• Home
 • »
 • News
 • »
 • trend
 • »
 • Viral Video: ಆನೆಗಳು ರೈಲ್ವೆ ಟ್ರ್ಯಾಕ್ ದಾಟಿದ ಪರಿ ನೋಡಿ ಗೋಡೆಯನ್ನೇ ತೆಗೆದುಬಿಟ್ಟಿದೆ ರೈಲ್ವೆ ಇಲಾಖೆ, ವಿಡಿಯೋ ನೋಡಿ!

Viral Video: ಆನೆಗಳು ರೈಲ್ವೆ ಟ್ರ್ಯಾಕ್ ದಾಟಿದ ಪರಿ ನೋಡಿ ಗೋಡೆಯನ್ನೇ ತೆಗೆದುಬಿಟ್ಟಿದೆ ರೈಲ್ವೆ ಇಲಾಖೆ, ವಿಡಿಯೋ ನೋಡಿ!

ಕನಸಿನ ಗ್ರಂಥದ ಪ್ರಕಾರ, ನಿಮ್ಮ ಕನಸಿನಲ್ಲಿ ಆನೆಯನ್ನು ನೋಡಿದರೆ, ಅದು ಶುಭ ಸಂಕೇತವನ್ನು ತರುತ್ತದೆ. ಕನಸಿನಲ್ಲಿ ಆನೆಯನ್ನು ನೋಡುವುದು ಅದೃಷ್ಟದ ಜೊತೆಗೆ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳದ ಸೂಚಕವಾಗಿದೆ. ನಿಮ್ಮ ಕನಸಿನಲ್ಲಿ ಆನೆ ಸವಾರಿ ಮಾಡುವುದನ್ನು ನೀವು ನೋಡಿದರೆ, ಇದರರ್ಥ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ, ನಿಮ್ಮ ಸಂಪತ್ತು ಕೂಡ ಹೆಚ್ಚಾಗುತ್ತದೆ.

ಕನಸಿನ ಗ್ರಂಥದ ಪ್ರಕಾರ, ನಿಮ್ಮ ಕನಸಿನಲ್ಲಿ ಆನೆಯನ್ನು ನೋಡಿದರೆ, ಅದು ಶುಭ ಸಂಕೇತವನ್ನು ತರುತ್ತದೆ. ಕನಸಿನಲ್ಲಿ ಆನೆಯನ್ನು ನೋಡುವುದು ಅದೃಷ್ಟದ ಜೊತೆಗೆ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳದ ಸೂಚಕವಾಗಿದೆ. ನಿಮ್ಮ ಕನಸಿನಲ್ಲಿ ಆನೆ ಸವಾರಿ ಮಾಡುವುದನ್ನು ನೀವು ನೋಡಿದರೆ, ಇದರರ್ಥ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ, ನಿಮ್ಮ ಸಂಪತ್ತು ಕೂಡ ಹೆಚ್ಚಾಗುತ್ತದೆ.

ವಿಡಿಯೋದಲ್ಲಿ ಆನೆಗಳ ಹಿಂಡು ದಾಟುತ್ತಿದ್ದ ಮಾರ್ಗದಲ್ಲಿ ರೈಲ್ವೇ ಹಳಿ ಹಾದು ಹೋಗಿರುವುದು ಕಾಣುತ್ತದೆ. ಹಾಗೂ ಹಳಿ ಇರುವ ಪ್ರದೇಶದ ಸುತ್ತ ಕಾಂಪೌಂಡ್ ಕೂಡ ಹಾಕಲಾಗಿದೆ.

 • Share this:

  ಸಾಮಾಜಿಕ ಜಾಲತಾಣದಲ್ಲಿ(social media) ಒಂದಲ್ಲ ಸಾಕಷ್ಟು ವಿಡಿಯೋಗಳು (videos) ವೈರಲ್ ಆಗುತ್ತವೆ. ಹೀಗೆ ವೈರಲ್ ಆಗುವ ವಿಡಿಯೋಗಳು ಕೆಲವೊಮ್ಮೆ ಸರಿಯಾದ ಪ್ರತಿಕ್ರಿಯೆ ಪಡೆಯುವುದಿಲ್ಲ. ಇಲಾಖೆಗಳು (departments) ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪ (natural disaster) ದಿಂದ ಸಾಕಷ್ಟು ಪ್ರಾಣಿಗಳು ಜೀವ ಬಿಟ್ಟಿವೆ. ಚಂಡಮಾರುತ, ಅತಿವೃಷ್ಟಿಯಂತ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಇವುಗಳಿಗೆ ಸಂಬಂಧಪಟ್ಟ ಇಲಾಖೆಗಳು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಇಲ್ಲೊಂದು ವಿಡಿಯೋ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲ… ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಎತ್ತಿ ತೋರಿಸಿದೆ. ಅಪಾಯದ ಹಾದಿಯಲ್ಲಿ ಆನೆಗಳು ಸಾಗಿದ್ದ ವಿಡಿಯೋ ಈಗ ವೈರಲ್ ಆಗಿದೆ. ಆನೆಗಳ (elephants) ಹಿಂಡು ಅಪಾಯದ (danger) ಮಾರ್ಗದಲ್ಲಿ ಸಾಗಿದ್ದನ್ನು ಸಾಕಷ್ಟು ಮಂದಿ ವಿಡಿಯೋ ಮಾಡಿದ್ದಾರೆ. ಅಷ್ಟಕ್ಕೂ ಅದ್ಯಾವ ವಿಡಿಯೋ, ವಿಡಿಯೋದಲ್ಲಿ ಅಂಥದ್ದೇನಿದೆ..? ಅನ್ನೋದನ್ನ ನೀವೇ ನೋಡಿ..


  ವೈರಲ್ ಆಗಿರುವ ಈ ವಿಡಿಯೋದಲ್ಲಿ ಆನೆಗಳ ಹಿಂಡು ದಾಟುತ್ತಿದ್ದ ಮಾರ್ಗದಲ್ಲಿ ರೈಲ್ವೇ ಹಳಿ ಹಾದು ಹೋಗಿರುವುದು ಕಾಣುತ್ತದೆ. ಹಾಗೂ ಹಳಿ ಇರುವ ಪ್ರದೇಶದ ಸುತ್ತ ಕಾಂಪೌಂಡ್ ಕೂಡ ಹಾಕಲಾಗಿದೆ. ಇದೇ ಪ್ರದೇಶಕ್ಕೆ ಬರುವ ಆನೆಗಳ ಹಿಂಡು ಮತ್ತೊಂದು ಬದಿಗೆ ಹಾದು ಹೋಗಲು ಕಾಂಪೌಂಡ್ ಅಡ್ಡ ಬಂದಿದ್ದರಿಂದ ಅಪಾಯದಿಂದ ಕೂಡಿದ ರೈಲ್ವೇ ಹಳಿಯ ಮೇಲೆಯೇ ದಾಟುತ್ತವೆ. ಈ ವೇಳೆ ಅದೇ ಜಾಗದಲ್ಲಿದ್ದ ಕೆಲವರು ಇದನ್ನು ವಿಡಿಯೋ ಮಾಡಿದ್ದಾರೆ.


  ತಮಿಳುನಾಡಿನಲ್ಲಿ ನಡೆದಿದೆ ಈ ಆನೆ ಸಾಹಸ


  ಇನ್ನು ಈ ವಿಡಿಯೋ ತಮಿಳುನಾಡಿನ ನೀಲಗಿರಿ ಪ್ರದೇಶದ್ದು ಎಂದು ಹೇಳಲಾಗಿದೆ. ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುವಾಗ ಹಾಕಿದ್ದ ಬೇಲಿಯಿಂದಾಗಿ ಅಪಾಯಕಾರಿ ರೈಲ್ವೇ ಹಳಿಯ ಮೇಲೆಯೇ ದಾಟಿದ ಆನೆಗಳ ಹಿಂಡಿನ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಇನ್ನು ವಿಡಿಯೋದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗುತ್ತಿದ್ದ ಆನೆಗಳಿಗೆ ಅಡ್ಡಲಾಗಿ ಹಾಕಿದ್ದ ಬೇಲಿ ಕಂಡು, ಅವು ತಮ್ಮ ಪಥವನ್ನು ಬದಲಿಸುತ್ತವೆ. ಆದರೆ ಅವುಗಳು ಅಪಾಯಕಾರಿ ರೈಲ್ವೇ ಹಳಿಯನ್ನು ಕಷ್ಟಪಟ್ಟು ದಾಟುತ್ತವೆ. ಆನೆಗಳ ಹಿಂಡು ಕಾಡಿಗೆ ಹೋಗುತ್ತಿರುವುದು ವಿಡಿಯೋದಿಂದ ಗೊತ್ತಾಗುತ್ತದೆ.


  ಇನ್ನು ವಿಡಿಯೋ ಶೇರ್ ಮಾಡಿರುವ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹೂ, ಪ್ರಾಣಿಗಳಿಗೆ ಅನುಕೂಲವಾಗುವಂತೆ ವನ್ಯಜೀವಿ ಸ್ನೇಹಿ ವಿನ್ಯಾಸವನ್ನು ಕಾರ್ಯಗತಗೊಳಿಸಿ. ಪ್ರಾಣಿಗಳ ಸಂಚಾರಕ್ಕೆ ಯಾವುದೇ ರೀತಿಯ ಅಪಾಯವಾಗದಂತೆ ನೋಡಿಕೊಳ್ಳಬೇಕು. ಈ ವಿಡಿಯೋ ನೋಡಿ ತುಂಬಾ ಬೇಸರವಾಯಿತು ಎಂದು ಬರೆದುಕೊಂಡಿದ್ದಾರೆ.


  ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಡಿಯೋ


  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ರೈಲ್ವೇ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ, ಆನೆಗಳ ಓಡಾಟಕ್ಕೆ ಅನುಕೂಲವಾಗುವಂತೆ ಜಾಗವನ್ನು ಸರಿಪಡಿಸಿಕೊಟ್ಟಿದೆ. ಕಾಂಪೌಂಡನ್ನು ಜೆಸಿಬಿ ಬಳಸಿ ತೆಗೆದು ಹಾಕುವ ಕೆಲಸ ಮಾಡಿದೆ. ರೈಲ್ವೇ ಸಚಿವಾಲಯ ತ್ವರಿತವಾಗಿ ತೆಗೆದುಕೊಂಡ ನಿರ್ಧಾರ ಹಾಗೂ ಪ್ರಾಣಿಗಳಿಗೆ ಅನುಕೂಲ ಮಾಡಲು ಬೇಲಿಯನ್ನು ತೆಗೆದು ಹಾಕಿದ್ದು ಸಾಕಷ್ಟು ಜನರ ಪ್ರಶಂಸೆಗೆ ಪಾತ್ರವಾಗಿದೆ.  ಸುಪ್ರಿಯಾ ಸಾಹೂ ಅವರ ವಿಡಿಯೋ ಶೇರ್ ಮಾಡಿ ಸಮಸ್ಯೆಯನ್ನು ಮುನ್ನೆಲೆಗೆ ತಂದಿದ್ದರ ಬಗ್ಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸುಪ್ರಿಯಾ ಸಾಹೂ ಮತ್ತೊಂದು ಟ್ವೀಟ್ ಮಾಡಿ, ರೈಲ್ವೇ ಸಚಿವಾಲಯ ಬೇಲಿಯನ್ನು ತೆಗೆದು ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಂಪೌಂಡ್ ತೆಗೆದು ಹಾಕುತ್ತಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡಿದಾಗ ಒಳ್ಳೆಯ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.


  ಇನ್ನು ವಿಡಿಯೋ ನೋಡಿದ ಸಾಕಷ್ಟು ಜನ ಸಮಸ್ಯೆಯ ಬಗ್ಗೆ ಹೇಳಿ ಪರಿಹಾರ ನೀಡಿದ ರೈಲ್ವೇ ಸಚಿವಾಲಯಕ್ಕೂ ಅಭಿನಂದನೆ ತಿಳಿಸಿದ್ದಾರೆ. ಎರಡೂ ವಿಡಿಯೋಗಳು ವೈರಲ್ ಆಗಿವೆ.

  Published by:renukadariyannavar
  First published: