Viral Video: ಫೊಟೋ ತೆಗೆದುಕೊಳ್ತಿದ್ದ ಬಾಲಕಿಯ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ! ವಿಡಿಯೋ ವೈರಲ್

ಇಲ್ಲೊಂದು ಘಟನೆ ನಡೆದಿದೆ ನೋಡಿ, ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ಮತ್ತು ಈ ವೀಡಿಯೋ ನೋಡಿ ನೆಟ್ಟಿಗರು ಸಹ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತನ್ನ ಮುಖದ ಮುಂದೆ ಮೊಬೈಲ್ ಫೋನ್ ಹಿಡಿದು ಫೋಟೋ ಕ್ಲಿಕ್ಕಿಸುವಾಗ ಈ ಆನೆ ಆ ಫೋಟೋ ತೆಗೆಯುತ್ತಿರುವ ಬಾಲಕಿಗೆ ಏನು ಮಾಡಿದೆ ನೋಡಿ.

ಬಾಲಕಿಯ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ

ಬಾಲಕಿಯ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ

  • Share this:
ಎಷ್ಟೋ ಬಾರಿ ನಾವು ಈ ಮೃಗಾಲಯಗಳಿಗೆ (Zoo) ಹೋದಾಗ, ಅಲ್ಲಿರುವ ಪ್ರಾಣಿಗಳ (Animals) ಫೋಟೋಗಳನ್ನು (Photos) ನಮ್ಮ ಮೊಬೈಲ್ ಫೋನ್ (Mobile Pones) ಕ್ಯಾಮೆರಾದಲ್ಲಿ (Camera) ಸೆರೆ ಹಿಡಿಯುತ್ತೇವೆ. ಸಾಧ್ಯವಾದರೆ ಆ ಪ್ರಾಣಿಗಳು ನಮ್ಮ ಮೊಬೈಲ್ ಫ್ರೇಮ್ ನಲ್ಲಿ (Mobile Frame) ಬರುವಂತೆ ಫೋಟೋ ತೆಗೆಸಿಕೊಳ್ಳಲು ಅನೇಕ ಹರಸಾಹಸಗಳನ್ನು ನಾವು ಪಡುತ್ತೇವೆ. ಸ್ವಲ್ಪ ಹತ್ತಿರ ಹೋಗಿ ಆ ಪ್ರಾಣಿಯ ಫೋಟೋ (Animal's Photo) ತೆಗೆಯಲು ಪ್ರಯತ್ನಿಸುತ್ತೇವೆ ಮತ್ತು ಕೆಲವೊಮ್ಮೆ ಅಲ್ಲೇ ಇರುವಂತಹ ದೊಡ್ಡ ಬಂಡೆಗಲ್ಲು ಅಥವಾ ಮರದ (Tree) ಮೇಲೆ ಹತ್ತಿ ಫೋಟೋ ತೆಗೆದುಕೊಳ್ಳುವುದಕ್ಕೆ ನೋಡುತ್ತೇವೆ.

ಕೆಲವು ಪ್ರಾಣಿಗಳು ಅಷ್ಟೇ, ಯಾರೋ ಮೊಬೈಲ್ ಫೋನ್ ಗಳಲ್ಲಿ ತಮ್ಮ ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದಾರೆ ಎಂದು ಗೊತ್ತಾದರೆ ಸಾಕು ಕೋಪ ಮಾಡಿಕೊಳ್ಳುತ್ತವೆ, ಇನ್ನೂ ಕೆಲವು ಪ್ರಾಣಿಗಳು ಮೃಗಾಲಯದಲ್ಲಿ ತಮಗಾಗಿ ಮಾಡಿರುವ ಗುಹೆಗಳಲ್ಲಿ ಹೋಗಿ ಕುಳಿತುಕೊಳ್ಳುತ್ತವೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ಇಲ್ಲೊಂದು ಘಟನೆ ನಡೆದಿದೆ ನೋಡಿ, ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ಮತ್ತು ಈ ವೀಡಿಯೋ ನೋಡಿ ನೆಟ್ಟಿಗರು ಸಹ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತನ್ನ ಮುಖದ ಮುಂದೆ ಮೊಬೈಲ್ ಫೋನ್ ಹಿಡಿದು ಫೋಟೋ ಕ್ಲಿಕ್ಕಿಸುವಾಗ ಈ ಆನೆ ಆ ಫೋಟೋ ತೆಗೆಯುತ್ತಿರುವ ಬಾಲಕಿಗೆ ಏನು ಮಾಡಿದೆ ನೋಡಿ.

Elephant hits girl taking photos with its trunk, viral video of Elephant, camera shy elephant in Zambia flicked, Elephant Viral video on Twitter, ಬಾಲಕಿಯ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ, ಆನೆಯ ವೈರಲ್ ವಿಡಿಯೋ, Kannada News, Karnataka News

ಬಾಲಕಿಯ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ, ಆನೆಯೊಂದನ್ನು ನೋಡಲು ಜನರ ಗುಂಪೊಂದು ಮೃಗಾಲಯಕ್ಕೆ ಬಂದಿರುತ್ತದೆ. ಸ್ವಲ್ಪ ಹೊತ್ತಿನವರೆಗೂ ಆನೆ ಅಲ್ಲಿ ಬಂದಿರುವ ಜನರ ಜೊತೆಗೆ ಚೆನ್ನಾಗಿಯೇ ಆಟವಾಡಿಕೊಂಡು ಇರುತ್ತದೆ. ಆದರೆ ಆ ಆಟವನ್ನು ತನ್ನ ಮೊಬೈಲ್ ಫೋನ್ ನಲ್ಲಿ ಬಾಲಕಿಯೊಬ್ಬಳು ಸೆರೆ ಹಿಡಿಯುವುದನ್ನು ನೋಡಿದ ಆನೆ ಕೋಪಗೊಂಡು ಆ ಬಾಲಕಿಯ ಮುಖಕ್ಕೆ ತನ್ನ ಉದ್ದನೆಯ ಸೊಂಡಿಲಿನಿಂದ ಹೊಡೆದಿರುವ ಘಟನೆ ನಡೆದಿದೆ.

ಇದನ್ನೂ ಓದಿ:   Dogsಗಳು ಕಂಡ ಕಂಡಲ್ಲಿ ಮೂತ್ರ ಮಾಡೊದೇಕೆ? ನಾಯಿ ಬುದ್ಧಿ ಬಗ್ಗೆ ತಜ್ಞರು ಹೇಳುವುದೇನು?

ಇಷ್ಟಕ್ಕೆ ಸುಮ್ಮನಿರದೆ ಆ ಆನೆ ತನ್ನ ಉದ್ದನೆಯ ಸೊಂಡಿಲಿನಿಂದ ಆ ನೆಲದ ಮೇಲೆ ಬಿದ್ದ ಮೊಬೈಲ್ ಫೋನ್ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿರುವುದನ್ನು ನೋಡಿ ಅಲ್ಲಿ ನೆರೆದಿರುವ ಜನರು ಒಂದು ಕ್ಷಣ ಈ ಆನೆ ಏಕೆ ಈ ರೀತಿ ವರ್ತಿಸಿದೆ ಎಂದು ಕಾರಣ ತಿಳಿಯದೆ ತಬ್ಬಿಬ್ಬಾಗಿದ್ದಂತೂ ನಿಜ.

ಈ ಸಣ್ಣ ವೀಡಿಯೋದಲ್ಲಿ ಆನೆಯೊಂದು ಆರಂಭದಲ್ಲಿ ಸ್ನೇಹಪರವಾಗಿ ಕಾಣುತ್ತದೆ, ಏಕೆಂದರೆ ಇನ್ನೊಬ್ಬ ಯುವತಿ ಆನೆಯ ಸೊಂಡಿಲನ್ನು ಮೃದುವಾಗಿ ಮುಟ್ಟುತ್ತಿದ್ದಳು. ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ ಆನೆ ತನ್ನ ಸೊಂಡಿಲಿನಿಂದ ಇನ್ನೊಬ್ಬ ಯುವತಿಯ ಕೈಯಲ್ಲಿರುವ ಮೊಬೈಲ್ ಫೋನ್ ಗೆ ಬಲವಾಗಿ ಹೊಡೆಯುತ್ತದೆ, ಆ ಫೋನ್ ಹುಡುಗಿಯ ಮುಖದ ಮೇಲೆ ಬಲವಾಗಿ ಹೊಡೆದು ಅನಿರೀಕ್ಷಿತ ಘಟನೆಯೊಂದು ನಡೆಯಿತು.

ವೀಡಿಯೋ 7,000ಕ್ಕೂ ಹೆಚ್ಚು ಲೈಕ್ ಗಳು
ವೀಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವರು ಇದನ್ನು "ಎಪಿಕ್ ಫೇಲ್" ಎಂದು ಕರೆದರು, ಆನೆಯು ಮೊಬೈಲ್ ಫೋನ್ ಕ್ಯಾಮೆರಾವನ್ನು ಕದಿಯಲು ಪ್ರಯತ್ನಿಸುತ್ತಿರಬಹುದು ಎಂದು ಹೇಳಿದರು. ಕ್ಯಾಮೆರಾ ಶಬ್ದಗಳು ಮತ್ತು ಅದರಿಂದ ಬರುವ ಬೆಳಕು ಪ್ರಾಣಿಗಳಿಗೆ ಕಿರಿಕಿರಿ ಉಂಟು ಮಾಡುತ್ತವೆ ಎಂಬುದನ್ನು ಈ ವೀಡಿಯೋ ಮತ್ತೊಮ್ಮೆ ತೋರಿಸಿದೆ. ಕೊನೆಯಲ್ಲಿ, ಹೆಚ್ಚಿನವರು "ಅದು ಮನುಷ್ಯರಾಗಿರಲಿ ಅಥವಾ ಪ್ರಾಣಿಗಳಾಗಿರಲಿ" ಅನುಮತಿಯಿಲ್ಲದೆ ಅವರ ಫೋಟೋಗಳನ್ನು ತೆಗೆಯುವುದನ್ನು ಯಾರೂ ಇಷ್ಟಪಡುವುದಿಲ್ಲ ಎಂದು ಹೇಳಲಾಗಿದೆ. ಈ ವೀಡಿಯೋ 7,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.

ಇದನ್ನೂ ಓದಿ:   Lion And Dog: ಕಾಡಿನಿಂದ ನಾಡಿಗೆ ಬಂದ ಸಿಂಹಕ್ಕೆ ನಾಯಿ ಬೆಸ್ಟ್​ಫ್ರೆಂಡ್, ಪ್ರಾಣಿಗಳ ಗೆಳೆತನ ನೋಡಿ ನೆಟ್ಟಿಗರು ಫಿದಾ

ಆನೆಗಳು ಹೆಚ್ಚಿನ ಸಮಯದಲ್ಲಿ ಸ್ನೇಹಪರವಾಗಿ ಕಂಡರೂ, ಬೆದರಿಕೆಯನ್ನು ಅನುಭವಿಸಿದಾಗ, ವಿಷಯಗಳು ಬಹಳ ಬೇಗನೆ ಬದಲಾಗುತ್ತವೆ. ಕಳೆದ ವರ್ಷ, ಮಹಿಳೆಯೊಬ್ಬಳು "ಏನೂ ಆಗುವುದಿಲ್ಲ" ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಆನೆಯೊಂದು ಪ್ರವಾಸಿ ವಾಹನದ ಕಡೆಗೆ ವೇಗವಾಗಿ ಓಡಿ ಬಂದ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಇದು ಕಾಡಿನಲ್ಲಿ ಪ್ರವಾಸಿಗರು ಜವಾಬ್ದಾರಿಯುತವಾಗಿ ವರ್ತಿಸುವ ಬಗ್ಗೆ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಪ್ರಾಣಿಗಳನ್ನು ವೀಕ್ಷಿಸುವಾಗ ಸರಿಯಾದ ಅಂತರವನ್ನು ಕಾಪಾಡಿಕೊಳ್ಳುವ ಬಗ್ಗೆ ಗಂಭೀರ ಸಂಭಾಷಣೆಯನ್ನು ಪ್ರಾರಂಭಿಸಿತು.
Published by:Ashwini Prabhu
First published: