HOME » NEWS » Trend » ELON MUSK TESLA WILL HIRE YOU WITHOUT A COLLEGE DEGREE IF YOU MOVE TO AUSTIN STG HG

ನೀವು ಪದವೀಧರರಾಗದಿದ್ದರೂ ಅಮೆರಿಕದ ಟೆಸ್ಲಾ ಕಂಪನಿಯಲ್ಲಿ ನಿಮಗೆ ಈಗಲೇ ಸಿಗುತ್ತೆ ಕೆಲಸ..!

ಬೊಕಾ ಚಿಕಾದ ನಂತರ ಎಲಾನ್ ಈಗ ಜನರನ್ನು ಆಸ್ಟಿನ್‌ಗೆ ಹೋಗಲು ಹೇಳುತ್ತಿದ್ದಾರೆ. ಟೆಸ್ಲಾ ಸಿಇಒ ಮತ್ತು ಸ್ಪೇಸ್‌ಎಕ್ಸ್ ನ ಮಾಲೀಕ ಎಲಾನ್ ತಮ್ಮ ಟ್ವಿಟ್ಟರ್​ನಲ್ಲಿ ಇಂತಹದ್ದೊಂದು ಸಂದೇಶವನ್ನು ರವಾನಿಸಿದ್ದಾರೆ.

news18-kannada
Updated:April 7, 2021, 2:00 PM IST
ನೀವು ಪದವೀಧರರಾಗದಿದ್ದರೂ ಅಮೆರಿಕದ ಟೆಸ್ಲಾ ಕಂಪನಿಯಲ್ಲಿ ನಿಮಗೆ ಈಗಲೇ ಸಿಗುತ್ತೆ ಕೆಲಸ..!
Elon Musk
  • Share this:
ಬೊಕಾ ಚಿಕಾವನ್ನು ‘ಸ್ಟಾರ್‌ಬೇಸ್’ ಎಂದು ಮರುನಾಮಕರಣ ಮಾಡಿದ ಸುದ್ದಿ ನಿಮಗೆ ಗೊತ್ತೇ ಇದೆ. ಈಗ ನಿಮಗೇನಾದರೂ ಬಿಲಿಯನೇರ್ ಎಲಾನ್​ ಮಸ್ಕ್​ ಅವರ ಅಮೆರಿಕದ ಆಸ್ಟಿನ್‌ನಲ್ಲಿರುವ ಟೆಸ್ಲಾ ಕಾರ್ಖಾನೆಯಲ್ಲಿ ಕೆಲಸ ಮಾಡಲು ಇಷ್ಟವಿದ್ದರೆ ಈ ಕೂಡಲೇ ನಿಮಗೆ ಉದ್ಯೋಗ ಅವಕಾಶ ಸಿಗುತ್ತದೆ.

ಬೊಕಾ ಚಿಕಾದ ನಂತರ ಎಲಾನ್ ಈಗ ಜನರನ್ನು ಆಸ್ಟಿನ್‌ಗೆ ಹೋಗಲು ಹೇಳುತ್ತಿದ್ದಾರೆ. ಟೆಸ್ಲಾ ಸಿಇಒ ಮತ್ತು ಸ್ಪೇಸ್‌ಎಕ್ಸ್ ನ ಮಾಲೀಕ ಎಲಾನ್ ತಮ್ಮ ಟ್ವಿಟ್ಟರ್​ನಲ್ಲಿ ಇಂತಹದ್ದೊಂದು ಸಂದೇಶವನ್ನು ರವಾನಿಸಿದ್ದಾರೆ. ಆಸ್ಟಿನ್‌​ನಲ್ಲಿ ಟೆಸ್ಲಾ ಮ್ಯಾನ್ಯುಫ್ಯಾಕ್ಚರಿಂಗ್​ ಘಟಕದ ನಿರ್ಮಾಣವಾಗುತ್ತಿದ್ದು 2022 ರ ಹೊತ್ತಿಗೆ 10,000 ಉದ್ಯೋಗಿಗಳನ್ನು ನೇಮಕ ಮಾಡುವ ಉದ್ದೇಶದಲ್ಲಿದ್ದಾರೆ ಎಲಾನ್. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಡಿಗ್ರಿ ಪದವಿಯ ಅಗತ್ಯವೂ ಇಲ್ಲ. ಹೈಸ್ಕೂಲ್ ಮುಗಿಸಿದ ಬಳಿಕ ತಕ್ಷಣವೇ ಕಾರ್ಖಾನೆಗೆ ಸೇರಬಹುದು ಎಂದಿದ್ದಾರೆ.

ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಆಸ್ಟಿನ್‌ನಲ್ಲಿರುವ ಟೆಸ್ಲಾ 1.1 ಬಿಲಿಯನ್​ ಡಾಲರ್ ಮೌಲ್ಯದ ಗಿಗಾ ಫ್ಯಾಕ್ಟರಿಯಲ್ಲಿ ಸೈಬರ್ ಟ್ರಕ್, ಸೆಮಿ ಟ್ರಕ್, ಮಾಡೆಲ್ 3 ಸೆಡಾನ್ ಮತ್ತು ಮಾಡೆಲ್​ Y ಮಿಡ್​ ಸೈಜ್ ಎಸ್​ಯುವಿಯನ್ನು ಉತ್ಪಾದಿಸಲಿದ್ದು, ಈ ಹಿನ್ನೆಲೆ 2022ರ ವೇಳೆಗೆ 10,000 ಜನರಿಗೆ ಉದ್ಯೋಗವನ್ನು ನೀಡಲಿದೆ. ಮಸ್ಕ್ ಜುಲೈನಲ್ಲಿ ಹೇಳಿದ್ದಂತೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿದೆ. Austin American-Statesman, ವರದಿಯ ಪ್ರಕಾರ ಟೆಸ್ಲಾ ಹಿಂದೆ 5,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿತ್ತು. ಈಗ ಅದರ ದುಪ್ಪಟ್ಟು ಅಂದರೆ 10,000 ಜನರನ್ನು ನೇಮಿಸುತ್ತಿದೆ.

ಈಗ ಹೊಸ ಟ್ವೀಟ್​ನಲ್ಲಿ ಈ ವಿಷಯ ತಿಳಿಸಿದ್ದು, ಅಷ್ಟು ಜನರಿಗೆ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಲನ್. ವಿಮಾನ ನಿಲ್ದಾಣದಿಂದ ಕೇವಲ ಐದು ನಿಮಿಷಗಳು, ಡೌನ್​ಟೌನ್​ನಿಂದ 15 ನಿಮಿಷಗಳು ಮತ್ತು ಕೊಲೊರಾಡೋ ನದಿಯ ಸಮೀಪ ಸೇರಿದಂತೆ ಟೆಕ್ಸಾಸ್​ ಕಂಪನಿಗೆ ಸೇರುವ ಪ್ರಯೋಜನಗಳನ್ನು ಕೂಡ ತಿಳಿಸಿದ್ದಾರೆ . ಅಲ್ಲದೇ ಮಂಗಳವಾರ ಮಸ್ಕ್ ತನ್ನ ಏರೋಸ್ಪೇಸ್ ಕಂಪನಿ ಸ್ಪೇಸ್‌ಎಕ್ಸ್‌ಗಾಗಿ ದಕ್ಷಿಣ ಟೆಕ್ಸಾಸ್‌ಗೆ ತೆರಳಲು ತಿಳಿಸಿದ್ದು, ಸ್ನೇಹಿತರಿಗೂ ಹಾಗೆ ಮಾಡಲು ಹೇಳಿದ್ದಾರೆ.
ಆಸ್ಟಿನ್​ ನಗರ ಪ್ರದೇಶವಾಗಿದ್ದು, ಬೊಕಾ ಚಿಕಾ ಅಣತಿ ದೂರದಲ್ಲಿದೆ. ಇಲ್ಲಿನ ಶಾಂತ ಪರಿಸರದಲ್ಲಿ ಜನರು ವಾಸವಾಗಿದ್ದಾರೆ. ಎಲಾನ್ ಸ್ಪೇಸ್​ ಎಕ್ಸ್ ಕಂಪನಿಗಾಗಿ ​ ಇಲ್ಲಿಗೆ ಆಗಮಿಸಿದ್ದಾರೆ. ಅಮೆರಿಕದ ಟೆಕ್ಸಾಸ್​ನಲ್ಲಿ ಬೊಕಾ ಚಿಕಾವನ್ನು ಒಂದು ವರ್ಷದ ಹಿಂದೆರೇ ಸೆಟ್ ಮಾಡಿದ್ದರು. ಮಾರ್ಚ್​ನಲ್ಲಿ ಸ್ಟಾರ್ ಬೇಸ್ ಎಂದು ನಾಮಕರಣ ಮಾಡಿದ್ದರು. ಉಪಗ್ರಹ ಆಧಾರಿತ ಬ್ರಾಡ್​ಬ್ಯಾಂಡ್​ ಸೇವೆಗಾಗಿ ಟೆಕ್ಸಾಸ್​​ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಂಪನಿಯ ಉದ್ಯೋಗಿಯ ಪೋಸ್ಟ್​ ಪ್ರಕಾರ ದಕ್ಷಿಣ ಅಮೆರಿಕದಲ್ಲಿ ಹೆಚ್ಚು ಹೂಡಿಕೆ ಮಾಡಲಾಗುತ್ತದೆ.

ಬಾಹ್ಯಾಕಾಶ ಪರಿಶೋಧನಾ ಕಂಪನಿಗೆ ಬೇಸ್ ನಿರ್ಮಿಸಲು ಬೊಕಾ ಚಿಕಾ ಸೂಕ್ತ ಸ್ಥಳವಲ್ಲ, ಸೆಲ್​ ಸರ್ವೀಸ್ ಕೊರತೆ, ಹತ್ತಿರದಲ್ಲೇ ಕಿರಾಣಿ ಅಂಗಡಿ ಇದೆ, ಶುದ್ಧ ನೀರಿನ ಕೊರತೆ ಇದ್ದು, ಇಷ್ಟು ದಿನ ಶಾಂತವಾಗಿದ್ದ ಸ್ಥಳ ಇನ್ನು ಮುಂದೆ ಇರುವುದಿಲ್ಲ ಎಂದು Esquire ವರದಿ ಮಾಡಿದೆ.

ಬೊಕಾ ಚಿಕಾವೂ ನಿವೃತ್ತಿ ಹೊಂದಿದವರ ತಾಣವಾಗಿದ್ದು, ನಿಶ್ಯಬ್ಧದ ಸ್ಥಳದಲ್ಲಿ ತಮ್ಮ ನಿವೃತ್ತಿ ಸಮಯ ಕಳೆಯಲು ಬಯಸಿದ್ದರು. ಆದರೆ ಮಸ್ಕ್​ ಮತ್ತು ಸ್ಪೇಸ್​ ಎಕ್ಸ್​ ಕಂಪನಿ ಟ್ರಕ್​ ಶಬ್ದಗಳನ್ನು ಆರಂಭಿಸಿದೆ. ಕಳೆದ ವರ್ಷ ಇಲ್ಲಿ ಮನೆಗಳನ್ನು ಖರೀದಿಸುವ ಪ್ರಕ್ರಿಯೆಗೆ ಖಾಸಗಿ ಸ್ಪೇಸ್​ ಕಂಪನಿ ಮುಂದಾಗಿದ್ದು, ಬೊಕಾ ಚಿಕಾ ನಿವಾಸಿಗಳಿಗೆ ತೊಂದರೆಯಾಗಿದೆ.

ಅಲ್ಲದೇ ಸ್ಪೇಸ್​ ಫ್ಲೈಟ್​ನ ಹಾರಾಟದ ತೊಂದರೆಗಳ ಬಗ್ಗೆ ಸ್ಪೇಸ್ ಎಕ್ಸ್​ ಅಲ್ಲಿನ ನಿವಾಸಿಗಳಿಗೆ ಪತ್ರದ ಮೂಲಕ ತಿಳಿಸಿದೆ. ಅಲ್ಲದೇ ಇಲ್ಲಿನ ನಿವಾಸಿಗಳು ಈ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಸ್ಪೇಸ್‌ಎಕ್ಸ್ ಬೊಕಾ ಚಿಕಾದಲ್ಲಿ ಸ್ಥಾಪಿಸಲಾಗುತ್ತಿರುವ ರೆಸಾರ್ಟ್‌ನ ಬಗ್ಗೆ ಸುಳಿವು ನೀಡಿತು. ರೆಸಾರ್ಟ್​ ಡೆವಲಪ್ಮೆಂಟ್​ ಮ್ಯಾನೇಜರ್​ ಕೆಲಸಕ್ಕೆ ನೇಮಿಸಲು ಸ್ಪೇಸ್ ಎಕ್ಸ್​ ಪೋಸ್ಟ್ ಹಾಕಲಾಗಿತ್ತು.
Published by: Harshith AS
First published: April 7, 2021, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories