Elephant Rescued: ಪ್ರವಾಹದಲ್ಲಿ ಸಿಲುಕಿ ಪರದಾಡಿದ ಕಾಡಾನೆ: ಕೊನೆಗೂ ಒಂಟಿಸಲಗ ಬಚಾವಾಗಿದ್ದೇ ಬಲು ರೋಚಕ!

Elephant gets stuck in flood: ಪ್ರವಾಹದ ನೀರಿನ ರಭಸ ತಿಳಿಯದೆ ಆನೆ ನದಿಗೆ ಇಳಿದಿತ್ತು. ಬಳಿಕ ನೀರಿನಲ್ಲಿ ಸಿಲುಕಿ ಕೊನೆಗೆ ನಡುಗಡ್ಡೆಯಲ್ಲಿ ಹೋಗಿ ಆನೆ ಸಿಲುಕಿಹಾಕಿಕೊಂಡಿತ್ತು. ಸುತ್ತಲು ನೀರು, ಯಾವ ಕಡೆಯಿಂದಲೂ ದಡ ಸೇರಲಾಗದಂತಹ ಪರಿಸ್ಥಿರಿ ಉಂಟಾಗಿತ್ತು.

ಪ್ರವಾಹದಲ್ಲಿ ಸಿಲುಕಿದ್ದ ಆನೆ

ಪ್ರವಾಹದಲ್ಲಿ ಸಿಲುಕಿದ್ದ ಆನೆ

  • Share this:
Elephant gets stuck in flood: ಉತ್ತರಾಖಂಡ(Uttarakhand) ದಲ್ಲಿ ಮಳೆ(Rain)ಯ ಆರ್ಭಟ ಜೋರಾಗಿದೆ. ರಣ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಮನುಷ್ಯ(Humans)ನಿಗೆ ಮಳೆ ಬಂದು ತೊಂದರೆಯಾದರೆ ಸರ್ಕಾರ(Government) ಅವರ ಸಹಾಯ(Help)ಕ್ಕೆ ಬರುತ್ತೆ. ಮನೆಗಳೆಲ್ಲ ಮುಳುಗಡೆಯಾದರೆ, ಸಾಂತ್ವನ ಕೇಂದ್ರ ತೆರೆದು ಸಂತ್ರಸ್ತರ ಆರೈಕೆ ಮಾಡಲಾಗುತ್ತೆ. ಆದರೆ ಮೂಕಪ್ರಾಣಿ(Animals)ಗಳಿಗೆ ಮಳೆಯಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. ಯಾರ ಬಳಿಯೂ ಹೇಳಿಕೊಳ್ಳಲಾಗದೇ, ಮಳೆ ಬಂದಾಗ ಎಲ್ಲಿ ಹೋಗುಬೇಕು ಎಂದು ಮೂಕಪ್ರಾಣಿಗಳಿಗೆ ತಿಳಿಯುವುದಿಲ್ಲ. ಅದೆಷ್ಟೋ ಪ್ರಾಣಿಗಳು ಮಳೆಯಿಂದ ಉಂಟಾದ ಪ್ರವಾಹದ(Flood)ಲ್ಲಿ ಕೊಚ್ಚಿಹೋದ ಘಟನೆಗಳನ್ನ ನೋಡಿದ್ದೇವೆ. ಅವುಗಳಿಗೆ ಪ್ರವಾಹ ಯಾವುದು? ಎಲ್ಲಿ ಹೋದರೆ ಅಪಾಯ? ಯಾವುವು ಅವುಗಳಿಗೆ ತಿಳಿದಿರುವುದಿಲ್ಲ. ಹಾಗಾಗಿ ಮಳೆಯ ಸಮಯದಲ್ಲಿ ಹೆಚ್ಚು ತೊಂದರೆ ಅನುಭವಿಸುವುದು ಪ್ರಾಣಿಗಳೇ. ಉತ್ತರಾಖಂಡದಲ್ಲೂ ಅದೇ ಪರಿಸ್ಥಿತಿ ಉಂಟಾಗಿದೆ. ರಣಮಳೆಗೆ ಸುಮಾರು ಮಂದಿ ಜೀವಬಿಟ್ಟಿದ್ದಾರೆ. ಈ ಮಧ್ಯೆ ಸಾವಿನ ಕದ ತಟ್ಟಿ ವಾಪಸ್​ ಬಂದಿರುವ ಆನೆ(Elephant)ಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ನದಿ ದಾಟಲು ಹೋಗಿ ಪ್ರವಾಹದಲ್ಲಿ ಲಾಕ್​

ಉತ್ತರಾಖಂಡದ ಹಾಡುಚೌರ್-ಲಾಲ್ಕುವಾನ್ ನಡುವೆ ಹಾದು ಹೋವುವ ಗೌಲಾ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಆನೆಯೊಂದು ದಡ ಸೇರಲು ಹರಸಾಹಸ ಪಟ್ಟಿದೆ. ಕಾಡಾನೆಯೊಂದು ಈ ಕಡೆಯಿಂದ ಆ ಕಡೆಗೆ ಹೋಗಲು ಮುಂದಾಗಿದೆ. ಪ್ರವಾಹದ ನೀರಿನ ರಭಸ ತಿಳಿಯದೆ ಆನೆ ನದಿಗೆ ಇಳಿದಿತ್ತು. ಬಳಿಕ ನೀರಿನಲ್ಲಿ ಸಿಲುಕಿ ಕೊನೆಗೆ ನಡುಗಡ್ಡೆಯಲ್ಲಿ ಹೋಗಿ ಆನೆ ಸಿಲುಕಿಹಾಕಿಕೊಂಡಿತ್ತು. ಸುತ್ತಲು ನೀರು, ಯಾವ ಕಡೆಯಿಂದಲೂ ದಡ ಸೇರಲಾಗದಂತಹ ಪರಿಸ್ಥಿರಿ ಉಂಟಾಗಿತ್ತು. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ, ಆನೆ ನಿಂತಿದ್ದ ನಡುಗಡ್ಡೆ ಪ್ರದೇಶವೂ ಕೊಂಚ ಕೊಂಚ ಕೊಚ್ಚಿಹೋಗುತ್ತಿತ್ತು. ಇತ್ತ ಸ್ಥಳೀಯರು ಮೂಕವಿಸ್ಮಿತರಾಗಿ ನೋಡುತ್ತಿದ್ದರು. ಕಾಪಾಡಬೇಕೆಂದರೂ ಆಗದ ಪರಿಸ್ಥಿತಿಯಲ್ಲಿ ಜನ ಜೋರಾಗಿ ಕೂಗುತ್ತಾ ನೋಡುತ್ತಿದ್ದರು.

ಇದನ್ನು ಓದಿ : ಬಾಲ್ಯ ನೆನಪು ಮಾಡುತ್ತಿರುವ ಆನೆ - ಕ್ಯೂಟ್ ವಿಡಿಯೋ ಮಿಸ್ ಮಾಡ್ಕೊಬೇಡಿ

ಗಜ ಬಚಾವಾದ್ದೇ ಬಲು ರೋಚಕ

ತಮ್ಮ ಕೈಯಲ್ಲಿ ಕಾಪಾಡಲು ಸಾಧ್ಯವಿಲ್ಲವೆಂದು ಅರಿತ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಹೇಗಾದರೂ ಮಾಡಿ ಆ ಪಾಪದ ಆನೆಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಕೂಡಲೇ ನುರಿತ ತಂಡದೊಂದಿಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆನೆ ಪರಿಸ್ಥಿತಿಯನ್ನ ಕಂಡು ಸ್ವತಃ ಅರಣ್ಯಾಧಿಕಾರಿಗಳೇ ದಂಗಾಗಿ ಹೋಗಿದ್ದರು. ಆನೆಯನ್ನು ಕಾಪಾಡಲು ಸಾಧ್ಯವಿಲ್ಲವೆಂದು ಹೇಳಿ ಕೈಚೆಲ್ಲಿ ಕೂತಿದ್ದರು. ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳಬೇಕೆಂಬ ಛಲ ಆನೆಯಲ್ಲಿತ್ತು. ಹರಸಾಹಸ ಪಟ್ಟು ಈಜಿಕೊಂಡೇ ದಡದತ್ತ ಆನೆ ಮುಖ ಮಾಡಿತ್ತು. ಕೂಡಲೇ ಈ ಕಡೆಯಿಂದ ಹೊರಟ ಅರಣ್ಯಾಧಿಕಾರಿಗಳು ಸಹಾಯ ಮಾಡಿ ಆನೆಯನ್ನ ದಡ ಸೇರಿಸಿದ್ದಾರೆ. ಬದುಕಿತು ಬಡ ಜೀವ ಎಂಬಂತೆ ಆನೆ ದೇವಪುರ ಕಾಡಿನತ್ತ ಹೊರಟಿದೆ.

ಇದನ್ನು ಓದಿ : ಕಾಪಾಡಿದವನ ಕಾಲು ಹಿಡಿದು ಕೃತಜ್ಞತೆ ಹೇಳಿದ ಮರಿಯಾನೆ; ಮನಸ್ಸು ಕರಗಿಸುತ್ತೆ ಈ ಫೋಟೋ

ಆನೆ ರಕ್ಷಣೆಗೆ ಹೋಗಿ ಸಾವನ್ನಪ್ಪಿದ ಪತ್ರಕರ್ತ

ಹೌದು, ಒಡಿಶಾದಲ್ಲಿ ಈ ಹಿಂದೆ ಇದೇ ರೀತಿ ಆನೆಯೊಂದು ಪ್ರವಾಹದಲ್ಲಿ ಸಿಲುಕಿಕೊಂಡಿತ್ತು. ಆನೆಯ ರಕ್ಷಣೆಗೆಂದು ರಕ್ಷಣಾ ತಂಡದೊಂದಿಗೆ ಖಾಸಗಿ ಮಾಧ್ಯಮವೊಂದರ ಪತ್ರಕರ್ತ ಹಾಗೂ ಕ್ಯಾಮರಾಮನ್​ ಹೋಗಿದ್ದರು.ಈ ವೇಳೆ ದುರಂತ ಸಂಭವಿಸಿ, ದೋಣಿಯಿಂದ ಕೆಳಗೆ ಬಿದ್ದು ಓರ್ವ ಕ್ಯಾಮರಾಮೆನ್​ ಹಾಗೂ ಪರ್ತಕರ್ತ ಉಸಿರು ಚೆಲ್ಲಿದ್ದರು. ಆನೆ ರಕ್ಷಣೆಗೆಂದು ಹೋಗಿದ್ದ ಬೋಟ್​ ಮೇಲೆಯೇ ಗಾಬರಿಗೊಂಡಿದ್ದ ಆನೆ ದಾಳಿ ನಡೆಸಿತ್ತು. ಬೋಟ್​​ ಮಗುಚಿ ಎಲ್ಲರೂ ನೀರಿನಲ್ಲಿ ಬಿದ್ದಿದ್ದರು. ಈ ದುರ್ಘಟನೆಯಲ್ಲಿ ಪತ್ರಕರ್ತ ಅರಿದಮ್​ ದಾಸ್​​ ನೀರುಪಾಲಾಗಿದ್ದರು. ಉಳಿದವರನೆಲ್ಲ ರಕ್ಷಣೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಕ್ಯಾಮರಾಮೆನ್​ ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
Published by:Vasudeva M
First published: