ನಾವೆಲ್ಲಾ ಹೆಚ್ಚಾಗಿ ಸುಮ್ಮನೆ ಒಂದು ಕಡೆ ನಿಂತಿರುವ ಆನೆಗಳನ್ನು (Elephants) ನೋಡಿರಬಹುದು ಅಥವಾ ಕಾಡಿನಲ್ಲಿ ಸಫಾರಿಗೆ ಹೋದಾಗ ತನ್ನ ಹಿಂಡಿನ ಜೊತೆಯಲ್ಲಿ ಆನೆಗಳು ಆಟವಾಡುವುದನ್ನು ಅಥವಾ ನೀರು ಕುಡಿಯುವುದನ್ನು ನೋಡಿರುತ್ತೇವೆ. ಆದರೆ ಈ ಆನೆಗಳು ಪರಸ್ಪರ ಕಿತ್ತಾಡಿಕೊಳ್ಳುವುದನ್ನು ಯಾರೂ ಸಹ ಹೆಚ್ಚಾಗಿ ನೋಡಿರುವುದಿಲ್ಲ. ಹೀಗೆ ಕಾಡಿನಲ್ಲಿ (Wild) ಆನೆಗಳು ಕಿತ್ತಾಡಿಕೊಳ್ಳುವ ದೃಶ್ಯ ಕಣ್ಣಿಗೆ ಬಿದ್ದಿರುವ ಸಾಧ್ಯತೆ ಹೆಚ್ಚಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಕಾಡಿನ ಅಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಇರುತ್ತದೆ.
ಇಲ್ಲೊಂದು ಇಂತಹದೇ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಕಾಡು ಪ್ರದೇಶದಲ್ಲಿ ಎರಡು ಪ್ರಬಲ ಆನೆಗಳು ಪರಸ್ಪರ ಸೊಂಡಿಲುಗಳಿಂದ ಜಗಳವಾಡುತ್ತಿವೆ. ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತ ನಂದ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು ನೋಡಿ. ಏಕೆಂದರೆ ಆನ್ಲೈನ್ ನಲ್ಲಿ ಇಂತಹ ಆನೆಗಳ ಜಗಳಗಳ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಎರಡು ಆನೆಗಳು ನೀರಿನಲ್ಲಿ ನಿಂತು ಜಗಳವಾಡುತ್ತಿವೆ..
ಸಾಮಾಜಿಕ ಮಾಧ್ಯಮದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎರಡು ಆನೆಗಳು ನೀರಿನಲ್ಲಿ ನಿಂತುಕೊಂಡು ತಮ್ಮ ಸೊಂಡಿಲುಗಳೊಂದಿಗೆ ಕುಸ್ತಿ ಮಾಡುತ್ತಿರುವುದನ್ನು ಕಾಣಬಹುದು. ಒಬ್ಬರನ್ನೊಬ್ಬರು ತಳ್ಳುತ್ತಾ, ಇಬ್ಬರೂ ಜಗಳವಾಡಿದಾಗ ಅವರ ದಂತವು ಒಟ್ಟಿಗೆ ಡಿಕ್ಕಿ ಹೊಡೆಯುವುದನ್ನು ಸಹ ಈ ವಿಡಿಯೋ ತುಣುಕಿನಲ್ಲಿ ನಾವು ನೋಡಬಹುದು
When the titans clash,
The Forest shivers…. pic.twitter.com/GGnpUUlhTS
— Susanta Nanda (@susantananda3) May 16, 2023
"ನೀರಿನೊಳಗೆ ಇನ್ನೂ ಒಂದು ಫೈಟ್, ಜಗಳದ ನಡುವೆ ಒಂದು ಡ್ರಿಂಕ್ಸ್ ವಿರಾಮವಿದೆ" ಎಂದು ಐಎಫ್ಎಸ್ ಅಧಿಕಾರಿ ಅರಣ್ಯ ಇಲಾಖೆಯಿಂದ ಸ್ವೀಕರಿಸಿದ ವಿಡಿಯೋಗೆ ಶೀರ್ಷಿಕೆಯೊಂದನ್ನು ನೀಡಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಎರಡು ಆನೆಗಳು ರಸ್ತೆಯ ಮೇಲೆ ಕಾದಾಡುತ್ತಿವೆ
ಅವರ ಈ ಟ್ವೀಟ್ ಈ ಹಿಂದೆ ಪೋಸ್ಟ್ ಮಾಡಿದ ಮತ್ತೊಂದು ಕ್ಲಿಪ್ ನ ಮುಂದುವರಿದ ಭಾಗವಾಗಿದೆ. ಮೊದಲು ಟ್ವೀಟ್ ಮಾಡಿದ ಪೋಸ್ಟ್ ನಲ್ಲಿ ಒಂದು ಜೋಡಿ ದೈತ್ಯಾಕಾರದ ಆನೆಗಳು ರಸ್ತೆಯಲ್ಲಿ ಜಗಳವಾಡುತ್ತಿರುವುದನ್ನು ತೋರಿಸುತ್ತದೆ. ಎರಡು ಆನೆಗಳು ಪರಸ್ಪರ ತಳ್ಳಿಕೊಳ್ಳುವುದನ್ನು ಈ ಕ್ಲಿಪ್ ನಲ್ಲಿ ನಾವು ನೋಡಬಹುದು. ಕೆಲವು ಸೆಕೆಂಡುಗಳ ಕಾಲ ನಡೆದ ಅಸಾಮಾನ್ಯ ಜಗಳವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎರಡು ಆನೆಗಳು ಪರಸ್ಪರ ಆಕ್ರಮಣಕಾರಿಯಾಗಿ ಕಾದಾಡುತ್ತಿರುವುದನ್ನು ನಾವು ಇಲ್ಲಿ ನೋಡಬಹುದು.
One more inside the water.
With drinks break in between. From FD. https://t.co/OmGonow0m7 pic.twitter.com/BqL64xXNyx
— Susanta Nanda (@susantananda3) May 17, 2023
ತಮ್ಮ ಬಲಿಷ್ಠವಾದ ದಂತಗಳೊಂದಿಗೆ, ಈ ಜೋಡಿಯು ಪರಸ್ಪರ ರಸ್ತೆಯ ಕೆಳಗೆ ಇಳಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. ವಿಡಿಯೋ ಕೊನೆಗೊಳ್ಳುವವರೆಗೂ ಎರಡು ಆನೆಗಳು ತಮ್ಮ ಪ್ರಾಬಲ್ಯವನ್ನು ಹೀಗೆಯೇ ಮುಂದುವರಿಸುತ್ತವೆ. "ಟೈಟಾನ್ಸ್ ಮುಖಾಮುಖಿಯಾದಾಗ, ಕಾಡು ನಡುಗುತ್ತದೆ" ಎಂದು ಐಎಫ್ಎಸ್ ಅಧಿಕಾರಿ ಈ ಕ್ಲಿಪ್ ನ ಪಕ್ಕದಲ್ಲಿ ಬರೆದಿದ್ದಾರೆ.
ಆನೆಗಳ ವಿಡಿಯೋಗಳನ್ನ ತುಂಬಾನೇ ಇಷ್ಟಪಟ್ಟಿದ್ದಾರೆ ನೆಟ್ಟಿಗರು
ಈ ವಿಡಿಯೋಗಳು ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ ಗಳನ್ನು ಗಳಿಸಿವೆ, ಟ್ವಿಟರ್ ಬಳಕೆದಾರರು ಈ ವೀಡಿಯೋಗಳನ್ನು ನೋಡಿ ತುಂಬಾನೇ ಆಕರ್ಷಿತರಾಗಿದ್ದಾರೆ ಮತ್ತು ಉತ್ಸುಕರಾಗಿದ್ದಾರೆ. ಇದನ್ನು ನೋಡಿದ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಇದು ಒಡಹುಟ್ಟಿದವರ ಜಗಳದಂತೆ ಕಾಣುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು “ಈ ದೈತ್ಯ ಆನೆಗಳು ಹೇಗೆ ಪರಸ್ಪರ ಜಗಳವಾಡುತ್ತಿವೆ" ಅಂತ ಆಶ್ಚರ್ಯ ಪಟ್ಟುಕೊಂಡು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಸಹ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡ ಇದೇ ರೀತಿಯ ವಿಡಿಯೋದಲ್ಲಿ ಎರಡು ಆನೆ ಮರಿಗಳ ನಡುವಿನ ಜಗಳವನ್ನು ನೋಡಿದ್ದೆವು. ಎರಡು ಆನೆ ಮರಿಗಳು ತಮ್ಮ ದಂತಗಳೊಂದಿಗೆ ಜಗಳವಾಡುತ್ತಿದ್ದವು. ನಂತರ ಹಿರಿಯ ಆನೆಗಳು ಮಧ್ಯ ಪ್ರವೇಶಿಸಿದಾಗ ಈ ಆನೆ ಮರಿಗಳು ಸ್ವಲ್ಪ ಶಾಂತವಾದವು. "ಸೋದರ ಸಂಬಂಧಿಗಳು ಜಗಳವಾಡಿದಾಗ, ಹಿರಿಯರು ಮಧ್ಯ ಪ್ರವೇಶಿಸಬೇಕು" ಎಂದು ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಅಧಿಕಾರಿ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ