• Home
  • »
  • News
  • »
  • trend
  • »
  • Viral Video: ಮಾಸ್ಟರ್‌ ಚೀಫ್ ಆಗಿ ತಾಯಿಯನ್ನ ರಿಲೀವ್‌ ಮಾಡಿದ ಮಗ! ವೈರಲ್ ಆಯ್ತು ವಿಡಿಯೋ

Viral Video: ಮಾಸ್ಟರ್‌ ಚೀಫ್ ಆಗಿ ತಾಯಿಯನ್ನ ರಿಲೀವ್‌ ಮಾಡಿದ ಮಗ! ವೈರಲ್ ಆಯ್ತು ವಿಡಿಯೋ

ತಾಯಿಯ ಸಂತೋಷದ ಘಳಿಗೆ

ತಾಯಿಯ ಸಂತೋಷದ ಘಳಿಗೆ

Proud Moment: ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗವನ್ನು ಮಾಡಬೇಕು ಎಂಬುದು ಪ್ರತೀ ಪೋಷಕರ ಕನಸಾಗಿರುತ್ತದೆ. ಅದರಲ್ಲೂ ತಂದೆ ತಾಯಿ ಮಾಡುವ ಕೆಲಸವನ್ನೇ ಮಕ್ಕಳು ಮುಂದುವರೆಸಿಕೊಂಡು ಹೋದರೆ ಅದು ಹೆಮ್ಮೆಯ ವಿಚಾರ ಅಂತಾನೇ ಹೇಳಬಹುದು. ಅಂತಹದ್ದೇ ಘಟನೆ ಇಲ್ಲೊಂದು ನಡೆದಿದೆ.

ಮುಂದೆ ಓದಿ ...
  • Share this:

ಮಕ್ಕಳು ಸಮಾಜದಲ್ಲಿ ಒಂದು ಗೌರವಯುತವಾದ ಸ್ಥಾನ ಪಡೆದುಕೊಳ್ಳುವುದು ತಂದೆ ತಾಯಂದಿರಿಗೆ ಹೆಮ್ಮೆಯ ವಿಚಾರ. ಅದರಲ್ಲೂ ತಂದೆ ತಾಯಿಯ ವೃತ್ತಿಯನ್ನೇ ಮಕ್ಕಳು ಆಯ್ಕೆ ಮಾಡಿಕೊಳ್ಳೋದು ಅವರ ಪಾಲಿಗೆ ಇನ್ನಷ್ಟು ಸಂತೋಷದ ವಿಚಾರವೇ ಹೌದು. ಇಲ್ಲೊಬ್ಬ ಮಗ ಮಾಸ್ಟರ್‌ ಚೀಫ್‌ ಆಗಿರೋ ತಾಯಿಯನ್ನು ಹುದ್ದೆಯಿಂದ ಮುಕ್ತಗೊಳಿಸಿರುವ ಘಟನೆಯ ವಿಡಿಯೋ (Video) ನೆಟ್ಟಿಗರನ್ನು ಭಾವುಕಗೊಳಿಸಿದೆ. ಸದ್ಯ ಸಾಮಾಜಿಕ ಜಾಲತಾಣವಾದ (Social Media) ಇನ್‌ ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಆ ತಾಯಿ ಅಮೆರಿಕದ ನೌಕಾಪಡೆಯಲ್ಲಿ ಮಾಸ್ಟರ್‌ ಚೀಫ್‌ (Master Chief) ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸತತ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಆ ಮಹಿಳೆ. ಆದರೆ ಅದೇ ಮಹಿಳೆಯ ಮಗ ಆ ಸ್ಥಾನಕ್ಕೆ ಬಂದು ತಾಯಿಯನ್ನು ಸೇವೆಯಿಂದ ರಿಲೀವ್‌ ಮಾಡಿದ್ದಾನೆ. ಈ ಒಂದು ಅಪೂರ್ವ ಘಟನೆಗೆ ಅಲ್ಲಿದ್ದವರೆಲ್ಲ ಭಾವುಕರಾಗಿದ್ದರು.


ಹೌದು. ಅಮೆರಿಕದಲ್ಲಿ 30 ವರ್ಷಗಳ ಕಾಲ ಅಮೆರಿಕದ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಾಸ್ಟರ್‌ ಚೀಫ್‌ ತಾಯಿಯನ್ನು ಮಗನೇ ರಿಲೀವ್‌ ಮಾಡಿದ್ದಾನೆ. ಇನ್‌ ಸ್ಟಾಗ್ರಾಂ ಬಳಕೆದಾರರ ಲಾಭರಹಿತ ಕಾರ್ಟೆಲ್‌ನಿಂದ ಪೋಸ್ಟ್ ಮಾಡಲಾದ ಕ್ಲಿಪ್ ನೆಟ್ಟಿಗರ ಗಮನವನ್ನು ಸೆಳೆದಿದೆ.


ವಿಡಿಯೋದಲ್ಲೇನಿದೆ?


ವಿಡಿಯೋದಲ್ಲಿ ಸಮವಸ್ತ್ರ ಧರಿಸಿದ ತಾಯಿಯ ಎದುರು ಸಮವಸ್ತ್ರ ತೊಟ್ಟು ನಿಂತಿರುವ ಮಗನು ಆಕೆಯನ್ನು ರಿಲೀವ್‌ ಮಾಡುತ್ತಾನೆ. ಎದೆಯೆತ್ತರಕ್ಕೆ ಬೆಳೆದ ಮಗ ತನ್ನ ಸ್ಥಾನಕ್ಕೆ ಬಂದಿರುವುದು ಕಂಡು ತಾಯಿಯ ಮುಖದಲ್ಲೊಂದು ಹೆಮ್ಮೆ ಕಾಣುತ್ತಿತ್ತು. ಪರಸ್ಪರ ಸೆಲ್ಯೂಟ್‌ ಮಾಡಿ ನಗು ವಿನಿಮಯ ಮಾಡಿಕೊಂಡು ಎದುರು ಬದುರಾಗಿ ನಿಂತಿರುವುದು ಗಮನ ಸೆಳೆಯುತ್ತೆ.


ಅಲ್ಲದೇ ಹಿನ್ನೆಲೆಯ ಸಂಗೀತ ಆರಂಭವಾಗುತ್ತಿದ್ದಂತೆ “ನಿಮ್ಮ ಸೇವೆಗೆ ಧನ್ಯವಾದಗಳು” ಅಂತ ಮಗ ಹೇಳುತ್ತಾನೆ. ನಂತರ ತಾಯಿ ಮಗ ಇಬ್ಬರೂ ಪರಸ್ಪರ ತಬ್ಬಿಕೊಳ್ಳುತ್ತಾರೆ. ಅಲ್ಲಿ ನೆರೆದವರು ಚಪ್ಪಾಳೆ ತಟ್ಟುತ್ತಾರೆ. ಈ ಒಂದು ಸುಂದರ ವಿಡಿಯೋ ನೋಡುಗರನ್ನು ಭಾವುಕವಾಗಿಸೋದು ಸುಳ್ಳಲ್ಲ.

View this post on Instagram


A post shared by Desi (@nonprofitcartel)

ಪ್ರತಿಕ್ರಿಯೆ


ಇನ್ನು, ಸೆಪ್ಟೆಂಬರ್ 2 ರಂದು ಪೋಸ್ಟ್ ಮಾಡಲಾದ ಈ ವೀಡಿಯೊ ಇಲ್ಲಿಯವರೆಗೂ 2 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಕಂಡಿದೆ. ಅಲ್ಲದೇ 36 ಸಾವಿರಕ್ಕೂ ಹೆಚ್ಚು ಲೈಕ್‌ ಹಾಗೂ ಸಾವಿರಾರು ಕಾಮೆಂಟ್‌ ಗಳಿಸಿದೆ. ಸಾಕಷ್ಟು ಜನರು ತಾಯಿಯ ಹಾಗೂ ಮಗನ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.


ಇದನ್ನೂ ಓದಿ: ವಿಮಾನ ಪ್ರಯಾಣಿಕರು ಲಗೇಜ್​ ಕೊಂಡೊಯ್ಯುವ ಟೆನ್ಷನ್​ ಬಿಟ್ಟುಬಿಡಿ! ಯಾಕಂದ್ರೆ ಕಾರ್ಟರ್​ಎಕ್ಸ್​ ನಿಮಗೆ ಸಹಾಯ ಮಾಡುತ್ತೆ ನೋಡಿ


ಒಬ್ಬರು "ನಿಮ್ಮ ಸೇವೆಗಾಗಿ ಇಬ್ಬರಿಗೂ ಧನ್ಯವಾದಗಳು! ಅದು ಸುಂದರವಾಗಿತ್ತು!" ಎಂದಿದ್ದಾರೆ. ಮತ್ತೊಬ್ಬರು "ಸೋ ಬ್ಯೂಟಿಫುಲ್ ನಿಮ್ಮ ಸೇವೆಗಾಗಿ ಮತ್ತು ಅಭಿನಂದನೆಗಳು ಮಮ್ಮಾ, ಇಬ್ಬರಿಗೂ ಧನ್ಯವಾದಗಳು." ಇನ್ನೊಬ್ಬ ಇನ್‌ ಸ್ಟಾಗ್ರಾಂ ಬಳಕೆದಾರರು “ಸುಂದರವಾಗಿದೆ! ನಿಮ್ಮ ಸೇವೆಗಾಗಿ ಇಬ್ಬರಿಗೂ ಧನ್ಯವಾದಗಳು ಮತ್ತು ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ” ಎಂದು ಕಾಮೆಂಟ್‌ ಮಾಡಿದ್ದಾರೆ.


ನಮ್ಮ ಸಮಾಜದಲ್ಲಿ ಕೆಲವೇ ಕೆಲವು ಜನರಿಗೆ ಮಾತ್ರ ಇಂಥದ್ದೊಂದು ಅದೃಷ್ಟ ಇರುತ್ತೆ. ತಮ್ಮದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳು ತಮ್ಮ ಜಾಗಕ್ಕೇ ಬಂದು ಕೂರುವುದನ್ನು ನೋಡುವುದು ಪೋಷಕರ ಅದೃಷ್ಟವಲ್ಲದೇ ಮತ್ತಿನ್ನೇನು.


ಇದನ್ನೂ ಓದಿ: ನಾನ್‌ ವೆಜ್‌ ತಿಂದು ಹೊಟ್ಟೆ ತುಂಬಿಸಿಕೊಂಡ್ರೆ ಬೆಡ್‌ ರೂಮ್‌ನಲ್ಲಿ ಉಪವಾಸ! ಗಂಡಸರಿಗೆ ಹೆಂಗಸರ ಖಡಕ್ ವಾರ್ನಿಂಗ್


ಅಂದಹಾಗೆ ಡಾಕ್ಟರ್‌ ಮಕ್ಕಳು ಡಾಕ್ಟರ್‌, ಶಿಕ್ಷಕರ ಮಕ್ಕಳು ಶಿಕ್ಷಕರು ಹಾಗೆಯೇ ಉದ್ಯಮಿಗಳ ಮಕ್ಕಳು ಉದ್ಯಮಿ, ಸೈನಿಕರ ಮಕ್ಕಳು ಸೈನಿಕರಾದಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿರುತ್ತವೆ. ಆದರೆ ಸರ್ಕಾರಿ ಸೇವೆಯಲ್ಲಿ ಇಂಥದ್ದೊಂದು ಅವಕಾಶವಿರುತ್ತೆ.


ಅಲ್ಲದೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ಹಾಗೂ ನಡತೆಯನ್ನು ಕಲಿಸೋದು ಕೂಡ ಅಷ್ಟು ಸುಲಭವಲ್ಲ. ಸಮಾಜದಲ್ಲಿ ಅವರೊಂದು ಸ್ಥಾನಕ್ಕೇರಿದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ ಕೂಡ. ಅದರಲ್ಲೂ ಈ ಸ್ವಂತ ಮಗನೇ ತಾಯಿಯನ್ನು ರಿಲೀವ್‌ ಮಾಡುವಂಥ ಸಂದರ್ಭ ಆ ತಾಯಿಯ ಪಾಲಿಗೆ ಮತ್ತಷ್ಟು ವಿಶೇಷ ಅಂದ್ರೆ ತಪ್ಪಾಗದು.

First published: