ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಈ ಸಾಕುನಾಯಿಗಳ ಮುದ್ದಾದ ವೀಡಿಯೋಗಳು ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ವೈರಲ್ ಸಹ ಆಗುತ್ತಿರುವುದನ್ನು ನಾವು ನೋಡಬಹುದಾಗಿದೆ. ಈ ನಾಯಿಗಳ ವೀಡಿಯೋ (Video) ನಂತರ ಮತ್ತೆ ಯಾವ ಪ್ರಾಣಿಯ ವೀಡಿಯೋಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದರೆ ಅದು ಆನೆಗಳ ವೀಡಿಯೋ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮೊನ್ನೆ ತಾನೇ ಒಂದು ಆನೆ (Elephant) ತನ್ನ ಮಾವುತನು ಮಲಗಿದ್ದ ಹಾಸಿಗೆಯ (Bed) ಮೇಲಿಂದ ಅವನನ್ನು ಎಬ್ಬಿಸಿ ತಾನು ಅದರ ಮೇಲೆ ಮಲಗುವುದಕ್ಕೆ ಪ್ರಯತ್ನದಲ್ಲಿ ಆನೆ ಮತ್ತು ಆ ಮಾವುತನ ಮಧ್ಯೆ ನಡೆದ ಮುದ್ದಾದ ಜಗಳ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿತ್ತು.
ಆನಂತರ ಇನ್ನೊಂದು ವೀಡಿಯೋದಲ್ಲಿ ಆನೆಯೊಂದು ಯಾರು ಊಹಿಸದ ರೀತಿಯಲ್ಲಿ ತನ್ನ ತಲೆಯ ಮೇಲೆ ಎದ್ದು ನಿಂತಿದ್ದನ್ನು ಸಹ ನಾವು ನೋಡಿದ್ದೆವು. ಹೀಗೆ ಆನೆಗಳ ತುಂಟಾಟ ಇಂದಿನದಲ್ಲ ಬಿಡಿ, ಹಿಂದಿನಿಂದಲೂ ಈ ಆನೆಗಳ ತುಂಟಾಟಗಳು ನಡೆಯುತ್ತಲೇ ಬಂದಿದ್ದು, ಈಗ ಅವುಗಳ ವೀಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೊಳ್ಳುತ್ತಿದ್ದಾರೆ ಮತ್ತು ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿವೆ ಎಂದು ಹೇಳಬಹುದು.
ಆನೆಯ ಮತ್ತೊಂದು ವೀಡಿಯೋ ವೈರಲ್
ಈ ಮರಿ ಪ್ರಾಣಿಗಳು ಆಗಾಗ್ಗೆ ತಮಾಷೆಯ ಮತ್ತು ತುಂಟತನದ ಕೆಲಸಗಳನ್ನು ಮಾಡುತ್ತಲೇ ಇರುತ್ತವೆ ಮತ್ತು ಈ ವೀಡಿಯೋವು ಪ್ರಾಣಿಗಳ ಮುದ್ದಾದ ತುಂಟಾಟವನ್ನು ಎತ್ತಿ ತೋರಿಸುತ್ತದೆ. ಈ ವೀಡಿಯೋದಲ್ಲಿ ಮರಿ ಆನೆಗಳಿಗೆ ಹಾಲನ್ನು ನೀಡಲು ಬಳಸುವ ಬಾಟಲಿಗಳಿಂದ ಸ್ವಲ್ಪ ಹಾಲನ್ನು ಹೇಗೆ ಆನೆಯೊಂದು ಅತ್ತ ಇತ್ತ ಯಾರು ಇರದೇ ಇರುವುದನ್ನು ನೋಡಿಕೊಂಡು ಮೆಲ್ಲಗೆ ಹೋಗಿ ಆ ಬಾಟಲಿಗೆ ಬಾಯಿ ಹಾಕಿದೆ ನೋಡಿ. ಈ ವೀಡಿಯೋ ಕೊನೆಯಲ್ಲಿ ಈ ಆನೆಯನ್ನು ನೋಡಿ ಇನ್ನೊಂದು ಆನೆ ಬಂದಿರುವುದನ್ನು ನಾವು ನೋಡಬಹುದು. ಈ ವೀಡಿಯೋ ನೋಡಿದ ಮೇಲೆ ನೀವು ನಗುವುದಂತೂ ಗ್ಯಾರಂಟಿ.
ಖಾಲಿ ಬಾಟಲಿಗಳಿಂದ ಹಾಲನ್ನು ಕುಡಿಯಲು ಪ್ರಯತ್ನಿಸಿರುವ ಆನೆಮರಿ
ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಲಾದ ವೀಡಿಯೋದಲ್ಲಿ, 'ವಾರ್ತಿ' ಎಂಬ ಹೆಸರಿನ ಆನೆ ಮರಿ ಖಾಲಿ ಬಾಟಲಿಗಳಿಂದ ಹಾಲನ್ನು ಕುಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಅದನ್ನು ಯಾರು ನೋಡುತ್ತಿಲ್ಲವೆಂದು ತಿಳಿದು ಬಾಟಲಿಯಿಂದ ಹಾಲು ಕುಡಿಯಲು ಪ್ರಯತ್ನಿಸಿದೆ. ಟ್ರಾಲಿಯಲ್ಲಿ ಒಟ್ಟಿಗೆ ಇರಿಸಲಾಗಿದ್ದ ಬಿಳಿ ಬಣ್ಣದ ಹಾಲಿನ ಬಾಟಲಿಗಳನ್ನು ಇರಿಸಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್
ಶೆಲ್ಡ್ರಿಕ್ ಟ್ರಸ್ಟ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಉಲ್ಲೇಖಿಸಿದಂತೆ ಈ ಮುದ್ದಾದ ಕಳ್ಳಾಟದಲ್ಲಿ ಅದರ ಸಂಗಾತಿ ಆನೆಯೊಂದು ಶೀಘ್ರದಲ್ಲಿಯೇ ಬಂದು ವಾರ್ತಿಯನ್ನು ಸೇರಿಕೊಂಡಿದ್ದನ್ನು ಇಲ್ಲಿ ನೋಡಬಹುದು. ಒಂದು ದಿನದ ಹಿಂದೆ ಪೋಸ್ಟ್ ಮಾಡಲಾದ ಈ ವೀಡಿಯೋ 2.58 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 37,000ಕ್ಕೂ ಹೆಚ್ಚು ಲೈಕ್ ಗಳು ಸಹ ಇದಕ್ಕೆ ಲಭಿಸಿವೆ ಎಂದು ಹೇಳಬಹುದು.
"ನಾವು ಭೇಟಿಯಾದ ಅತ್ಯಂತ ಮುದ್ದಾದ ಆನೆಗಳಲ್ಲಿ ವಾರ್ತಿಯೂ ಒಂದು... ಆದರೆ ಅವನು ಕೂಡ ವಿಚಿತ್ರವಾದ ಹಾಲು ಕದಿಯುವ ಕೆಲಸಕ್ಕೆ ಮುಂದಾಗಿದ್ದಾನೆ. ವಿಶಿಷ್ಟವಾದ ಶೈಲಿಯಲ್ಲಿ, ಕಳ್ಳತನಕ್ಕೆ ಇಳಿದ ವಾರ್ತಿ ತನ್ನನ್ನು ಯಾರೂ ಗಮನಿಸುತ್ತಿಲ್ಲ ಅಂತ ಭಾವಿಸಿ ಬಾಟಲಿಗಳಿಂದ ಶಾಂತಿಯುತವಾಗಿ ಹಾಲನ್ನು ಹೀರುತ್ತಾನೆ" ಎಂದು ವೀಡಿಯೋದ ಶೀರ್ಷಿಕೆ ಹೇಳುತ್ತದೆ.
ವಾರ್ತಿ ಆನೆಯ ಕಥೆಯನ್ನು ಹಂಚಿಕೊಂಡ ಶೆಲ್ಡ್ರಿಕ್ ವೈಲ್ಡ್ಲೈಫ್ ಟ್ರಸ್ಟ್
ಶೀರ್ಷಿಕೆಯ ಕೊನೆಯಲ್ಲಿ, ವಾರ್ತಿ ಅವರ ಕಥೆಯನ್ನು ಓದಲು ಮತ್ತು ಅದನ್ನು ದತ್ತು ತೆಗೆದುಕೊಳ್ಳಲು ತಮ್ಮ ಇನ್ಸ್ಟಾಗ್ರಾಮ್ ನ ಬಯೋದಲ್ಲಿನ ಲಿಂಕ್ ಗೆ ಭೇಟಿ ನೀಡುವಂತೆ ಸಂಸ್ಥೆಯು ಜನರನ್ನು ಒತ್ತಾಯಿಸಿದೆ. ಶೆಲ್ಡ್ರಿಕ್ ವೈಲ್ಡ್ಲೈಫ್ ಟ್ರಸ್ಟ್ (ಎಸ್ ಡಬ್ಲ್ಯೂ ಟಿ) ಅನಾಥ ಆನೆಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಮತ್ತು 2019 ರಲ್ಲಿ ಅನಾಥವಾದ ವಾರ್ತಿ ಆನೆಯ ಕಥೆಯನ್ನು ಹಂಚಿಕೊಂಡಿದೆ.
ಇದನ್ನೂ ಓದಿ: Viral Video: ಸ್ನಾನದ ವೇಳೆ ಖುಷಿಯಲ್ಲಿ ಪಲ್ಟಿ ಹೊಡೆಯೋ ಆನೆ! ಇದರ ಸರ್ಕಸ್ ನೋಡಿ ನೆಟ್ಟಿಗರು ಫಿದಾ
ಈ ವೀಡಿಯೋ ನೋಡಿದ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು "ನಾನು ನನ್ನ ಅತ್ಯುತ್ತಮ ಸ್ನೇಹಿತನಿಗೆ ಅವರ 40ನೇ ವರ್ಷಕ್ಕೆ ಉಡುಗೊರೆಯಾಗಿ ಈ ಆನೆಯನ್ನು ದತ್ತು ನೀಡಿದ್ದೇನೆ. ಬೆಸ್ಟ್ ಪ್ರೆಸೆಂಟ್ ಎವರ್" ಎಂದು ಹಾಕಿದ್ದಾರೆ. ಇದಕ್ಕೆ ಎಸ್ ಡಬ್ಲ್ಯೂ ಟಿ ಉತ್ತರಿಸುತ್ತ "ಇದು ನಮಗೆ ಕೇಳಲು ತುಂಬಾ ಸಂತೋಷವನ್ನುಂಟು ಮಾಡುತ್ತದೆ, ನಿಮ್ಮ ನಂಬಲಾಗದ ಉದಾರ ಉಡುಗೊರೆಗಾಗಿ ಧನ್ಯವಾದಗಳು ಮತ್ತು ನಮ್ಮ ಆನೆಯು ನಿಮ್ಮ ಸ್ನೇಹಿತ ವರ್ತಿಯ ಪ್ರಯಾಣದ ಭಾಗವಾಗಿರುವುದನ್ನು ಆನಂದಿಸುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ