Richest People in the World| ಸಾಮಾಜಿಕ ಜಾಲತಾಣದಲ್ಲಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಕಿತ್ತಾಟ ಹೀಗಿದೆ ನೋಡಿ..!

ಇಂಟರ್ನೆಟ್‌ ಭವಿಷ್ಯದ ಪುನರಾವರ್ತನೆಯ ಪರಿಕಲ್ಪನೆಯನ್ನು ಮೆಟಾವರ್ಸ್ ಎಂದು ಕರೆಯಲಾಗುತ್ತದೆ. ಮೆಟಾವರ್ಸ್ ಅಂಶ ಗಮನವಿರಿಸಿಕೊಂಡು ಜುಕರ್‌ಬರ್ಗ್ ಫೇಸ್‌ಬುಕ್ ಕಂಪನಿ ಹೆಸರನ್ನು ಬದಲಾಯಿಸುವ ಯೋಜನೆಯಲ್ಲಿದೆ.

ಟ್ವಿಟರ್ ಸಂಸ್ಥಾಪಕ ಜ್ಯಾಕ್ ಡಾರ್ಸೆ, ಟೆಸ್ಲಾ ಸಿಇಒ ಎಲಾನ್ ಮಸ್ಕ್.

ಟ್ವಿಟರ್ ಸಂಸ್ಥಾಪಕ ಜ್ಯಾಕ್ ಡಾರ್ಸೆ, ಟೆಸ್ಲಾ ಸಿಇಒ ಎಲಾನ್ ಮಸ್ಕ್.

  • Share this:
ಎಲಾನ್ ಮಸ್ಕ್, ಜೆಫ್ ಬೆಝೋಸ್ (Jeff Bezos), ಜ್ಯಾಕ್ ಡಾರ್ಸಿ(Jack Dorsey), ಮಾರ್ಕ್ ಜುಕರ್‌ಬರ್ಗ್ (Mark Zuckerberg) ಇವರೆಲ್ಲರೂ ವಿಶ್ವದ ಶ್ರೀಮಂತ ವ್ಯಕ್ತಿಗಳಾಗಿದ್ದರೂ, ಸಾರ್ವಜನಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಟೀಕಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಈ ಎಲ್ಲಾ ಅತಿರಥ ಮಹಾರಥರೆನಿಸಿಕೊಂಡವರು ಅಸಾಧಾರಣ ಟೆಕ್ ಸಾಮ್ರಾಜ್ಯಗಳನ್ನು ಆರಂಭಿಸಿದ ಟೆಕ್ ಬಿಲಿಯನೇರ್‌ಗಳು (Billionaire). ಆದರೆ ಇದೀಗ ಟ್ವಿಟ್ಟರ್‌ನಲ್ಲಿ (Twitter) ಒಬ್ಬರನ್ನೊಬ್ಬರು ದೂಷಿಸಿಕೊಂಡು ದೋಷಾ ರೋಪಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಟೆಸ್ಲಾ (Tesla) ಕಂಪನಿಯ CEO, SpaceX ಒಡೆಯ, ಕ್ರಿಪ್ಟೋಕರೆನ್ಸಿ ಉತ್ಸಾಹಿ, ಮೀಮ್ ಪೋಸ್ಟರ್ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೇ ಖ್ಯಾತರಾಗಿರುವ ಎಲಾನ್ ಮಸ್ಕ್ ಪ್ರತಿಯೊಂದು ವಿಚಾರಗಳನ್ನು ಚರ್ಚೆಗಳನ್ನು ಟ್ವಿಟ್ಟರ್ ವೇದಿಕೆಗೆ ತಂದು ಚರ್ಚಿಸುವುದರಲ್ಲಿ ನಿಷ್ಣಾತರು. ತಮ್ಮ ಸಂಸ್ಥೆಯ ಸಾಧನೆಗಳು, ಕ್ರಿಯಾತ್ಮಕ ಯೋಜನೆಗಳು ಹೀಗೆ ಪ್ರತಿಯೊಂದು ಅಂಶಗಳನ್ನು ತುಲನಾತ್ಮಕವಾಗಿ ವಿಮರ್ಶಿಸುವ ಚಾಣಾಕ್ಷರಾಗಿದ್ದಾರೆ.ಆದರೆ ಇದೀಗ ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಟೆಕ್ ದೈತ್ಯನೆಂದೇ ಹೆಸರುವಾಸಿಯಾಗಿರುವ ಗೂಗಲ್‌ನ ಲೋಪದೋಷಗಳನ್ನು ಪ್ರಸ್ತುತಪಡಿಸಿದ್ದಾರೆ. JD ರೋಸ್ ಹೆಸರಿನ ಟ್ವಿಟ್ಟರ್ ಬಳಕೆದಾರರ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡುತ್ತಾ ಎಲಾನ್ ಮಸ್ಕ್ ಗೂಗಲ್‌ ಅನ್ನು ಕೆಣಕಿದ್ದಾರೆ. ಭವಿಷ್ಯದಲ್ಲಿ ಗೂಗಲ್‌ನೊಂದಿಗೆ ಸ್ಪರ್ಧೆಗಿಳಿಯಬಹುದೆಂಬ ದುಷ್ಟ ಯೋಚನೆಯಿಂದ ಗೂಗಲ್ 22ರ ಹರೆಯದ ಯುವಕರನ್ನು ಮಹತ್ವಾಕಾಂಕ್ಷೆಯುಳ್ಳ ಸ್ಥಾಪಕರನ್ನಾಗಿಸುವುದರ ಬದಲಿಗೆ ಸಂತೃಪ್ತವಾದ ವೃತ್ತಿಜೀವನಕಾರರನ್ನಾಗಿಸಿ ಮಾರ್ಪಡಿಸುತ್ತಿದೆ. ಹೀಗೆ ಹೆಚ್ಚಿನ ದೊಡ್ಡ ದೊಡ್ಡ ಕಂಪನಿಗಳು ಪ್ರತಿಭೆಯನ್ನು ನಶಿಸಿ ಹಾಕುತ್ತಿವೆ ಎಂದು ಆಪಾದಿಸಿ ಟ್ವಿಟ್ಟರ್‌ನಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತಿನ ಚಾಟಿ ಏಟು ನೀಡಿದ್ದಾರೆ.ಈ ವಿಷಯದಲ್ಲಿ ಮಸ್ಕ್ ಮಾತ್ರವಲ್ಲದೆ ಜ್ಯಾಕ್ ಡಾರ್ಸಿ ಕೂಡ ಫೇಸ್‌ಬುಕ್ ಸಂಸ್ಥೆಯ ಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್‌ ಮೆಟಾವರ್ಸ್ ಘೋಷಣೆಗೆ ಸಂಬಂಧಿಸಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇಂಟರ್ನೆಟ್‌ ಭವಿಷ್ಯದ ಪುನರಾವರ್ತನೆಯ ಪರಿಕಲ್ಪನೆಯನ್ನು ಮೆಟಾವರ್ಸ್ ಎಂದು ಕರೆಯಲಾಗುತ್ತದೆ. ಮೆಟಾವರ್ಸ್ ಅಂಶ ಗಮನವಿರಿಸಿಕೊಂಡು ಜುಕರ್‌ಬರ್ಗ್ ಫೇಸ್‌ಬುಕ್ ಕಂಪನಿ ಹೆಸರನ್ನು ಬದಲಾಯಿಸುವ ಯೋಜನೆಯಲ್ಲಿದೆ.ಮೆಟಾವರ್ಸ್ ಪದದ ವ್ಯಾಖ್ಯಾನ ವಿವರಿಸುತ್ತಾ ಜ್ಯಾಕ್ ಟ್ವಿಟ್ಟರ್‌ನಲ್ಲಿ ಅಭಿಪ್ರಾಯಗಳನ್ನು ಮಂಡಿಸಿದ್ದು, ಕಾರ್ಪೋರೇಟ್ ಒಡೆತನದಲ್ಲಿರುವ ವರ್ಚುವಲ್ ಪ್ರಪಂಚದಲ್ಲಿ ಅಂತಿಮ ಬಳಕೆದಾರರನ್ನು ಕಾರ್ಪೊರೇಟ್ ಸರ್ವಾಧಿಕಾರದಲ್ಲಿ ನಾಗರಿಕರಂತೆ ಪರಿಗಣಿಸುತ್ತದೆ ಎಂದು ಜರೆದಿದ್ದಾರೆ.

ಮಸ್ಕ್ ಟ್ವಿಟ್ಟರ್‌ನಲ್ಲಿ ಈ ರೀತಿಯ ಕಾಮೆಂಟ್‌ಗಳನ್ನು ಹರಿಬಿಡುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಸಾಕಷ್ಟು ಸಮಯದಿಂದಲೇ ಮಸ್ಕ್ ಸಾಮಾಜಿಕ ಮಾಧ್ಯಮವನ್ನು ತಮ್ಮ ಪ್ರತಿಕ್ರಿಯೆಗಳನ್ನು ಪ್ರಸ್ತುತಪಡಿಸಲು ಇತರ ಟೆಕ್ ಕಂಪನಿಗಳನ್ನು ದೂಷಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ, ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಮೆಜಾನ್‌ನ ಜೆಫ್ ಬೆಜೋಸ್‌ರೊಂದಿಗಿನ ಅವರ ಹಗೆತನ ಆಗಾಗ್ಗೆ ಹೊಗೆಯಾಡುತ್ತಲೇ ಇರುತ್ತದೆ.ಯಶಸ್ಸಿನ ಕುರಿತು ಮನವರಿಕೆ ಮಾಡಲು ಅಮೆಜಾನ್‌ ಸ್ಥಾಪಕರು ಕಂಪನಿಯ ಹಿಂದಿನ ಕಷ್ಟಗಳನ್ನು ಅದನ್ನು ನಿಭಾಯಿಸಲು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಂಡಿದ್ದು ಮಸ್ಕ್ ಈ ಕುರಿತಂತೆ ಬೆಳ್ಳಿಯ ಪದಕವಿರುವ ಎಮೋಜಿ ಪೋಸ್ಟ್ ಮಾಡಿರುವುದನ್ನು ಕಾಣಬಹುದು.ಹೀಗೆ ಟ್ವೀಟ್ ಮಾಡಿ ಕಾಲೆಳೆಯುವ ಕೆಲಸದಲ್ಲಿ ಮಸ್ಕ್ ಮಾತ್ರವಲ್ಲದೆ ಡಾರ್ಸಿ ಕೂಡ ಮುಂದಿದ್ದಾರೆ. ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್ ಹಲವಾರು ಗಂಟೆಗಳ ಕಾಲ ಕ್ರ್ಯಾಶ್ ಆಗಿದ್ದಾಗ ಡಾರ್ಸಿ ಈ ತಾಣಗಳ ಕುರಿತು ಕಾಮೆಂಟ್ ಮಾಡಿದ್ದಾರೆ. ಫೇಸ್‌ಬುಕ್‌ನ ಡೊಮೇನ್ ಮಾರಾಟಕ್ಕೆ ಇರುವಂತಹ ಚಿತ್ರದ ಮೂಲಕ ಡಾರ್ಸಿ ಫೇಸ್‌ಬುಕ್‌ ಕಾಲೆಳೆದಿದ್ದರು. ಬೆಲೆ ಎಷ್ಟು? ಎಂದು ಕೇಳುವಂತೆ ಡಾರ್ಸಿ ಕೋಟ್ ಮಾಡಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Save Your Finances| ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಗೊಳ್ಳುವಾಗ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸಬಹುದು? ಇಲ್ಲಿದೆ ಕೆಲವೊಂದು ಟಿಪ್ಸ್

ಇನ್ನು ನಂತರದ ಸರದಿ ಜುಕರ್‌ಬರ್ಗ್ ಅಥವಾ ಪಿಚ್ಚೈಯೇ ಎಂಬುದನ್ನು ನೋಡಬೇಕಾಗಿದೆ.. ಬಿಲಿಯನೇರ್‌ಗಳು ಪರಸ್ಪರ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಮಸ್ಕ್ ಬೆಜೋಸ್‌ರನ್ನು ದೂಷಿಸುತ್ತಿರುವ ಸಂದರ್ಶನದ ತುಣುಕೊಂದು ಮತ್ತೆ ವೈರಲ್ ಆಗಿತ್ತು. 2017ರಲ್ಲಿ ಬಿಬಿಸಿ ನಡೆಸಿದ ಸಂದರ್ಶನವೊಂದರಲ್ಲಿ ಅಂತರಿಕ್ಷ ಪೈಪೋಟಿಯಲ್ಲಿ ಮಸ್ಕ್ ಪ್ರತಿಸ್ಪರ್ಧಿ ಬೆಜೋಸ್ ಕುರಿತು ಕೇಳಿದಾಗ “ಜೆಫ್ ಯಾರು” ಎಂದು ಹಾಸ್ಯಮಾಡಿದ್ದರು.

ಇದನ್ನೂ ಓದಿ: BuzzCut: ಟಿಕ್‌ಟಾಕ್‌ನಲ್ಲಿ ಪ್ರಖ್ಯಾತಗೊಂಡ 'ಕೌಚ್ ಗೈ' ಅಸಲಿಗೆ ಯಾರು? ಇಂಟರ್ನೆಟ್‌ನಲ್ಲಿ ಏಕೆ ಇಷ್ಟೊಂದು ಟ್ರೆಂಡ್ ಆಗುತ್ತಿದೆ?

22 ಸೆಕೆಂಡ್‌ನ ಈ ವಿಡಿಯೋ ತುಣುಕು ವೈರಲ್ ಆಗಿತ್ತು. ಮಸ್ಕ್ ನೀಡಿರುವ ಪರಿಹಾರಗಳು ನೈಜವಾದ ಪರಿಹಾರಗಳಲ್ಲ ಎಂಬುದಾಗಿ ಬಿಲ್ ಗೇಟ್ಸ್ ಕೂಡ ಮಸ್ಕ್ ಅವರ ಹೇಳಿಕೆಗಳ ಕುರಿತು ಕಾಮೆಂಟ್ ಮಾಡಿದ್ದು ಮಸ್ಕ್ ಮಂಗಳ ಗ್ರಹದ ವ್ಯಕ್ತಿಯಲ್ಲ. ಹಾಗಾಗಿ ರಾಕೆಟ್‌ಗಳು ಪರಿಹಾರವಾಗುವುದಿಲ್ಲ ಎಂದು ಬಿಲ್‌ಗೇಟ್ಸ್ ಮಸ್ಕ್ ಕಾಲೆಳೆದಿದ್ದರು.
Published by:MAshok Kumar
First published: