Video: ಮೃಗಾಲಯದ ಆವರಣದಲ್ಲಿ ಬಿದ್ದ ಮಗುವಿನ ಶೂವನ್ನು ಹಿಂತಿರುಗಿಸಿ ಕೊಟ್ಟ ಆನೆ! ಈ ವಿಡಿಯೋ ನೋಡಿ

ಈ ವಿಡಿಯೋ (Video) ನೋಡಿದ್ರೆ ಆನೆಯ ಸೌಜನ್ಯಯುತವಾದ ನಡೆಗೆ ಫಿದಾ ಆಗುತ್ತೀರಾ. ಯಾಕಂದ್ರೆ ಆನೆ ಮನುಷ್ಯರನ್ನು ಎಷ್ಟು ಅರ್ಥ ಮಾಡಿಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಇನ್ನೇನು ಬೇಕು.

ಆನೆ

ಆನೆ

  • Share this:
    ಆನೆ ನಿಜವಾಗಿಯೂ ಸಾದು ಪ್ರಾಣಿ. ಮನುಷ್ಯನ ಮಾತನ್ನು ಆನೆ (Elephant) ಬೇಗನೆ ಅರ್ಥ ಮಾಡಿಕೊಳ್ಳುತ್ತದೆ. ಆದರೆ ಆನೆಗೆ ಸಿಟ್ಟು ಬಂದರೆ, ಮದವೇರಿದರೆ ಮಾತ್ರ ಮನುಷ್ಯರನ್ನು ಮಾತ್ರವಲ್ಲ, ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಎಸೆದು ರಂಪಾಟ ನಡೆಸುತ್ತದೆ. ಆದರೆ ಮಾವುತನಿಂದ ಬುದ್ದಿ ಕಲಿತ ಆನೆ ಹಾಗೆಲ್ಲಾ ಮಾಡುವುದಿಲ್ಲ. ಮಾವುತ ಹೇಳಿದಂತೆ ಕೇಳುತ್ತದೆ. ಚೀನಾದಲ್ಲೊಂದು (China) ಆನೆ ಏನು ಮಾಡಿದೆ ಗೊತ್ತಾ? ಈ ವಿಡಿಯೋ (Video) ನೋಡಿದ್ರೆ ಆನೆಯ ಸೌಜನ್ಯಯುತವಾದ ನಡೆಗೆ ಫಿದಾ ಆಗುತ್ತೀರಾ. ಯಾಕಂದ್ರೆ ಆನೆ ಮನುಷ್ಯರನ್ನು ಎಷ್ಟು ಅರ್ಥ ಮಾಡಿಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಇನ್ನೇನು ಬೇಕು.

    ಏನಿದು ಘಟನೆ

    ಚೀನಾದ ಮೃಗಾಲಯವೊಂದರಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ಮೃಗಾಲಯಕ್ಕೆ ಭೇಟಿ ನೀಡಿದಾಗ ಪ್ರಾಣಿಗಳನ್ನು ಕಂಡು ಖುಷಿ ಪಡುತ್ತೇವೆ. ಕೆಲವೊಮ್ಮೆ ಕಾಡಿನಲ್ಲಿ ಇರುವ ಮತ್ತು ಅನಿಮಲ್​ ಪ್ಲಾನೆಟ್​ನಂತಹ ಚಾನೆಲ್​ಗಳಲ್ಲಿ ನೋಡಿದ್ದ ಪ್ರಾಣಿಗಳನ್ನು ಮೃಗಾಲಯದಲ್ಲಿ ಕಣ್ಣೆದುರು ನೋಡುವಾಗ ಅದರಲ್ಲಿ ಸಿಗುವ ಖುಷಿ ಅಷ್ಟಿಷ್ಟಲ್ಲ. ಆದರಂತೆ ಫ್ಯಾಮಿಲಿಯೊಂದು ಚೀನಾದ ಮೃಗಾಲಯಕ್ಕೆ ಭೇಟಿ ನೀಡಿದೆ. ಈ ವೇಳೆ ಆನೆಯನ್ನು ನೋಡುತ್ತಿದ್ದಾಗ ಪುಟ್ಟ ಮಗುವಿನ ಕಾಲಲ್ಲಿ ಇದ್ದ ಚಪ್ಪಳಿಯು ಆನೆಯ ಆವರಣದ ಬಳಿ ಬಿದ್ದಿದೆ.

    ಬೇರೆ ಪ್ರಾಣಿಗಳಾದರೆ ಸಿಕ್ಕ ವಸ್ತುಗಳು ಬೇಟೆ ಎಂದುಕೊಂಡು ಮೊದಲಿಗೆ ಬಾಗಿಯೊಳಕ್ಕೆ ಹಾಕಲು ಪ್ರಾರಂಭಿಸುತ್ತವೆ. ಆದರೆ ವಯಸ್ಸಾದ ಆನೆ ಮಾತ್ರ ಆ ಚಪ್ಪಳಿಯನ್ನು ಸೊಂಡಿನಿಂದ ತೆಗೆದುಕೊಂಡು ನಂತರ. ಅಲ್ಲಿದ್ದವರ ಕೈಗೆ ಕೊಟ್ಟಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಾಗಿದೆ.

    ಆನೆಯ ಸೌಜನ್ಯಯುತವಾದ ನಡತೆಯ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ. ನೌದಿನ್​ನ್ಯೂಸ್​ ಎಂಬ ಇನ್​ಸ್ಟಾಗ್ರಾಂ ಖಾತೆಯು ಈ ವಿಡಿಯೋವನ್ನು ಶೇರ್​ ಮಾಡಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಮಾತ್ರವಲ್ಲದೆ ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ.

    ಅದರಲ್ಲಿ ಒಬ್ಬ ಬಳಕೆದಾರ, "ನನ್ನ ಹೃದಯವು ಅದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಬರೆದಿದ್ದಾನೆ. ಮತ್ತೊಬ್ಬರು "ಆನೆಗಳು ತುಂಬಾ ಮುದ್ದಾಗಿವೆ" ಎಂದು ಕಾಮೆಂಟ್ ಮಾಡಿದ್ದಾರೆ.

    ಇದನ್ನೂ ಓದಿ: Viral Video: ನೀರಿನಲ್ಲಿ ಸಂಚರಿಸುತ್ತಿದ್ದ ಮೊಸಳೆಗಾಗಿ ಎತ್ತರದಿಂದ ಜಿಗಿದು ಬೇಟೆಯಾಡಿದ ಚಿರತೆ!










    View this post on Instagram






    A post shared by NowThis (@nowthisnews)





    ಇನ್ನು ಕೆಲವರು ‘‘ಇಂತಹ ಪ್ರಾಣಿಗಳು ಕಂಬಿ ಹಿಂದೆ ಅಥವಾ ಆವರಣದಲ್ಲಿ ಇರಲು ಅರ್ಹವಲ್ಲ’’ ಎಂದು ಬರೆದಿದ್ದಾರೆ. ‘‘ಎಷ್ಟು ಮುದ್ದಾಗಿದೆ’’ ಈ ಆನೆ ಎಂದು ವ್ಯಕ್ತಿಯೋರ್ವ ಕಾಮೆಂಟ್​ ಮಾಡಿದ್ದಾನೆ.

    ಇದನ್ನೂ ಓದಿ: YouTube​ ಡೌನ್​ ಆಗಿದ್ಯಾ? ಹಾಗಿದ್ರೆ ಡೌನ್​ ಡಿಟೆಕ್ಟರ್​ನಲ್ಲಿ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಿ

    ಆನೆ ಮನುಷ್ಯರ ಮಾತನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತದೆ. ಅದರಲ್ಲೂ  ಮಾವುತ ಹೇಳಿದಂತೆ ಕೇಳುತ್ತದೆ. ಆದರೆ ಈ ಘಟನೆ ಮಾತ್ರ ಮೃಗಾಲದಲ್ಲಿ ನಡೆದಿದೆ. ಆನೆ ದಿನಂಪ್ರತಿ ಸಾವಿರಾರು ಜನರನ್ನು ನೋಡಿರುತ್ತದೆ. ಆದರೆ ತನ್ನ ಆವರಣೊಳಗೆ ಬಿದ್ದ ಚಪ್ಪಳಿಯನ್ನು ಮರಳಿ ನೀಡಿರುವುದು ನೋಡಿದರೆ ಆನೆಯ ಸೌಜನ್ಯಯುತವಾದ ನಡೆತೆಗೆ ನೀವೇನು ಹೇಳುತ್ತೀರಾ..?
    Published by:Harshith AS
    First published: