Viral Video: 50 ಫೀಟ್‌ ಆಳದ‌ ಬಾವಿಗೆ ಬಿದ್ದಿದ್ದ ಆನೆಯನ್ನು ಪವಾಡ ರೀತಿಯಲ್ಲಿ ರಕ್ಷಿಸಿದ ಅರಣ್ಯಾಧಿಕಾರಿಗಳ ತಂಡ!

Elephant Rescue Video: ಬಾವಿಯೊಳಕ್ಕೆ ಸಿಲುಕಿಕೊಂಡಿದ್ದ ಆನೆಗೆ ಅರವಳಿಕೆ ಮದ್ದನ್ನು ನೀಡಿ, ನಂತರ ಹಗ್ಗ ಬಳಸಿ ಕ್ರೇನ್​ ಮೂಲಕ ಮೇಲೆತ್ತಲಾಗಿದೆ.

news18-kannada
Updated:November 20, 2020, 10:02 PM IST
Viral Video: 50 ಫೀಟ್‌ ಆಳದ‌ ಬಾವಿಗೆ ಬಿದ್ದಿದ್ದ ಆನೆಯನ್ನು ಪವಾಡ ರೀತಿಯಲ್ಲಿ ರಕ್ಷಿಸಿದ ಅರಣ್ಯಾಧಿಕಾರಿಗಳ ತಂಡ!
Elephant Rescue Video: ಬಾವಿಯೊಳಕ್ಕೆ ಸಿಲುಕಿಕೊಂಡಿದ್ದ ಆನೆಗೆ ಅರವಳಿಕೆ ಮದ್ದನ್ನು ನೀಡಿ, ನಂತರ ಹಗ್ಗ ಬಳಸಿ ಕ್ರೇನ್​ ಮೂಲಕ ಮೇಲೆತ್ತಲಾಗಿದೆ.
  • Share this:
ಆನೆಗಳು ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬರುತ್ತಿರುತ್ತವೆ. ಹೀಗೆ ಬಂದ  ಆನೆಯೊಂದು ಆಯತಪ್ಪಿ 50 ಫೀಟ್ ಆಳದ ಬಾವಿಗೆ ಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 8 ವರ್ಷ ಹೆಣ್ಣಾನೆ ಬಾವಿಗೆ ಬಿದ್ದಿರುವುದನ್ನು ತಿಳಿದ ಸ್ಥಳೀಯರು ಅರಣ್ಯ ಅಧಿಕಾರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಕೊನೆಗೂ ಬಾವಿಯಿಂದ ಆನೆಯನ್ನು ಮೇಲೆತ್ತಿ ಅದರ ಜೀವ ರಕ್ಷಿಸಿದ್ದಾರೆ.

ಗುರುವಾರದಂದು ತಮಿಳುನಾಡಿನ ಎಲ್ಲಾಪುರ ಗ್ರಾಮದ ಪಂಚಪಲ್ಲಿ ಎಂಬಲ್ಲಿ ಕಾಡಾನೆ ಬಾವಿಯೊಳಕ್ಕೆ ಬಿದ್ದಿದೆ. ಆದರೆ ಬತ್ತಿದ ಬಾವಿಯಾಗಿದ್ದರಿಂದ ಆನೆಯ ಜೀವ ಉಳಿದಿದೆ.  14 ಗಂಟೆಗಳ ಕಾಲ ಬಾವಿಯೊಳಕ್ಕೆ ಆನೆ ಸಿಲುಕಿಕೊಂಡಿತ್ತು ಎಂದು ತಿಳಿದುಬಂದಿದೆ.

ಆನೆಯನ್ನು ರಕ್ಷಿಸಿದ್ದು ಹೇಗೆ?

ಬಾವಿಯೊಳಕ್ಕೆ ಸಿಲುಕಿಕೊಂಡಿದ್ದ ಆನೆಗೆ ಅರವಳಿಕೆ ಮದ್ದನ್ನು ನೀಡಿ, ನಂತರ ಹಗ್ಗ ಬಳಸಿ ಕ್ರೇನ್​ ಮೂಲಕ ಮೇಲೆತ್ತಲಾಗಿದೆ.

ಭಾರತದ ಅರಣ್ಯ ಸೇವಾ ಅಧಿಕಾರಿ ಪ್ರವೀಣ್​ ಕಸ್ವಾನ್​ ಆನೆಯ ರಕ್ಷಣಾ ವಿಡಿಯೋವನ್ನು ತಮ್ಮ ಟ್ಬಿಟ್ಟರ್​ ಖಾತೆಯಲ್ಲಿ ಶೇರ್​​ ಮಾಡಿದ್ದಾರೆ.ಅನೇಕರು ಈ ವಿಡಿಯೋ ನೋಡಿ ‘ಕಾಡಾನೆಯನ್ನು ರಕ್ಷಿಸಿದಕ್ಕಾಗಿ ಧನ್ಯವಾದಗಳು, ದೇವರು ನಿಮ್ಮನ್ನು ಚೆನ್ನಾಗಿಡಲಿ’ ಎಂದು ಕಾಮೆಂಟ್​ ಬರೆದಿದ್ದಾರೆ. ಇನ್ನು ಕೆಲವರು ‘ದೊಡ್ಡ ಮಗುವನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದ’ ಎಂದಿದ್ದಾರೆ.
Published by: Harshith AS
First published: November 20, 2020, 9:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading