ಇಎಂಐ ಪಾವತಿಯಿಂದ ವಿನಾಯಿತಿ ಪಡೆದವರಿಗೆ ಸಾಲ ಸೌಲಭ್ಯ?

Bank Loan: ಇಎಂಐ ಪಾವತಿಯಿಂದ ಸಾಲ ಪಡೆದವರ ಮೇಲೆ ಯಾವುದೇ ನೇರ ಪರಿಣಾಮ ಉಂಟಾಗುವುದಿಲ್ಲ ಎಂದು ರಿಸರ್ವ್​ ಬ್ಯಾಂಕ್​ ಹೇಳಿತ್ತು. ಆದರೆ, ಈಗ ಅದು ನಿಜವೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

news18-kannada
Updated:June 23, 2020, 10:59 AM IST
ಇಎಂಐ ಪಾವತಿಯಿಂದ ವಿನಾಯಿತಿ ಪಡೆದವರಿಗೆ ಸಾಲ ಸೌಲಭ್ಯ?
ಸಾಂದರ್ಭಿಕ ಚಿತ್ರ
  • Share this:
ಲಾಕ್​ಡೌನ್​ ಘೋಷಣೆ ಆದ ನಂತರ ಅನೇಕರು ಆರ್ಥಿಕ ಬಿಕ್ಕಟ್ಟು ಎದುರುಸಿದ್ದರು. ಈ ವೇಳೆ ಸಾಮಾನ್ಯರಿಗೆ ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಆರ್​ಬಿಐ ಇಎಂಐ ಪಾವತಿ ಮಾಡುವುದರ ಮೇಲೆ ವಿನಾಯಿತಿ ನೀಡಿತ್ತು. ಶಾಂಕಿಂಗ್​ ವಿಚಾರ ಏನೆಂದರೆ, ಇಎಂಐ ಪಾವತಿ ಮಾಡದೆ ಇರುವವರಿಗೆ ಈಗ ಸಾಲ ಸೀಗೋದು ಕಷ್ಟವಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

ಸಾಲ ನೀಡುವುದಕ್ಕೂ ಮೊದಲು ಬ್ಯಾಂಕ್​ನವರು ಸಿಬಿಲ್​ ಸ್ಕೋರ್​ ನೋಡುತ್ತಾರೆ. ಸರಿಯಾದ ರೀತಿಯಲ್ಲಿ ಸಾಲ ಮರುಪಾವತಿ ಮಾಡಿದ್ದರೆ ಅಂಥವರ ಸಿಬಿಲ್​ ಸ್ಕೋರ್​ ಉತ್ತಮವಾಗಿರುತ್ತದೆ. ಆದರೆ, ಸಿಬಿ​ಲ್​ ಸ್ಕೋರ್​ ಉತ್ತಮವಾಗಿರದಿದ್ದರೆ ಅಂಥವರಿಗೆ ಸಾಲ ನೀಡಲು ಬ್ಯಾಂಕ್​ಗಳು ನಿರಾಕರಿಸಿತ್ತವೆ.

Money
Money


ಮೂಲಗಳ ಪ್ರಕಾರ, ಈಗ ಇಎಂಐ ಕಟ್ಟದೇ ಇರುವವರ ಸಿಬಿ​ಲ್​ ಸ್ಕೋರ್​ ಡೌನ್​ ಆಗಲಿದೆ ಎನ್ನಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬ್ಯಾಂಕ್​ನವರು ಇಂಥವರಿಗೆ ಸಾಲ ನೀಡೋಕೆ ನಿರಾಕರಿಸಬಹುದು ಎನ್ನುವ ಮಾತು ಕೇಳಿ ಬಂದಿದೆ.

Money
Money


ಇಎಂಐ ಪಾವತಿಯಿಂದ ಸಾಲ ಪಡೆದವರ ಮೇಲೆ ಯಾವುದೇ ನೇರ ಪರಿಣಾಮ ಉಂಟಾಗುವುದಿಲ್ಲ ಎಂದು ರಿಸರ್ವ್​ ಬ್ಯಾಂಕ್​ ಹೇಳಿತ್ತು. ಆದರೆ, ಈಗ ಅದು ನಿಜವೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

Money
Money
ಸಾಲ ಸಿಗೋಕೆ ಏನು ಮಾಡಬೇಕು?

ಇನ್ನುಮುಂದೆ ಸಾಲ ಸಿಗಬೇಕು ಎಂದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಇಎಂಐ ಪಾವತಿ ಮಾಡದೆ ಇದ್ದವರದ್ದು. ಇದಕ್ಕೆ ಉತ್ತರವಿದೆ. ಇನ್ನು, ಬರುವ ತಿಂಗಳಲ್ಲಿ ಇಎಂಐ ಸರಿಯಾಗಿ ಪಾವತಿ ಮಾಡಬೇಕು. ಈ ಮೂಲಕ ಮುಂದಾಗುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
First published:June 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading