Viral Video: ಇದು ಆನೆ ಬೀಡಿ ಎಳೆಯುವುದಾ ಅಥವಾ ಹೊಗೆ ಬಿಡುವುದಾ? ನೀವೇ ಹೇಳಿ

ಮಳೆಗಾಲದ ಸಮಯಲ್ಲಿ ಬೆಟ್ಟ, ಕಾಡುಗಳನ್ನು ಗಮನಿಸಿದಾಗ ಹೊಗೆ ಹೋದಂತೆ ಕಾಣಿಸುತ್ತದೆ. ಮಳೆ ಬಂದು ನಿಂತಾಗ ಈ ದೃಶ್ಯವನ್ನು ಸರಿಯಾಗಿ ಗಮನಿಸಬಹುದು, ಆದರೆ ಈ ದೃಶ್ಯದಲ್ಲಿ ಆನೆ ಕಾಡಿನಲ್ಲಿ ಅದೇನನ್ನೋ ಸೊಂಡಿಲಿನಿಂದ ಬಾಯಿಗೆ ಹಾಕುತ್ತದೆ. ಹೀಗೆ ಹಾಕಿದ ಬಳಿಕ ಆನೆಯ ಬಾಯಿಯಿಂದ ಹೊಗೆ ಬರುತ್ತದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆನೆ

ಆನೆ

  • Share this:
    ಸಾಮಾಜಿಕ ಜಾಲತಾಣ ಬಂದ ಮೇಲೆ ಸುದ್ದಿ, ವಿಡಿಯೋ (Video), ಆಡಿಯೋ (Audio) ಎಲ್ಲವೂ ಬೇಗನೆ ವೈರಲ್ (Viral)​ ಆಗುತ್ತದೆ. ಕೆಲವೊಂದು ಸಲ ಹಳೆಯ ವಿಡಿಯೋಗಳು ಮತ್ತೊಮ್ಮೆ ವೈರಲ್​ ಆಗುವುದು ಇದೆ. ಅದರಂತೆಯೇ ಕಾಡಾನೆಯೊಂದರ ವಿಡಿಯೋ ಇದೀಗ ವೈರಲ್​ ಆಗಿದೆ. ಇದರಲ್ಲಿ ಆನೆ ಕಾಡಿನ ಒಳಗೆ ನಿಂತುಕೊಂಡು ಹೊಗೆ (Smoke) ಬಿಡುತ್ತಿದೆ. ಅಂದಹಾಗೆಯೇ, ಈ ದೃಶ್ಯ ನೋಡಿದ ಪುಟಾಣಿ ಮಕ್ಕಳಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ. ಅದೇನೆಂದರೆ ಈ ಆನೆ ಬೀಡಿ ಎಳೆಯುತ್ತಿದೆಯಾ? ಅಥವಾ ಹೊಗೆ ಬಿಡುತ್ತಿಯೆಯಾ? ಎಂದು ಪೋಷಕರ ಬಳಿ ಕೇಳುತ್ತಿದ್ದಾರಂತೆ.

    ಮಳೆಗಾಲದ ಸಮಯಲ್ಲಿ ಬೆಟ್ಟ, ಕಾಡುಗಳನ್ನು ಗಮನಿಸಿದಾಗ ಹೊಗೆ ಹೋದಂತೆ ಕಾಣಿಸುತ್ತದೆ. ಮಳೆ ಬಂದು ನಿಂತಾಗ ಈ ದೃಶ್ಯವನ್ನು ಸರಿಯಾಗಿ ಗಮನಿಸಬಹುದು, ಆದರೆ ಈ ದೃಶ್ಯದಲ್ಲಿ ಆನೆ ಕಾಡಿನಲ್ಲಿ ಅದೇನನ್ನೋ ಸೊಂಡಿಲಿನಿಂದ ಬಾಯಿಗೆ ಹಾಕುತ್ತದೆ. ಹೀಗೆ ಹಾಕಿದ ಬಳಿಕ ಆನೆಯ ಬಾಯಿಯಿಂದ ಹೊಗೆ ಬರುತ್ತದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಅಂದಹಾಗೆಯೇ ಈ ವೈರಲ್​ ಆಗಿರುವುದು ಹಳೆಯ ದೃಶ್ಯವಾಗಿದೆ. ಮಾಹಿತಿಯಂತೆಯೇ, 2018ರಲ್ಲಿ ವೈರಲ್​ ಆದ ವಿಡಿಯೋವಿದು. ಆನೆಯು ಕಾಡಿನಲ್ಲಿ ಆಹಾರ ತಿನ್ನುವಾಗ ಹೊಗೆ ಬಿಡುವುದನ್ನು ಕಾಣಬಹುದಾಗಿದೆ. ಆದರೆ ಬಹುತೇಕರು ಆನೆ ಹೊಗೆ ಬಿಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಕಾಡ್ಗಿಚ್ಚಿನಿಂದ ಸುಟ್ಟ ಮರದ ಕೆಂಡದ ತುಂಡನ್ನು ಆನೆ ಬಾಗಿಗೆ ಹಾಕಿಕೊಂಡಿದೆ. ಈ ವೇಳೆ ಹೊಗೆ ಬಂದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹಲ್ಲು ನೋವು ಕಾಣಿಸಿಕೊಂಡಾಗ ಆನೆಗಳು ಈ ರೀತಿ ಮಾಡುತ್ತವೆ ಎಂದು ಮತ್ತೆ ಕೆಲವರು ಹೇಳುತ್ತಾರೆ.

    ಸಾಮಾನ್ಯವಾಗಿ ಗಮನಿಸಬಹುದಾದ ವಿಚಾರವೆಂದರೆ, ಮಳೆ ಬಂದು ನಿಂತಾಗ ಕಾಡಿನಲ್ಲಿ ಹೊಗೆ ಹೋದಂತೆ ಕಾಣಿಸುತ್ತದೆ. ಕೆಲವರು ಇದನ್ನು ಕಾಡ್ಗಿಚ್ಚು ಅಂದುಕೊಂಡರೆ. ಇನ್ನು ಕೆಲವರು ಬಿಸಿಲಿನಿಂದ ನೆಲ ಬಿಸಿಯಾಗಿರುತ್ತದೆ. ಈ ವೇಳೆ ಮಳೆ ಬಿದ್ದ ತಕ್ಷಣ ಹೊಗೆ ಬರುತ್ತದೆ ಎಂದು ಹೇಳುತ್ತಾರೆ.

    ಇದನ್ನೂ ಓದಿ: Alia Bhatt: ಅಬ್ಬಾ, ಆಲಿಯಾ​ ತೊಟ್ಟಿರೋ ಈ ಟಾಪ್​ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ! ಬಟ್ಟೆ ಅಂಗಡಿನೇ ಓಪನ್​ ಮಾಡ್ಬಹುದಿತ್ತು

    ಇನ್ನು ಕೆಲವರು ಮಳೆ ಹೋದ ತಕ್ಷಣ ಮಂಜು ಆವರಿಸುತ್ತದೆ. ಆದು ಹೊಗೆಯಂತೆ ಕಾಣಿಸುತ್ತದೆ ಎಂದು ಹೇಳುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳು ಇದು ಆನೆ ಬೀಡಿ ಎಳೆಯುವುದು ಎಂದು ತಮಾಷೆಯ ಮಾತನಾಡುವುದು ಇದೆ. ಬಾಲ್ಯದಲ್ಲಂತೂ ಇಂತಹ ತಮಾಷೆಯ ಸಂಗತಿಗಳು ಎದುರಾಗುತ್ತಿರುತ್ತವೆ. ಅದರಂತೆಯೇ ಕಾಡಿನಲ್ಲಿ ಹೊಗೆ ಕಂಡುಬಂದರೆ ಆನೆ ಬೀಡಿ ಎಳೆಯುತ್ತಿದೆ ಎಂದು ಮಕ್ಕಳು ಮಾತನಾಡಿಕೊಳ್ಳುವುದಿದೆ.





    ಇದನ್ನೂ ಓದಿ: Hardik pandya: ಮೈದಾನದಿಂದಲೇ ಹ್ಯಾಂಡ್​ ಲೂಸ್​ ಸಿಂಬಲ್​ ತೋರಿಸಿದ ಹಾರ್ದಿಕ್​ ಪಾಂಡ್ಯ! ಇದರ ಅರ್ಥವೇನು ಗೊತ್ತಾ?

    ಪ್ರತಿದಿನ ಒಂದಲ್ಲಾ ಒಂದು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಅದರಂತೆಯೇ ಇದೀಗ ಆನೆಯೊಂದರ ಹಳೆಯ ವಿಡಿಯೋ ವೈರಲ್​ ಆಗಿದೆ. ಇದು ಬಿಬಿಸಿ ನ್ಯೂಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಈ ದೃಶ್ಯವನ್ನು ಹಾಕಿಕೊಂಡಿದ್ದರು. 2018ರಲ್ಲಿ ಶೇರ್​ ಮಾಡಿದ ವಿಡಿಯೋ ಇದಾಗಿದೆ. ಸದ್ಯ ವಾಟ್ಸ್​ಆ್ಯಪ್​ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ. ಬಹುತೇಕರು ಈ ವಿಡಿಯೋ ನೋಡಿ ಕಾಮೆಂಟ್​ ಬರೆಯುತ್ತಿದ್ದಾರೆ.
    Published by:Harshith AS
    First published: