ಮಾನವನ ದೇಹವೂ ಸೃಷ್ಟಿಯ (Nature) ಕ್ರಿಯೆಗಳಲ್ಲಿ ಒಂದು ವಿಶೇಷ ಸೃಷ್ಟಿ ಎಂದು ವಿಜ್ಞಾನವು (Science) ಹೇಳುತ್ತದೆ. ಇನ್ನು ಒಂದು ಮಗುವಿಗೆ ಜನ್ಮ ಕೊಡುವ ಪ್ರಕ್ರಿಯೆ ನಿಜಕ್ಕೂ ಅದ್ಭುತ. ಈಗಂತೂ ಮಗು ಇಲ್ಲದವರಿಗೆ ಈ ವಿಜ್ಞಾನ- ತಂತ್ರಜ್ಞಾನಗಳು (Technology) ವಿಸ್ಮಯಕಾರಿಯಾಗಿ (Mysterious) ಸಹಾಯ ಮಾಡುತ್ತಿವೆ ಎಂದರೂ ತಪ್ಪಲ್ಲ. ಈ ಸಂತಾನೋತ್ಪತ್ತಿ (Reproduction) ಪ್ರಕ್ರಿಯೆಯು ಸೃಷ್ಟಿಯು ನಮಗೆ ನೀಡಿರುವ ಒಂದು ಪ್ರಮುಖ ಕರ್ತವ್ಯ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಎರೋಲ್ ಮಸ್ಕ್ (Errol Musk) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಎರೋಲ್ ಮಸ್ಕ್ ಪ್ರಖ್ಯಾತ ಉದ್ಯಮಿ (Industrialist) ಮತ್ತು ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಎಲೋನ್ ಮಸ್ಕ್ ಅವರ ತಂದೆ ಆಗಿದ್ದಾರೆ.
ಈ ಎರೋಲ್ ಮಸ್ಕ್ ಯಾರು?
ಇವರು ಇತ್ತಿಚೀಗೆ ತಮ್ಮ ಮಲ ಮಗಳನ್ನು ಮದುವೆಯಾಗಿ, ನಾವಿಬ್ಬರೂ 2019 ರಲ್ಲಿ ಒಂದು ಮಗುವಿಗೆ ಪೋಷಕರಾಗಿದ್ದೇವೆ ಎಂದು ತಮ್ಮ ವೈಯಕ್ತಿಕ ವಿಚಾರವನ್ನು ಮಾಧ್ಯಮಗಳ ಮುಂದೆ ಹರಿಬಿಟ್ಟಿದ್ದರು. ಈಗ ಇವರು “ನೀವು ಮತ್ತೊಂದು ಮಗುವಿಗೆ ಜನ್ಮ ನೀಡಬೇಕೆ, ಹಾಗಿದ್ರೆ ನಿಮ್ಮ ವೀರ್ಯ ದಾನ ಮಾಡಿ ಎಂದು ಕೇಳಿಕೊಂಡಿದ್ದಾರೆ” ಎಂದು ಮಾಧ್ಯಮ ಪ್ರತಿನಿಧಿ ʼದಿ ಸನ್ʼ ವರದಿ ಮಾಡಿದೆ.
“ನನ್ನನ್ನು ಕೊಲಂಬಿಯಾ ದೇಶದ ಒಂದು ಕಂಪನಿ ಸಂಪರ್ಕಿಸಿ ನಿಮ್ಮ ವೀರ್ಯ ದಾನ ಮಾಡಿ ಎಂದು ಕೇಳಿಕೊಂಡಿತ್ತು. ದಾನ ಮಾಡಿದ ವೀರ್ಯವನ್ನು ಅಲ್ಲಿನ ಸಂತಾನೋತ್ಪತ್ತಿ ಮಾಡುವುದಕ್ಕೆ ಆಗದೇ ಇರುವ ಮಹಿಳೆಯರಿಗೆ ಗರ್ಭ ಧರಿಸಲು ನಿಮ್ಮ ವೀರ್ಯವನ್ನು ಬಳಕೆ ಮಾಡಲಾಗುತ್ತದೆ. ಆ ಕಂಪನಿಯವರು ಇದರಿಂದ ಮಗು ಭಾಗ್ಯ ಇಲ್ಲದ ಮಹಿಳೆಯರಿಗೆ ಹೆಣ್ತನದ ಸಂತೋಷ ಸಿಗಲು ಮುಖ್ಯ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ ಎಂದು ಎರೋಲ್ ಮಸ್ಕ್ ಹೇಳಿದರು.
ವೀರ್ಯ ದಾನ ಮಾಡುವ ಬಗ್ಗೆ ಎರೋಲ್ ಮಸ್ಕ್ ಹೇಳಿದ್ದೇನು ನೋಡಿ
ಇದರ ನಂತರ ಮತ್ತೆ ತಮ್ಮ ಮಾತು ಮುಂದುವರಿಸುತ್ತಾ “ಈ ವೀರ್ಯ ದಾನಕ್ಕೆ ಅವರು ನಿಮಗೆ ಯಾವ ರೀತಿಯ ಹಣವನ್ನು ನೀಡಲಾರರು. ಆದರೆ ನೀವು ಈ ಒಪ್ಪಂದಕ್ಕೆ ಸಹಿ ಹಾಕಿದರೆ, ಅಲ್ಲಿಗೆ ಹೋಗಿ ಬರುವ ಪ್ರಯಾಣ ಮತ್ತು ವಸತಿಯ ಎಲ್ಲ ಖರ್ಚುಗಳನ್ನು ಆ ಕಂಪನಿಯೇ ಭರಿಸುತ್ತದೆ ಎಂಬುದರ ಬಗ್ಗೆ ನಾನು ಸ್ಪಷ್ಟತೆ ಹೊಂದಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ: Infertility: ಬಂಜೆತನ ನಿವಾರಿಸುವ ಈ ಹೊಸ ತಂತ್ರಜ್ಞಾನ ಯಾವುದು? ಈ ಬಗ್ಗೆ ಸಂಶೋಧನಾ ಅಧ್ಯಯನ ಏನು ಹೇಳಿದೆ ನೋಡಿ
“ಕೊಲಂಬಿಯಾ ದೇಶದ ಕಂಪನಿಯವರು ವೀರ್ಯ ದಾನ ಮಾಡಲು ನನ್ನನ್ನು ಸಂಪರ್ಕಿಸಿದಾಗ ನನಗೆ ಹಣ ನೀಡುತ್ತೇನೆ ಎಂದು ಹೇಳಿಲ್ಲವಾದರೂ ನನಗೆ ಇರಲು ಯೋಗ್ಯ ವಸತಿ ಮತ್ತು ಪ್ರಯಾಣದ ಸಂಪೂರ್ಣ ವೆಚ್ಚವನ್ನು ನಾವೇ ಕಂಪನಿ ಕಡೆಯಿಂದ ಭರಿಸುತ್ತೆವೆ ಎಂದು ಹೇಳಿದ್ದರು” ಎಂದು ಎರೋಲ್ ಹೇಳಿದರು.
ಇದಕ್ಕೆ ದಿ ಸನ್ ಮಾಧ್ಯಮದ “ನೀವು ಇಂತಹ ಬೇಡಿಕೆಗಳಿಗೆ ನಿಮ್ಮ ಸಮ್ಮತಿ ನೀಡುತ್ತಿರಾ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಎರೋಲ್ ಮಸ್ಕ್ “ನಾನು ಇನ್ನೊಂದು ಮಗುವಿಗೆ ಜನ್ಮ ನೀಡಲು ಕಾರಣವಾಗುತ್ತೆನೆ ಎಂದರೆ ಏಕೆ ನಾನು ವೀರ್ಯ ದಾನ ಮಾಡಬಾರದು? ಆದ್ದರಿಂದ ಇದಕ್ಕೆ ಒಪ್ಪಲು ನಮಗೆ ಬೇರೆ ಕಾರಣ ಬೇಕಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಮಲಮಗಳಾದ ಜನಾ ಅವರೊಂದಿಗೆ ಮದುವೆಯಾದ ಎರೋಲ್ ಮಸ್ಕ್
ಈ ಹಿಂದೆ ಎರೋಲ್ ಮಸ್ಕ್ ಅವರು ತಮ್ಮ ಮಲಮಗಳಾದ ಜನಾ ಅವರೊಂದಿಗೆ ಮದುವೆಯಾಗಿರುವುದು, ನಂತರ ಒಂದು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಕೆಲವು ವರ್ಷಗಳ ಕಾಲ ರಹಸ್ಯವಾಗಿ ಇರಿಸಿದ್ದರು. ಆದರೆ ಈ ಹಿಂದೆ ನಾನು ಮತ್ತು ಜನಾ ಈಗಾಗಲೇ ಮಗುವನ್ನು ಹೊಂದಿದ್ದೇವೆ ಎಂಬ ಮಾಹಿತಿಯನ್ನು ದೃಢಪಡಿಸಿದ್ದರು.
ಇದನ್ನೂ ಓದಿ: Transgenders: ಲಿಂಗ ಪರಿವರ್ತಿತ ಮಹಿಳೆಯರನ್ನು ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ನೇಮಿಸಿಕೊಂಡ ಪಾಲಿಕೆ
ಆ ಸಂದರ್ಭದಲ್ಲಿ ಅವರು “ನಾವು ಈ ಭೂಮಿ ಮೇಲೆ ಇರುವುದು ಕೇವಲ ಸಂತಾನೋತ್ಪತ್ತಿ ಮಾಡುವುದಕ್ಕೆ ಮಾತ್ರ. ಹಾಗೆಯೇ ನಾನು ಇನ್ನೊಂದು ಮಗು ಹೊಂದಲು ಸಾಧ್ಯವಾದರೆ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ನಾನು ಮಾಡಿಯೇ ಮಾಡುತ್ತೆನೆ. ಇದಕ್ಕೆ ನಾನು ಯಾವ ಕಾರಣವನ್ನು ಹುಡುಕುವುದಿಲ್ಲ” ಎಂದು ಆ ಸಮಯದಲ್ಲಿಯೇ ಈ ಮಾತು ಹೇಳಿದ್ದರು. ಆದರೆ ಈಗ ಆ ಮಾತು ಎಲ್ಲ ಕಡೆ ಸುದ್ದಿಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ