಾರತೀಯ ಲೆಕ್ಕದಲ್ಲಿ ಸುಮಾರು 1.46 ಕೋಟಿ ರೂಪಾಯಿಗಳನ್ನು ಪಾವತಿಸಿದೆ.
ಇದನ್ನೂ ಓದಿ: Lottery: ಅಸ್ಸಾಂ ಕಾರ್ಮಿಕನಿಗೆ ಬಂತು 80 ಲಕ್ಷ ಹಣ! ಎದ್ನೋ ಬಿದ್ನೋ ಅಂತ ಪೊಲೀಸ್ ಠಾಣೆಗೆ ಓಡಿದ ಆಸಾಮಿ!
ದಾಖಲೆ ಪರಿಶೀಲನೆ ಬಳಿಕ ಪ್ರಮಾದ ಬೆಳಕಿಗೆ
ಹಣಕಾಸಿನಲ್ಲಿ ವ್ಯತ್ಯಾಸ ವಗಿದ್ರಿಂದ ಕಂಪನಿಯ ಆಡಳಿತ ಮಂಡಳಿಯು ದಾಖಲೆಗಳನ್ನು ಪರಿಶೀಲಿಸಿದ ನಂತರ, ಉದ್ಯೋಗಿಗೆ ಅವರ ಮಾಸಿಕ ವೇತನದ ಸುಮಾರು 286 ಪಟ್ಟು ತಪ್ಪಾಗಿ ಪಾವತಿಸಲಾಗಿದೆ ಎಂದು ಅರಿವಾಗಿದೆ. ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸಲು ಉದ್ಯೋಗಿಗೆ ಸೂಚನೆ ನೀಡಿದೆ.
ಹಣ ವಾಪಸ್ ಹಾಕ್ತೀನಿ ಎಂದ ನೌಕರ
ಹಣ ವಾಪಸ್ ಹಾಕುತ್ತೀನಿ ಎಂದು ಒಪ್ಪಿಕೊಂಡ ನೌಕರ ನಂತರ ಉಲ್ಟಾ ಹೊಡೆದಿದ್ದಾನೆ. ಒಂದೆರಡು ದಿನ ಕಂಪನಿಯ ಸಂಪರ್ಕಕ್ಕೆ ಸಿಗದೇ ಶಾಕ್ ಕೊಟ್ಟಿದ್ದಾನೆ. ಬಳಿಕ ಹೇಗೋ ಆತನನ್ನು ಸಂಪರ್ಕ ಮಾಡಿ, ಹಣ ವಾಪಸ್ ಹಾಕಲು ಮನವಿ ಮಾಡಿದ್ದಾರೆ. ನಾನು ನಿದ್ದೆ ಮಾಡುತ್ತಿದ್ದೇನೆ. ಆಮೇಲೆ ಬ್ಯಾಂಕ್ಗೆ ಹೋಗಿ, ಹಣ ವಾಪಸ್ ಹಾಕ್ತೇನೆ ಅಂತ ಮಾತು ಕೊಟ್ಟಿದ್ದಾನೆ.
ಇದನ್ನೂ ಓದಿ: Dream-11: 2 ಕೋಟಿ ರೂಪಾಯಿ ಗೆದ್ದು ಶ್ರೀಮಂತನಾದ ಚಾಲಕ; 49 ರೂಪಾಯಿಗೆ ಹೊಡೆಯಿತು ಜಾಕ್ಪಾಟ್!
ಕಂಪನಿಗೆ ರಾಜೀನಾಮೆ ನೀಡಿ, ಹಣದೊಂದಿಗೆ ಎಸ್ಕೇಪ್
ಇಷ್ಟೆಲ್ಲಾ ಆದ ಬಳಿಕ ಆ ಆಸಾಮಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ತನ್ನ ಅಕೌಂಟ್ಗೆ ಬಂದ 1.46 ಕೋಟಿ ರೂಪಾಯಿ ಹಣ ತೆಗೆದಿಕೊಂಡು, ಯಾರ ಸಂಪರ್ಕಕ್ಕೂ ಸಿಗದಂತೆ ಎಸ್ಕೇಪ್ ಆಗಿದ್ದಾನೆ. ತಾನು ಮಾಡಿದ ಯಡವಟ್ಟಿನಿಂದ ತಲೆ ಮೇಲೆ ಕೈಹೊತ್ತು ಕುಳಿತ ಸಂಸ್ಥೆ ಮುಖ್ಯಸ್ಥರು, ಇದೀಗ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ