Twitter account ತೆಗೆಯಲು19 ವರ್ಷದ ಯುವಕನಿಗೆ 5,000 ಡಾಲರ್ ಆಫರ್‌ ಮಾಡಿದ Elon Musk! ಯಾಕೆ ಗೊತ್ತೇ?

Elon Musk: ವೈಯಕ್ತಿಕ ಸುರಕ್ಷತೆಯ ಬಗ್ಗೆ ಯೋಚಿಸಿ ಎಲೋನ್ ಮಸ್ಕ್ ಅವರು ತಮ್ಮ ಖಾಸಗಿ ಜೆಟ್ ಅನ್ನು ಟ್ರ್ಯಾಕ್ ಮಾಡುವ ಟ್ವಿಟ್ಟರ್‌ ಖಾತೆಯ ಮಾಲೀಕರಿಗೆ ಸಂದೇಶ ಕಳುಹಿಸಿದ್ದಾರೆ.

ಎಲಾನ್ ಮಸ್ಕ್

ಎಲಾನ್ ಮಸ್ಕ್

  • Share this:
ಖಾಸಗಿ ಜೆಟ್ ಅನ್ನು(Private Jet) ಟ್ರ್ಯಾಕ್ ಮಾಡಲು ಟ್ವಿಟ್ಟರ್‌ ಖಾತೆಯನ್ನು (Twitter account) ಬಳಸಿಕೊಳ್ಳುತ್ತಿದ್ದು ಅದನ್ನು ತೆಗೆದುಹಾಕಲು ಕೇವಲ 19 ವರ್ಷದ ಯುವಕನಿಗೆ 5,000 ಡಾಲರ್ ಹಣ ಆಫರ್ ಮಾಡಿರುವ ಬಗ್ಗೆ ವರದಿ ಆಗಿದೆ. ಯಾರು.. ಯಾಕೆ ಅಷ್ಟೆಲ್ಲಾ ಹಣ ನೀಡಿದ್ದಾರೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ. ಎಲಾನ್ ರೀವ್ ಮಸ್ಕ್ (Elon Musk) ತನ್ನ ಖಾಸಗಿ ಜೆಟ್ ಅನ್ನು ಟ್ವಿಟ್ಟರ್‌ ಖಾತೆಯ ಕೆಲವು ಡೇಟಾಗಳನ್ನು ಬಳಸಿಕೊಂಡು ಟ್ರ್ಯಾಕ್ ಮಾಡಲಾಗುತ್ತಿತ್ತು. ಟ್ವಿಟ್ಟರ್ ಖಾತೆಯನ್ನು ಬಳಸಿಕೊಂಡು ತನ್ನ ಪ್ರೈವೇಟ್ ಜೆಟ್ ಅನ್ನು ಟ್ರ್ಯಾಕ್ (Tracking) ಮಾಡುತ್ತಿದ್ದ 19 ವರ್ಷದ ಯುವಕನಿಗೆ ಟ್ವಿಟ್ಟರ್ ಖಾತೆ ತೆಗೆದುಹಾಕಲು ಕೇಳಿಕೊಂಡಿದ್ದರು. ಈ ಕೆಲಸ ಮಾಡಲು ಯುವಕನಿಗೆ 5,000 ಡಾಲರ್‌ ಕೊಡುವುದಾಗಿ ಆಫರ್ ಮಾಡಿದ್ದಾರೆ ಎಂದು ಪ್ರೋಟೋಕಾಲ್ ವರದಿ ಮಾಡಿದೆ.

ಖಾಸಗಿ ಜೆಟ್ ಟ್ರ್ಯಾಕ್

ಎಲಾನ್ ಮಸ್ಕ್ ಓರ್ವ ಖ್ಯಾತ ಎಂಜಿನಿಯರ್, ಕೈಗಾರಿಕಾ ತಜ್ಞ ಹಾಗು ಉದ್ದಿಮೆದಾರ. ಖಾಸಗಿ ಬಾಹ್ಯಾಕಾಶ ನೌಕೆ 'ಸ್ಪೇಸ್-ಎಕ್ಸ್'ನ ಸಂಸ್ಥಾಪಕ ಕೂಡ ಹೌದು. ಮತ್ತು ಖ್ಯಾತ ಕಾರು ಕಂಪನಿ 'ಟೆಸ್ಲಾ'ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

ಎಲಾನ್ ಮಸ್ಕ್ ಅವರ ಖಾಸಗಿ ಜೆಟ್‌ನ ಸಂಚಾರದ ಸ್ಥಳವನ್ನು ಟ್ರ್ಯಾಕ್ ಮಾಡಲು ಟ್ವಿಟ್ಟರ್ ಖಾತೆಯಿಂದ ಮಸ್ಕ್ ಅವರ ಸಾರ್ವಜನಿಕ ಡೇಟಾವನ್ನು ಬಳಸುತ್ತಿತ್ತು. ಹೀಗಾಗಿ ವೈಯಕ್ತಿಕ ಸುರಕ್ಷತೆಯ ಬಗ್ಗೆ ಯೋಚಿಸಿ ಎಲೋನ್ ಮಸ್ಕ್ ಅವರು ತಮ್ಮ ಖಾಸಗಿ ಜೆಟ್ ಅನ್ನು ಟ್ರ್ಯಾಕ್ ಮಾಡುವ ಟ್ವಿಟ್ಟರ್‌ ಖಾತೆಯ ಮಾಲೀಕರಿಗೆ ಸಂದೇಶ ಕಳುಹಿಸಿದ್ದಾರೆ. ನೀವು ಇದನ್ನು ತೆಗೆದುಹಾಕಬಹುದೇ? “ಇದು ನನಗೆ ಭದ್ರತಾ ಅಪಾಯವಾಗಿದೆ” ಎಂದು ಮೆಸೇಜ್ ಮಾಡಿದ್ದರು.

ಇದನ್ನೂ ಓದಿ: Elon Muskಗೆ ಕಾರು ಉದ್ಯಮ ಸ್ಥಾಪಿಸಲು ಆಹ್ವಾನ ಕೊಟ್ಟ ಭಾರತದ 4 ರಾಜ್ಯಗಳಿವು! ಕರ್ನಾಟಕ ಈ ಪಟ್ಟಿಯಲ್ಲಿದೆಯಾ?

5,000 ಡಾಲರ್‌

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ Twitter DMಗಳ ಮೂಲಕ ಖಾತೆಯನ್ನು ನಿಷ್ಕ್ರಿಯಗೊಳಿಸಲು ಕೇಳಿಕೊಂಡಿದ್ದು ಎಲ್ಲರ ಹುಬ್ಬೇರಿಸಿದೆ. ತನ್ನ ಜೆಟ್ ಸ್ಥಳವನ್ನು ಆಫ್‌ಲೈನ್‌ ಮೂಲಕ ಟ್ರ್ಯಾಕ್ ಮಾಡಿದರೆ 5,000 ಡಾಲರ್‌ ನೀಡುವುದಾಗಿ ಹೇಳಿದ್ದಾರೆ ಎಂದು ವರದಿ ಆಗಿದೆ. ಎಲೋನ್ ಮಸ್ಕ್'ಸ್ ಜೆಟ್" ಖಾತೆಯು ಸಾರ್ವಜನಿಕವಾಗಿ ಲಭ್ಯವಿರುವ ವಾಯು-ಸಂಚಾರ ಡೇಟಾವನ್ನು ಮೇಲ್ವಿಚಾರಣೆ ಮಾಡುವ ಬಾಟ್‌ಗಳನ್ನು ಬಳಸಿಕೊಂಡು ಮಸ್ಕ್‌ನ ಖಾಸಗಿ ಜೆಟ್‌ನ ಚಲನೆಯನ್ನು ತೋರಿಸುವ ಮೂಲಕ ಟ್ರ್ಯಾಕ್ ಮಾಡುತ್ತದೆ.

ವಿದ್ಯಾರ್ಥಿ ಜ್ಯಾಕ್ ಸ್ವೀನಿ

ನವೆಂಬರ್ 2021ರಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿ ಜ್ಯಾಕ್ ಸ್ವೀನಿ ಅವರನ್ನು ಬಿಲಿಯನೇರ್ ಮಸ್ಕ್ ಸಂಪರ್ಕಿಸಿ @ElonJet ಎಂಬ ತನ್ನ ಖಾತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಬಳಸಿಕೊಂಡು ಟ್ರ್ಯಾಕ್ ಮಾಡುತ್ತದೆ. ಹಾಗಾಗಿ ಇದನ್ನು ತೆಗೆಯಬೇಕು ಎಂದು ಕೇಳಿದ್ದರು.

ಸ್ವೀನಿ ಮತ್ತು ಮಸ್ಕ್ ನಡುವೆ ಕೆಲವು ಸಂದೇಶಗಳು ವಿನಿಮಯವಾಗಿ ಸ್ವೀನಿ ನಾನು ಈ ಕೆಲಸ ಮಾಡುತ್ತೇನೆ ಎಂದು ಒಪ್ಪಿಕೊಂಡನು. ಇನ್ನು, ಸ್ವೀನಿ ಈ ಕೆಲಸಕ್ಕಾಗಿ $50,000 ಹಣ ನೀಡಬಹುದೇ.. ಈ ಹಣ ನನ್ನ ಕಾಲೇಜಿನ ಜೀವನಕ್ಕೆ ಉತ್ತಮ ಬೆಂಬಲವಾಗಲಿದ್ದು, ಮತ್ತು ಮಾಡೆಲ್ 3 ಕಾರು ಸಹ ಖರೀದಿಸಬಹುದು ಎಂದು ಮಸ್ಕ್‌ಗೆ ಹೇಳಿದ್ದರಂತೆ. ಅಂತಿಮವಾಗಿ ಸ್ವೀನಿ ಅವರು ಡೇಟಾವನ್ನು ಎಲ್ಲಿಂದ ಪಡೆಯುತ್ತಿದ್ದಾರೆಂದು ಮಸ್ಕ್‌ಗೆ ವಿವರಿಸಿದರು.

ಇದನ್ನೂ ಓದಿ: ಟ್ವಿಟರ್ ನಿಮ್ಮನ್ನೂ Fired ಮಾಡಬಹುದು ಹುಷಾರು ಎಂದ ಟೆಸ್ಲಾ CEO Elon Musk..! ಯಾಕೆ ಗೊತ್ತೇ?

ಖಾತೆ ಮುಚ್ಚಲು ಹಣ

ತದನಂತರ ಮಸ್ಕ್ ಅವರು ಅದರ ಬಗ್ಗೆ ಯೋಚಿಸುವುದಾಗಿ ಹೇಳಿದ್ದರು. ಖಾತೆ ಮುಚ್ಚಲು ಹಣ ನೀಡುವುದು ಸರಿ ಅಲ್ಲ ಎಂದು ಯೋಚಿಸಿ ಸ್ವೀನಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರು.

ಹೀಗಾಗಿ ಮಸ್ಕ್ ಮತ್ತೆ ಸ್ವೀನಿ ಸಂಪರ್ಕಕ್ಕೆ ಬಂದಿಲ್ಲ ಎಂದು ಕೆಲವು ವರದಿಗಳು ಹೇಳಿವೆ.ಸ್ವೀನಿ ತೀರಾ ಇತ್ತೀಚೆಗೆ ಮಸ್ಕ್ ಅವರು ಖಾತೆಯನ್ನು ಅಳಿಸಲು ಪ್ರತಿಯಾಗಿ ಪಾವತಿಗಿಂತ ಇಂಟರ್ನ್‌ಶಿಪ್‌ಗೆ ಆದ್ಯತೆ ನೀಡುವುದಾಗಿ ಹೇಳಿದ್ದರು. ಆದರೂ, ಮಸ್ಕ್ ಈ ಮೆಸೇಜ್‌ ಅನ್ನು ಓಪನ್ ಮಾಡಿಲ್ಲ ಎನ್ನಲಾಗಿದೆ. ಆ ಸಮಯದಲ್ಲಿ ಮಸ್ಕ್ ಹವಾಯಿಯಲ್ಲಿ ರಜೆಯಲ್ಲಿದ್ದಾರೆ ಎಂದು ಅವರ ಫ್ಲೈಟ್ ಟ್ರ್ಯಾಕರ್‌ನಲ್ಲಿ ತಿಳಿದು ಬಂದಿದೆ.
Published by:vanithasanjevani vanithasanjevani
First published: