ಆನೆಗಳು ಅಸಾಧಾರಣ ಬುದ್ದಿವಂತ ಜೀವಿಗಳು ಅನ್ನೋದನ್ನು ಒಪ್ಪಿಕೊಳ್ಳಲೇಬೇಕು. ಇದರ ಬುದ್ದಿವಂತಿಕೆಯನ್ನು ಪ್ರದರ್ಶಿಸೋ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ (Social Media) ನೋಡುತ್ತಲೇ ಇರುತ್ತೇವೆ. ಈ ಗಜರಾಜನ ಬುದ್ದಿವಂತಿಕೆಯನ್ನು ತೋರಿಸುವ ಹಳೆಯ ವಿಡಿಯೋವೊಂದು (Old Video) ಈದೀಗ ಮತ್ತೆ ವೈರಲ್ ಆಗಿದೆ. ಆನೆಯು ವಿದ್ಯುತ್ ಬೇಲಿಯನ್ನು ಉಪಾಯವಾಗಿ ದಾಟಿದ ವಿಡಿಯೋವೊಂದನ್ನು ಭಾರತೀಯ ಅರಣ್ಯ (Forest) ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿದ್ಯುತ್ ಬೇಲಿಯನ್ನು ತಾಕಿಸಿಕೊಳ್ಳದೇ ಆನೆ ರಸ್ತೆ ದಾಟಿ ಕಾಡಿನಲ್ಲಿ ಕಣ್ಮರೆಯಾಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. "ನಾವು ತುಂಬಾ ಸ್ಮಾರ್ಟ್ ಹ್ಯೂಮನ್! ಈ ಆನೆ ಹೇಗೆ ಚಾಣಾಕ್ಷತನದಿಂದ ವಿದ್ಯುತ್ ಬೇಲಿಯನ್ನು ದಾಟುತ್ತಿದೆ ಎಂಬುದನ್ನು ತಾಳ್ಮೆಯಿಂದ ನೋಡಿ” ಅನ್ನೋದಾಗಿ ಅವರು ವಿಡಿಯೋಕ್ಕೆ ಶೀರ್ಷಿಕೆ ನೀಡಿದ್ದಾರೆ.
ವೈರಲ್ ವಿಡಿಯೋದಲ್ಲೇನಿದೆ?
ವೀಡಿಯೊದಲ್ಲಿ ಆನೆಯು ಮೊದಲು ತಂತಿಗಳನ್ನು ಕಾಲಿನಿಂದ ಮುಟ್ಟಿ ನೋಡುತ್ತದೆ. ವಿದ್ಯುತ್ ಬೇಲಿಯಲ್ಲಿ ಕರೆಂಟ್ ಹರಿಯುತ್ತಿದೆಯೇ ಇಲ್ಲವೇ ಅನ್ನೋದನ್ನು ಪರೀಕ್ಷಿಸಿಕೊಳ್ಳುತ್ತೆ. ನಂತರ ಬೇಲಿ ಹಾಕಲಾದ ಮರದ ಕಂಬವನ್ನು ಮುರಿಯಲು ಅದನ್ನು ಕೆಳಗೆ ತಳ್ಳುತ್ತದೆ. ಆನೆಯು ಇದನ್ನು ಸಾಕಷ್ಟು ಜಾಗರೂಕತೆಯಿಂದ ಮಾಡುತ್ತದೆ ಅನ್ನೋದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಅಂತಿಮವಾಗಿ, ಕ್ಲಿಪ್ನ ಕೊನೆಯಲ್ಲಿ, ಅದು ಬೇಲಿಯನ್ನು ಮುರಿದು ರಸ್ತೆ ದಾಟಿ ಕಾಡಿನೊಳಗೆ ಮಾಯವಾಗುತ್ತದೆ.
ಇದನ್ನೂ ಓದಿ: ಹಿಂದೂ ಪ್ರೇಯಸಿಗಾಗಿ ಸತಾನತ ಧರ್ಮ ಸ್ವೀಕರಿಸಿದ ಮುಸ್ಲಿಂ ಪ್ರೇಮಿ! ರಾಧೆಗಾಗಿ ಕೃಷ್ಣನಾದ ಮನ್ಸೂರಿ!
ಅಂದಹಾಗೆ ಈ ಕರೆಂಟ್ ಬೇಲಿಯ ಕಂಬವನ್ನು ಮುರಿಯುವಾಗ ಎಲ್ಲಿಯೂ ತನಗೆ ಅಪಾಯವಾಗದಂತೆ ಜಾಗೃತೆ ವಹಿಸುವುದನ್ನು ನಾವು ಗಮನಿಸಬಹುದು. ಈ ವೀಡಿಯೊವನ್ನು ಮೊದಲು 2019 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಮತ್ತೆ ಇದನ್ನು ಹಂಚಿಕೊಳ್ಳಲಾಗಿದ್ದರೂ ಆನೆಯ ಬುದ್ದಿವಂತಿಕೆ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ವಿಡಿಯೋ ನೋಡಿದ ಕೆಲವರು ಆನೆಯನ್ನು‘ಬುದ್ಧಿವಂತ’ಎಂದು ಕರೆದರೆ, ಇನ್ನು ಕೆಲವರು ಇದನ್ನು ಚಾಣಾಕ್ಷ ಎಂದು ಕರೆದಿದ್ದಾರೆ.
ಇನ್ನೊಬ್ಬರು, ಇದು ಬುದ್ಧಿವಂತ ಆನೆ. ಮಾನವರು ಪ್ರತಿ ಇಂಚಿನ ಭೂಮಿಯನ್ನು ಅತಿಕ್ರಮಿಸಿದಾಗ ಮತ್ತು ಎಲ್ಲೆಡೆ ತಡೆಗೋಡೆ ನಿರ್ಮಿಸಿದರೆ ಇವುಗಳು ಇನ್ನೇನು ಮಾಡಬಹುದು ಎಂಬುದಾಗಿ ಬರೆದಿದ್ದಾರೆ. ಮತ್ತೊಬ್ಬರು ಇವು ಎಂದಿಗೂ ಇತರರಿಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಮೂರನೆಯವರು, "ನಾವು ಅವುಗಳನ್ನು ಎಂದಿಗೂ ಕಡೆಗಣನೆ ಮಾಡಬಾರದು. ಇದು ನಿಜವಾಗಿಯೂ ಕೂಲ್ ಆಗಿದೆ" ಎಂಬುದಾಗಿ ಬರೆದಿದ್ದಾರೆ.
We are too smart hooman !! See how this elephant is smartly breaking power fence. With patience. pic.twitter.com/0ZLqWvmxdu
— Parveen Kaswan, IFS (@ParveenKaswan) December 5, 2022
ಇನ್ನು ಈ ವೈರಲ್ ವಿಡಿಯೋ 78,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 4,500 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಇನ್ನು ಇತ್ತೀಚೆಗಷ್ಟೇ ಮುದ್ದಾದ ಮರಿ ಆನೆಯೊಂದು ಗಿಡಕ್ಕೆ ತನ್ನನ್ನು ತಾನೇ ಗೀರಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮರಿ ಆನೆಗೆ ತುರಿಕೆಯಾಗುತ್ತಿತ್ತೋ ಏನೋ. ಆ ಗಿಡದ ಸಹಾಯದಿಂದ ಅದು ಅದು ತನಗೆ ತಾನೇ ಸ್ಟ್ರಾಚ್ ಮಾಡಿಕೊಳ್ಳುತ್ತಿತ್ತು.
ಆನೆ ದಾಟುವ ಪರಿ ನೋಡಿ
ಒಮ್ಮೆ ಮಧ್ಯದ ಹೊಟ್ಟೆಗೆ ತುರಿಸಿಕೊಂಡರೆ ಮತ್ತೊಮ್ಮೆ ಮುಂದೆ ಹೋಗಿ ಬೆನ್ನಿಗೆ, ಕಾಲಿಗೆ ಹೀಗೆ ತುರಿಸಿಕೊಳ್ಳುತ್ತಿತ್ತು. ಮುದ್ದಾದ ಮರಿ ಆನೆಯ ಈ ಆಟ ನೆಟ್ಟಿಗರ ಮನ ಗೆದ್ದಿತ್ತು. ಅಂದಹಾಗೆ ಈ ವಿಡಿಯೋವನ್ನು ಕೀನ್ಯಾದಲ್ಲಿ ಅನಾಥ ಆನೆ ರಕ್ಷಣೆ ಮತ್ತು ವನ್ಯಜೀವಿ ಪುನರ್ವಸತಿ ಕಾರ್ಯಕ್ರಮವಾದ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಶೇರ್ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ