Leopard: ನಾಗಾಲ್ಯಾಂಡ್ ಕಾಡುಗಳಲ್ಲಿ ಪ್ರತ್ಯಕ್ಷವಾಯ್ತು ಅಪರೂಪದ ಬೂದು ಬಣ್ಣದ ಚಿರತೆ..!

ಸಾರಾಮತಿ ಪರ್ವತ ಶ್ರೇಣಿಗೆ ಹೊಂದಿಕೊಂಡಂತಿರುವ 3700 ಮೀಟರ್ ಎತ್ತರದ ಮರಗಳ ಸಾಲಿನ ಮೇಲೆ ಕ್ಯಾಮೆರಾವನ್ನಿರಿಸಿ 2 ವಿಭಿನ್ನ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ

ಬೂದು ಬಣ್ಣದ ಚಿರತೆ

ಬೂದು ಬಣ್ಣದ ಚಿರತೆ

  • Share this:
ನಾಗಾಲ್ಯಾಂಡ್‌ನ (Nagaland) ಗಿರಿಕಣಿವೆಗಳಲ್ಲಿ ಅಪರೂಪದ ತಪ್ಪಿಸಿಕೊಳ್ಳುವ ಸ್ವಭಾವ ಹೊಂದಿರುವ ಅಸ್ಪಷ್ಟ ಬಣ್ಣದ ಚಿರತೆ (Leopard) ಯೊಂದು ಕಂಡು ಬಂದಿದೆ. ಸಂಶೋಧಕರ (Researchers) ತಂಡವೊಂದು ಇಂಡೋ - ಮೈನ್ಮಾರ್ ಗಡಿ(Indo-Myanmar border) ಭಾಗದಲ್ಲಿ 3700 ಮೀಟರ್ ಎತ್ತರವಿರುವ ಗಿರಿ ಶ್ರೇಣಿಗಳಲ್ಲಿರುವ ಸಮುದಾಯ ಒಡೆತನದ ಕಾಡಿನಲ್ಲಿ ಅಪರೂಪದ ತಪ್ಪಿಸಿಕೊಳ್ಳುವ ಸ್ವಭಾವ ಹೊಂದಿರುವ ಬೂದು ಬಣ್ಣದ ಚಿರತೆಯ ಭಾವಚಿತ್ರದ ಸಾಕ್ಷ್ಯವನ್ನು ಚಿತ್ರೀಕರಿಸಿಕೊಂಡಿದೆ.ಈವರೆಗೆ ವಿಶ್ವದ ಯಾವುದೇ ಭಾಗದಲ್ಲಿ ಅತ್ಯಂತ ಎತ್ತರ ಪ್ರದೇಶದಲ್ಲಿ ಕಂಡು ಬಂದಿರುವ ಏಕೈಕ ಚಿರತೆ ಇದಾಗಿದೆ. ಐಯುಸಿಎನ್/ಎಸ್‌ಎಸ್‌ಸಿಯ ಮಾರ್ಜಾಲ ತಜ್ಞರ ಗುಂಪು ಕ್ಯಾಟ್ ನ್ಯೂಸ್ ಎಂಬ ದ್ವೈವಾರ್ಷಿಕ ವಾರ್ತಾಪತ್ರದ 2021ರ ಚಳಿಗಾಲ ಸಂಚಿಕೆಯಲ್ಲಿ ಈ ಸಂಶೋಧನಾ ವಿವರ ಪ್ರಕಟಿಸಿದ್ದಾರೆ.

ಖೇಫಾಕ್ ಎಂದು ಕರೆಯುತ್ತಾರೆ
ನಿಯೊಫೆಲಿಸ್ ನೆಬುಲೊಸಾ ಎಂದು ಕರೆಸಿಕೊಳ್ಳುವ ಈ ಮರ ಹತ್ತುವ ಚಿರತೆಯು ವಿಸ್ತಾರವಾದ ಚಿರತೆ ಪ್ರಭೇದಗಳ ಪೈಕಿ ಅತ್ಯಂತ ಸಣ್ಣ ಗಾತ್ರದ್ದಾಗಿದೆ. ಈ ಚಿರತೆಯನ್ನು IUCN ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಈ ಚಿರತೆಯ ಭಾವಚಿತ್ರಗಳನ್ನು ಪೂರ್ವ ನಾಗಾಲ್ಯಾಂಡ್‌ನ ಕಿಫೈರ್ ಜಿಲ್ಲೆಯ ಥನಮಿರ್ ಗ್ರಾಮದಲ್ಲಿರುವ ಸಮುದಾಯ ಕಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಸ್ಥಳೀಯ ಉಚ್ಚಾರದಲ್ಲಿ ಈ ಚಿರತೆಯನ್ನು "ಖೇಫಾಕ್" ಎಂದು ಕರೆಯಲಾಗುತ್ತದೆ. ಇದರರ್ಥ ಬೂದು ಬಣ್ಣದ ದೊಡ್ಡ ಬೆಕ್ಕು ಎಂದು.

ನಾಗಾಲ್ಯಾಂಡ್‌ನಲ್ಲಿ ಸ್ಥಳೀಯ ಸಮುದಾಯಗಳು ಗ್ರಾಮಕೇಂದ್ರಿತ ವ್ಯವಸ್ಥಾಪಕ ಆಳ್ವಿಕೆಯೊಂದಿಗೆ ಈ ಭಾಗದ ವಿಸ್ತಾರವಾದ ಕಾಡುಗಳ ಒಡೆತನ ಹೊಂದಿವೆ. ನಮ್ಮ ಸಮೀಕ್ಷೆಯ ಸಂದರ್ಭದಲ್ಲಿ ಸಮುದಾಯ ಕಾಡುಗಳಲ್ಲಿ ದೊಡ್ಡ ಮಟ್ಟದ ವೈವಿಧ್ಯಮಯ ಜೀವಿಗಳು ಹಾಗೂ ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಅಸಂಖ್ಯಾತ ಪ್ರಭೇದಗಳು ಕಂಡು ಬಂದವು" ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Spot Leopard: ನಿಮ್ಮ ಕಣ್ಣಿಗೊಂದು ಕಸರತ್ತು.. ಈ ಫೋಟೋದಲ್ಲಿ ಚಿರತೆ ಎಲ್ಲಿದೆ ಗುರುತಿಸಬಲ್ಲಿರಾ..?

ಎತ್ತರದ ಮರಗಳ ಮೇಲಿಂದ ಸೆರೆ
"ಒಟ್ಟಾರೆಯಾಗಿ 2 ಪ್ರೌಢಾವಸ್ಥೆಯ ಹಾಗೂ 2 ಮರಿ ಬೂದು ಬಣ್ಣದ ಚಿರತೆಗಳಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯವಿದೆ. ಸಾರಾಮತಿ ಪರ್ವತ ಶ್ರೇಣಿಗೆ ಹೊಂದಿಕೊಂಡಂತಿರುವ 3700 ಮೀಟರ್ ಎತ್ತರದ ಮರಗಳ ಸಾಲಿನ ಮೇಲೆ ಕ್ಯಾಮೆರಾವನ್ನಿರಿಸಿ 2 ವಿಭಿನ್ನ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಮತ್ತೊಂದು ಚಿರತೆಯ ಭಾವಚಿತ್ರವನ್ನು 3436 ಮೀಟರ್ ಎತ್ತರದಿಂದ ಸೆರೆ ಹಿಡಿಯಲಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯನ್ನು ರಮ್ಯಾ ನಾಯರ್, ಅಲೆಂಬಾ ಯಿಮ್‌ಖುಯಿಂಗ್, ಹಂಕಿಯುಮಾಂಗ್ ಯಿಮ್‌ಖುಯಿಂಗ್, ಕಿಯಾನ್‌ಮಾಂಗ್ ಯಿಮ್‌ಖುಯಿಂಗ್, ಯಾಪ್ಮುಲಿ ಯಿಮ್‌ಖುಯಿಂಗ್, ತೋಶಿ ವುಂಗ್‌ಟುಂಗ್, ಅವಿನಾಶ್ ಭಾಸ್ಕರ್ ಹಾಗೂ ಸಾಹಿಲ್ ನಿಝಾವನ್ ಸಿದ್ಧಪಡಿಸಿದ್ದಾರೆ.

ಅಚ್ಚರಿದಾಯಕ ಹಾಗೂ ಸುಂದರದ ಚಿರತೆ
ಸಾಮಾನ್ಯವಾಗಿ ಉಷ್ಣಪ್ರದೇಶದ ಮಳೆಕಾಡುಗಳಲ್ಲಿ ಕಂಡು ಬರುವ "ಅಚ್ಚರಿದಾಯಕ ಹಾಗೂ ಸುಂದರ" ಬೂದು ಬಣ್ಣದ ಚಿರತೆಗಳ ಕುರಿತು ಹೆಚ್ಚು ತಿಳಿದಿಲ್ಲ. "ಕಾಡಿನ ತುಂಬಾ ಮರಗಳಿದ್ದರೂ, ಮರದ ಕೊನೆಯಲ್ಲಿ ತುತ್ತತುದಿಯಲ್ಲಿರುವ ಪ್ರದೇಶದಲ್ಲಿ ಅವನ್ನು ನಾವು ಕಂಡೆವು" ಎಂದು ಸಾಂಪ್ರದಾಯಿಕ ಶರೀರ ಶಾಸ್ತ್ರಜ್ಞರಾಗಿ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಝಾವನ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಅವು ಅ ಪ್ರದೇಶದ ನಿವಾಸಿಗಳಾಗಿದ್ದು, ಅಲ್ಲಿ ತಮ್ಮ ಸಂತಾನೋತ್ಪತ್ತತಿಯನ್ನು ಮಾಡುತ್ತಿವೆ. ಇದರರ್ಥ ಅಲ್ಲಿ ಅವುಗಳಿಗೆ ಸಾಕಷ್ಟು ಆಹಾರ ದೊರೆಯುತ್ತಿದ್ದು, ಕಾಡಿನ ಚಾದರವನ್ನು ಹೊಂದಿವೆ ಎಂಬುದನ್ನು ಸೂಚಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಎಲ್ಲ ಎತ್ತರ ಪ್ರದೇಶದ ಚಿತ್ರೀಕರಣವನ್ನು ಬೇಸಿಗೆ ಸಮಯದಲ್ಲಿ ಮಾಡಲಾಗಿದ್ದು, ಇದು ಬೂದು ಬಣ್ಣದ ಚಿರತೆಗಳು ಋತುಮಾನಕ್ಕನುಗುಣವಾಗಿ ತಮ್ಮ ವಾಸ್ತವ್ಯವನ್ನು ಮೇಲ್ಭಾಗಕ್ಕೆ ಬದಲಾಯಿಸುತ್ತವೆ ಎಂಬುದನ್ನು ಉದಾಹರಿಸುತ್ತಿದೆ. ಈ ಸಂದರ್ಭದಲ್ಲಿ ಹಿಮ ಬೀಳುವುದು ತಗ್ಗಿ, ಎತ್ತರದ ಪರ್ವತ ಶ್ರೇಣಿಗಳಲ್ಲಿ ಬೇಟೆ ದೊರೆಯುವುದು ಸುಲಭವಾಗುವ ಸಾಧ್ಯತೆ ಇದೆ" ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪಾನಸಾನಿಕ್​ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಚಿರತೆಗಳೊಂದಿಗೆ ಫೋಟೋಶೂಟ್...ಆಸ್ಪತ್ರೆ ಸೇರಿದ ಮಾಡೆಲ್!

ನೆಲದಲ್ಲಿ ಬೇಟೆ
ನ್ಯಾಷನಲ್ ಜಿಯೋಗ್ರಾಫಿಕ್ ವಿಜ್ಞಾನಿಗಳ ಪ್ರಕಾರ, ಬೂದು ಬಣ್ಣದ ಚಿರತೆಗಳು ತಮ್ಮ ಬಹುತೇಕ ಬೇಟೆಗಳನ್ನು ನೆಲದಲ್ಲಿ ನಡೆಸುತ್ತವೆ. ಈ ಸಂದರ್ಭದಲ್ಲಿ ಅವು ಜಿಂಕೆ, ಹಂದಿ, ಕೋತಿ ಹಾಗೂ ಸಣ್ಣ ಪ್ರಾಣಿಯಾದ ಅಳಿಲು ಅಥವಾ ಪಕ್ಷಿಗಳ ಬೇಟೆಯನ್ನಾಡುತ್ತವೆ ಎಂದು ನಂಬಲಾಗಿದೆ. ಅವುಗಳ ದೊಡ್ಡ ಮಟ್ಟದ ನಾಯಿ ಸ್ವಬಾವವು ಬೇಟೆಗೆ ನೆರವಾಗುತ್ತದಾದರೂ, ಕಾಡಿನಲ್ಲಿನ ಅವುಗಳ ವರ್ತನೆಯ ಬಗೆಗಿನ ಸಾಕ್ಷ್ಯಗಳನ್ನು ಜಗತ್ತು ನೋಡುವುದು ಬಾಕಿಯಿದೆ. ಈ ಪ್ರಭೇದವು ಏಷ್ಯಾದ ಇಂಡೋನೇಷ್ಯಾದಿಂದ ಹಿಮಾಲಯ ಪರ್ವತ ಶ್ರೇಣಿಗಳವರೆಗೆ ಇರುವ ಮಳೆಕಾಡುಗಳಲ್ಲಿ ಕಂಡು ಬರುತ್ತದೆ. ಅವುಗಳ ಸಂಖ್ಯೆಯ ಬಗ್ಗೆ ಸ್ವಲ್ಪಮಟ್ಟಿಗೆ ಮಾತ್ರ ತಿಳಿದಿರುವುದರಿಂದ ಅವುಗಳನ್ನು ಅಳವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಗೆ ಸೇರಿಸಲಾಗಿದೆ.
Published by:vanithasanjevani vanithasanjevani
First published: