• Home
 • »
 • News
 • »
 • trend
 • »
 • Viral video: ಅರಣ್ಯ ಸಿಬ್ಬಂದಿಯ ಗದರುವಿಕೆಗೆ ಹೆದರಿ ಕಾಡಿನತ್ತ ಪಲಾಯನಗೈದ ಕಾಡಾನೆ!

Viral video: ಅರಣ್ಯ ಸಿಬ್ಬಂದಿಯ ಗದರುವಿಕೆಗೆ ಹೆದರಿ ಕಾಡಿನತ್ತ ಪಲಾಯನಗೈದ ಕಾಡಾನೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಮಾನವರು ಎಷ್ಟೇ ಏರುಗತಿಯನ್ನು ಕಂಡಿದ್ದರೂ ಈ ಬೆಳವಣಿಗೆಗಳು ಅರಣ್ಯದಲ್ಲಿರುವ ವನ್ಯಜೀವಿಗಳ ಆವಾಸಸ್ಥಾನಗಳಿಗೆ ಅಡ್ಡಿಯನ್ನುಂಟುಮಾಡಿವೆ, ಹಾಗಾಗಿ ಇಲ್ಲೋಂದು ಕಾಡನೆ ಏನು ಮಾಡಿದೆ ಗೊತ್ತಾ?

 • Trending Desk
 • 5-MIN READ
 • Last Updated :
 • Share this:

  ಮೂಲಸೌಕರ್ಯಗಳ (Infrastructure) ಅಭಿವೃದ್ಧಿಯಲ್ಲಿ ಮಾನವರು (Man) ಎಷ್ಟೇ ಏರುಗತಿಯನ್ನು ಕಂಡಿದ್ದರೂ ಈ ಬೆಳವಣಿಗೆಗಳು ಅರಣ್ಯದಲ್ಲಿರುವ ವನ್ಯಜೀವಿಗಳ ( Wild Life) ಆವಾಸಸ್ಥಾನಗಳಿಗೆ ಅಡ್ಡಿಯನ್ನುಂಟುಮಾಡಿವೆ. ಅದಕ್ಕಾಗಿಯೇ ಅವುಗಳು ಕಾಡು ಬಿಟ್ಟು ನಾಡಿಗೆ ಬರುತ್ತವೆ ಹಾಗೂ ಕಾಡಿನಂತೆಯೇ ನಾಡಿನಲ್ಲೂ ವಿಹರಿಸುತ್ತವೆ. ಕಾಡುಪ್ರಾಣಿಗಳು ಹಳ್ಳಿಗಳಿಗೆ ಬಂದು ದಾಂಧಲೆ ನಡೆಸಿದ ಅದೆಷ್ಟೂ ಘಟನೆಗಳನ್ನು (Incident) ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ತಮ್ಮ ಹಾದಿಗೆ ಅಡ್ಡಲಾಗಿ ಬರುವ ಮಾನವರಿಂದ ಕಂಗೆಟ್ಟಿರುವ ಪ್ರಾಣಿಗಳು (Animal) ದಾಂಧಲೆ ನಡೆಸುವ ಹಾಗೂ ಮನುಷ್ಯರಿಗೆ ವಿನಾಶವನ್ನುಂಟು ಮಾಡುವ ರೀತಿಯಲ್ಲಿ ವ್ಯಘ್ರಗೊಳ್ಳುತ್ತವೆ.


  ಹೆಚ್ಚಾಗಿ ಕಾಡಾನೆಗಳು ಮನುಷ್ಯರು ಸಂಚರಿಸುವ ರಸ್ತೆಗಳಲ್ಲಿ ವಿಹರಿಸುವ ಮೂಲಕ ಉಪಟಳ ನೀಡುವುದು ಸರ್ವೇ ಸಾಮಾನ್ಯವಾದುದು. ಅವುಗಳು ವಿಹರಿಸುವ ಜಾಗವನ್ನು ಇಂದು ನಾವು ವಶಪಡಿಸಿಕೊಂಡಿದ್ದರಿಂದ ಆನೆಗಳು ಇಂದು ನಮ್ಮನ್ನು ಬೇಟೆಯಾಡುತ್ತಿವೆ ಇದುವೇ ಅಸಲಿ ಸಂಗತಿ. ಆದರೆ ಇಂದಿನ ಲೇಖನದಲ್ಲಿ ಅತ್ಯಂತ ಚಮತ್ಕಾರಿಯಾದ ಸಂಗತಿಯೊಂದನ್ನು ನಾವು ತಿಳಿಸುತ್ತೆವೆ, ಅರಣ್ಯ ಸಿಬ್ಬಂದಿಯ ಗದರುವಿಕೆಗೆ ಹೆದರಿ ಮರಳಿ ಅರಣ್ಯದತ್ತ ಪ್ರಯಾಣಿಸುವ ಕಾಡಾನೆಯ ವಿಡಿಯೋ ಇದೀಗ ವೈರಲ್ ಆಗಿದೆ.


  ಅರಣ್ಯ ಸಿಬ್ಬಂದಿಯ ಗದರುವಿಕೆಗೆ ಮರಳಿ ಕಾಡಿನತ್ತ ಆನೆ


  ಕೇರಳ ಮೂಲದ ಮಾತೃಭೂಮಿ ನ್ಯೂಸ್‌ನ ಯೂಟ್ಯೂಬ್ ಚಾನಲ್ ಈ ಆಶ್ಚರ್ಯಕರ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ಅರಣ್ಯ ಸಿಬ್ಬಂದಿಯೋರ್ವರು ಕಾಡಾನೆಯನ್ನು ಗದರಿಸಿದ್ದು, ಅದು ಹೆದ್ದಾರಿಯಿಂದ ಹಿಂದೆ ಸರಿದು ಮರಳಿ ಕಾಡಿನೆಡೆಗೆ ನಡೆದಿದೆ. ಸುದ್ದಿಚಾನಲ್ ಪ್ರಸಾರಮಾಡಿರುವ ವಿಡಿಯೋದಲ್ಲಿ ಅರಣ್ಯ ಸಿಬ್ಬಂದಿ ತಮ್ಮ ಸ್ಕೂಟರ್‌ನಲ್ಲಿ ಕುಳಿತಿದ್ದು, ಅಪಾಯಕಾರಿಯಾಗಿದ್ದ ಕಾಡಾನೆಯನ್ನು ಗದರುತ್ತಿರುವುದನ್ನು ಕಾಣಬಹುದು. ಅರಣ್ಯ ಸಿಬ್ಬಂದಿಯು ಗದರಿದ ನಂತರ ಮನಸ್ಸು ಬದಲಾಯಿಸಿದ ಆನೆಯು ರಸ್ತೆಯನ್ನು ಬಿಟ್ಟು ಮರಳಿ ಅರಣ್ಯದತ್ತ ಹೆಜ್ಜೆಹಾಕಿದೆ.


  elephant viral video in internet
  ಸಾಂದರ್ಭಿಕ ಚಿತ್ರ


  ಅರಣ್ಯ ಅಧಿಕಾರಿಯ ಎಚ್ಚರಿಕೆ  ಓಡಿದ ಕಾಡನೆ


  ಕಾಡಾನೆ ಹಾಗೂ ಸ್ಕೂಟರ್ ಮೇಲಿದ್ದ ಅರಣ್ಯ ಸಿಬ್ಬಂದಿಯ ಸಂಪೂರ್ಣ ಸಂವಾದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವು ದೇಶದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಅವರಿಗೆ ತಲುಪಿದ್ದು ಇಂತಹ ಕೃತ್ಯಗಳನ್ನು ಸಿಬ್ಬಂದಿಗಳು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ. ಡಿಎಫ್‌ಒ ಪ್ರಕಾರ ಇಂತಹ ಸಂದರ್ಭಗಳನ್ನು ನಿಭಾಯಿಸುವ ಜ್ಞಾನ ಹಾಗೂ ತಿಳುವಳಿಕೆಯನ್ನು ಅರಣ್ಯ ಸಿಬ್ಬಂದಿಗಳು ಹೊಂದಿದ್ದರೂ ಇದೇ ಸಂದರ್ಭ ಪುನಃ ಮರುಕಳಿಸಿದಲ್ಲಿ ಸಾರ್ವಜನಿಕರೂ ಈ ರೀತಿ ಮಾಡಬಹುದು ಆದರೆ ಅದು ಮುಂದೆ ಅಪಘಾತಕ್ಕೆ ಅಪಾಯಕ್ಕೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: YouTube ನೋಡಿ ಮನೆಯಲ್ಲೇ ಔಷಧಿ ಮಾಡ್ಕೋತೀರಾ? ಇಲ್ಲಿ ನೋಡಿ ವ್ಯಕ್ತಿಯೊಬ್ಬನ ಪ್ರಾಣನೇ ಹೋಯ್ತು!


  ಸಿಬ್ಬಂದಿಯ ಸಾಹಸ


  ಕಾಡಿನ ಭೌಗೋಳಿಕತೆ, ವನ್ಯಜೀವಿ ಮತ್ತು ಸಸ್ಯವರ್ಗದ ಬಗ್ಗೆ ಚೆನ್ನಾಗಿ ತಿಳಿದಿರುವ ಅರಣ್ಯ ಸಿಬ್ಬಂದಿ ತಮ್ಮ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದು, ಈ ಪ್ರದೇಶದ ಎಲ್ಲಾ ಕಾಡಾನೆಗಳನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ ಮತ್ತು ಮನುಷ್ಯರ ಬಗ್ಗೆ ಅವುಗಳ ಪ್ರವೃತ್ತಿಯನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ತಾನು ಗದರಿಸುತ್ತಿರುವ ಆನೆ ಕಾಡಾನೆಯಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂಬುದು ತನಗೆ ತಿಳಿದಿತ್ತು ಎಂದು ಹೇಳುವ ಸಿಬ್ಬಂದಿ, ಸಿಬ್ಬಂದಿಯ ಯೋಜನೆ ವಿಫಲಗೊಂಡಿದ್ದರೆ ಅದು ತನ್ನ ಮೇಲೆ ದಾಳಿ ಮಾಡುವ ಅವಕಾಶವಿತ್ತು ಎಂದು ತಿಳಿಸಿದ್ದಾರೆ. ಇನ್ನು ಆನೆ ಎಲ್ಲಿಯಾದರೂ ದಾಳಿ ನಡೆಸಿದ್ದರೆ ಅರಣ್ಯ ಸಿಬ್ಬಂದಿ ಓಡಲು ಕೂಡ ಸಜ್ಜಾಗಿದ್ದರು ಎಂದು ತಿಳಿಸಿದ್ದಾರೆ.


  ವಾಹನಗಳಿಗೆ ಸಿಲುಕಿ ಮೃತವಾಗುವ ಪ್ರಾಣಿಗಳು


  ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ, ಹಲವಾರು ರಾಜ್ಯ ಹೆದ್ದಾರಿಗಳು ಆ ಪ್ರದೇಶಗಳಲ್ಲಿ ವಾಸಿಸುವ ವನ್ಯಜೀವಿಗಳ ಮಾರ್ಗದಲ್ಲಿ ದಟ್ಟವಾದ ಕಾಡುಗಳ ಮೂಲಕ ಹಾದು ಹೋಗುತ್ತವೆ. ಕೆಲವೊಂದು ಸಂದರ್ಭದಲ್ಲಿ ವಾಹನ ಸವಾರರ ದಾರಿಗೆ ಅರಿವಿಲ್ಲದೇ ಅಡ್ಡಬರುವ ಪ್ರಾಣಿಗಳು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.


  ಕಾಡು ಪ್ರಾಣಿಗಳಿಗೆ ತೊಂದರೆ ಕೊಡಬೇಡಿ


  ಭಯಾನಕ ಶಬ್ಧ ಹಾಗೂ ಹಠಾತ್ ಚಲನೆಗಳಿಂದಾಗಿ ಕಾಡು ಪ್ರಾಣಿಗಳು ದಿಕ್ಕೆಡುತ್ತವೆ ಹಾಗೂ ಅವುಗಳು ಪ್ರಚೋದನೆಗೆ ಒಳಗಾಗುತ್ತವೆ. ನೀವು ಅವರ ಪ್ರದೇಶದಲ್ಲಿದ್ದೀರಿ ಹಾಗೂ ಕಾಡು ಅವರಿಗೆ ಸೇರಿದೆ ಎಂಬುದನ್ನು ಮರೆಯದಿರಿ. ಕೊಂಚ ತಾಳ್ಮೆಯಿಂದಿರಿ ಹಾಗೂ ಅವರಿಗೆ ಆರಾಮವಾಗಿ ಹಾದುಹೋಗಲು ಅವಕಾಶ ನೀಡಿ ಎಂದು ಸಿಬ್ಬಂದಿ ತಿಳಿಸಿದ್ದಾರೆ.

  Published by:Precilla Olivia Dias
  First published: